ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಜಗಲಿ ಭಾಗವತರು ಅಂತ ಒಬ್ರಿದಾರೆ, ಅವರಿಗೆ ಆಗೀಗ ಮಾರುವೇಷ ಹಾಕ್ಕೊಂಡು ಬ್ಲಾಗ್ ಲೋಕದಲ್ಲಿ ಸುತ್ತಾಡೋ ಅಭ್ಯಾಸ. ಹಿಂದೆ ರಾಜ ಮಹಾರಾಜರು ಹಿಂಗೆ ವೇಷ ಬದ್ಲಾಯ್ಸಿಕೊಂಡು ಹಗಲೂ ರಾತ್ರಿ, ಅಲ್ಲಿ ಇಲ್ಲಿ ಸುತ್ತಿ ಪ್ರಜೆಗಳು ನನ್ನ ಬಗ್ಗೆ, ನನ್ನ ಆಡಳಿತದ ಬಗ್ಗೆ ಏನ್ ಮಾತಾಡ್ತಾ ಇದಾರೆ ಅಂತ ಫಸ್ಟ್ ಹ್ಯಾಂಡ್ ರಿಪೋರ್ಟ್ ತಗೊಳ್ತಾ ಇದ್ರಂತೆ. ಪಾಪ ‘ಚಪ್ಪನ್ನಾರು’ ರಾಣಿಯರನ್ನು ಹೀಗೆ ಒಂಟಿಯಾಗಿ ಬಿಟ್ಟು ಅವರಾದರೂ ಯಾಕೆ ಸುತ್ತಾಡುತ್ತಿದ್ದರೋ..ಆ ಪರಮಾತ್ಮನೇ ಬಲ್ಲ. ಜಗಲಿ ಭಾಗವತರ ಕಥೆ ಹೀಗಂತೆ ಅಂತ ಗೊತ್ತಾದ ತಕ್ಷಣ ನಂಗೂ ಎಲಾ ಇವನಾಪ್ನ!, ನಾನೂ ಒಂದು ಕೈ ಯಾಕೆ ನೋಡಬಾರದು ಅನಿಸ್ತು. ಸರಿ ವೇಷ ಬದಲಾಯ್ಸಿಕೊಳ್ಳೋದು ಹೇಗೆ ಅಂತ ತಲೆ ಕೆರಕೊಂಡೆ. ಯುರೇಕಾ..! ತಕ್ಷಣ ಬಲ್ಬ್ ಹತ್ತಿಕೊಳ್ತು . ಸಿಂಪಲ್, ಎಲ್ಲಾರೂ ನನ್ನನ್ನ ಬಾಲ್ಡಿ ಅನ್ಕೊಂಡಿದಾರೆ. ಅದನ್ನೇ ಬದಲಾಯ್ಸಿಬಿಟ್ರೆ? ಆ ಅಮೆರಿಕಾದ ಒಬಾಮನಿಗೂ ನನ್ನ ಗುರ್ತು ಸಿಗಲ್ಲ ಅಂತ ಡಿಸೈಡ್ ಮಾಡಿದೆ.

ಪ್ರಾಬ್ಲಂ ಶುರು ಆಗಿದ್ದು ಅಲ್ಲೇ, ನಾನು ಟೋಫನ್ ಹಾಕ್ಕೊಂಡು ಎಸ್ ಎಂ ಕೃಷ್ಣ ಥರಾ ಕಾಣಿಸಿದ್ರೆ ‘ಯಾಕಪ್ಪಾ ಆಸ್ಟ್ರೇಲಿಯಾ ಪ್ರಾಬ್ಲಂ ಸಾಲ್ವ್ ಮಾಡ್ಲಿಲ್ಲ’ ಅಂತ ಹಿಡಕೊಳ್ತಾರೆ. ಬ್ಯಾಡ ಬಿಡು ಸುಮ್ನೆ ದೇಶಾಂತರ ಹೋಗೋ ಥರಾ ತಲೆ ಮೇಲೆ ಶಾಲು ಹೊದ್ದುಕೊಂಡ್ರೆ ಆಯ್ತು ಅನ್ಕೊಂಡೆ. ಅರೆ…! ಹಂಗಾಗಿಬಿಟ್ರೆ ದೇವೇಗೌಡರ ಥರಾ ಕಾಣ್ತೀನಿ. ಮೊದ್ಲೇ ಲಾಯರ್ ಗಳೂ, ಬಿ ಜೆಪಿ ಯವರೂ ಗರಂ ಆಗವ್ರೆ. ನನ್ನೇ ಅವರೂ ಅಂತ ತಿಳ್ಕೊಂಡು ‘ಬ್ಯಾ, ಬ್ಲ, ಬೋ…’ ಅಂದ್ಬಿಟ್ರೆ ಅಂತ ಹೆದರಿಕೆ ಆಯ್ತು. ಅವಾಗ್ಲೇ ನಮ್ಮ ದಾವಣಗೆರೆ ಮಲ್ಲೇಶಿ ಮಂಡಕ್ಕಿ ತಿನ್ಕಂಡು ಎದುರಿಗೆ ಸಿಕ್ಕಿದ್ದು. ಲೇ, ನಿನ್ನ ಆಕಾರ ನೋಡೋ, ಆ ಅಮೇರಿಕಾ ರಿಸೆಷನ್ನೂ ಯಾವ ಪರಿಣಾಮಾನೂ ಬೀರಿಲ್ವಲ್ಲೋ, ಜೀರೋ ಬಾಡಿ, ಸಿಕ್ಸ್ ಪ್ಯಾಕ್ ಇದ್ದೋನು ದೊಡ್ಡಣ್ಣನ ಥರಾ ಆಗೊಗಿದ್ದೀಯಲ್ಲೋ, ಯಾವೋನ್ ಗುರುತು ಹಿಡೀತಾನ್ಲೆ ನಿನ್ನ’ ಅಂತ ಅವನ ‘ಬ್ರೇಕಿಂಗ್ ನ್ಯೂಸ್’ ಬುಕ್ ಹೀರೋ ತೆಪರೇಸಿ ಥರಾ ಮಾತಾಡಿದ. ಹೌದಲ್ಲಾ, ನಾನೂ ಹಂಗೆ ನಡ್ಕೊಂಡು ಹೋದರೂ ಜನ ನನ್ನ ಗುರ್ತು ಹಿಡಿಯಲ್ಲ ಅಂತ ಹೊರಟೇಬಿಟ್ಟೆ.
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

February 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This