– ವಿಜಯಕುಮಾರ್ ಹೂಗಾರ್
೧ ದಾರ ಕಡಿದು ಹಾರುವ ಗಾಳಿಪಟದಲ್ಲಿದೆ ಏಕಾಂತದ ಶುದ್ಧತೆ. ಯಾರ ಹಿಡಿತದಲ್ಲಿರದೆ ತೇಲುತಿದೆ ಅಪ್ಪಳಿಸಿ ಶರಣಾಗುವ ಮುನ್ನ ೨ ಮೈಥುನದ ತುತ್ತ ತುದಿ ಏಕಾಂತದ ಪರಮಾವಧಿ, ಏಕಗ್ರತೆಯನ್ನೇ ಮೆಟ್ಟಿ ನಿಲ್ಲುವ ಸಮಯ. ನಮ್ಮನ್ನರಿಯದೆ ನಮ್ಮಲ್ಲಿ ಅಡಗಿರುವ ನಗ್ನ ಏಕಾಂತದ ಖಜಾನೆ. ೩ ಕವಿ ಬರೆದ ಕವಿತೆಯಲ್ಲಿ ಅಡಗಿದ ಏಕಾಂತವೋ ? ಅಥವಾ ಏಕಾಂತ ಹುಡುಕುವ ನೆಪದಲ್ಲಿ ಬರೆದ ಕವಿತೆಯೋ ? ಕವಿ,ಕವಿತೆ ಇಬ್ಬರಿಗೂ ತಿಳಿಯದ ಸಂಗತಿ. ೪ ಸಾವು ಎದುರಾಗಿ ಮರೆಯಾದ ಘಳಿಗೆಯಲ್ಲಿದೆ ಶೂನ್ಯ ಏಕಾಂತ. ಬಯಸದೆ ಅನುಭವಕ್ಕೆ ಸಿಗುವುದು ವ್ಯಕ್ತಪಡಿಸುವದಕ್ಕೂ ಆಗದು. ೫ ಉಸಿರು ಏರಿ ಇನ್ನೇನು ಇಳಿಯುವ ಮುನ್ನ ಬಂದು ಹೋಗುವದು ಒಂದು ಕಳ್ಳ ಏಕಾಂತ ಅನುಭವಿಸಿದವನಿಗೆ ಮಾತ್ರ ಗೊತ್ತು ಅದರ ಗಮ್ಮತ್ತು. ]]>ಗಾಂಧಿ ಮತ್ತು ಅಂಬೇಡ್ಕರ್ ಕೃತಿಗಳನ್ನ ಓದದೆ..
ಎನ್.ಎಸ್. ಶಂಕರ್ ರಾಜಮೋಹನ ಗಾಂಧಿಯವರ ಈ ಅಪೂರ್ವ ಕಿರುಹೊತ್ತಗೆಯ ಅನುವಾದದ ನನ್ನ ಪುಸ್ತಕವನ್ನು ಗಾಂಧಿ ಸ್ಮಾರಕ ನಿಧಿ ಹೊರತಂದಿದ್ದು ಮುಂದಿನ...
Thanks Avadhi…:-)