ಹೊಸ ಓದು : ’ನಾನು ಗಾರ್ಮೆಂಟ್ಸ್ ಉದ್ಯೋಗಿ’

ಗಾರ್ಮೆಂಟ್ಸ್ ಬದುಕು

– ಮಂಜುನಾಥ ದಾಸನಪುರ

ಎದೆ ಉಸಿರು ಬಿಡುತ್ತಾ…..ಓಡೋತ್ತಾ ದಾರಿ ಮದ್ಯದಲ್ಲಿ ಸಿಗುವ ದೇವರಿಗೆ ಕ್ಷಣಕಾಲ ನಿಂತು ಕೈಮುಗಿದು ‘ದೇವರೇ ಇವತ್ತಿನ ದಿನ ಯಾರಲ್ಲಿಯೂ ಬೈಸಿಕೊಳ್ಳದ ಹಾಗೆ ಮಾಡಪ್ಪ’ ಎನ್ನುತ್ತಾ ಮತ್ತೆ ಯಥಾ ಪ್ರಕಾರ ಓಡುವ ದೃಶ್ಯ…

ನೀವು ಈ ದೃಶ್ಯವನ್ನು ಕಾಣಬೇಕಾದರೆ, ನಗರದ ಹೊಸೂರ್ ರೋಡ್ನಲ್ಲಿರುವ ಬೇಗೂರು ರಸ್ತೆಯಲ್ಲಿ ಪ್ತತಿದಿನ ಬೆಳಗ್ಗೆ 8ರಿಂದ 9.30ರವರೆಗೆ ರಸ್ತೆ ಪಕ್ಕದ ಪುಟ್ಪಾತ್ನಲ್ಲಿ ಎಡುವುತ್ತಾ, ಆಗಾಗ ಬೀಳುತ್ತಾ ಗುಂಪಲ್ಲಿ ಸ್ಪರ್ಧೆಗೆ ಓಡುವಂತೆ ಓಡುತ್ತಿರುತ್ತಾರೆ.

ಫಿಲಂಗಳನ್ನು ನೋಡುತ್ತಾ…ಪಾಠವನ್ನು ಕೇಳುವಾಸೆ!?

ಮೈಮುರಿದು ಕೆಲಸ ಮಾಡುತ್ತಾರೆ. ಆದರೆ, ಸಮಾದಾನವಾಗಿ ಒಂದು ಕಡೆ ಕುಳಿತು ಊಟ ಮಾಡಲು ಇವರಿಂದ ಸಾದ್ಯವಾಗುತ್ತಿಲ್ಲ. ಏಕೆ ನಿಮಗೆ ಈ ರೀತಿಯ ಬದುಕು ಎಂದು ಪ್ರಶ್ನಿಸಿದರೆ, ‘ಏನು ಮಾಡೋದು ನಮ್ಮ ಬದುಕು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಹಾಗೆ’ ಎನ್ನುತ್ತಾರೆ ಶಿವಮೊಗ್ಗದಿಂದ ಪಿಯುಸಿ ಮುಗಿಸಿ ತನ್ನ ಮದುವೆಯ ಖಚರ್ಿಗಾಗಿ ಹಣ ಸಂಗ್ರಹಿಸಲು ಗಾಮರ್ೆಂಟ್ಸ್ ಕಂಪನಿಯಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ಆಶಾ. ಎದೆ ಉಸಿರು ಬಿಡುತ್ತಲೆ ಮಾತನ್ನು ಮುದುವರಿಸಿದ ಅವರು,’ಒಂದು ನಿಮಿಷ ಲೇಟ್ ಆದರೆ ನಮಗೆ ಹೊರಗಡೆ ನಿಲ್ಲಿಸುತ್ತಾರೆ. ಅರ್ಧ ದಿನದ ಸಂಬಳ ಕಟ್ಟು ಮಾಡುತ್ತಾರೆ. ಬೈಯುತ್ತಾರೆ. ಇದೆಲ್ಲವನ್ನು ನಾನು ಯಾರಿಗೆ ಹೇಳುವುದು.? ನಮಗೆ ಊಟ ಮಾಡಕ್ಕೂ ಸಮಯ ಸಿಗಲ್ಲ. ‘ನೋಡಿ ನಿಮ್ಮ ಅತ್ತಿರ ಹೇಳುವುದಕ್ಕೆ ನಾಚಿಕೆ ಆಗುತ್ತೆ, ಆದರೂ ಹೆಳ್ತೀನಿ, ನಮಗೆ ಬಾತರೂಂ ಹೊಗುವುದಕ್ಕೂ ಸಮಯ ಇಲ್ಲ. ನಮ್ಮ ವಠಾರದಲ್ಲಿ ಹತ್ತಕ್ಕಿಂತ್ತಲೂ ಹೆಚ್ಚು ಬಾಡಿಗೆ ರೂಂಗಳಿವೆ. ನಮಗೆಲ್ಲಾರಿಗೂ ಇರುವುದೊಂದೆ ಬಾತರೂಂ. ಸುಮಾರು 50 ಕ್ಕಿಂತಲೂ ಹೆಚ್ಚು ಮಂದಿ ನಮ್ಮ ವಠಾರದಲ್ಲಿ ಇದ್ದೇವೆ. ನಾನು ಪ್ರತಿ ದಿನ 11 ಗಂಟೆಗೆ ಮಲಗುವುದರಿಂದ ಬೆಳೆಗ್ಗೆ 5.30ಕ್ಕೆ ಏದ್ದೇಳುತ್ತೇನೆ. ಅಷ್ಟೊತ್ತಿಗಾಗಲೇ ಬಾತ್ರೂಂನ ಮುಂದೆ ನೀರಿನ ಬಕೆಟ್ಟ್ಗಳು ಸಾಲು ಇರುತ್ತದೆ. ಸರಿ ತಿಂಡಿ ಮಾಡಿದ ನಂತರ ಹೊಗೋಣವೆಂದು, ನಮ್ಮ ಬಾಧೆಯನ್ನು ಹಾಗೆಯೇ ಸಹಿಸಿಕೊಳ್ಳುತ್ತೇನೆ. ಇದೆಲ್ಲವನ್ನೂ ಸಹಿಸಿಕೊಳ್ಳಬೇಕಾದರೆ ‘ನಾನು ಏಷ್ಟೊ ಸಲ ದೇವರಲ್ಲಿ ಕೇಳಿದ್ದೇನೆ. ಏಕಪ್ಪ ನನಗೆ ಜನ್ಮ ಕೊಟ್ಟೆ ಅಂತ’ ತಿಂಡಿ ಮುಗಿಯುತ್ತಿದ್ದಂತ್ತೆ ನಮ್ಮ ಕೆಲಸದ ಸಮಯ ಅತ್ತಿರ ಬಂದಿರುತ್ತದೆ. ಆ ಗಡಿಬಿಡಿಯಲ್ಲಿಯೇ ಬಾತ್ರೂಂ ಹೊಗಿಬರುತ್ತೆನೆ. ಇನ್ನು ನನ್ನ ಕೆಲಸದ ಸಮಯಕ್ಕೆ 20 ನಿಮಿಷ ಇರುತ್ತದೆ. ಇನ್ನೂ ತಿನ್ನುವುದು ಎಲ್ಲಿಂದ ಬಂತು ಹಾಗೆಯೇ..ಓಡುತ್ತಾ.ಕಂಪನಿಯ ಗೇಟಿನ ಬಳಿ ನಿಲ್ಲುತ್ತೇನೆ.

ಬಡತನ ಅಂದ್ರೆ ಇದೆ!?

ನಾನು ಯಾಕೆ ಇಲ್ಲಿಗೆ ಬಂದೆ ಅಂತ ಕೇಳ್ದ್ರಾ….ಏನ್ ಮಾಡೊದು ನಾವು ಬಡವರು ಅಂತ ಹೇಳ್ಲಾ…ಇಲ್ಲವೇ ನಮ್ಮ ಪರಿಸರವೇ ಬಡತನದಿಂದ ಕೂಡಿದೆ ಅಂತ ಹೇಳ್ಲಾ..! ನಾನು ಪಿಯುಸಿ ಓದಿದ್ದೇನೆ. ಆದರೂ ನಾನು ಇಲ್ಲಿಗೆ ಬರಬೇಕಾದ ಅನಿವಾರ್ಯತೆ ಬಂತು. ಬೆಂಗಳೂರಿನಲ್ಲಿ ಕಾಲೇಜಿಗೆ ಹೊಗುವ ಹುಡುಗಿಯರನ್ನು ನೋಡಿದರೆ, ನನಗು ಆಸೆ ಆಗುತ್ತದೆ. ಸ್ಟೇಲಾಗಿ ಡ್ರೆಸ್ ಮಾಡಿಕೊಂಡು ಬ್ಯಾಗನ್ನು ಬೆನ್ನಿಗೆ ನೇತು ಆಕಿಕೊಂಡು ಹುಡುಗಿಯರ ಗುಂಪಿನಲ್ಲಿ ಹರಟೆ ಹೊಡೆಯುತ್ತಾ, ಆಗಾಗ ಫಿಲಂ, ಕುರ್ಕುರೆ ತಿಂಡಿಗಳನ್ನು ತಿನ್ನುತ್ತಾ, ಪಾಠ ಪ್ರವಚನಗಳನ್ನು ಕೇಳುವಾಸೆ. ಆದರೆ, ನಮ್ಮಂತವರೆಗೆ ಎಲ್ಲಿಯದು ಆ ಸೌಭಾಗ್ಯ.ಮನೆಯ ವಾತಾವರಣ ನೋಡಿದರೆ ಯಾವಾಗ ಮನೆಯಿಂದ ಹೊರಗಡೆ ಬರುತ್ತೇನೊ ಎಂದು ಸದಾ ಮನಸ್ಸು ಮಿಡಿಯುತ್ತಿತ್ತು. ಯಾವುದೇ ಕಡೆಯಿಂದ ನೋಡಿದರೂ ನನ್ನೂರಿನಲ್ಲಿ ಉಳಿಯುವಂತಹ ಯಾವುದೇ ಅವಕಾಶವಾಗಲೀ, ಅದೃಷ್ಟವಾಗಲಿ ಒದಗಿಬರಲಿಲ್ಲ. ನನ್ನ ತಂದೆ ತಾಯಿಗಳು ನನ್ನನ್ನು ಇಲ್ಲಿಯವರೆಗೆ ಓದಿಸಿದ್ದೆ ಹೆಚ್ಚು ಎಂಬ ಅವರ ಮೇಲಿನ ಅಭಿಮಾನದೊಂದಿಗೆ ನಾನು ನನ್ನ ಮನೆಯನ್ನು ಬಿಟ್ಟಿ. ಆ ದಿನವನ್ನು ನೆನೆಸಿಕೊಂಡರೇ ‘ರಪ್’ ಎಂದು ಮುಖಕ್ಕೆ ಹೊಡೆದಂತ್ತಿದೆ. ನನ್ನ ತಂದೆ ತಾಯಿಗಳ ಮೂಕ ವೇದನೆ. ನನ್ನ ತಮ್ಮನ ಅರ್ಥವಾಗದ ನೋಟ. ಇವೆಲ್ಲವೂ ನನ್ನನ್ನೂ ಚೂರಿಯಿಂದ ಚುಚ್ಚಿದಂತ್ತಾಗುತ್ತಿತ್ತು. ಬಸ್ಸ್ಟಾಂಡಿನಲ್ಲಿ ಕುಳಿತು ನನ್ನ ಹಳೆಯ ನೆನೆಪುಗಳು ಹೊಮ್ಮೆಲೆ ಹೊತ್ತಿಸಿ ಬಂದಿದ್ದರಿಂದ ನನಗೆ ಅರಿವಿರದಂತ್ತೆ ಕಣ್ಣಿನಿಂದ ಕಣ್ಣೀರು ತೊಟ್ಟುಕೊತ್ತಿತ್ತು. ನಾನು ನನ್ನ ಸ್ನೇಹಿತರು ಪ್ರಪಂಚದ ಎಲ್ಲಾ ವಿಷಯಗಳ ಬಗೆಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ ನನ್ನ ಬಗ್ಗೆ ‘ನೀನು ಮುಂದಕ್ಕೆ ಲಾಯರ್ ಇಲ್ಲವೇ ಪತ್ರಕರ್ತರಾಗುತ್ತಿಯೇ ಎಂದೇಳುತ್ತಿದ್ದರು.

ಈಗ ನಾನು ಆಗಿರುವುದು ಗ್ರಾಮರ್ೆಂಟ್ಸ್ ಉದ್ಯೋಗಿ. ಇದು ನಾನು ಬಯಸಿದ್ದಲ್ಲಾ, ನನ್ನ ಕುಟುಂಬದ ಕೊಡುಗೆ. ದಿನಕ್ಕೆ ಹನ್ನೆರಡು ಗಂಟೆ ದುಡಿದರೂ ಹೊಟ್ಟೆ ತುಂಬುತ್ತಿಲ್ಲ. ಹಣ ಮಾಡುವುದಕ್ಕೆ ಇನ್ನೂ ಎಂತಹ ಕೆಲಸ ಮಾಡಬೇಕು ಎನ್ನುವುದೇ ತೋಚದಂತ್ತಾಗಿದೆ. ಈಗ ನನಗೆ ತಿಂಗಳಿಗೆ ಬರುವ ಸಂಬಂಳ ನನ್ನ ವೈಯಕ್ತಿಕ ಬದುಕಿಗೆ ಸಾಕಾಗುವಷ್ಟು ಇದೆ. ಇನ್ನೆಲ್ಲಿ ಮನೆಗೆ ಕಳಿಸುವುದು. ಅಪ್ಪ -ಅಮ್ಮ ಕಟ್ಟುನಿಟ್ಟಾಗಿ ಹೇಳಿದ್ದಾರೆ. ‘ನಿನ್ನ ಮದುವೆ ಖರ್ಚನ್ನು ನೀನೇ ನೋಡಿಕೊಳ್ಳಬೇಕೆಂದು. ಇದೆಲ್ಲವೂಗಳ ನಡುವೆ ನನ್ನ ತಮ್ಮನನ್ನ ಓದಿಸಬೇಕು. ನನಗೆ ಸಿಗದಿದ್ದ ಭಾಗ್ಯವನ್ನು ಅವನಿಗಾದರೂ ದೊರಕಿಸಿಕೊಡಬೇಕೆಂದು ಬಯಸಿದ್ದೇನೆ. ಅವನು ಎಲ್ಲಿಯವರೆಗೆ ಓದುತ್ತಾನೊ ಅಲ್ಲಿಯವರೆಗೆ ಓದಿಸುತ್ತೇನೆ. ನನ್ನ ಅನಿಸಿಕೆಯ ಮಟ್ಟಿಗೆ ನನ್ನ ಬದುಕು ಇಲ್ಲಿಗೆ ಮುಗಿಯಿತು ಅನಿಸುತ್ತದೆ. ಯರನ್ನಾದರೂ ಕಟ್ಟಿಕೊಂಡು ಅಂಗೋ, ಇಂಗೋ, ಜೀವನ ಸಾಗಿಸುವಂತಹದ್ದು.

ನಮ್ಮ ಬದುಕು ಒಂದು ಯಂತ್ರದ ರೀತಿ ಅಂದ್ರೆ ತಪ್ಪಾಗಲಾರದು. ಇನ್ನು ಖಚಿತವಾಗಿ ಹೇಳಬೇಕಾದರೆ, ಆ ಯಂತ್ರಕ್ಕಿಂತ ಹೀನಾವಾದದ್ದೆ. ಏಕೆಂದರೆ, ಯಂತ್ರಗಳಾದರೂ ಕೆಲವು ಸಮಯಗಳಾದರೂ ವಿಶ್ರಾಂತಿ ಪಡೆದುಕೊಳ್ಳುತ್ತದೆ. ಆದ್ರೆ, ನಮ್ಮ ಬದುಕಿಗೆ ವಿಶ್ರಾಂತಿ ಅನ್ನುವುದೇ ಇಲ್ಲ. ಒಂದೇ ಸಮನೇ ಕೆಲಸ ಮಾಡುವುದಕ್ಕೆ ಸಾದ್ಯಾವಾಗುವುದಿಲ್ಲ. ಆದರೆ, ನಮ್ಮ ಸುಪರ್ವೈಸರ್ಗಳು ಒಂದು ಘಂಟಗೆ ಇಷ್ಟು ಪೀಸನ್ನು ಕೊಡಬೇಕೆಂದು ಅಜ್ಞಾಪಿಸುತ್ತಾರೆ. ಅವರು ಕೇಳುವ ಪ್ರಡಕ್ಷನ್ ನಾವು ‘ಬಹಳ ಕಷ್ಟಪಟ್ಟು’ ದುಡಿದರೂ ಸಾದ್ಯಾವಾಗುವುದಿಲ್ಲ. ಅದರ ಅತ್ತಿರಕ್ಕೆ ಹೊಗುತ್ತೇವೆ. ಆಗ ಸುಪರ್ವೈಸರ್ಗಳಿಂದ ಬೈಗುಳ, ಮತ್ತೆ ಮತೆ ಪ್ರಯತ್ನ ಮಾಡುತ್ತಾ ಇಡೀ ದಿನದ ಬದುಕನ್ನು ದೂಡುತ್ತೇವೆ. ಸಂಜೆ ಅಷ್ಟೊತ್ತಿಗೆ ನಮ್ಮ ದೇಹದಲ್ಲಿರುವ ಸಾರವೆಲ್ಲಾವನ್ನು ಹಿಂಡಿರುತ್ತಾರೆ ಬರೀ ಸಪ್ಪೆ ಆಗೆ ನಾವು ಮನೆಗೆ ಬರುತ್ತೇವೆ.

‍ಲೇಖಕರು G

October 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This