
ರೇಣುಕಾ ನಿಡಗುಂದಿ
ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಬಹುಬೇಗ ನಿಮ್ಮ ಕೈಸೇರಲಿದೆ. ಇದು 2019 ರ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಪಂಜಾಬಿ ಲೇಖಕಿ, ಕತೆಗಾರ್ತಿ ಡಾ ಅಜೀತ್ ಕೌರ್ ಅವರ ‘ಖಾನಾಬದೋಶ್’ ಆತ್ಮಕತೆಯ ಕನ್ನಡ ಅನುವಾದ.
ದೇಶ ಕಂಡ ಘೋರ ವಿಭಜನೆಯ ಝಳವನ್ನು ಉಂಡ ಅಮೃತಾ ಪ್ರೀತಂ. ಖುಶ್ವಂತ ಸಿಂಗ್, ಮುಂತಾದ ಸಮಕಾಲೀನರಾಗಿ ಅಜೀತ್ ಕೌರ್ ಅವರ ಬದುಕಿನ ಚಿತ್ರಣ ಇಲ್ಲಿದೆ. ಭಾರತ ಸ್ವತಂತ್ರವಾಗುವುದರೊಂದಿಗೆ ಲಕ್ಷಾಂತರ ಜನರು ನಿರ್ಗತಿಕರಾದರು.
ಕೋಮು ಗಲಭೆಯ ನರಮೇಧದಲ್ಲಿ ಲಕ್ಷಾಂತರ ಜನರು ಹತರಾದರು. ರಕ್ತದ ಕೋಡಿಯೇ ಹರಿಯಿತು. ಪ್ರಾಣವುಳಿಸಿಕೊಂಡು ಜನ ದಿಲ್ಲಿಗೆ ಪ್ರವಾಹೋಪಾದಿಯಾಗಿ ಹರಿದುಬಂದು ಇಲ್ಲಿಯೇ ತಳವೂರಿದರು. ಈಗ ಯಾರೂ ಆ ಕತೆಗಳನ್ನು ಹೇಳಲಾರರು. ಹೇಳುವವರೂ ಈಗ ಬಹಳ ಜನ ಬದುಕಿಲ್ಲ.

ಅಜೀತ್ ಕೌರ್ ಅಮೃತಾ ಪ್ರೀತಮ್, ಕೃಷ್ಣಾ ಸೋಬತಿಯಂಥ ಖ್ಯಾತ ಲೇಖಕಿಯರ ಗೆಳತಿಯೂ ಆಗಿದ್ದರು. ಆತ್ಮಕಥನ ಬರೀ ಅವರ ಜೀವನ ವೃತ್ತಾಂತವಾಗುತ್ತಲೇ ಅಂದಿನ ಸಾಮಾಜಿಕ ವ್ಯವಸ್ಥೆಯನ್ನು, ಕೆಲ ಸಂಬಂಧಗಳು ಕೊಡುವ ಯಾತನೆಯನ್ನೂ ಬಿಚ್ಚಿಡುತ್ತ ನಮ್ಮವೇ ಆಗಿಹೋಗುತ್ತವೆ.
0 ಪ್ರತಿಕ್ರಿಯೆಗಳು