ಹೊಸದೊಂದು ಬ್ಲಾಗ್, ಹೆಸರು- ‘ಮ್ಯಾಜಿಕ್ ಕಾರ್ಪೆಟ್’

ಹೊಸದೊಂದು ಬ್ಲಾಗ್ ನಿಮ್ಮ ಮುಂದೆ ಕಣ್ಣು ಬಿಡುತ್ತಿದೆ. ಹೆಸರು ‘ಮ್ಯಾಜಿಕ್ ಕಾರ್ಪೆಟ್’ ಅಥವಾ ಪೂರ್ಣಚಂದ್ರ ತೇಜಸ್ವಿ ಅವರ ಭಾಷೆಯಲ್ಲಿ ಹೇಳಬಹುದಾದರೆ ಅದು-ಮಾಯಾ ಲೋಕ. ಎಲ್ಲಿಂದ ಎಲ್ಲಿಗೋ ಹಾರಿಸಿಕೊಂಡು ಹೋಗಿ ಒಂದು ಮಾಯಾ ಲೋಕವನ್ನು ಬಿಚ್ಚಿಡುವ ಮಾಯಾ ಚಾಪೆ ನೋಡಿದ್ದೀರಾ. ನಾವೂ ನೋಡಿಲ್ಲ. ಆದರೆ ಸಿನಿಮಾಗಳು ನಮ್ಮೆಲ್ಲ ರ ಕೈಗೆಟುಕುವ ಮಾಯಾ ಚಾಪೆ ಅಲ್ಲವೇ?. ಹಾಗಾಗಿ ಈ ಮಾಯಾ ಚಾಪೆಯ ಮೇಲೆ ಕುಳಿತು ಒಂದಿಷ್ಟು ದೇಶ ಕೋಶ ಸುತ್ತೋಣ ಎಂಬ ಆಸೆಯಿಂದ ಆರಂಭವಾಗಿರುವ ಬ್ಲಾಗ್-ಮ್ಯಾಜಿಕ್ ಕಾರ್ಪೆಟ್.

ಈ ಮ್ಯಾಜಿಕ್ ಕಾರ್ಪೆಟ್ ಏನೇನೆಲ್ಲಾ ಮಾಡುತ್ತದೆ ಎಂಬ ಸೂಚನೆಯನ್ನು ಈಗಾಗಲೇ ನೀಡುವಂತೆ ಒಂದಿಷ್ಟು ಬರಹಗಳು ಕಾಣಿಸಿಕೊಂಡಿವೆ. ಮೊದಲ ಪ್ರಯತ್ನದಲ್ಲಿಯೇ ಆಸ್ಕರ್ ಗೆದ್ದ The lives of others ಸಿನಿಮಾ, ಅದಕ್ಕೆ ಎದ್ದ ತಕರಾರು, ಆಕ್ಸಿಡೆಂಟ್ ಸಿನಿಮಾ ಬಗ್ಗೆ ಸುಧನ್ವಾ ದೇರಾಜೆ ಬರಹ, ಜೋಧಾ ಅಕ್ಬರ್ ಬಗ್ಗೆ ನಮ್ಮ ಅಂಕಣಕಾರ್ತಿ ಚೇತನಾ ತೀರ್ಥಹಳ್ಳಿ ಜ್ಹಲಕ್, ಒಳ್ಳೆ ಹಾಗೂ ಕೆಟ್ಟ ಸಿನಿಮಾಗಳ ಬಗ್ಗೆ ಮಾಹಿತಿ ವಿನಿಮಯ ಎಲ್ಲಾ ಇದೆ.

ಈ ಬ್ಲಾಗ್ ಶುರುವಿಟ್ಟುಕೊಂಡದ್ದು ಹೇಗೆ ಎಂಬುದರ ಬಗ್ಗೆ ಬ್ಲಾಗ್ ನ ಮೊದಲ ಬರಹ-ಹೀಗೆ ಸುಮ್ಮನೆ ಅನ್ನು ಇಲ್ಲಿ ನೀಡುತ್ತಿದ್ದೇವೆ.

