ಹೊಸ ಓದು : ಮರಳಿನಲ್ಲೊ೦ದು ಗೂಡು ಕಟ್ಟಿ!

        – ಸುಮತಿ ಹೆಗ್ಡೆ ಕೆಂಪು ಮಹಲ್… ಮರಳು ಶಿಲ್ಪ… ಅಂದ್ರೆ ನೆನಪಾಗೋದು ..ಸುಂದರ ಸಮುದ್ರ ತೀರದಲ್ಲಿ ಉತ್ತಮ ಕಲಾವಿದರಿಂದ ಮೂಡುವ ಅತ್ಯಂತ ಚಂದದ ಕಲಾಕ್ರುತಿಗಳು..ಈ ಕಲಾಕ್ರುತಿಗಳೆಂದರೆ ನನಗೆ ತುಂಬಾ ಆಸಕ್ತಿ.. ನಿಜವಾಗ್ಲು ಕಣ್ಣಿಗೆ ಹಬ್ಬ.. ಉಡುಪಿ ಹತ್ತಿರದ ಸಮುದ್ರ ತೀರದಲ್ಲಿ ಇಲ್ಲಿಯ ಸ್ಥಳೀಯ ಕಲಾವಿದರು ಯಾವಾಗಲು ಏನಾದರು ವಿಶೇಷ ಸಂಧರ್ಭಗಳಲ್ಲಿ ಮರಳು ಶಿಲ್ಪ ರಚಿಸುತ್ತಾರೆ..ಮಲ್ಪೆಯಲ್ಲಿ ವರ್ಷಕ್ಕೊಮ್ಮೆ ಬೀಚ್ ಉತ್ಸವ ನಡೆಯುತ್ತದೆ..ಸಂಜೆ ಅಲ್ಲಿ ಜನವೋ ಜನ.. ನಾನು ಇತ್ತೀಚೆಗೆ ಫೇಸ್ಬುಕ್ನಲ್ಲಿ ಕೆಲವೊಂದು ಫುಡ್ ಗ್ರೂಪ್ಗಳಿಗೆ ಸೇರಿದ್ದೇನೆ..ಅಲ್ಲಿ ದಿನಾ ಒಂದೊಂದು ವಿಷಯದ ಬಗ್ಗೆ ಆಹಾರ ಪ್ರದರ್ಶಿಸಲು ಇರುತ್ತದೆ..ಒಮ್ಮೆ ನಮ್ಮ ಇಷ್ಟದ ಆಹಾರ ಪ್ರದರ್ಶಿಸಬಹುದಿತ್ತು..ಮನೆಯಲ್ಲಿ ಹೊಸದಾಗಿ ಮಾಡಿದ ಬೆಳ್ಳುಳ್ಳಿ ಚಟ್ನಿಪುಡಿ ಇತ್ತು..ಸುಮ್ಮನೆ ಒಂದು ಬೌಲ್ನಲ್ಲಿ ಸ್ವಲ್ಪ ಪುಡಿ ಹಾಕಿ ಫ್ಹೊಟೊ ತೆಗೆದರೆ ಮಜಾ ಬರುವುದಿಲ್ಲ ಎಂದು ಯೋಚನೆ ಮಾಡುವಾಗ ನೆನಪಾದದ್ದೆ ಈ ಮರಳು ಶಿಲ್ಪ..ಸರಿ ಶುರುವಾಯ್ತು ನನ್ನ ಟೆನ್ಶನ್..ಹೇಗಪ್ಪ ಇದನ್ನು ಪ್ರೆಸೆಂಟ್ ಮಾಡೋದು ಅಂತ ಯೋಚನೆಮಾಡುವಾಗ ನೆನಪಾದದ್ದು ಏಳು ಅಧ್ಬುತಗಳಲ್ಲಿ ಒಂದಾದ ತಾಜ್ ಮಹಲ್..ಮರಳಿಗೂ ಚಟ್ನಿ ಪುಡಿಗು ಏನೂ ವ್ಯತ್ಯಾಸ ಇಲ್ಲ ಅಂತ ಶುರುಹಚ್ಕೊಂಡೆ.. ಒಂದು ಪ್ಲೇಟ್ನಲ್ಲಿ ಚಟ್ನಿ ಪುಡಿ ಹಾಕಿ ಕರಿಬೇವಿನ ಕಡ್ಡಿಯಿಂದ..ಗೋಪುರ, ಕಂಭ..ಹೀಗೆ ಒಂದೊಂದಾಗಿ ಚಿತ್ರಿಸುತ್ತ ಹೋದೆ..ಆಗಲೆ ಗೊತ್ತಾಗಿದ್ದು ಈ ಕಲೆ ಕಬ್ಬಿಣ್ಣದ ಕಡಲೆ ಎಂದು..ಈ ಮಧ್ಯೆ ಆ ದಿನ ನನ್ನ ಮಗನಿಗೆ ಶಾಲೆಗೆ ರಜಾ ಬೇರೆ..ಅವನು “ಅಮ್ಮಾ …ಆಯ್ತಾ..ಇನ್ನು ಎಷ್ಟು ಹೊತ್ತು”.. ಅಂತ ರಗಳೆ ಬೇರೆ..ಅಂತೂ ನನ್ನ ಕೆಲಸ ಮುಗಿವಾಗ ಮುಕ್ಕಾಲು ಘಂಟೆ ದಾಟಿತ್ತು..ಮಗನಿಗೂ ಖುಶಿಯಾಯ್ತು..ಅವನು..”ಅಮ್ಮಾ..ತಾಜ್ ಮಹಲ್ ತರಹಾನೆ ಕಾಣುತ್ತೆ”..ಅಂದಾಗ ಮನಸ್ಸಿಗೆ ಸ್ವಲ್ಪ ಸಂತೋಷ ಸಹಾ..ಅಂತೂ ನನ್ನ ಮನಸ್ಸಿಗೆ ಸಮಾಧಾನ ಆದ ಮೇಲೆ ಅದರ ಫ್ಹೋಟೊ ತೆಗೆದು ಗ್ರೂಪ್ನಲ್ಲಿ ಅಪ್ಲೋಡ್ ಮಾಡಿದೆ..ಅದರ ಒಂದು ಝಲಕ್ ನಿಮಗೋಸ್ಕರ.. ]]>

‍ಲೇಖಕರು G

August 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

2 ಪ್ರತಿಕ್ರಿಯೆಗಳು

  1. D.RAVI VARMA

    ನಿಮ್ಮ creativity ಗೊಂದು ಹೃದಯಪೂರ್ವಕ ಅಭಿನಂದನೆ ….. ಕೀಪ್ ಇಟ್ ಅಪ್ ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: