ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..


ಮೊನ್ನೆ ಹೀಗಾಯ್ತು. ನಂದಿನಿ ಲಕ್ಷೀಕಾಂತ್ ಬಲವಂತದಿಂದಾಗಿ ನಾನು ಒಂಬತ್ತು ಮೀಡಿಯಾ ವಿದ್ಯಾರ್ಥಿಗಳ ಮುಂದೆ ಕುಳಿತಿದ್ದೆ. ಮೀಡಿಯಾ ಬಗ್ಗೆ ಒಂದು ಗಂಟೆ ಮಾತು..ಮಾತು ಮಾತು… ಒಳ್ಳೆ ಜೋಷ್ ನಲ್ಲಿದ್ದ ನಾನು ಅವರೆಲ್ಲರಿಗೆ ‘ಪಿವಿಆರ್’ ಅಂದರೆ ಏನು? ಅಂತ ಕೇಳಿದೆ. ಗಲಗಲ ಅನ್ನುತ್ತಿದ್ದ ಕ್ಲಾಸು ಒಂದೇ ಕ್ಷಣಕ್ಕೆ ಸ್ಥಬ್ಧವಾಯಿತು. ಪ್ರತಿಯೊಬ್ಬರ ಮುಖದಲ್ಲೂ ಪ್ರಶ್ನಾರ್ಥಕ ಚಿಹ್ನೆ. ಒಂದಷ್ಟು ಹುಡುಗರು ಧೈರ್ಯ ಮಾಡಿ ಸರ್ ‘ಪಿ ಅಂದ್ರೆ ಪಿಕ್ಚರ್’ ಅಂದರು. ‘ವಿ ಅಂದ್ರೆ ವಿಡಿಯೋ, ಆರ್ ಅಂದ್ರೆ ರೆಕಾರ್ಡಿಂಗ್. ಪಿವಿಆರ್ ಅಂದರೆ ಪಿಕ್ಚರ್ ವಿಡಿಯೋ ರೆಕಾರ್ಡಿಂಗ್ ಅಂದರು. ಈಗ ಮುಖವನ್ನು ಕ್ವಶ್ಚನ್ ಮಾರ್ಕ್ ಆಗಿ ಬದಲಿಸಿಕೊಳ್ಳುವ ಸರದಿ ನನ್ನದಾಗಿತ್ತು. ನಾನು ಕುಳಿತಿದ್ದು ಈಗಿನ ಕಾಲದ ಹುಡುಗ ಹುಡುಗಿಯರ ಎದುರು. ಇದ್ದಿದ್ದರಲ್ಲಿ ಜೇಬಿನ ಪರಿಸ್ಥಿತಿ ಪರವಾಗಿಲ್ಲ ಎನ್ನಬಹುದಾದವರ ಎದುರು, ಹಾಗಾಗಿ ಮಲ್ಟಿಪ್ಲಕ್ಸ್ ತಿರುಗಾಟ ಇವರಿಗೆ ಅಪರೂಪದ್ದೇನಲ್ಲ . ಪಿವಿಆರ್ ನಲ್ಲಿ ಸಿನಿಮಾ ಬಂತು ಎಂದರೆ  ಬೇಕಾದರೆ ಇಪ್ಪತ್ತು ಕಿಲೋ ಮೀಟರ್ ದೂರವಿರುವ ಸೋಲದೇವನಹಳ್ಳಿಯ ತಮ್ಮ ಕ್ಯಾಂಪಸ್ಸಿನಿಂದ ಅಲ್ಲಿಗೆ ಲಗ್ಗೆ ಹಾಕಿ ಬರ್ತಾರೆ. ನಾನು ಒಬ್ಬೊಬ್ಬರೂ ಮಾಡುತ್ತಿದ್ದ ಊಹೆಯನ್ನು ನೋಡಿ ಗಾಬರಿ ಆದವನೇ, ಬೇಡ ಬೇಡ, ಪಿವಿಆರ್ ಅಂದರೆ ‘ಪ್ರಿಯಾ ವಿಲೇಜ್ ರೋಡ್ ಶೋ’ ಅಂತ ಅಂದೆ. ಅವರ ಮುಖದಲ್ಲಿ ಆದ ಬದಲಾವಣೆ ಗಮನಿಸಬೇಕಿತ್ತು. ತೆರೆದ ಬಾಯಿ ತೆರದೇ ಇತ್ತು. ಬಿಟ್ಟ ಕಣ್ಣು ಬಿಟ್ಟ ಹಾಗೇ ಇತ್ತು.
ನನ್ನ ಕಸಿನ್ ಧೀರಜ್ ಫೋನ್ ಮಾಡಿ ‘ಐಪಿಎಲ್ ಟಿಕೆಟ್ ಇದೆ ಬರ್ತೀಯಾ ನನ್ನಜೊತೆ’ ಅಂದ. ನನಗೂ ಕ್ರಿಕೆಟ್ ಗೂ ಅಂತಾ ಒಳ್ಳೆ ನಂಟೇನಿಲ್ಲ . ಖಾಲಿ ಇದ್ದರೆ ಸ್ಕೋರ್ ಕಡೆ ಕಣ್ಣಾಡಿಸ್ತೀನಿ. ಕೆಲಸ ಇದ್ರೆ ಗೋಲಿಮಾರ್ ಅಂತೀನಿ. ಹಾಗಾಗಿ ಅವನು ಕರೆದಾಗ ‘ಹೋಗೋ ಯಾರು ಬರ್ತಾರೆ, ಬೆಳಗ್ಗೆ ಪೇಪರ್ ನಲ್ಲಿ ಬೇರೆ ಕಾರು ತರಬೇಡಿ, ಬಸ್ ಹಿಡ್ಕೊಂಡು ಬನ್ನಿ ಅಂತ ಹೇಳಿದ್ದಾರೆ ಅಲ್ಲಿ ಬೇರೆ ರಷ್ ಒದ್ದಾಡಬೇಕು ಅಂತ ಕಣಿ ಹೇಳಿದೆ. ಅವನು ರಷ್ ಏನಿಲ್ಲ, ಖಾಲಿ ಹೊಡಿತಾ ಇರುತ್ತೆ ಬಾ ಅಂದ, ಅವತ್ತು ಯಾವ ಮ್ಯಾಚಪ್ಪಾ ಅಂತ ನೋಡಿದೆ ರಾಯಲ್ ಚಾಲೆಂಜರ್ಸ್ ಆಟ. ಹಾಗಿದ್ರೂ ಖಾಲಿ ಹೊಡೆಯುತ್ತೆ ಅಂದ್ರೆ ಯಾರು ನಂಬ್ತಾರೆ ಅಂದೆ. ತಕ್ಷಣ ಅವನು ಹೇಳಿದ ‘ಅಯ್ಯೋ, ನಾನು ಹೇಳಿದ್ದು ಫನ್ ಮಲ್ಟಿಪ್ಲೆಕ್ಸ್ ನಲ್ಲಿ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಲ್ಲ’ ಅಂದ, ಓಹ್ ,,ಕ್ರಿಕೆಟ್ ಇವಾಗ ಫಿಲಂ ಥಿಯೇಟರೆಗೆ ಬಂದಿದೆ. ಬಿಟ್ಟ ಬಾಯಿ ಬಿಟ್ಟ ಹಾಗೇ ಇರುವ ಪರಿಸ್ಥಿತಿ ಈಗ ನನ್ನದಾಗಿತ್ತು.

‍ಲೇಖಕರು avadhi

March 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This