ಹೀಗೆ ಸುಮ್ಮನೆ…

ಮೊನ್ನೆ ಅರುಂಧತಿ ನಾಗ್ ರಂಗ ಶಂಕರದಲ್ಲಿ ಸಿಕ್ಕಿದ್ದೇ ಒಂದು ನೆಪವಾಗಿ ಹೋಯಿತು. ರಂಗ ಯುಗಾದಿಯ  ಸಡಗರ ಇನ್ನೂ ಆಗಷ್ಟೇ ಆರಂಭವಾಗಿತ್ತು. ನಾನು ಕವಿತೆ ಓದಿ ಮುಗಿಸಿದ್ದೆ. ಹೇಳಿ ಕೇಳಿ ಶೇಕೃ್ಪಿಯರ್ ಬಗೆಗಿನ ಕವನ. ನಾಟಕದವರ ಅಂಗಳದಲ್ಲಿ ಓದಿದ ಕವನವಲ್ಲವಾ ಅರುಂಧತಿ ಖುಷಿಯಾಗಿಬಿಟ್ಟರು. ಅದೂ ಇದೂ ಹರಟೆ ಹೊಡೆಯುತ್ತಾ ಇರಬೇಕಾದರೆ ‘ಮೋಹನ್ ನೀವು lives of others ಫಿಲ್ಮ್ ನೋಡಲೇಬೇಕು. ತುಂಬಾ ತುಂಬಾ ಚೆನ್ನಾಗಿದೆ. ನಿಮಗೆ ಹೇಳ್ತಾ ಇದ್ರೆ ಈಗ್ಲೂ ನನ್ನ ಮೈ ಜುಂ ಅಂತಾ ಇದೆ. ಡೋಂಟ್ ಮಿಸ್ ಇಟ್ ಅಂದ್ರು. ಅದೇನಪ್ಪಾ ಅಷ್ಟೊಂದು ಬಣ್ಣಿಸಿದ್ದು ನೋಡೇಬಿಡೋಣ ಅಂತ ಸಿಗ್ಮಾ ಮಾಲ್ ನಲ್ಲಿರೋ ‘ಫನ್’  ಸಿನೆಮಾಗೆ ಹೋದೆ. ಎಸ್, ಇಟ್ ವಾಸ್ ಇಂಟ್ರೆಸ್ಟಿಂಗ್!.

ಅರೆ, ಅರುಂದತಿ ಹೇಳಿದ್ದಕ್ಕೆ ಅಲ್ವಾ ನಾನು ಹೋಗಿ ನೋಡಿದ್ದು?. ಅದೇ ತರಾ ನಾನೂ ಒಂದಷ್ಟು ಜನಕ್ಕೆ ಸುದ್ದಿ ಮುಟ್ಟಿಸಿದ್ರೆ ಅವರೂ ನೋಡ್ತಾರೆ ಅಲ್ವಾ ಅನಿಸ್ತು. ಗೆಳೆಯರಿಗೆಲ್ಲಾ ಮೈಲ್ ಮಾಡಿದೆ. ಆಶ್ಚರ್ಯ. ಸುಮಾರು ಜನ ರಿಯಾಕ್ಟ್   ಮಾಡಿದರು. ನೋಡೇ ನೋಡ್ತೀವಿ ಅಂತ ತಿಳಿಸಿದರು. ಅದೇ ಸಮಯದಲ್ಲಿ ಕಂಟೆಂಟ್ ಬಗ್ಗೆ ಒಬ್ಬರು ಚರ್ಚೆ ಮಾಡಿದರು. ಅವಾಗ ಅನಿಸ್ತು ಒಂದು ಒಳ್ಳೆ ಸಿನೆಮಾ ಬಂದಿದೆ ಅಂತ ಹೇಳೋದು ಮುಖ್ಯ, ಆ ಸಿನೆಮಾ ಯಾಕೆ ಚೆನ್ನಾಗಿದೆ ಅಂತ ಅರ್ಥ ಮಾಡ್ಕೊಳ್ಳೋದು ಮುಖ್ಯ. ಸಿನೆಮಾ ಚೆನ್ನಾಗಿ ತೆಗೆದಿದ್ರೂ ಹೂರಣ ಏನು ಅನ್ನೋದೂ ಮುಖ್ಯ.

ನಮಗೆ ಎಷ್ಟೋ ಸಲ ಯಾವ ಒಳ್ಳೆ ಸಿನೆಮಾ ಬಂದಿದೆ ಅನ್ನೋದೇ ಗೊತ್ತಾಗಲ್ಲ ಯಾವುದಾದರೂ ಒಳ್ಳೆ ಸಿನೆಮಾ ನೋಡಿ ಎಗ್ಸೈಟ್ ಆದ್ರೆ ಅದನ್ನ ಯಾರಿಗೆ ಹೇಳೋದು ಅನ್ನೋದೂ ಗೊತ್ತಾಗಲ್ಲ.

ಇತ್ತೀಚೆಗೆ ಗಮನಿಸಿದೆ. ‘ಗಾಳಿಪಟ’ ದ ಬಗ್ಗೆ ಸಾಕಷ್ಟು ರೀತಿಯ ಚರ್ಚೆ ನಡೀತು. ತಾರೆ ಜಮೀನ್ ಪರ್ ಸಿನೆಮಾದ ಬಗ್ಗೆ ವಿಮರ್ಶೆ, ಪ್ರಬಂಧ ಎಲ್ಲ ಬಂತು. ವಾರೆ ವಾಹ್ ಎಷ್ಟೊಂದು ಇದೆ ಶೇರ್ ಮಾಡ್ಕೊಳ್ಳೋಕೆ. ಹಾಗಾದ್ರೆ ಯಾಕ್ ಸುಮ್ನಿರಬೇಕು? ಅದಕ್ಕೆ ಈಗ ಈ ‘ಮ್ಯಾಜಿಕ್ ಕಾರ್ಪೆಟ್’

ಇದು ಹೇಗೆ ಬೇಕಾದರೂ ಬೆಳೀಬಹುದು. ಅದ್ರೆ ಒಂದು ಮಾತ್ರ ನಿಜ. ನೀವು ಇಲ್ದಿರಾ ಈ ‘ಮ್ಯಾಜಿಕ್’ ನಡೆಯಲ್ಲ.

Contact: [email protected]

‍ಲೇಖಕರು avadhi

April 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

 1. leela sampige

  ಮ್ಯಾಜಿಕ್ ಕಾರ್ಪೆಟ್- ಟೈಟಲ್ ಸೂಪರ್ !
  ಅಂದ ಕೂಡ್ಲೇ ನನ್ನ ನೆನಪು ಬಾಲ್ಯಕ್ಕೆ ರಿವಯಿನ್ಡ್ ಆಗ್ತಾ ಇದೆ.
  ಈ ಸಿನಿಮಾ ಮ್ಯಾಜಿಕ್ ನಮ್ಮ ಊರಿನ ಭಾವ್ಯಕ್ಯತೆ ಸಾಧಿಸಿದ್ದ ಒಂದೇ ಒಂದು ಮ್ಯಾಜಿಕ್ !
  ಪಕ್ಕದ ಕಲ್ಲೂರಿಗೆ ಸಿನಿಮಾ ಪ್ಯಾಕೇಜ್ ಟ್ರಿಪ್. ಬೆಳಿಗ್ಗೆಯೇ ಟಾಮ್ ಟಾಮ್ ಹೊಡಿಸ್ತಾ ಇದ್ರು. ಬೇವಿನ ಕಟ್ಟೆಯಿಂದ ಟ್ರ್ಯಾಕ್ತರ್ ಹೊರಡ್ತ ಇತ್ತು. ಹತ್ತು ರೂಪಾಯಿ ಪರ್ ಹೆಡ್, ನಮಗೆ ಮೂರು ರೂಪಾಯಿ. ಓನ್ಲಿ ರಾಜಕುಮಾರ್ ಹಿಟ್ಸ್. ನೋ ಜಗಳ. ನೋ ಜಾತಿ. ಅಣ್ಣಯ್ಯನ ಜೊತೆ ನೋಡಿದ್ದ ಕರುಳಿನ ಕರೆ ನೋಡಿದ್ದು ಈಗಲೂ ಕತೆ ಹೇಳ್ತೀನಿ !
  ಲೀಲಾ ಸಂಪಿಗೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: