ಹೊಸ ಓದು : ಮುಗಿಯದೇ ಇರುವ ಕವನವಾಗಿ

ನೀನಿರಬೇಕಿತ್ತು

– ಜಯರಾಮಾಚಾರಿ

ನೀನಿರಬೇಕಿತ್ತು, ಎದೆಯ ಮರುಭೂಮಿಯಲ್ಲಿ ಮರಿಚೀಕೆಯಾಗಿ ಹತ್ತಿ ಉರಿತಿಹ ಪ್ರೀತಿಗೆ ಬತ್ತಿಯಾಗಿ ಬಿಟ್ಟ ನೋವಿಗೆ ದಿವ್ಯ ಔಷಧಿಯಾಗಿ ನೀನಿರಬೇಕಿತ್ತು, ಬಾರದ ನಿದ್ರೆಗಳ ಜೋಗುಳವಾಗಿ ಬಲು ದೂರದಿ ನಿಂತ ಗುಡ್ಡಗಳ ಮೌನವಾಗಿ ಮೌನದೀ ಮಾತಾಡೋ ಮೋಡಗಳಾಗಿ ನೀನಿರಬೇಕಿತ್ತು, ಅಮ್ಮನ ಆರೋಗ್ಯವಾಗಿ ಸೋರುವ ಛಾವಣಿಯ ಬೀಳದ ಹನಿಯಾಗಿ ಎದೆಮೇಲೆ ಕಾಲಿಟ್ಟಾಗ ಸಂತೋಷದೀ ನೋವಾಗಿ ನೀನಿರಬೇಕಿತ್ತು, ತಂತುವಾದ್ಯದ ವಿರಹ ರಾಗವಾಗಿ ಬಿಕ್ಕಿ ಕೂತಿಹ ನೋವಿಗೆ ಭಾರವಾಗಿ ಸಾಲು ಮರದ ನಡುವಿನ ಸಣ್ಣ ಕತ್ತಲೆಯಾಗಿ ನೀನಿರಬೇಕಿತ್ತು, ಹುಸಿಗೋಪ ಪ್ರದರ್ಶಿಸುವ ಪೇಯಸಿಯಾಗಿ ಸುಖ-ದುಃಖದೀ ಭಾಗಿಯಾಗುವ ಸ್ನೇಹಿತನಾಗಿ ತಪ್ಪೆಸಗಿದರೂ ಕ್ಷಮಿಸುವ ಅವ್ವನಾಗಿ ಆದರೆ; ನೀನಾದೆ; ಎಂದಿಗೂ ಅಳಿಯದ ನೋವಾಗಿ ಎಂದಿಗೂ ಆರದ ಮೌನದ ಕಾವಾಗಿ ಗೆಲುವೇ ಇಲ್ಲದ ವಿರಹ ಗೀತೆಯಾಗಿ ಮುಗಿಯದೇ ಇರುವ ಕವನವಾಗಿ]]>

‍ಲೇಖಕರು G

September 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This