ಹೀಗೊಬ್ಬ ಮತಾಂತರಿಯ “ಇಣುಕು”

ಮೆರಿಕಾ ಬಗ್ಗೆ ಸಿಗುವ ಪ್ರವಾಸ ಕಥನಗಳು ಹಲವು. ಹಾಗೆಯೇ ಅಮೆರಿಕಾ ಕುರಿತ ನೋಟಗಳೂ ಭಿನ್ನ. ವಸಂತರಾಜ್ ಎನ್ ಕೆ ಅವರ ಪ್ರವಾಸ ಕಥನ “ಅಮೆರಿಕಾದೊಳಗೊಂದು ಇಣುಕು” ಕೂಡ ಅಂಥ ಒಂದು. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂದಿದೆ. ಅವಧಿ ಓದುಗರಿಗಾಗಿ ಅದರ ಒಂದು ಭಾಗವನ್ನು ಆಯ್ದು ಕೊಡಬೇಕೆಂದು ಅನ್ನಿಸಿತು. ಅದರಲ್ಲಿನ “ಕೈಯಲ್ಲಾಡುವ ಫುಟ್ಬಾಲ್” ಎಂಬ ಅಧ್ಯಾಯದ ಕೆಲ ವಿವರಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
ಅದಕ್ಕೂ ಮೊದಲು ಈ ಪುಸ್ತಕದ ಬೆನ್ನುಡಿಯಲ್ಲಿನ ಮಾತುಗಳು, ನಿಮ್ಮ ಓದಿಗೆಂದು.

*

vasantrajnew.jpg“ನಾನೊಬ್ಬ ಸಾಫ್ಟ್ ವೇರ್ ಕ್ಷೇತ್ರಕ್ಕೆ ಮತಾಂತರಗೊಂಡ ಎಂಜಿನಿಯರ್.”

ಹೀಗೆ ತಮ್ಮನ್ನು ಬಣ್ಣಿಸಿಕೊಳ್ಳುವ ಎನ್.ಕೆ.ವಸಂತರಾಜ್, ಸಾಹಿತ್ಯ ಕ್ಷೇತ್ರಕ್ಕೂ ಯಶಸ್ವಿಯಾಗಿ ಮತಾಂತರಗೊಂಡಿರುವವರು. ಅವರು ಹಾಗೆ ಸಾಹಿತ್ಯ ಕ್ಷೇತ್ರಕ್ಕೆ ಮತಾಂತರಗೊಂಡಿರುವುದು “ಅಮೆರಿಕದೊಳಗೊಂದು ಇಣುಕು” ಪ್ರವಾಸ ಕಥನದ ಮೂಲಕ.

ವಸಂತರಾಜ್ ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಣೆಗಳ ಮೂಲಕ ಪರಿಚಿತರು. ಹಲವು ಜನಪರ ಹೋರಾಟಗಳಲ್ಲಿ ಭಾಗವಹಿಸಿದವರು. ಅಮೆರಿಕಾ ಮಾತ್ರವಲ್ಲದೆ, ಜಗತ್ತಿನ ಇತರ ದೇಶಗಳನ್ನೂ ಕಂಡವರು. ಅವರು ಬರೆಯುವ ವಿಶ್ಲೇಷಣೆಗಳು ಜಾಗತೀಕರಣದ ಆತಂಕ ಮತ್ತು ಸವಾಲುಗಳನ್ನು ಎದುರಿಸುತ್ತಲೇ ಹೊಸ ಸಾಧ್ಯತೆಗಳನ್ನು ತೋರುವ ರೀತಿಯವಾಗಿ ಗಮನ ಸೆಳೆಯುತ್ತವೆ. 

“ಅಮೆರಿಕಾದೊಳಗೊಂದು ಇಣುಕು” ಕನ್ನಡದ ಓದುಗರು ಮರೆಯಲಾಗದ ಪ್ರವಾಸ ಕಥನ. ಅವರ ಈ ಕೃತಿ ಪ್ರವಾಸ ಕಥನದಲ್ಲೊಂದು ಮೈಲುಗಲ್ಲು. ತನ್ನ ಮಾಧ್ಯಮ ಶಕ್ತಿಯಿಂದಾಗಿ ಅಮೆರಿಕಾ ತನ್ನ ಬಗ್ಗೆ ಒಂದು ಭ್ರಮಾಲೋಕವನ್ನೇ ಸೃಷ್ಟಿಸಿದೆ. ಈ ಭ್ರಮೆಯ ಗುಳ್ಳೆ ಒಡೆಯಬೇಕಾದರೆ ವಸಂತರಾಜ್ ಅವರ ಈ “ಇಣುಕಿ”ನಲ್ಲಿ ಪ್ರತಿಯೊಬ್ಬರೂ ಇಣುಕಬೇಕು.

amnew11.jpgವಸಂತರಾಜ್ ಅವರ ಒಳಗಣ್ಣು ಅಮೆರಿಕಾದ ಎಲ್ಲೆಲ್ಲಾ ಹರಿದಾಡಿದೆ ಎಂಬುದು ವಿಸ್ಮಯ ಹುಟ್ಟಿಸುತ್ತದೆ. ಅವರ ಹಾಸ್ಯಪ್ರಜ್ಞೆ, ರಾಜಕೀಯ ತಿಳಿವು, ಸಂಕೀರ್ಣವಾದದ್ದನ್ನೂ ಸರಳವಾಗಿ ಬಿಡಿಸಿ ಹೇಳುವ ಶೈಲಿ ಅವರನ್ನು ಇತರ “ಪ್ರವಾಸ” ಕಥನಕಾರರಿಗಿಂತ ಭಿನ್ನವಾಗಿಸಿದೆ.

ಈ ಕಾರಣದಿಂದಾಗಿಯೇ ಅಮೆರಿಕಾ ಬಗ್ಗೆ ಇದುವರೆಗೂ ಮುಚ್ಚಿಹೋಗಿದ್ದ ಅನೇಕ ವಿವರಗಳು ಇಲ್ಲಿ ಮೊದಲ ಬಾರಿಗೆ ಹೊರಬಂದಿವೆ. ಸ್ವಾತಂತ್ರ್ಯ ದೇವಿಯ ಪ್ರತಿಮೆ ಆಗಸದೆತ್ತರ ಬೆಳೆದು ನಿಂತಿದ್ದರೂ ಪ್ರತಿಯೊಬ್ಬರ ಸ್ವಾತಂತ್ರ್ಯ ಪಾತಾಳ ಕಂಡಿರುವ, ತಾನು ನಡೆದದ್ದೇ ದಾರಿ ಎಂಬುದನ್ನು ಜಗತ್ತಿಗೆ ಮನದಟ್ಟು ಮಾಡಿಕೊಡಲು ಯತ್ನಿಸುತ್ತಿರುವ ಅಮೆರಿಕಾ ಈ ಇಣುಕು ನೋಟದಲ್ಲಿ ಬಿಚ್ಚಿಕೊಂಡಿದೆ. ಒಂದು ಸ್ಟಿಕರ್, ಒಂದು ಜಾಹಿರಾತು, ಆಡಿದ ಒಂದು ಮಾತು, ಒಂದು ಕಟ್ಟಡದ ಮೂಲಕ ಇಡೀ ಅಮೆರಿಕಾದ ಚರಿತ್ರೆಯನ್ನೇ ಜಾಲಾಡುವ ರೀತಿ “ಅಮೆರಿಕದೊಳಗೊಂದು ಇಣುಕು”ವನ್ನು ವಿಶಿಷ್ಟ ಅಮೆರಿಕಾ ಕಥನವನ್ನಾಗಿಸಿದೆ.

*

ಸಂಪರ್ಕಕ್ಕೆ: [email protected] ಮೊಬೈಲ್: ೯೮೪೫೧೭೨೨೪೯.

‍ಲೇಖಕರು avadhi

July 19, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This