ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..

ಮಾನ್ಯ ಡಿ ಜಿ ಸಾಹೇಬರಿಗೆ

ಅಖಿಲ ಭಾರತ ಮೂಗರ್ಜಿ ಬರಹಗಾರರ ಸಂಘದಿಂದ ಅನಂತಾನಂತ ನಮಸ್ಕಾರಗಳು. ‘ವಿಜಯ ಕರ್ನಾಟಕ’ ಸರ್ಕಾರದ ವಿರುದ್ಧ ಬರೆಯುತ್ತಿದೆ ಎಂಬ ಮೂಗರ್ಜಿ ನಿಮಗೆ ಬಂದದ್ದು ಸರಿಯಷ್ಟೇ. ನೀವು ತುಂಬಾ ಮುತುವರ್ಜಿಯಿಂದ ಅದನ್ನು ತನಿಖೆಗೆ ಕಳಿಸಿಕೊಟ್ಟದ್ದು ಕೇಳಿ ಹಾಲು ಕುಡಿದಷ್ಟು ಸಂತೋಷವಾಯಿತು. ಇತ್ತೀಚಿಗೆ ತಾನೇ ‘ಪ್ರಜಾವಾಣಿ’ಯ ರಾಹುಲ್ ಬೆಳಗಲಿ ಹಾಗೂ ಪದ್ಮರಾಜ ದಂಡಾವತೆ ಅವರಿಗೂ ಇದೆ ರೀತಿ ನಿಮ್ಮ ಪ್ರತಿನಿಧಿಗಳಾದ ಶಿವಮೊಗ್ಗ ಪೊಲೀಸರು ನೋಟೀಸ್ ಕಳಿಸಿದ್ದರು. ಆಗ ನಮಗೆ ಅಷ್ಟೇನೂ ಸಂತೋಷವಾಗಿರಲಿಲ್ಲ. ಯಾಕೆಂದರೆ ಅದು ಮೂಗರ್ಜಿಯನ್ನು ಆಧರಿಸಿ ಕಳಿಸಿದ್ದಲ್ಲ. ಹಾಗಾಗಿ ಮೂಗರ್ಜಿ ಸಂಘದ ನಮಗೆ ಸಂತೋಷವಾಗುವುದಾದರೂ ಹೇಗೆ? ಇಷ್ಟು ದಿನ ಮೂಗರ್ಜಿ ಎಂದರೆ ಸಾಕು ಎಗರಿ ಬೀಳುತ್ತಿದ್ದ, ಮೂಲೆಗೆ ಸರಿಸುತ್ತಿದ್ದ, ಅಸಹ್ಯ ಎನ್ನುವಂತೆ ನೋಡುತ್ತಿದ್ದ ಕಾಲವನ್ನು ನೀವು ಬದಲು ಮಾಡಿದ್ದೀರಿ.
ಹಿಂದೆ ಮಲ್ಯ ಸಾಹೇಬರು ಹೊಸ ಪಕ್ಷ ಕಟ್ಟಿದಾಗ ‘ಏಳಿ ಎದ್ದೇಳಿ, ಬದಲಾವಣೆಯ ಕಾಲ ಬಂದಿದೆ’ ಅಂತ ಕರೆ ನೀಡಿದ್ದರು. ಆಗ ಮೂಗರ್ಜಿ ಬರಹಗಾರರಾದ ನಾವು ಎದ್ದು ಕುಳಿತೆವು. ಎದ್ದು ಕುಳಿತು, ಎದ್ದು ಕುಳಿತು ಮಾಡಿದ್ದಷ್ಟೇ ಬಂತು. ಆದರೆ ಬದಲಾವಣೆಯ ಕಾಲ ಬರಲೇ ಇಲ್ಲ. ಏಕೆಂದರೆ ಮೂಗರ್ಜಿಗೆ ಇದ್ದ ಮಾನ ಮರ್ಯಾದೆ ಎಲ್ಲಿತ್ತೋ ಅಲ್ಲೇ ಇತ್ತು. ಆದರೆ ನೀವು ಮಲ್ಯರಂತೆ ಕರೆ ಕೊಡಲಿಲ್ಲ. ನೀವು ಸದ್ದಿಲ್ಲದಂತೆ ಒಂದು ಬದಲಾವಣೆಯನ್ನೇ ಮಾಡಿಬಿಟ್ಟಿರಿ. ಮೌನ ಕ್ರಾಂತಿ ಅಂದರೆ ಏನು ಅಂತ ಇಷ್ಟು ದಿನ ತಲೆ ಕೆರೆದುಕೊಳ್ಳುತ್ತಿದ್ದೆವು. ಆದರೆ ಈ ದಿನ ಖಂಡಿತಾ ಗೊತ್ತಾಯಿತು. ‘ಮೂಗರ್ಜಿ ಹಿಡಿದು ಮಟಾಷ್ ಮಾಡು’ ಅಂತ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

June 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

4 ಪ್ರತಿಕ್ರಿಯೆಗಳು

 1. siddu devaramani

  ಪ್ರತಿ ಮು೦ಜಾವಿಗೂ ನಾನು “ಚೆ೦ದ ಕಾಣು” ಎ೦ದು ಹೇಳುತಿದ್ದೆ.
  “ಚೆ೦ದ ಅ೦ದ್ರೆ ಯಾವ ತರಹ” ಎ೦ದು ಪ್ರಶ್ನಿಸುತ್ತಿದ್ದ ಮು೦ಜಾವಿಗೆ
  ಅವಧಿ ಯ ಮುಖ ತೋರಿಸುತ್ತೇನೆ.
  ಪ್ರತಿ ಜೀವಿಯ , ಪ್ರತಿ ಮನಸ್ಸು ಇದೇ ಚಿತ್ರದ ಚೌಕಟ್ಟು ಹೊತ್ತು ತಿರುಗಲಿ.
  ನಿಜಕ್ಕೂ ನಾನು ಖುಶ್..ಖುಶ್.
  ಈ ದಿನ ನಿನ್ನ ನೆನಪಲ್ಲೇ ಅ೦ಗಡಿ ಗೆ ಹೊರಡುತ್ತೇನೆ, ಟೈ೦ ಅಯಿತು. ಥ್ಯಾ೦ಕ್ಸ್ ಅವಧಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: