ಹೇನು

aaa.jpgಶಶಿ ಭಾಟಿಯ

ದೊಂದು ಅವಿಭಕ್ತ ಕುಟುಂಬ. ಊರು ತುಂಬ ತುಂಬಿದ ಸಾಗುವಳಿ ಕುಟುಂಬ. ಊರಿಗೇ ತುಂಬಿದ ಮನೆ. ಮನೆಯ ಮಕ್ಕಳ ಆಧುನಿಕ ರೀತಿ ಕಂಡು ತಾಯಿಯಾದವಳಿಗೆ ಬೊಡಿದು ಹೋಯಿತು. ಒಂದು ಮಾತಿಲ್ಲ, ನಗುವಿಲ್ಲ. ಮಕ್ಕಳಿಗೆ ಮದುವೆಯಾದ ಮೇಲೆ ಓಟ್ಟಿಗೆ ಊಟಕ್ಕೆ ಕೂರುವುದೂ ನಿಂತುಹೋಗಿದೆ. ಅವರವರಿಗೆ ಅವರವರ ಹೆಂಡಿರು, ಮಕ್ಕಳು. ಅಲ್ಲಿಗೆ ಮುಗಿಯಿತು. ಸೊಸೆಯಂದಿರೊ ಒಟ್ಟಿಗೆ ಕುಳಿತು ಅರೆದವರಲ್ಲ- ಗ್ರೈಂಡರ್ ಇದೆ. ಒಟ್ಟಿಗೆ ನಿಂತು ಒಗೆದವರಲ್ಲ- ಮೆಷಿನ್ ಇದೆ. ಬಾವಿಕಟ್ಟೆಯಲ್ಲಿ ಸೇರಿದವರಲ್ಲ- ಮೋಟರ್ ಇದೆ. ಗಂಡುಮಕ್ಕಳು ಅಲ್ಲಿರಲಿ, ಸೊಸೆಯಂದಿರ ಈ ರೀತಿ ಅತ್ತೆಗೆ ಸಹಿಸಲಾಗಲಿಲ್ಲ. ಮೊದಮೊದಲು ಟಿವಿ ನೋಡಲು ನಡುಕೋಣೆಗೆ ಬರುತ್ತಿದ್ದರು. ಈಗ ಪ್ರತಿ ಕೋಣೆಗೂ ಟಿವಿ ಬಂದಿದೆ.

ಆಕೆ ಒಂದು ಉಪಾಯ ಹುಡುಕಿದಳು.

ಒಂದು ದಿನ ಸೀದಾ ನಾಲ್ಕು ಮನೆಯಾಚೆಯ ದೇವಿ ಮನೆಗೆ ನಡೆದಳು. ಮಕ್ಕಳ ತಲೆಯಿಂದ ಹೇನು ಹೆಕ್ಕಿ ತೆಗೆದಳು. ರಾತ್ರಿ ಸೊಸೆಯಂದಿರ ತಲೆಗೆ ಹಂಚಿ ಹಾಕಿದಳು. ಮರುದಿನ ಬೆಳಗ್ಗೆ ವಾತಾವರಣವೇ ಬದಲಾಯಿತು. ಒಬ್ಬಳು ತಲೆ ತುರಿಸುತ್ತಾ ಆಚೆ ಓಡುತ್ತಿದ್ದರೆ, ಇನ್ನೊಬ್ಬಳು ಈಚೆಗೆ. ಒಬ್ಬಳು ಅಕ್ಕಾ ಹೇನು ಹೇನು ಅಂತಾ ಓಡುತ್ತಿದ್ದರೆ, ಇನ್ನೊಬ್ಬಳು ತಂಗೀ ಬಾಚಣಿಗೆ ಬಾಚಣಿಗೆ ಅಂತಾ ಓಡುತ್ತಿದ್ದಾಳೆ.

ಹಾಗೆ ಆ ಮನೆಗೆ ಸದ್ದು ಗದ್ದಲ ಬಂತು.

‍ಲೇಖಕರು avadhi

October 14, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                      ...

6 ಪ್ರತಿಕ್ರಿಯೆಗಳು

 1. Ganadhalu Srikanta

  HENU – Shashi Bhatiya putta kTe odi khushiyaytu. ondu sanna vichara, kthe roopa padedide. Kathegara Divakar avar sanna katheglannu idu nenpisuttade.

  Thanks

  Ganadhalu Srikanta

  ಪ್ರತಿಕ್ರಿಯೆ
 2. laxmivenkatesh

  ತುಂಬಾಚೆನ್ನಾಗಿದೆ. ಇನ್ನೂ ಪೂರ್ತಿ ಓದಕ್ಕೆ ಆಗಿಲ್ಲ. ನಿಮಗೆ ಗೊತ್ತಲ್ಲ. ನನ್ನ ಹೆಸರು, ವೆಂಕಟೇಶ್, ಅಂತ- ’ಸಂಪದ,’ದಲ್ಲಿ ಹಗಲೆಲ್ಲ ಗೀಚೊ ಅಭ್ಯಾಸ- ಅಥವಾ ಹುಚ್ಚು ಅನ್ನಿ.

  ವೆಂಕಟೇಶ್
  ಮುಂಬೈ-೮೪
  ದೂರಧ್ವನಿ : ೨೫೧೦೬೦೬೮

  ಪ್ರತಿಕ್ರಿಯೆ
 3. Nagendra.Trasi

  ಚಿಕ್ಕ ನಿರೂಪಣೆಯಲ್ಲೆ ಹೇನು ಕಥೆಯನ್ನು ಸೊಗಸಾಗಿ ಚಿತ್ರಿಸಿದ ಭಾಟಿಯಾ ಅವರ ಶೈಲಿ ಮೆಚ್ಚುವಂತಾದ್ದು.

  ನಾಗೇಂದ್ರ ತ್ರಾಸಿ
  ಚೆನ್ನೈ-14

  ಪ್ರತಿಕ್ರಿಯೆ
 4. Santhosh Ananthapura

  “ಅಂತು-ಇಂತು ಹೇನಿಂದ ಮನೆಯಲ್ಲಿ ಸದ್ದು ಗದ್ದಲ ಬಂತು.” ಚೆನ್ನಾಗಿದೆ. ಮನುಷ್ಯ ಸಂಬಂಧಗಳು ಯಾವತ್ತೂ ಗಲ ಗಲ ಅಂತ ಸದ್ದು ಮಾಡುತ್ತಲೇ ಇರಬೇಕು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: