ಹೊಸ ಓದು : ಮೊಬೈಲ್ ವಚನಗಳು!!

ಮೊಬೈಲ್ ವಚನಗಳು

– ಜಯಕುಮಾರ್ ಮಲ್ಲಪ್ಪ

1. ಉಳ್ಳವರು ಕಾಲ್ ಮಾಡುವರು; ನಾ ಏನ ಮಾಡಲಿ ಬಡವನಯ್ಯಾ ಎನಗೆ ಮಿಸ್ ಕಾಲೇ ಆಸ್ತಿ: ಎಸ್ ಎಮ್ ಎಸ್ಸೇ ಪಾಸ್ತಿ, ಕರೆನ್ಸಿ ಇದ್ರೆ ಅದೇ ಜಾಸ್ತಿ, ಮೊಬೈಲ್ ದೇವಾ ಕರೆನ್ಸಿಗೆ ಅಳಿವುಂಟು ಕಾಲ್ಗೆ ಅಳಿವಿಲ್ಲ.   2. ಸೆಟ್ ಇದ್ದೊಡೆಂತೆಯ್ಯಾ ಸಿಮ್ ಇಲ್ಲವಯ್ಯಾ ಸಿಮ್ ಇದ್ದೊಡೆಂತೆಯ್ಯಾ ಕರೆನ್ಸಿ ಇಲ್ಲವಯ್ಯಾ ಕರೆನ್ಸಿ ಇದ್ದೊಡೆಂತೆಯ್ಯಾ ಬ್ಯಾಲೆನ್ಸ್ ಇಲ್ಲವಯ್ಯಾ ಬ್ಯಾಲೆನ್ಸ್ ಇದ್ದೊಡೆಂತೆಯ್ಯಾ ನೆಟ್ ವಕರ್್ ಇಲ್ಲವಯ್ಯಾ ನೆಟ್ ವಕರ್್ ಇದ್ದೊಡೆಂತೆಯ್ಯಾ ರೋಮಿಂಗ್ ಇಲ್ಲವಯ್ಯಾ ಮೊಬೈಲ್ ದೇವಾ ಏನಿದ್ದೊಡೆಂತೆಯ್ಯಾ, ಕರೆದೊಡೆ ಸ್ವಿಚ್ ಆಫ್ ಎಂದಿತಯ್ಯಾ.   3. ಅಂಗಿಯ ಕಿಸೆಯಲ್ಲಿ ಇಟ್ಟುಕೊಳ್ಳುವರಯ್ಯಾ ನಿನ್ನ ಪ್ಯಾಂಟಿನ ಜೇಬಿನಲ್ಲಿ ಇಳಿಬಿಟ್ಟುಕೊಳ್ಳುವಯ್ಯಾ ಸೊಂಟದ ಪಟ್ಟಿಯಲ್ಲಿ ಕಟ್ಟಿಕೊಳ್ಳುವರಯ್ಯಾ ನಿನ್ನ ಕೊರಳಿಗೆ ನೇತು ಹಾಕಿಕೊಳ್ಳುವರಯ್ಯಾ ಜಂಬದ ಚೀಲದಲ್ಲಿ ಇಟ್ಟುಕೊಳ್ಳುವರಯ್ಯಾ ನಿನ್ನ ಸ್ಟಾಂಡಿನಲ್ಲೂ ಹಾಕುವರಯ್ಯಾ ಮೊಬೈಲ್ ದೇವಾ ನೀನು ಸವರ್ಾಂತರಯಾಮಿಯಯ್ಯಾ. 4. ಸ್ನೇಹಿತರು ಬಂದರೆ ಟಿವಿ ಬಿಟ್ಟೇಳರಯ್ಯಾ ನೆಂಟರು ಬಂದರೆ ಸೀರಿಯಲ್ ತಪ್ಪಿಸರಯ್ಯಾ ಊಟ ತಿಂಡಿಯೂ ಟಿವಿ ಮುಂದೆಯೇ ಅಯ್ಯಾ ಮೊಬೈಲ್ ದೇವಾ ನಿನ್ನ ಕರೆ ಬಂದರೆ ದಿಗ್ಗನೆದ್ದು ಓಡುವರಯ್ಯಾ.   5. ಕಿವುಡನ ಮಾಡಯ್ಯಾ ತಂದೆ ನಿನ್ನ ರಿಂಗ್ ಕೇಳಿಸದಂತೆ ಅಂಧಕನ ಮಾಡಯ್ಯಾ ತಂದೆ ನಿನ್ನ ಎಸ್ ಎಮ್ ಎಸ್ ನೋಡದಂತೆ ಕೈಕಾಲು ಇಲ್ಲದಂದತೆ ಮಾಡಯ್ಯಾ ತಂದೆ ನಿನ್ನ ಬಳಿ ಸಾರದಂತೆ ಮೊಬೈಲ್ ದೇವಾ ಎನ್ನ ಏಕಾಂತಕ್ಕೆ ಭಂಗ ತಾರದಿರಯ್ಯಾ.   6. ಮಾಸಕ್ಕೊಮ್ಮೆ ಸಿಮ್ ಬದಲಿಸುವರಯ್ಯಾ ಪಕ್ಷಕ್ಕೊಮ್ಮೆ ಸೆಟ್ ಬದಲಿಸುವರಯ್ಯಾ ಗಳಿಗೆಗೊಮ್ಮೆ ಎಸ್ ಎಮ್ ಎಸ್ ಮಾಡುವರಯ್ಯಾ ಕ್ಷಣಕ್ಕೊಮ್ಮೆ ಮಿಸ್ ಕಾಲ್ ಕೊಡುವರಯ್ಯಾ ಮೊಬೈಲ್ ದೇವಾ ನಿದ್ದೆಗಾಗಿ ನಾ ಸ್ವಚ್ ಆಫ್ ಮಡುವೆನಯ್ಯಾ   7. ನಿಂತಲ್ಲಿ ಕಾಲ್ ಮಾಡುವರಯ್ಯಾ ಕುಳಿತಲ್ಲಿ ಎಸ್ ಎಮ್ ಎಸ್ ಕೊಡುವರಯ್ಯಾ ಕಾಲ್ ಬಂದಲ್ಲಿ ಓಡುವರಯ್ಯಾ ಎಸ್ ಎಮ್ ಎಸ್ ಬಂದಲ್ಲಿ ಹಲ್ಕಿರಿಯುವರಯ್ಯಾ ಮೊಬೈಲ್ ದೇವಾ ನಿನ್ನನರಕ್ಷಣ ಬಿಟ್ಟಿರಲಾರರಯ್ಯಾ. – ಬೆಳ್ಳಿಬೆಟ್ಟದೊಡೆಯಾ.]]>

‍ಲೇಖಕರು G

September 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: