ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..

‘ಪಾ’ ಸಿನೆಮಾ ನೋಡಲು ಅಮಿತಾಬ್ ಬಚ್ಚನ್ ಫೋರಂ ಮಾಲ್ ಗೆ ಬಂದಿಳಿದದ್ದೇ ತಡ ‘ಬಿಗ್ ಬಿ’ಯ ಆಟೋಗ್ರಾಫ್ ಗಾಗಿ ಮುಗಿಬಿದ್ದದ್ದು ಅವರ ಫ್ಯಾನ್ ಗಳು ಮಾತ್ರವಲ್ಲ. ಪತ್ರಕರ್ತರ ದೊಡ್ಡ ದಂಡೂ ಇತ್ತು. ಅಮಿತಾಬ್ ಸುತ್ತ ಮುತ್ತಲಿನ ಸೀಟು ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಪತ್ರಕರ್ತರಿಗೆ ಕ್ಯಾಮೆರಾ ಫ್ರೇಮ್ ನಲ್ಲಿ ಅಮಿತಾಬರನ್ನೂ ಜೋಡಿಸಿಕೊಂಡು ಫೋಟೋ ಹಿಡಿಸಿಕೊಳ್ಳುವ ಹಂಬಲ.
ಫೋರಂ ಮಾಲ್ ನಲ್ಲಿ ಇವೆಲ್ಲಾ ನಡೆಯುತ್ತಿದ್ದ ಕೆಲ ದಿನಗಳ ಮುಂಚೆಯಷ್ಟೇ ಇನ್ನೊಬ್ಬ ಪತ್ರಕರ್ತರು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದರು. ಅವರ ಬಳಿ ವರ್ಗಾವಣೆ ಶಿಫಾರಸ್ಸು ಕೋರಿದ ಕಾಗದ ಇರಲಿಲ್ಲ. ಮುಖ್ಯಮಂತ್ರಿ ಖೋಟಾದಡಿ ಸೈಟು ಕೇಳುತ್ತಿರಲಿಲ್ಲ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಿಡಿದು ನಿಂತಿರಲಿಲ್ಲ ಅಥವಾ ಪತ್ರಿಕಾ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಿ ಎಂದು ಒತ್ತಡವನ್ನೂ ಹೇರುತ್ತಿರಲಿಲ್ಲ. ಬದಲಿಗೆ ಒಂದು ದಂಡು ಕಟ್ಟಿಕೊಂಡು ಯಾಕೆ ಬಿ ಟಿ ಬದನೆ ರಾಜ್ಯದೊಳಗೆ ಕಾಲಿಡಕೂಡದು ಎಂದು ವಿವರಿಸುತ್ತಿದ್ದರು. ಒಂದು ಬದನೆಯ ಕುಲ ತಿದ್ದಲು ಹೋಗಿ ಜಗತ್ತಿನ ಹೊಟ್ಟೆಯನ್ನು ಇನ್ನಷ್ಟು ಹಸಿವೆಗೆ ಕೆಡವುತ್ತಿದ್ದೇವೆ ಎಂದು ವಿವರಿಸುತ್ತಿದ್ದರು. ಹೆಸರು ಹೇಳಬೇಕಾದ ಅಗತ್ಯವೇ ಇಲ್ಲ- ಅವರು ನಾಗೇಶ ಹೆಗಡೆ.
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್

‍ಲೇಖಕರು avadhi

February 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. V.R.Carpenter

    Nagesh Hegade avaru sriyagi chuchiddare. a nachike illada
    patrakartarige raitara bagge kanistavada kalaji illa
    marudina patrikeyalli odi sustagi hode. che annisitu same abouthim. Lankesh hesaru summane halu maduttiddare.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: