ಹೊಸ 'ಮೀಡಿಯಾ ಮಿರ್ಚಿ' ಬಂದಿದೆ


ವೆಂಕಪ್ಪ ಇನ್ನೂ ಮಾತಾಡ್ತಾ ಇದ್ದರು. ನಾನು ನನ್ನ ನೆನಪುಗಳ ರಿವೈಂಡ್ ಮಾಡತೊಡಗಿದೆ. ಸುಮಾರು 12 ವರ್ಷದ ಹಿಂದೆ ನನಗೆ ಇದೇ ತರಹದ ಕಾಲ್ ಬಂದಿತ್ತು. ‘ಸೊಲ್ಲಾಪುರದ ಇಂತಿಂತಾ ಸ್ಟೇಶನ್ ನಲ್ಲಿ ಒಬ್ಬನ್ನ ಅರೆಸ್ಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಕರ್ನಾಟಕಾನೇ ಬೆಚ್ಚಿ ಬೀಳೋ ವಿಷ್ಯ ಇದೆ’ ಅಂತ. ಏನು, ಎತ್ತ ಕೇಳೋಣ ಅಂದ್ರೆ ಆ ಕಡೆ ಇದ್ದ ವ್ಯಕ್ತಿ ಫೋನ್ ಕಟ್ ಮಾಡಿ ಆಗಿತ್ತು.
ಸೊಲ್ಲಾಪುರ ಏನ್ ಪಕ್ಕದಲ್ಲಿದ್ಯಾ? ಹಿಂಗ್ ಹೋಗಿ ಹಂಗ್ ಬಂದ್ಬಿಡೋದಕ್ಕೆ. ಅದಿರೋದು ಮಹಾರಾಷ್ಟ್ರದಲ್ಲಿ. ಗಂಟೆಗಟ್ಟಲೆ ಜರ್ನಿ. ಆಗ ಹೇಳಿ ಕೇಳಿ ಗುಲ್ಬರ್ಗದಲ್ಲಿ ರಣಬಿಸಿಲು. ಒಂದು ಕಿಲೋ ಮೀಟರ್ ದಾಟೋ ವೇಳೆಗೆ ‘ಹಾರುತಿದೆ ಎನ್ನಯ ಹರಣ, ಕೇಳಬೇಡ ಕಾರಣ..’ ಅನ್ನೋ ಸ್ಥಿತಿ. ಅಲ್ಲಿ ಕನ್ನಡ ಬೇರೆ ನಡೆಯೋದಿಲ್ಲ. ಜೇಬಲ್ಲಿ ಸ್ವಲ್ಪಾನಾದ್ರೂ ಮರಾಟಿ     ಇರ್ಬೇಕು. ಫೋನ್ ಮಾಡಿದವನು ತಾನು ಯಾರು ಅಂತ ಹೇಳಿರಲಿಲ್ಲ. ಕಪಿಚೇಷ್ಟೆ ಮಾಡೋರಿಗೆ ಫೋನ್ ಒಂದು ಒಳ್ಳೆ ಆಟದ ಸಾಮಾನು. ರಾತ್ರಿ 2 ಗಂಟೆಗೆ ಫೋನ್ ಮಾಡೋದು ಎತ್ತಿದರೆ ದೇವೇಗೌಡರ ಥರಾ ಬ್ಯಾ…ಬೋ..ಬ್ಲ ..ಅನ್ನೋ ಭಾಷೆ ಬಳಸೋದು. ಯಾಕಪ್ಪಾ? ಏನಪ್ಪಾ? ಅಂತ ಕೇಳೋದ್ರೊಳಗೆ ಬಾಯಿ ತೀಟೆ ತೀರಿಸಿ ಸುಮ್ಮನಾಗೋದು. ಇಂತದ್ದೇ ನೂರಾರು ಆಶೀರ್ವಾದ ಪಡಕೊಂಡ ನಾನು ಇದನ್ನೂ ಅದೇ ಲಿಸ್ಟ್ ಗೆ ಸೇರಿಸಿ ಸುಮ್ಮನಾಗಿಬಿಡೋಣ ಅಂದುಕೊಂಡೆ. ಆದರೂ ಜರ್ನಲಿಸ್ಟ್ ಬುದ್ದಿ. ‘ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು’ ಅಂತ ಕಲಿತಿರೋವ್ರು. ಎಷ್ಟು ದೂರ ಆಗ್ಲಿ, ಯಾವ ಭಾಷೆ ಆದರೂ ಅಗಲಿ ಹೋಗಿ ಬಂದುಬಿಡಬಾರದ್ಯಾಕೆ?. ಹೋದ್ರೆ ಕಲ್ಲು, ಬಂದ್ರೆ ಬೆಟ್ಟ ಅನಿಸ್ತು. ಕನ್ನಡಪ್ರಭದ ಶೇಷಮೂರ್ತಿ ಅವದಾನಿ, ಯು ಎನ್ ಐ ನ ವೆಂಕಟೇಶ್ ಒಟ್ಟಾಗಿ ಪೋಲೀಸ್ ಸ್ಟೇಶನ್ ಗೆ ನುಗ್ಗಿದಾಗ ಷಾಕ್ ಕಾದಿತ್ತು.
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

January 18, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This