ಗುಟ್ಟುಗಳು
-ವಿಜಯ ಕುಮಾರ್ ಕುಂಭಾಶಿ
ಬ್ರಹ್ಮಾಂಡಕ್ಕೆ ತೆರೆದಿಟ್ಟ ಎದೆ
ಈ ಭೂಮಿ
ಇಲ್ಲಿ ಗುಟ್ಟುಗಳಿಲ್ಲ;
ಇರಬಾರದಲ್ಲ?!
ಕತ್ತಲ ಮೂಲೆಯನ್ನೆಲ್ಲ
ತಡಕಾಡಿಬಿಡಬೇಕು
ಮುಗುಮ್ಮಾಗಿ ಕೂತ
ಗುಟ್ಟುಗಳೆಲ್ಲ ಒದ್ದಾಡಬೇಕು
ಗುಟ್ಟೊಂದು ಜೀವಂತವಾಗಿ
ಸೆರೆಸಿಕ್ಕುವುದೇ ಇಲ್ಲ
ಕೆದಕಿದಂತೆ ಕಂದಕವಾಗಿ
ಬಾಯ್ತೆರೆಯುತ್ತದೆ
ಹೆಣವೊಂದು ಧುತ್ತೆಂದು
ಅದರೆದೆಯ ಮೇಲೆ
ನಾವಿರುತ್ತೇವೆ ಸೂತಕವಂಟಿಸಿಕೊಂಡು
ಭಯಾನಕ ರಂಗೋಲಿಗಿಟ್ಟ
ಚುಕ್ಕಿಗಳ ಸಾಲು
ನೇಣುಹಾಕಿ ಸತ್ತ
ಗುಟ್ಟುಗಳ ಸಮಾಧಿ.
ಹೆಗಲು ಮುಟ್ಟಬೇಡಿ;
ಎಲ್ಲರೂ ಹೆಣ ಹೊತ್ತವರೆ
ಸ್ಮಶಾನಕ್ಕೆ
ಬೆನ್ನುಹಾಕಿ ಬಂದ ದಿನ
ನಿಮ್ಮೊಳಗೂ
ಒಂದು ಗುಟ್ಟು ಮಿಸುಕಾಡುತ್ತದೆ
ಆತ್ಮಕ್ಕೆ ಸಾವಿಲ್ಲವಲ್ಲ;
ಹುಡುಕಾಡುತ್ತದೆ!]]>
ಇಂತಹದ್ದೇ ಇನ್ನೊಂದು ಕವಿತೆ!
ಅಶ್ಫಾಕ್ ಪೀರಜಾದೆ ಕವಿಯೊಬ್ಬ ಬರೆದಮುಟ್ಟು ನೋವು ತುಂಬಿದೆದೆಗಾಯಗೊಂಡ ಅಂಗಾಂಗಭಗ್ನಗೊಂಡ ಹೃದಯಅವಳ ಮೇಲಿನನಿರಂತರ ಶೋಷಣೆ ಕುರಿತು ಕಥೆಗಾರ ಕಥೆ...
tumba chennagide
ಕುಂಭಾಶಿ ಹುಡುಗನ ಕವಿತೆಗಳನ್ನು ಹಿಡಿಯಾಗಿ ಓದಲು ಕಾಯುತ್ತಲೇ ಇದ್ದೇನೆ.. ಚಂದದ ಕವಿತೆ.. ಶುಭವಾಗಲಿ
ಸ್ಮಶಾನಕ್ಕೆ
ಬೆನ್ನುಹಾಕಿ ಬಂದ ದಿನ
ನಿಮ್ಮೊಳಗೂ
ಒಂದು ಗುಟ್ಟು ಮಿಸುಕಾಡುತ್ತದೆ
ಆತ್ಮಕ್ಕೆ ಸಾವಿಲ್ಲವಲ್ಲ;
ಹುಡುಕಾಡುತ್ತದೆ!……heart touching …..
ravi varma hosapete
Very nice…..ಗುಟ್ಟೊಂದು ಜೀವಂತವಾಗಿ ಸೆರೆಸಿಕ್ಕುವುದೇ ಇಲ್ಲ……keep writing….
Really gud one…
good one congrats
‘ondu henava naalku henagalu horuvudetake ? Naagsling yogi taanu merevudetake “- NENAPIGE BANTU : oLLEYA kAVANA – NARAYAN RAICHUR, (rANGA-vIMRSHAKA/lEKHAKA)