ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು…!?

‘ಆಹಾ.. ಚಹಾ’ ಸರಣಿ

ಸುಧಾ ಚಿದಾನಂದಗೌಡ 

ಬಂದವರಿಗೆಲ್ಲ ಸತ್ಕರಿಸಿ ಕುಳ್ಳಿರಿಸಿ
ಗಟ್ಟಿಹಾಲಿಗೇನೇ ಚಹದಪುಡಿ, ಸಕ್ಕರೆ ಬೆರೆಸಿ
ಜೊತೆಗೆ ಘಮಕ್ಕಿರಲೆಂದು ಒಂದೇ ಏಲಕ್ಕಿ
ಚೂರೇ ಹಸಿಶುಂಠಿ ಬೆರೆಸಿ
ಹದವಾಗಿ ಕುದಿಯುತ್ತಿರುವುದ ನೋಡುತ್ತಾ ಕುದಿಯುತ್ತಿದ್ದೇನೆ
ನಾನು ನೀನು ಇನ್ನೂ ಮುಖಾಮುಖಿ ಚಹಾ ಹೀರಿಲ್ಲ..
ಹೊಸಸ್ಟೈಲಿನ ಕಪ್ಪುಸಾಸರು
ಚೆಂದದ ಟ್ರೇ ಉಪಚರಿಸುವ ಪರಿಗೆ ಎಲ್ಲರೂ ಫಿದಾ
ನಗುನಗುತಾ ಎಲ್ಲರಿಗು ಚಹಾ ಕೊಟ್ಟು ನೋಡುತ್ತ ಇದ್ದೇನೆ
ನಾನು ನೀನು ಇನ್ನೂ ಚಹಾಕ್ಕಾಗಿ ಎದುರುಬದುರು ಕುಳಿತಿಲ್ಲ
ಕೊತಕೊತಿಸುತ್ತೇನೆ ನೆನಪಿನಲ್ಲಿ ಸದಾ

ನೀನು ಕರೆದಿದ್ದೀ- ಕಿವಿಯಲಿ ಮಗನ ಕೂಗಿತ್ತು
ಮತ್ತೆ ಕುಕ್ಕರ್ ಕರೆಯುತ್ತಿತ್ತು
ನಾನೂ ಕರೆದಿದ್ದೆ- ನೀನೆಲ್ಲೋ ವಿಮಾನದಲ್ಲಿದ್ದೆ
ಅಥವಾ ಗೆಳೆಯನೊಡನೆ ಗ್ಲಾಸು ಹಿಡಿದಿದ್ದೆ

ಗಂಟಲುಬ್ಬತ್ತದೆ- ಆಸೆಯ ಕಟ್ಟೆಗೆ ಮೌನದ ಚೌಕಟ್ಟು
ಹೇಳು ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು..?!

‍ಲೇಖಕರು avadhi

March 11, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾದಗಿರಿ ಮಹಾರಾಜ್ ಇಡ್ಲಿ

ಯಾದಗಿರಿ ಮಹಾರಾಜ್ ಇಡ್ಲಿ

ವಿಜಯಭಾಸ್ಕರ ರೆಡ್ಡಿ    ಯಾದಗಿರಿಯ ರೈಲ್ವೆ ನಿಲ್ದಾಣ ಹಾದಿಯಲ್ಲಿರುವ‌ ಮಾರಾಜ್ ಇಡ್ಲಿಯ ಈ ಚಿಕ್ಕ ಹೋಟೆಲ್ ನ ಆ ಚಟ್ನಿ ಗಮಲು ಸವಿಯಲು...

ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ..

ಹಳಬರು ಅದನ್ನು "ಭಟ್ಟರ ಹೋಟೆಲ್" ಅಂತಾರೆ..

ಸುದರ್ಶನ್ ಕುಮಾರ್  ಬಸವನಗುಡಿಯ ಪರಿಚಯ ಇಲ್ಲದವರು ಹೋಗಲೇಬೇಕಾದ ಒಂದು ಒಳೆಯ ಹೋಟೆಲ್ ಗಾಂಧಿಬಝರ್ ನಲ್ಲಿದೆ. ಹಳಬರು ಅದನ್ನು "ಭಟ್ಟರ ಹೋಟೆಲ್"...

3 ಪ್ರತಿಕ್ರಿಯೆಗಳು

  1. shama nandibetta

    ಗಂಟಲುಬ್ಬತ್ತದೆ- ಆಸೆಯ ಕಟ್ಟೆಗೆ ಮೌನದ ಚೌಕಟ್ಟು
    ಹೇಳು ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು..?!

    beautiful

    ಪ್ರತಿಕ್ರಿಯೆ
  2. shrivatsadesai

    ನಾಳೆ ಮಾಡುವೆ ಮತ್ತೆರಡು ಚಹಾ.

    ಯಾರೂ ಬಂದಿಲ್ಲ, ಅವಳೂ ಇಲ್ಲ,
    ಎಂದಿನಂತೆ ಅವಳಿಗೆ ಬೇಕಾದ ಹಾಗೇ
    ಚಹಾ- ಅಲ್ಲ, ಅವಳಂದಂತೆ ’ಟೀ” ಮಾಡಿದ್ದೇನೆ
    ಅವಳದೇ ’ಮಗ್ಗು’ (ಇನ್ನೂ ಕಾದಿಟ್ಟಿದ್ದೇನೆ).
    ಟೀ ಬ್ಯಾಗಿಗೆ ಕುದಿಯುವ ಕೆಟಲ್ ಬಿಸಿನೀರು
    ’’ಒಂದೇ ಚಮಚ ಸಕ್ಕರೆ, ಗೋಲ್ದನ್ ಕಲರ್ ಬರುವಷ್ಟೇ ಹಾಲು”
    ನಿನ್ನ ಆಣೆ!
    ನಿನ್ನದೇ ಸಾಸರ್ ನಲ್ಲಿ ಬಿಸ್ಕತ್ತು
    ಎಂದಿನಂತೆ ಕಾಯುತ್ತಾ ಕುಳಿತಿರುವೆ ಟೇಬಲ್ ಬಳಿ.
    ಎದುರಿಗಿನ ನಿನ್ನ ಕುರ್ಚಿ ಖಾಲಿಯಾಗೇ ಇದೆ
    ಏಳು ವರ್ಷಗಳಿಂದ!
    ಎರಡು ಚಮಚ ಹಾಕಿದರೂ ನನ್ನ ’ಮಗ್’ ನ ಚಹಾ ಉಪ್ಪುಪ್ಪು!
    ಏಳು ವರ್ಷಗಳಾದರೇನು, ಕಣ್ಣೀರು ಬತ್ತಿಲ್ಲ!
    ಎಂದಿನಂತೆ ನಿನ್ನ ಪಾಲಿನದು ’ಸಿಂಕ್’’ಗೆ
    ನನ್ನ ಪಾಲಿಗೆ ಬರೀ ಸಿಹಿ-ಕಹಿ ನೆನಪು!
    ನಾಳೆ ಮಾಡುವೆ ಮತ್ತೆರಡು ಚಹಾ.

    ಶ್ರೀವತ್ಸ ದೇಸಾಯಿ (ಯು ಕೆ)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: