ಹೊಸ ಓದು : ಏಕೆಂದರೆ ನೀ ಮಹಿಳೆ

ಸಾಧನೆಗೆ ಸವಾಲುಗಳ ಸರಮಾಲೆ

– ಚೈತ್ರ  ಬಿ .ಜಿ  ಕಾನುಗೋಡು

ಆಕೆ : ಬೆಳಗ್ಗೆ 6 ಘಂಟೆಗೆ ಏಳುತ್ತಾಳೆ, ಕಾಫೀ ಮಾಡಿ ತಿಂಡಿ ರೆಡಿ ಮಾಡಿ ಮಧ್ಯಾನಕ್ಕೆ lounch box ರೆಡಿ ಮಾಡಿ , ಮಗುವನ್ನು ಎಬ್ಬಿಸಿ ,ಬ್ರುಶ್ ಮಾಡಿಸಿ , ಸ್ನಾನ ಮಾಡಿಸಿ ರೆಡಿ ಮಾಡಿ ಸ್ಕೂಲ್ ಬಸ್ ಹತ್ತಿಸಿ ತಾನು ಆಫೀಸ್ ತಲುಪಿಕೊಳ್ಳುವಷ್ಟರಲ್ಲಿ ೧೦ ನಿಮಿಷ ಲೇಟ್ ಆಗಿಬಿಟ್ಟಿರುತ್ತದೆ , ರಾತ್ರೆ ಬಂದು ಮತ್ತದೇ ಕೆಲಸ.. ಅಡಿಗೆ …….ಮುಗಿಸುವಷ್ಟರಲ್ಲಿ , ಮನಸು ದೇಹ ಎರಡೂ ದಣಿದಿರುತ್ತದೆ ಆತ : ಬೆಳಗ್ಗೆ ಎದ್ದು ತಿಂಡಿ ತಿಂದು ರೆಡಿ ಆಗಿ ಆಫೀಸ್ ಸೇರಿಕೊಳ್ಳುವಷ್ಟರಲ್ಲಿ ಸಮಯ ಸರಿಯಾಗಿರುತ್ತದೆ, ಮತ್ತೆ ಆತ ರಾತ್ರೆ ಮನೆ ತಲುಪುವುದು ಇನ್ನು ಎಷ್ಟು ಹೊತ್ತಿಗೋ… ಇನ್ನು ಮಗು ಚಿಕ್ಕದಾದರೆ ಬೆಳಿಗ್ಗೆಯಿಂದ ಸಂಜೆಯವರೆಗೆ “, Day Care ” ಸ್ಕೂಲ್ ಗೆ ಹೋಗುವ ಮಗುವಾದರೆ ಅಲ್ಲಿಂದ ಡೈರೆಕ್ಟ್ Day Care ಇನ್ನು ತಂದೆ ತಾಯಿಯಂದಿರಿಗೆ ತಮ್ಮ ಮಕ್ಕಳೊಂದಿಗೆ ಕಳೆಯಲು ಸಮಯವಾದರೂ ಎಲ್ಲಿರುತ್ತದೆ ? ಇದು ಬೆಂಗಳೂರು ಅಥವ ಇನ್ನಿತರ ನಗರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ದ್ರಶ್ಯ .ಸರಿ ತಪ್ಪುಗಳನ್ನು ಬದಿಗಿಟ್ಟು ವಾಸ್ತವತೆಯ ದೃಷ್ಟಿಯಿಂದ ಮಾತ್ರ ನೋಡುವುದಾದರೆ : ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹೆತ್ತವರ ಪಾತ್ರ ಅತೀ ಅಗತ್ಯ , ತಜ್ನ್ಯರ ಪ್ರಕಾರ ಮಗುವಿನ ಮಾನಸಿಕ ಬೆಳವಣಿಗೆಗೆ ತಾಯಿಯ ಪಾತ್ರ ಅತಿ ಮುಖ್ಯ . ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ನರಮಂಡಲ ವಿಕಸನ ಗೊಳ್ಳುತ್ತದೆ . ತಾಯಿಯ ಸ್ಪರ್ಶದಿಂದ ಮಗುವಿನಲಲ್ಲಿ ಕೆಲವು ಹಾರ್ಮೋನ್ಗಳು ಉತ್ಪತ್ತಿಯಾಗುತ್ತದೆ , ತಾಯಿಯ ಸ್ಪರ್ಶ ಸಾಮಿಪ್ಯ ದಿಂದ ಮಗುವಿನ ಭಾವನಾತ್ಮಕ ಬೆಳವಣಿಗೆ(Emotional Quetiont ) ಸಾದ್ಯವಾಗುತ್ತದೆ ಎಂಬುದನ್ನು WHO ಕೂಡ ಒತ್ತಿ ಹೇಳುತ್ತದೆ . ತಂದೆ ತಾಯಿಯಿಂದ ದೂರವಿದ್ದು Day Care ಸೆಂಟರ್ ನಂಥ ಜಾಗದಲ್ಲಿ ಬೆಳೆಯುವ ಮಕ್ಕಳು ಅನೇಕ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂಬುದು ತಜ್ನ್ಯರ ಅಭಿಪ್ರಾಯ .ಮುಂದುವರೆದ ನಗರಗಳಲ್ಲಿ ಅಷ್ಟೇ ವೇಗವಾಗಿ ಚೈಲ್ಡ್ ಕೌನ್ಸಿಲಿಂಗ್ ಸೆಂಟರ್ ಗಳು ತಲೆ ಎತ್ತುತ್ತಿರುವುದೇ ಇದಕ್ಕೆ ಸಾಕ್ಷಿ .. ಅದೇ ವಾಸ್ತವತೆಯ ಅಡಿಯಲ್ಲಿ ಸಮಸ್ಯೆಯ ಇನ್ನೊಂದು ಮಗ್ಗುಲು ನೋಡುವದಾದರೆ ದಿನೇ ದಿನೇ ಏರುತ್ತಿರುವ ಜೀವನ ನಿರ್ವಹಣೆಯ ಬೆಲೆ ‘ಇಬ್ಬರು ದುಡಿದರೆನೆ ಬದುಕು ‘ ಎನ್ನುವಂಥಹ ಮಟ್ಟವನ್ನು ತಲುಪುತ್ತಿದೆ . ಓಡುತ್ತಿರುವ ಕಾಲದ ವೇಗಕ್ಕೆ ಒಗ್ಗಿಕೊಳ್ಳಲು ಕೆಲವೆಡೆ ಇಬ್ಬರ ದುಡಿಮೆ ಆನಿವಾರ್ಯ . ಇನ್ನೊಂದು ಮಗ್ಗುಲೆಂದರೆ , ಆಕೆಯ ಬುದ್ದಿವಂತಿಕೆ ಪ್ರತಿಭೆ ಆಸಕ್ತಿ ಇಲ್ಲಿ ವಿಷಯವಾಗಿರುತ್ತದೆ . ಎಷ್ಟೋ ಕೋರಿಕೆಗಳು ,ಅದಿನ್ನೆಷ್ಟೋ ಆಸೆಗಳು ಎಲ್ಲವನ್ನು ಕೈ ಬಿಟ್ಟು ತನ್ನ ಗಮ್ಯ ದೆಡೆಗೆ ದ್ರಷ್ಟಿ ಇಟ್ಟು, ಶ್ರಮವಹಿಸಿ ಬೇಕೆಂದ ಗುರಿಯೆಡೆಗೆ ಆಗ ತಾನೇ ತಲುಪಿರುತ್ತಾಳೆ . ಅಥವಾ ತಲುಪುವ ಪ್ರಯತ್ನದಲ್ಲಿರುತ್ತಾಳೆ . ಸಂಸಾರ ಮಗು ನೆಪದಲ್ಲಿ ಆಕೆಯ ಕನಸನ್ನು ಚಿವುಟಬಹುದೇ? ಕರ್ತವ್ಯ ದ ಹೆಸರಲ್ಲಿ ಬಂದಿಯಾಗಿಸಬಹುದೇ ? ಆಕೆಯ ಅಪಾರ ಬುದ್ದಿ ಶಕ್ತಿ ಪ್ರತಿಭೆ ಕೇವಲ ಒಗ್ಗರಣೆಯ ಚಿಟಪಟ ಸದ್ದಿನಲ್ಲಿ ಕಳೆದು ಹೋಗಬೇಕೆ ? ಹಾಗಾಗಿದ್ದರೆ ನಮಗೆ ಯಾವುದೇ ಚರಿತ್ರೆಯ ಪುಟಗಳಲ್ಲಿ ಯಾವ ಮಹಿಳೆಯ ಹೆಸರೂ ಸಿಗುತ್ತಿರಲ್ಲಿಲ್ಲ . ಮಗುವಿನ ಬೆಳವಣಿಗೆಗೆ ಅಡ್ಡಿಯಾಗದಂತೆ , ಸಂಸಾರದ ನೊಗಕ್ಕೆ ಹೇಗಲೂ ಆಗುತ್ತಾ .. ತನ್ನ ಪ್ರತಿಭೆ ವ್ಯಕ್ತಿತ್ವ ದೊಂದಿಗೆ ಬೆಳೆಯುವ ಅನಿವಾರ್ಯತೆ ಇಂದಿನ ಮಹಿಳೆ ಎದುರಿಸಿತ್ತಿರುವ ಸವಾಲಾಗಿದೆ .., .ಈ ನಿಟ್ಟಿನಿನಲ್ಲಿ ಸಮಾಜ , ಕುಟುಂಬ , ಆಕೆಯ ಪತಿ ಪ್ರತಿಯೋಬ್ಬರೂ ಆಕೆಗೆ ಬೆಂಬಲವಾಗಿ ನಿಲ್ಲಬೇಕೆದೆ .]]>

‍ಲೇಖಕರು G

August 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This