ಹುಲಿ ಬಂತು ಹುಲಿ

ಈವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು


ನನಗೊಂದು ಗುಮಾನಿ ಇದೆ: ರೈತ ಚಳವಳಿಯಿಂದಲೂ ಸಂಘಪರಿವಾರದಿಂದಲೂ ಬೆಳೆದು ಬಂದ ಶ್ರೀ ಯಡಿಯೂರಪ್ಪನವರು ಮೋದಿಯಂತೆ ಆಗಲು ಬಯಸಿದರೂ ಸಂಪೂರ್ಣ ಆಗಲಾರದೆ  ಈಗ ಕಷ್ಟದಲ್ಲಿದ್ದಾರೆ. ಅವರನ್ನು ಕೆಳಗಿಳಿಸಲೆಂದೇ ಅವರ ಪಕ್ಷದ ಉಗ್ರರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ. ಕರ್ನಾಟಕ ವಚನಕಾರರ ನಾಡು; ಕುವೆಂಪು ಬೇಂದ್ರೆ ಕಾರಂತರ ನಾಡು. ಇಲ್ಲಿ ಮೋದಿಯಾಗುವುದು ಕಷ್ಟವೆಂದು ನಾನು ಭಾವಿಸುತ್ತಲೇ ಗಾಂಧಿಯೇ ಹುಟ್ಟಿದಲ್ಲಿ ಮೋದಿ ಹುಟ್ಟಿದನಲ್ಲವೆ ಎಂದು ಆಶ್ಚರ್ಯ ಪಡುತ್ತೇನೆ. ಇದೇ ಶಿವನಿಗೇ ಕಂಟಕಪ್ರಾಯನಾದ ಭಸ್ಮಾಸುರನ ಕತೆ. ಕರ್ನಾಟಕ ಯಡಿಯೂರಪ್ಪನವರನ್ನು ಇಳಿಸಿ ಇನ್ನೊಬ್ಬ ಮೋದಿಗೆ ಕಾದಿದೆಯೇನೊ! ನಮ್ಮ ವಿದ್ಯಾವಂತರಾದ ಹಲವರಿಗೆ ಈಗ ಬೇಕಾಗಿರುವುದು ಸರ್ವಜನಹಿತ ನಿರ್ಲಕ್ಷಿಸಿ ಏನನ್ನಾದರೂ ಮಾಡಬಲ್ಲ, ಮಾಡಿ ಗೆಲ್ಲಬಲ್ಲ ನಾಯಕ. ಅಂಥವರು ಮಾತ್ರ ೨೧ ನೇ ಶತಮಾನದಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವಾಗಿ ಮಾಡಬಲ್ಲರೆಂಬ ಭ್ರಮೆ ಇವರಿಗೆ ಇದೆ. ಆದ್ದರಿಂದ ವಿಚಾರ ವಿಮರ್ಶೆ ಚರ್ಚೆ ಅನುಮಾನಗಳ ಪಿಸುನುಡಿಯ ತೊದಲುಗಳು ಇವರಿಗೆ ರಾಷ್ಟ್ರದ್ರೋಹವಾಗಿ ಕಾಣಿಸತೊಡಗಿದೆ. ದಿನಕ್ಕೆ ಹಲವು ಬಾರಿ ನಮಾಜುಮಾಡುವ ಮುಸ್ಲಿಮರಂತೂ Development ನ ಶತ್ರುಗಳಾಗಿ ಕಾಣುತ್ತ ಇದ್ದಾರೆ.
ಸಂಪೂರ್ಣ ಓದಿಗೆ ಭೇಟಿ ಕೊಡಿ: ಋಜುವಾತು
+++
ಹುಲಿ ಬಂತು ಹುಲಿ
