ಹೇಗಿತ್ತು ನಿನ್ನ ನಿನ್ನೆಯ ಹಬ್ಬ?

ವಿಕಾಸ ನೇಗಿಲೋಣಿ ಕವಿತೆಗೆ ನಮ್ಮ ಹೃತ್ಫೂರ್ವಕ ಸಲಾಂ. ಒಂದು ದೀಪಾವಳಿಯನ್ನು ಹೀಗೆಲ್ಲಾ ನೋಡಬಹುದು ಎಂದು ಕಲಿಸಲು ಕಳ್ಳನ ಗೆಳೆಯ ಕುಳ್ಳನಿಗಷ್ಟೇ ಸಾಧ್ಯ. ಆದ್ದರಿಂದ ಅವರ ಕವಿತೆ ಬರಹದ ರುಚಿ ಹತ್ತಿಸಿಕೊಳ್ಳಲು ಅವರ ಬ್ಲಾಗ್ ‘ಕಳ್ಳ-ಕುಳ್ಳ’ಕ್ಕೆ ಭೇಟಿ ಕೊಡಿ.

ಶುಭಾಶಯಗಳು

-ವಿಕಾಸ್‌ ನೇಗಿ­ಲೋಣಿ

ಪವರ್‌ಕಟ್‌ನ ನಂತರ
ಬೆಳಗಿದ ಬಲ್ಬೇ,
ಹೊತ್ತಿಕೊಂಡ ಸ್ಟೆಬಿಲೈಜರ್‌ ದೀಪವೇ
ಕರೆಂಟ್‌ ಹೋದ ಕೂಡಲೇ
ಆರಿಸಬಾರದಿತ್ತೇ
ಎಂದು ಬೈಸಿಕೊಳ್ಳುತ್ತಾ
ಪಕ್ಕನೆ ಬೆಳಕಾದ ಟೀವಿ ಪರದೆಯೇ,
ಅಡುಗೆ ಮನೆಯ
ಎಲೆಕ್ಟ್ರಿಕ್‌ ಒಲೆಯೇ,
ಕೋಣೆಯೊಳಗಿನ ಕಂಪ್ಯೂಟರ್ರೇ…
ನಿನ್ನ ದೀಪಾವಳಿಗೆ ನನ್ನ ಶುಭಾಶಯಗಳು
***
ಅಮ್ಮಾ ಪಟಾಕಿ ಸಿಡಿಯಿತು
ಪಟಾಕಿ ಹೊಡೀತೀನಿ
ಎನ್ನುತ್ತಾ ಒಳಬರುವ ಮಗನೇ,
ಒಳಗೆ ಆಗಷ್ಟೇ ಪ್ರತ್ಯಕ್ಷವಾದ ಕತ್ತಲೇ,
ಕಣ್ಣಲ್ಲಿ
ಈಗ ತಾನೇ ಟೀವಿಯಲ್ಲಿ ತೋರಿಸಿದ
ಬಾಂಬ್‌ ಪಟಾಕಿ ಹೊಡೆದ ಹೊಗೆಯ ಚಿತ್ತಾರವೇ,
ಪೇಪರ್‌ನಲ್ಲಿ
ಪಟಾಕಿಯಂತೆ ಸಿಡಿದ
ಸಿಡಿಮದ್ದಿನ
ಮಧ್ಯೆ
ಸಿಡಿದು ಹೋದ ಬದುಕುಗಳೇ,
ಈ ನಿಮ್ಮ ಹಬ್ಬ ಹೇಗಿತ್ತು?
***
ಆಫೀಸಿನಲ್ಲಿ
ಎರಡು ದಿನ ಕೇಳಿದ್ದಕ್ಕೆ
ಒಂದೇ ದಿನ ಸಿಕ್ಕ ಹಬ್ಬದ ರಜೆಯೇ,
ಸಿಕ್ಕ ಒಂದು ದಿನದ
ರಜೆಯೂ
ಕಸ ಗುಡಿಸುತ್ತಾ, ಬಟ್ಟೆ ತೊಳೆಯುತ್ತಾ
ಟೀವಿಯಲ್ಲಿ ಸಿನಿಮಾ ನೋಡುತ್ತಾ
ಮಧ್ಯಾಹ್ನದ ಹೊತ್ತಿಗೆ ಹೊಟೆಲ್‌ನಲ್ಲೂ
ಸಂಜೆಯ ಹೊತ್ತಿಗೆ ಪಿವಿಆರ್‌ನಲ್ಲೂ
ರಾತ್ರಿ ತಾರೆಗಳ `ಲೈವ್‌` ಮಾತುಕತೆಯಲ್ಲೂ
ಕಳೆಯುತ್ತಿರುವ ಆಯುಷ್ಯವೇ,
ಅಂದಹಾಗೆ
ಹಬ್ಬಕ್ಕೆ ನೀವೆಲ್ಲಾ ಎಲ್ಲಿ ಹೋಗಿದ್ದಿರಿ?
***
ಬೆಳಿಗ್ಗೆ ಕಸದ ಗಾಡಿಗೆ
ಬಿದ್ದ ಪಾರ್ಸೆಲ್‌ನ ಪಳೆಯುಳಿಕೆಯೇ,
ದೇವಸ್ಥಾನದ ಹೊರಗೆ ಬಿದ್ದ
ಹಳೆಹೂವು, ಊದುಬತ್ತಿ ಕಡ್ಡಿ
ಕುಂಕುಮಧೂಳು, ಅರಿಶಿಣ ಪುಡಿಯೇ,
ಕಸ ಹಾಕುವವನು
ಆಚೆ ಈಚೆ ನೋಡಿ ಎತ್ತಿಕೊಂಡ
ಸಿಡಿದಿರದ ಪಟಾಕಿ ಸರವೇ,
ಆಸ್ಪತ್ರೆಯ ಹಾಸಿಗೆ ಮೇಲೆ
ಕಣ್ಣಿಗೆ ಬ್ಯಾಂಡೇಜ್‌ ಕಟ್ಟಿಕೊಂಡು
ಮಲಗಿದ ಪುಟಾಣಿ ಕಂದನೇ,
ಹೇಗಿತ್ತು ನಿನ್ನ ನಿನ್ನೆಯ ಹಬ್ಬ?

‍ಲೇಖಕರು avadhi

November 2, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

ನನ್ನ ಬುದ್ಧ

ನನ್ನ ಬುದ್ಧ

ನಂದಿನಿ ಹೆದ್ದುರ್ಗ ಹೊಸಪ್ರೇಮಿಗಳ ನಡುರಾತ್ರಿಯ ಮೊರೆವಮಾತುಗಳ ನಡುವಿಂದ ಕದ್ದು ಓಡಿಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.ಅದು ಅವಳು ಪದ್ಯ...

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This