ಹೊಸ 'ಮೀಡಿಯಾ ಮಿರ್ಚಿ' ಬಂದಿದೆ


‘The woman abort her foetus, since she is not married’ ಅನ್ನುವ ಮೆಸೇಜ್ ನನ್ನ ಮೇಲ್ ಬಾಕ್ಸ್ ಗೆ ಬಂದು ಬಿತ್ತು. ನಾನು ಒಂದು ಕ್ಷಣ ತಬ್ಬಿಬ್ಬಾದೆ, ಇದಕ್ಕೂ ನನಗೂ ಏನು ಸಂಬಂಧ ಅಂತ?. ಏನು,ಎತ್ತ ಗೊತ್ತಾಗದೆ ಗೊಂದಲದಲ್ಲಿ ಮುಳುಗಿರುವಾಗ ಹಿಂದೆಯೇ ಮತ್ತೊಂದು ಮೇಲ್ ಬಂತು. ನೀವು ಇಂಗ್ಲೀಷ್ ಜ್ಞಾನ ಪತ್ರಕರ್ತರಿಗೆ ಅಗತ್ಯ ಅಂತ ಬರೆದಿದ್ದೀರಿ ಇವತ್ತು ಸಗೋತ್ರ ವಿವಾಹದ ಬಗ್ಗೆ ಒಂದು ನ್ಯೂಸ್ ಬಂತು ಅದರಲ್ಲಿ ಈ ವಾಕ್ಯವಿದೆ ನನ್ನ ಇಂಗ್ಲೀಷ್ ಅಷ್ಟಕಷ್ಟೇ ನಾನು ಅರ್ಥ ಮಾಡಿಕೊಂಡಿರುವುದು ಸರಿಯಾ ಅಂಥ ಗೊತ್ತಾಗಬೇಕಾಗಿದೆ. ಅದಕ್ಕೆ ನಿಮಗೆ ಮೇಲ್ ಮಾಡಿದ್ದೀನಿ ಅರ್ಥ ತಿಳಿಸಿ. ಒಂದು ಕ್ಷಣ ನಿಟ್ಟುಸಿರು ಬಿಟ್ಟೆ ಮರುಕ್ಷಣವೇ ‘ತಾನು ಮದುವೆ ಆಗದೇ ಗರ್ಭ ಧರಿಸಿದ ಕಾರಣ ಆಕೆ ಗರ್ಭಪಾತ ಮಾಡಿಸಿಕೊಂಡಳು’ ಅಂತ ಬರೆದು ಮೇಲ್ ಮಾಡಿದೆ. ಈ ಮೇಲ್ ವಿನಿಮಯ ಅಷ್ಟಕ್ಕೇ ನಿಂತಿಲ್ಲ fall in line ಅಂದ್ರೆ ಏನು ? up Above the sky ಅಂದ್ರೇನು ಎಂಬ ಇಂಗ್ಲೀಷ್ ಪಾಠ ನಡೆಯುತ್ತಲೇ ಇದೆ ನಾನು ನನ್ನ ಕೆಲಸಗಳ ನಡುವೆ ಈಗ ‘ಇಂಗ್ಲೀಷ್ ಮೇಸ್ಟ್ರು’
‘ಹಲೋ, ಹಲೋ’ ಪೋನ್ ನ ಆಕಡೆ ಇದ್ದದ್ದು ಒಬ್ಬ ಪತ್ರಕರ್ತೆ, ಇಂಗ್ಲೀಷ್ ಕಲಿಯೋದಕ್ಕೆ ನಾನು ಮಾಡಿದ ಸಾಹಸ ಅಷ್ಟಿಷ್ಟಲ್ಲ. ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಸೇರಿಕೊಂಡೆ ನೂರಾರು ರೂಪಾಯಿ ಫೀಸ್ ಕಟ್ಟಿದೆ ಮನೆ ಕೆಲಸ ಬಿಟ್ಟು ಬೆಂಳ್ಳಬೆಳಿಗ್ಗೆ ಕ್ಲಾಸ್ ಗೆ ಹೊಗ್ತಿದ್ದೆ ಆದ್ರೂ ಏನು ಪ್ರಯೋಜನ ಆಗಿಲ್ಲ. ಇಂಗ್ಲೀಷ್ ಇಲ್ಲದೆ ಆಫೀಸಿನಲ್ಲಿ ನನ್ನ ಕಾನ್ಫಿಡೆನ್ಸೇ ಸತ್ತುಹೋಗಿದೆ. ಈ ದರಿದ್ರ ಇಂಗ್ಲೀಷ್ ಬರಬೇಕು ಅಂದ್ರೆ ಏನು ಮಾಡಬೇಕು ಅಂತ. ‘ವೆರಿ ಸಿಂಪಲ್ ಮೇಡಂ, ಯಾರ ಜೊತೆಗಾದ್ರೂ ಇಂಗ್ಲೀಷ್ ಮಾತಾಡಿ, ಮಾತಾಡ್ತಾ ಇದ್ರೇ ತನ್ನಿಂದ ತಾನೇ ಬರುತ್ತೆ. ಆಡ್ತಾ ಆಡ್ತಾ ಇಂಗ್ಲೀಷ್’ ಅಂದೆ. ಈಗ ನಾನು ನನ್ನ ಎಲ್ಲಾ ಕೆಲಸಗಳ ನಡುವೆಯೂ ‘ಇಂಗ್ಲೀಷ್ ಕೌನ್ಸಲರ್’.
ಪೂರ್ಣ ಓದಿಗೆ –ಮೀಡಿಯಾ ಮೈಂಡ್

‍ಲೇಖಕರು avadhi

May 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This