೨೦೦೮ರ ಏಪ್ರಿಲ್ ತಿಂಗಳ ಒಂದು ದಿನ ಈ ಬಿಳೀಹುಲಿ ನನ್ನಂಗಡಿ ಹೊಕ್ಕಿತು. ಬೆಂಗಳೂರಿನ ವಿನಾಯಕ ಬುಕ್ ಡಿಸ್ಟ್ರಿಬ್ಯೂಟರ್ಸ್ ಎಂದಿನಂತೆ ಹೊಸತುಗಳಲ್ಲಿ ಒಂದಾಗಿ The White Tiger ಒಂದು ಪ್ರತಿ ಕಳಿಸಿದ್ದರು. ನನ್ನ ವನ್ಯದ ಗುಂಗಿನಲ್ಲಿ ಇದೇನಾದರೂ ಮಧ್ಯಪ್ರದೇಶದಲ್ಲಿ ಸೆರೆಯಲ್ಲಿರುವ ಆಲ್ಬಿನೋ ಹುಲಿಗಳ ಕಥೆಯೋ ಎಂದು ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿದೆ. ಗಟ್ಟಿ ರಟ್ಟಿನ ದಪ್ಪ ಪುಸ್ತಕ – ಎಂಥದೋ ಕಾದಂಬರಿ. ಹೀಗೇ ನೋಡಿದಾಗ ಅದರ ಮೋಡಿ ಲಿಪಿಯ ಮುಖಪುಟದಲ್ಲಿ ಯಾರೋ ಅರವಿಂದ ಎಂಬಾತನ ಚೊಚ್ಚಲ ಕೃತಿ ಎಂದಷ್ಟೇ ಕಂಡದ್ದು ನೆನಪು. ಮುನ್ಸೂಚನೆ, ಪೋಸ್ಟರ್, ನಾಮ ಅಥವಾ ಪ್ರಚಾರದ ಬಲ ಯಾವುದೂ ಇಲ್ಲದ ಆ ಪುಸ್ತಕವನ್ನು ಶೆಲ್ಫಿಗೆ ರವಾನಿಸಿದ್ದೆ. ಆ ದಿನಗಳಲ್ಲಿ ಅಂಗಡಿಗೆ ಭೇಟಿಕೊಟ್ಟ ನನಗೆ ಅಷ್ಟೇನೂ ಪರಿಚಿತನಲ್ಲದ ತರುಣ ವೈದ್ಯ ಡಾ| ಅನಿಲ್ ಶೆಟ್ಟಿ ಈ ಪುಸ್ತಕವನ್ನು ಕುರಿತು ಕೇಳಿದಾಗ ಗ್ರಂಥಾಲಯ ವಿಜ್ಞಾನ ಕತೃವಿನ ಖ್ಯಾತ ಉಕ್ತಿ, `ಪ್ರತಿಪುಸ್ತಕಕ್ಕೊಬ್ಬ ಓದುಗ’ ಮಾತ್ರ ನೆನಪಾಯ್ತು! ಅನಿಲ್ ಪುಸ್ತಕ ಒಯ್ಯುವ ಮುನ್ನ ಕೆಳಧ್ವನಿಯಲ್ಲಿ ಹೇಳಿದರು “ಈ ಲೇಖಕ, ಅರವಿಂದ ಅಡಿಗ ಊರಿನವನೇ. ಆರು ವರ್ಷ ನನ್ನ ಸಹಪಾಠಿ, ಆತ್ಮೀಯ ಮಿತ್ರ. ಆ ದಿನಗಳಲ್ಲೇ ಕಂಡಿದ್ದೇನೆ – ಇವನು, ಇವನಣ್ಣ
_ ಆನಂದ ಅಡಿಗನೂ ಭಾರೀ ಬುದ್ಧಿವಂತರು. ಹೆಚ್ಚು ಪ್ರತಿ ತರಿಸಿಡಿ, ಚೆನ್ನಾಗಿ ಹೋದೀತು”. ಶಂಬಾ ಜೋಶಿಯ ಪುಸ್ತಕದಿಂದ ಹಿಡಿದು ಥರ್ಡ್ ಕ್ಲಾಸಿನ ಕನ್ನಡ ಮೀಡಿಯಂ ಸೋಶಿಯಲ್ ಗೈಡಿನವರೆಗೂ ಸಲ್ಮನ್ ರಶ್ದಿಯ Satanic Verseನ ಕಳ್ಳಮುದ್ರಣದಿಂದ ಹಿಡಿದು Nincomcoopನ ಬರೆಯದ ಪುಸ್ತಕದವರೆಗೂ ತರಿಸಿಡಲು ಶಿಫಾರಸು ಮಾಡುವವರನ್ನು ಸಾಕಷ್ಟು ಕಂಡಿರುವುದರಿಂದ ಬರಿದೆ ಗೋಣು ಹಾಕಿದ್ದೆ. ಆದರೂ…
ಸಂಪೂರ್ಣ ಓದಿಗೆ ಭೇಟಿ ಕೊಡಿ: ಅತ್ರಿ ಬುಕ್ ಸೆಂಟರ್

‍ಲೇಖಕರು avadhi

November 1, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This