ಗುಟ್ಟುಗಳು
-ವಿಜಯ ಕುಮಾರ್ ಕುಂಭಾಶಿ
ಬ್ರಹ್ಮಾಂಡಕ್ಕೆ ತೆರೆದಿಟ್ಟ ಎದೆ
ಈ ಭೂಮಿ
ಇಲ್ಲಿ ಗುಟ್ಟುಗಳಿಲ್ಲ;
ಇರಬಾರದಲ್ಲ?!
ಕತ್ತಲ ಮೂಲೆಯನ್ನೆಲ್ಲ
ತಡಕಾಡಿಬಿಡಬೇಕು
ಮುಗುಮ್ಮಾಗಿ ಕೂತ
ಗುಟ್ಟುಗಳೆಲ್ಲ ಒದ್ದಾಡಬೇಕು
ಗುಟ್ಟೊಂದು ಜೀವಂತವಾಗಿ
ಸೆರೆಸಿಕ್ಕುವುದೇ ಇಲ್ಲ
ಕೆದಕಿದಂತೆ ಕಂದಕವಾಗಿ
ಬಾಯ್ತೆರೆಯುತ್ತದೆ
ಹೆಣವೊಂದು ಧುತ್ತೆಂದು
ಅದರೆದೆಯ ಮೇಲೆ
ನಾವಿರುತ್ತೇವೆ ಸೂತಕವಂಟಿಸಿಕೊಂಡು
ಭಯಾನಕ ರಂಗೋಲಿಗಿಟ್ಟ
ಚುಕ್ಕಿಗಳ ಸಾಲು
ನೇಣುಹಾಕಿ ಸತ್ತ
ಗುಟ್ಟುಗಳ ಸಮಾಧಿ.
ಹೆಗಲು ಮುಟ್ಟಬೇಡಿ;
ಎಲ್ಲರೂ ಹೆಣ ಹೊತ್ತವರೆ
ಸ್ಮಶಾನಕ್ಕೆ
ಬೆನ್ನುಹಾಕಿ ಬಂದ ದಿನ
ನಿಮ್ಮೊಳಗೂ
ಒಂದು ಗುಟ್ಟು ಮಿಸುಕಾಡುತ್ತದೆ
ಆತ್ಮಕ್ಕೆ ಸಾವಿಲ್ಲವಲ್ಲ;
ಹುಡುಕಾಡುತ್ತದೆ!]]>
ನೀನೆಂದರೆ ನೀ ಅಷ್ಟೇ
ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ...
tumba chennagide
ಕುಂಭಾಶಿ ಹುಡುಗನ ಕವಿತೆಗಳನ್ನು ಹಿಡಿಯಾಗಿ ಓದಲು ಕಾಯುತ್ತಲೇ ಇದ್ದೇನೆ.. ಚಂದದ ಕವಿತೆ.. ಶುಭವಾಗಲಿ
ಸ್ಮಶಾನಕ್ಕೆ
ಬೆನ್ನುಹಾಕಿ ಬಂದ ದಿನ
ನಿಮ್ಮೊಳಗೂ
ಒಂದು ಗುಟ್ಟು ಮಿಸುಕಾಡುತ್ತದೆ
ಆತ್ಮಕ್ಕೆ ಸಾವಿಲ್ಲವಲ್ಲ;
ಹುಡುಕಾಡುತ್ತದೆ!……heart touching …..
ravi varma hosapete
Very nice…..ಗುಟ್ಟೊಂದು ಜೀವಂತವಾಗಿ ಸೆರೆಸಿಕ್ಕುವುದೇ ಇಲ್ಲ……keep writing….
Really gud one…
good one congrats
‘ondu henava naalku henagalu horuvudetake ? Naagsling yogi taanu merevudetake “- NENAPIGE BANTU : oLLEYA kAVANA – NARAYAN RAICHUR, (rANGA-vIMRSHAKA/lEKHAKA)