ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಅದು ಹೀಗಾಯ್ತು- ಮಧ್ಯಾಹ್ನ  ನನ್ನ ಚೇಂಬರಿಗೆ ‘ ಓವರ್ ಎ ಕಪ್ ಆಫ್ ಕಾಫಿ ‘ಗೆ ಬಂದ  ಜಯಪ್ರಕಾಶ್ ಶೆಟ್ಟಿ ಸಿಕ್ಕಾಪಟ್ಟೆ ಖುಷ್ ಮೂಡ್ ನಲ್ಲಿದ್ದರು. ಜಯಪ್ರಕಾಶ್ ಶೆಟ್ಟಿ ಇದ್ದಲ್ಲಿ ಒಂದಷ್ಟು ತರಲೆ, ಜೋಕ್, ಮಿಮಿಕ್ರಿ, ಮೈಮ್, ಸಿಕ್ಕಾಪಟ್ಟೆ ನಗು ಇರಲೇಬೇಕು. ಹಾಗೇ ಆ ದಿನವೂ ಒಂದಿಷ್ಟು ಜೋಕ್ ಕಟ್ ಮಾಡಲು ಸಿದ್ಧರಾಗಿ ಬಂದಂತಿತ್ತು. ನನಗೆ ಆ ನಿಮಿಷ ಹೇಳತೀರದ ಕೆಲಸಗಳು. ನಾನು ಶೆಟ್ಟಿ ಜೋಕ್ ಗಳಿಗೆ ಖಂಡಿತಾ ಸಿದ್ಧನಿರಲಿಲ್ಲ. ಆದರೆ ಜಯಪ್ರಕಾಶ್ ಶೆಟ್ಟಿ ಬಿಡಲಿಲ್ಲ . ‘ನೀನೇ ಸಾಕಿದಾ ಗಿಣಿ, ನಿನ್ನ ಮುದ್ದಿನಾ ಮಣಿ, ಹದ್ದಾಗಿ ಕುಕ್ಕಿತಲ್ಲೋ..’ ಅಂತ ಹಾಡಲು ಶುರು ಮಾಡೇ ಬಿಟ್ಟರು. ಶೆಟ್ಟಿಗೆ ಯಾವಾಗಪ್ಪಾ  ಈ ಹಾಡಿನ ಖಯಾಲಿ ಶುರುವಾಯ್ತು ಅಂತ ನಾನೂ ಮುಖ ಬಿಗಿ  ಮಾಡಿ ಕುಳಿತೆ. ನನ್ನ ಬಿಗಿ ಮುಖಕ್ಕೆ ‘ಗೋಲಿ ಮಾರೋ’ ಎಂಬಂತೆ ‘ಡೋಂಟ್ ವರಿ ಚಿನ್ನ, ನಮಗೂ ಒಳ್ಳೆ ಟೈಂ ಬಂದೇ ಬರುತೈತೆ’ ಅಂತ ಇನ್ನೊಂದು ಹಾಡು ಶುರುವಿಟ್ಟುಕೊಂಡರು . ಶೆಟ್ಟಿ ಅಲ್ಲಿಗೇ ನಿಲ್ಲಿಸಲಿಲ್ಲ ‘ಇನ್ನು ಹತ್ತಿರ ಹತ್ತಿರ ಬರುವೆಯಾ …’ ಅಂತ ‘ಚಿತ್ರ’ ಹಿಂಸೆ ನೀಡತೊಡಗಿದರು. ಹಾಡು ಎಲ್ಲ ಖಾಲಿಯಾಯ್ತೇನೋ …’ಹೆಂಗೆ’ ಅನ್ನುವ ಹಾಗೆ ಮುಖ ನೋಡಿದರು. ಪೂರ್ಣ ಓದಿಗೆ: ಮೀಡಿಯಾ ಮೈಂಡ್  ]]>

‍ಲೇಖಕರು avadhi

October 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

೧ ಪ್ರತಿಕ್ರಿಯೆ

  1. ssrao

    ‘sarkar’ uLidide. sarkar nadesuvavaru vijayotsvaa acharisuttuddare. haagidda mele inno0ndu malike barali.
    RAO.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: