ಹೊಸ ಓದು : ಗುಡ್ಡ ಬೇಕೆ ಗುಡ್ಡ…

ಗುಡ್ಡಗಳು ಮಾರಟಕ್ಕಿವೆ

– ಚೇತನ್‌ ಬೇಲೇನ ಹಳ್ಳಿ

ನಮ್ಮೂರಿನ ಗುಡ್ಡಗಳು ಮಾರಟಕ್ಕಿವೆ….! ನನ್ನೂರಿನ ಹೆಬ್ಬಾಗಿಲಲ್ಲಿ ನಿಂತು ನೋಡಿದ್ರೆ, ಆ ಸಿದ್ದರ ಬೆಟ್ಟದಿಂದ ಮುಂದೆ ಚಾಚಿಕೊಂಡಿದ್ದ ಆ ಬಂಡೆ ಥೇಟ್ ಒಂಬತ್ತು ತಿಂಗಳು ಪೂರೈಸಿದ ತುಂಬು ಗರ್ಭೀಣಿಯಂತೆ ನನಗೆ ಗೋಚರಿಸುತ್ತಿತ್ತು, ಅದರ ಹಿಂದೆ ಕಾಣಿಸುತ್ತಿದ್ದ ಆ ಹಸಿರು ಗಿಡಮರಗಳ ರಾಶಿ, ಅದರ ಕೆಳಗಿನ ಸಣ್ಣ ಭಾದೆ ಹುಲ್ಲಿನ ಹೂವು, ಸೀರೆಗೆ ಬಾರ್ಡರ್ ಹಾಕಿದಂತಿದ್ದದ್ದು, ಯಾರೋ ಗರ್ಭೀಣಿ ಹೆಣ್ಣನ್ನ ಶ್ರೀಮಂತಕ್ಕೆ ಕೊರಿಸಿದಂತಿತ್ತು…..! ಆವತ್ತು ಅಪ್ಪನಿಗೆ ಮೈ ಹುಶಾರಿಲ್ಲ ಅಂತಾ, ನಮ್ಮಮ್ಮ ಮಗನೇ ಇವತ್ತೊಂದಿನ ಎತ್ತು ಗಳನ್ನ ಮೇಯಿಸಲು ಗುಡ್ಡಕ್ಕೆ ಹೋಗೋ, ಮನೇಲೇ ಇದ್ರೇ ಸಗಣಿ, ಗಂಜಲ ಹಾಕಿಕೊಂಡು ಇಡೀ ಅಕ್ಕೆಯಲ್ಲಿ ಗಿರಕಿ ಹೊಡಿತಾವೆ, ಅವ್ಕೆ, ಕೈ ಮೇವು ಎಷ್ಟಾಕಿದ್ರು ಹೊಟ್ಟೆ ತುಂಬಾಂಗಿಲ್ಲ ಅಂತಾ ಅಡುಗೆ ಒಲೆ ಮುಂದೆ ಕುಂತು ರೊಟ್ಟಿ ತಿನ್ನುತ್ತಿದ್ದ ನಂಗೆ ಪುಕಾಲಾಯಿಸ್ತಾ ಇದ್ಲು, ನನಗೂ ಒಂಥರಾ ಆಸೆ ಇತ್ತು. ಗುಡ್ಡಕ್ಕೆ ಎತ್ತು ಮೇಯಿಸಲು ಹೋಗಬೇಕು ಅಂತಾ, ಅದಕ್ಕೆ ಕಾರಣ ಅಂದ್ರೆ ನನ್ನ ಗೆಳೆಯರು ಅಲ್ಲಿ ಮಾಡುವ ಪಂಟಿಂಗ ಕೆಲಸಗಳನ್ನು ಸಂಜೆ ಹೊತ್ತಲ್ಲಿ ಮಾತಾಡುತ್ತಿರುವುದನ್ನು ಕೇಳಿದ್ದೆ, ಸಣ್ಣಗೆ ಜಿನುಗುತ್ತಿದ್ದ ಆ ಮಳೆಯಲ್ಲಿ ನೋಡೆಬೀಡನಾ ಅಂತಾ ಆವತ್ತು ಎತ್ತಿನ ಹಗ್ಗ ಹಿಡಿದು ನನ್ನೂರಿನ ಸಿದ್ದರ ಗುಡ್ಡದ ಕಡೆಗೆ ನನ್ನ ಸ್ನೇಹಿತರೊಂದಿಗೆ ಭಯದಿಂದಲೇ ಹೊರಟಿದ್ದೆ. ಗುಡ್ಡ ಹತ್ತಿರವಾದಂತೆ ಎಲ್ಲರೂ ಎತ್ತುಗಳ ಹಗ್ಗವನ್ನು ಅವುಗಳ ಕೊರಳಿಗೆ ಕಟ್ಟಿ ಗುಟ್ಟದ ಮೇಲೆ ಮೇಯಲು ಬಿಟ್ಟು, ಬಿಡಿಕಟ್ಟುಗಳನ್ನು ತಗೆದು ಬಾಯಿಗಿಟ್ಟು ಹರಟೆಗೆ ಕೂತಿದ್ದರು, ಅವರ ಮಾತುಗಳು ನಮ್ಮೂರಿನ ಕಳ್ಳ ಪ್ರೇಮ ಪ್ರಸಂಗಗಳಿಂದ ಹಿಡಿದು ದೇವಸ್ಥಾನದ ಪಂಚಾಯಿತಿ ಯಜಮಾನಿಕೆಯನ್ನು ವಿಮರ್ಶಿಸುವ ಹೊರೆಗೂ ಹೋಗುತ್ತಿದ್ದವು, ಆದರೆ ನನಗೆ ಇದೆಲ್ಲಾ ಹೊಸದಾಗಿದ್ದರಿಂದ ಎತ್ತುಗಳು ಈ ಪಾಟಿ ಕಾಡಲ್ಲಿ ಎಲ್ಲಾದ್ರೂ ಕಳದೊದ್ರೆ ಅಂತಾ ಅವುಗಳ ಬಾಲದ ಹಿಂದೇ ಸುತ್ತುತ್ತಾ ಇದ್ದೇ, ಆಗ ಗೆಳೆಯನೊಬ್ಬ, ಏನ್ಲಾ, ನಿನ್ನ ಎತ್ತುಗಳು ಎಲ್ಲೂ ಹೊಗಲ್ಲಾ ಬಾ ಅಂದು ಕರೆದು ನನ್ನ ಒದಿನ ಬಗ್ಗೆ ವಿಚಾರಿಸ ತೊಡಗಿದ್ದ, ಮತ್ತೆ ಹಾಗೆ ಯಾರಾದ್ರೂ ಹುಡುಗಿ ನೊಡ್ಕೊಂಡಿದಿಯಾ ಅಂದಾ, ನಾನು ಇಲ್ಲ ಅಂತಾ ಗೋಣು ಅಲ್ಲಾಡಿಸಿದಾಗ ಎನ್ಮಾಡೋಕೆ ಹೋಗ್ತೀಯಾ ಕಾಲೇಜ್‌ಗೆ ಅಂತಾ ಅಂದು ಬಿಟ್ಟಾ, ನನಗೆ ಅವಮಾನ ಆದಾಂತಾಯಿತು, ಮತ್ತೆ ಅವನಿಗೆ ಪ್ರಶ್ನೆ ಮಾಡಿದ್ರೆ ಇನ್ನೇನು ಕೆಳ್ತಾನೋ ಅಂತಾ ಆ ಭಯಾನಕ ಗುಡ್ಡದ ಚೆಲುವನ್ನು ನೊಡುತ್ತಾ ಸುತ್ತುತ್ತಿದ್ದೆ, ಆ ಬೃಹತ್ ಬಂಡೆಯ ತುದಿಯಲ್ಲಿ ನಿಂತು ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳವನ್ನು ನೋಡಿ ಏನೋ ಸಂತೋಷವಾದವನಂತೆ ಕೂಗ ತೊಡಗಿದ್ದೆ, ಲೇ ಮಂಗಾ ಅಲ್ಲ್ನೋಡೋ ಲೊಕ್ಕಲ್ಲಿ ಡ್ಯಾಂ ಅಂತಾ ನನ್ನ ಸ್ನೇಹಿತ ತೋರಿಸಿದಾಗ ಡ್ಯಾಂ ನಿಂದ ಹೊರ ಹೋಗುತ್ತಿದ್ದ ನೀರು ಸಣ್ಣಗೆ ಕಂಡಿತ್ತು, ನನ್ನೂರಿಗೆ ಮೊದಲು ಬಂದಾಗ ದೂರದಿಂದ ನೋಡಿದ ಆ ಬೆಟ್ಟವನ್ನು ಏರಿ ಒಡಾಡುತ್ತೆನೆ ಅಂತೆ ನಾನು ಅಂದುಕೊಂಡೆ ಇರಲಿಲ್ಲ, ಅಂತು ಬೆಟ್ಟವನ್ನು ಅತ್ತಿದ ಖುಷಿಯಲ್ಲಿ ಕಾಲಿನ ನೋವು ಕಾಣಲೇ ಇಲ್ಲ ಬೆಳಿಗ್ಗೆ ಎದ್ದ ಮೇಲೆ ಗೊತ್ತಾದದ್ದು ಗುಡ್ಡ ಏರಿದ ಪರಿಣಾಮ ಎಂತದ್ದು ಅಂತಾ, ಅಲ್ಲಿಂದಾ ಬೇಸಿಗೆ ರಜೆಗೆ ಬಂದಿದ್ದ ನಾನು, ಅದೆಷ್ಟು ಬಾರು ಹೋಗಿದ್ದೆನೋ ಗೊತ್ತಿಲ್ಲ, ರಜೆ ಮುಗಿತು ಮತ್ತೆ ನನ್ನ ತಾತನ ಮನೆಗೆ ಹೋದವನಿಗೆ, ಮತ್ತೆ ಇಲ್ಲಿಯವರೆಗೂ ಆ ಸೌಂದರ್ಯ ನೆನಪು ಮಾತ್ರ. ಪಿಯುಸಿ ಮುಗಿಸಿ ಸಹ್ಯಾದ್ರಿ ಕಾಲೇಜಿಗೆ ಪದವಿಗೆ ಸೇರಬೇಕು ಅಂತಾ ಬೆಂಗಳೂರು ಸುತ್ತಿ ಮತ್ತೆ ಊರಿಗೆ ಬಂದಾಗ ಆ ನನ್ನ ಕನಸಿನ ಬೆಟ್ಟವನ್ನು, ಮತ್ತದೇ ಹೆಬ್ಬಾಗಿಲಿನಂದ ನೋಡಿದಾಗ ನನ್ನೂರಿನ ಬೆಟ್ಟದಿಂದ ಬೆಳ್ಳಗಿನ ದೂಳು ಆಕಾಶ ಮುಟ್ಟುತ್ತಿತ್ತು, ಅದರ ಇಕ್ಕೇಲುಬುಗಳಲ್ಲಿಯೂ ಕೆಂಪಗಿನ ಹಾವಿನಂತ ರಸ್ತೆಗಳು, ಶಿರವೆತ್ತಿ ನೋಡುವಂತ ಆ ಬಂಡೆಯ ಸಂದಿಗಳಿಂದ ಸಣ್ಣಗೇ ಹನಿ ಇಕ್ಕುತ್ತಿದ್ದ ನೀರು ಆ ಬೆಟ್ಟ ಬೆಸರದಿಂದ ಅತ್ತಂತಿತ್ತು, ಅರೇ! ವಸುಧೇಂದ್ರರ ಕೆಂಪುಗಿಣಿ ಕತೆಯಲ್ಲಿದ್ದ ಏಳು ಎಡೆ ಸರ್ಪ ನಮ್ಮೂರಿಗೂ ಬಂದಿತ್ತು. ನಾನೂ ನೋಡಿದಾಗ ಗರ್ಭೀಣಿಯಾಗಿದ್ದ ಸಿದ್ದರ ಬೆಟ್ಟಕ್ಕೆ ಈಗ ಹೆರಿಗೆಯಾಗಿದೆ, ಸುತ್ತಲೂ ತಲೆಎತ್ತಿದ್ದ ಜಲ್ಲಿ ಕ್ರಷರ್‌ಗಳೇ ಗಂಡಂದಿರಂತೆ, ಸುತ್ತಲೂ ರಾಶಿ ರಾಶಿಯಾಗಿ ಗುಡ್ಡೆ ಹಾಕಲಾಗಿದ್ದ ಜಲ್ಲಿರಾಶಿಗಳೇ ಮಕ್ಕಳೇನೋ ಅನ್ನುವಂತೇ, ಆ ಕ್ರಷರ್‌ಗಳ ಮಾಲೀಕರೇ ಆ ಬೆಟ್ಟದ ಮಾವಂದಿರು, ನನ್ನೂರಿನ ಮೀಸೆ ಹೊತ್ತ ಗಂಡಸರೇ ಅದರ ಅಪ್ಪಂದಿರು… ? ಮತ್ತೆ ಯಾರೋ ದೊಡ್ಡ ಮನುಷ್ರು ಬೀದಿಯಲ್ಲಿ ನಿಂತು ಬೊಬ್ಬೆ ಹೋಡೀತಾ ಇದ್ರು, ನಮ್ಮೂರಿನ ಇನ್ನೊಂದು ಬೆಟ್ಟದ ಸಣ್ಣ ಬಂಡೆಯನ್ನು ಪಕ್ಕದ ಭದ್ರಾವತಿಯವರು ನೋಡಿಕೊಂಡು ಹೋದ್ರು ಅಂತಾ..? ಅಂತೂ ನನ್ನೂರಿನ ಬೆಟ್ಟಗಳೂ ಮಾರಾಟಕ್ಕಿವೆ…    ]]>

‍ಲೇಖಕರು G

August 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

  1. shantha kumari

    cennaagi bardiddIra aadre shbdagaLU maaraaTakkive annuvaShtu asahaayakaru naavu anisolva?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: