ಹೊಸ ವರುಷದ ಆರಂಭಕ್ಕೊಂದು ಬಿಸಿಬಿಸಿ ಪತ್ರ

‘ಸಿರಿ’ ಬಂದ ಕಾಲಕ್ಕೆ…

mn21

ಮೃಗನಯನಿ

ಮಳೆ,
How soon hath Time the suttle theef of youth,
Stolon on his wing my three and twentieth yeer!
My hasting dayes flie on with full career,
But my late spring no bud or blossom shew’th
ಇವು ಮಿಲ್ಟನ್ ನ ‘ಆನ್ ಹಿಸ್ ಹ್ಯಾವಿಂಗ್ ಅರೈವ್ಡ್, ಅಟ್ ದಿ ಏಜ್ ಆಫ್ ಟ್ವೆಂಟಿ ಥ್ರೀ’ ಪದ್ಯದ ಸಾಲುಗಳು, ನನಗೆ ಇಪ್ಪತ್ತ್ಮೂರು ವರ್ಷ ತುಂಬಿದರೂ ಇನ್ನೂ ಏನೂ ಸಾಧಿಸಿಲ್ಲ, ಲೋಕವೇ ನೆನಪಿಟ್ಟುಕೊಳ್ಳುವಂಥ ಕೃತಿಯನ್ನ ಬರೆದಿಲ್ಲ ಎಂದು ಹಳಹಳಿಸುತ್ತಾ ಬರೆದ ಪದ್ಯ. ಇದರ ಕೊನೆ ಎರೆಡು ಸಾಲುಗಳು ಕವಿಯ ಆತಂಕ ಮತ್ತು ತನ್ನ ಆತಂಕವನ್ನು ಅವನು ನಿರಾಕರಿಸುತ್ತಾ ನಾಳೆಗಾಗಿ ಕಾಯುವುದರ ಮಧ್ಯೆ ಒದ್ದಾಡುತ್ತವೆ. ಆದರೆ ಕವಿತೆ ಇಷ್ಟು ಮಾತ್ರಕ್ಕೆ ಮುಖ್ಯವಾಗುತ್ತದಾ? ಉಹುಂ, ಮೊದಲನೇ ಸಾಲಲ್ಲಿನ ಹೌ ಸೂನ್ ಹಾಥ್ ನಲ್ಲೇ, ಅವನು ಬಳಸಿರುವ ಪದಗಳಲ್ಲೇ ನಿಟ್ಟುಸಿರಿದೆ. ಸಮಯವನ್ನ ಸುಮ್ಮನೆ ಗೊತ್ತಾಗದ ಹಾಗೆ ತನ್ನ ಇಪ್ಪತ್ಮೂರು ವರ್ಷಗಳನ್ನ ಕದ್ದೊಯ್ದ ಬುದ್ದಿವಂತ ಕಳ್ಳನಿಗೆ ಹೋಲಿಸಿದರೆ ಮುಂದಿನ ಸಾಲಿನಲ್ಲೇ ಹಾರಿಹೋದ ಪಕ್ಷಿಗೆ ಹೋಲಿಸುತ್ತಾನೆ.
q
ಹೌದು ಹೊಸವರ್ಷಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ಈ ಸಾಲುಗಳು ಯಾಕೆ ನೆನಪಾಗುತ್ತಿವೆ ಅಂತ ಗೊತ್ತಾಗುತ್ತಿಲ್ಲ ಹುಡುಗ. ಈ ವರ್ಷವನ್ನ ಕದ್ದುಕೊಂಡು ಹೊತ್ತೊಯ್ದ ಸಮಯದ ಬಗ್ಗೆ ಕೋಪವಾ? ‘ಏನು ಸಾಧಿಸಿದೆ?’ ಎಂಬ ಪ್ರಶ್ನೆಯನ್ನ ಎಷ್ಟು ಬೇಡವೆಂದರೂ ಕೇಳಿಕೊಳ್ಳುತ್ತಿರುವ ಮನಸ್ಸಿನ ಬಗ್ಗೆ ಅಸಹನೆಯಾ? ಅಷ್ಟಕ್ಕೂ ಏನನ್ನಾದರೂ ಸಾಧಿಸಲೇಬೇಕಾ? ಸಾಧಿಸುವುದು ಅಂದರೇನು? ದುಡ್ಡು ಸಂಪಾದಿಸುವುದಾ? ಹುದ್ದೆಗಳ ಮೇಲೆ ಹುದ್ದೆಗಳನ್ನೇರುವುದಾ? ಅಥವ ಮಿಲ್ಟನ್ ಹೇಳುವಂತೆ ಮಹತ್ತಾದ್ದನ್ನು ಬರೆಯುವುದಾ? ಅಂಥದ್ದನ್ನು ಬರೆಯಲು ನನ್ನಿಂದ ಸಾಧ್ಯವಾ? ಮಹತ್ತಾದ್ದು ಅಂದರೇನು? ಪ್ರೀತಿಸುವುದೂ ಮಹತ್ತಾದದ್ದೇ ಅಲ್ಲವಾ? ಹಾಗೆ ಪ್ರೀತಿಸುತ್ತಿದ್ದೇನೆ ಅಂದುಕೊಳ್ಳುತ್ತಿರುವುದು ನಿಜವಾ? ನಿನಗೂ ಹಾಗೇ ಅನ್ನಿಸುತ್ತಾ? ಹೀಗೆಲ್ಲಾ ಹುಚ್ಚು ಹುಚ್ಚಾಗಿ ಪ್ರಶ್ನೆಗಳನ್ನ ಕೇಳಿಕೊಳ್ಳುತ್ತಿರುವಾಗಲೇ ನೀನಿಲ್ಲಿಲ್ಲವೆಂಬುದು ಕೆಟ್ಟ ಕನಸಿನಂತೆ ಕಾಡುತ್ತಿದೆ.
ನಿನ್ನ ಜೊತೆಗಿದ್ದಷ್ಟೂ ಇನ್ನೂ ಇರಬೇಕೆನ್ನಿಸುತ್ತದೆ ಅನ್ನುವುದು ನಿನಗೂ ಗೊತ್ತು. ಯಾಕೋ ಹೊಸ-ವರ್ಷದ ಸಂಭ್ರಮಗಳಲ್ಲಿ ಮನಸ್ಸು ಇಳಿಯುತ್ತಿಲ್ಲ. ಭಯೋತ್ಪಾದಕರು ನೆನಪಾಗುತ್ತಾರೆ, ಅಸಹ್ಯ ಆಗುತ್ತದೆ. ಅಂಥ ಸಾವನ್ನು ಮಾತ್ರ ಕೊಡಬೇಡ ಅಂತ ಬೇಡಿಕೊಳ್ಳುತ್ತೇನೆ? ಯಾರನ್ನ? ದೇವರನ್ನಾ? ನಾನು ಅಂಥದ್ದನ್ನೇನಾದರೂ ನಂಬುತ್ತೇನಾ? ನಾನೂ ಕವಿಯಂತೆ ಆತಂಕಪಡುತ್ತಿದ್ದೇನಾ? ಆದರೆ ಆ ಆತಂಕವನ್ನ ನಿರಾಕರಿಸುವ ಧೈರ್ಯ ಮಾತ್ರ ಇಲ್ಲ. ಕಾರಣ ನಿನಗೂ ಗೊತ್ತು.
* *
ಇಷ್ಟು ಬರೆದು ಇದನ್ನ ನಿನಗೆ ಕಳುಹಿಸಬಾರದು ಅಂತ ಸುಮ್ಮನೆ ಪತ್ರವನ್ನ ಅಲ್ಲೇ ಮಡಚಿಟ್ಟು ಎದ್ದು ಹೋಗಿದ್ದೆ. ಎರಡು ದಿನಗಳ ನಂತರ ಬಂದು ನೋಡಿದರೆ ನಗು ಬರುತ್ತಿದೆ. ಅವತ್ತು ತುಂಬಾ ಬೇಜಾರಾಗಿದ್ದೆ
I was in low spirits for all the stupid reasons of my own,ನೀ ನನ್ನ ಜೊತೆಗಿರಲಿಲ್ಲ ಅನ್ನುವ ಮುಖ್ಯವಾದ ಕಾರಣವೂ ಒಂದಾಗಿತ್ತು ಎಂದಿಟ್ಟುಕೋ. ಮತ್ತೆ ಆಫೀಸು ಶುರುವಾಗಿದೆ. ಸಂಜೆ ಆಫೀಸಾದಮೇಲೆ ನಮ್ಮ ಆಫೀಸಿನ ಕ್ಯಾಂಪಸ್ಸಿನಲ್ಲೇ ಇರುವ, ಯಾರೂ ಹೋಗದ ಕೆಫೆ-ಕಾಫಿ ಡೇನಲ್ಲಿ ಕುಳಿತು ಎಕ್ಸ್ಪ್ರೆಸ್ಸೋ ಲಾರ್ಜ್ ಹೀರುತ್ತಾ ಪೌಲ್ ಕೊಹೆಲೋನ ಬ್ರಿಡಾ ಓದುತ್ತಾ ಕೂರುವುದು ಚಟವಾಗಿಬಿಟ್ಟಿದೆ. ನಾನೋದಿದಮೇಲೆ ನಿಂಗೂ ಕೊಡುತ್ತೇನೆ ನೀನೂ ಓದು. ನಲ್ವತ್ತೈದು ವರ್ಷದ ವ್ಯಕ್ತಿಯೊಬ್ಬ 21 ವರ್ಷದ ಹುಡುಗಿಯಲ್ಲಿ ಆಸಕ್ತನಾಗುತ್ತಾನೆ. ಆ ಹುಡುಗಿ  ಜೀವನದ ಅರ್ಥ ಹುಡುಕಿಕೊಂಡು ಹೊರಡುತ್ತಾಳೆ. ಅವನು ಮತ್ತೇನನ್ನೋ ಹುಡುಕುತ್ತಿರುತ್ತಾನೆ. ಅವರಿಬ್ಬರ ಸಮಾಗಮದಲ್ಲಿ ಅಂಥದ್ದೇನೂ ನಡೆಯುವುದಿಲ್ಲ ಎಂದು ಅನ್ನಿಸುವ ಹೊತ್ತಿಗೇ, ಮತ್ತೆಷ್ಟೋ ಪ್ರಶ್ನೆಗಳು ಎದುರಾಗುತ್ತವೆ. ಅವುಗಳಿಗೆ ಉತ್ತರ ಸಿಕ್ಕಿತು ಎಂದುಕೊಳ್ಳುತ್ತಲೇ ಪ್ರಶ್ನಾತೀತರಾಗುತ್ತೇವೆ
ಅವತ್ತು ನಿನ್ನ ಬೀಳ್ಕೊಟ್ಟು ರೂಮು ಸೇರಿದಾಗ, ನನ್ನ ಕೆಂಪು ಕುತ್ತಿಗೆಯನ್ನ ಕಂಡ ಅಕ್ಕನ ಕಣ್ಣ ತುಂಬ ಪ್ರಶ್ನೆಗಳು. ರಾಕ್ಷಸ ಹಾಗಾ ಕಚ್ಚುವುದು? ಅವಳಿಗೆ ಅನುಮಾನ ಬಂದಿದೆ ಹೇಳಿಬಿಡಲೇನೋ? ಅವಳೇನು ಪ್ರೀತಿದ್ವೇಷಿಯಲ್ಲ. ನೀನು ಹು ಅಂದರೆ, ಮುಂದಿನಸತಿ ಬರುವಾಗ ಅಕ್ಕನನ್ನ ಕರೆದುಕೊಂಡು ಬರುತ್ತೇನೆ. ಹೊಸ ಟೀ ಶರ್ಟ್ ಹೇಗಿದೆ? ಇಟ್ಟು ಪೂಜೆ ಮಾಡಬೇಡ ಆಫೀಸಿಗೆ ಹಾಕಿಕೊಂಡು ಹೋಗು.
ನಿನ್ನ
lovesick eyes

‍ಲೇಖಕರು avadhi

January 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

22 ಪ್ರತಿಕ್ರಿಯೆಗಳು

 1. neelanjala

  ಸಿರಿದು ಹೊಸ ಬರಹ ಅಂತ ಖುಷಿಯಿಂದ ಓದಿದೆ, ಕನ್ ಫ್ಯೂಸ್ ಆಗಿ ಹೋದೆ. ಏನಿದು !! ಎಲ್ಲಿಂದ ಎಲ್ಲೆಲ್ಲಿಗೋ ಹಾರಿ ಹೋಯ್ತು, ಹುಡುಗು ಮನಸ್ಸಿನ ತರಹ, ….
  ಹೀಗೆ ಹೇಳಿದೆ ಅಂತ ಬೇಸರಿಸಬೇಡಿ, ನೀವು ಎನ್ ಬರೆದ್ರೂ ನಾನು ಓದುತ್ತೇನೆ 🙂

  ಪ್ರತಿಕ್ರಿಯೆ
 2. sreelatha iyengar

  amma thayi iga nange nanenu sadhsilvalla antha koriyak shuru aythu kane ; k ivatthu sadhne andre yenu antha appan eli artha madkondu atleast 2010 baro ashthottige one sep towards sadhne hathana antha plan madthidini 🙂 wt do u say?:) nice baraha 🙂 keep writing 🙂

  ಪ್ರತಿಕ್ರಿಯೆ
 3. ಅಜಯ್

  ಈ ಕಾಫಿ ಡೇ, ಇಂಗ್ಲೀಷ್ ಕಾದಂಬರಿ, ಪದ್ಯ ಎಲ್ಲಾ ಸೇರಿಸಿ ಬರೆಯುವುದು ಒಂದು ರೀತಿಯ ಚಟವಾ? ಪಾಪ, ಹಿಂದಿನವರೆಲ್ಲಾ ಕಾಫಿ ಡೇ ಇಲ್ಲದೇ ಎಷ್ಟು ಕಷ್ಟ ಪಟ್ಟಿರಬಹುದಲ್ವಾ?!

  ಪ್ರತಿಕ್ರಿಯೆ
 4. Shiva

  vaastavada horagina baraha- istavaagalilla. ajay ge sahamathavide.
  Coffi day na Costly Lifestyle, English kadambri nimmma baragaLalli pade pade kaNsitaa ide. Ekathanathe.

  ಪ್ರತಿಕ್ರಿಯೆ
 5. ಸಾತ್ಯಕಿ

  ತುಂಬ ಸೊಗಸಾದ ಪತ್ರ. ಕಾಫಿಡೇ ಬಗ್ಗೆ ಕೊರಗುವವರಿಗೊಂದು ಕಿವಿ ಮಾತು. ಆಯಾ ಕಾಲಕ್ಕೆ ಅಡ್ಡಾಗಳು ಬದಲಾಗುತ್ತಾ ಹೋಗುತ್ತವೆ. ಒಂದು ಕಾಲದಲ್ಲಿ ಹೊಳೆತೀರ, ಸೇತುವೆ, ಕಟ್ಟೆ ಬಳಗ, ಶೆಟ್ಟರ ಅಂಗಡಿ, ಭಟ್ಟರ ಹೊಟೆಲು ಇತ್ತು. ಈಗ ಕಾಫಿಡೇ, ಬರಿಸ್ತಾಗಳು ಬಂದಿವೆ. ಮೀಟಿಂಗ್ ಜಾಯಿಂಟ್ ಬಗ್ಗೆ ಕಳವಳ ಯಾಕೆಂದು ಅರ್ಥವಾಗುತ್ತಿಲ್ಲ.
  ಸಿರೀ, ನಿನ್ನ ಲೇಖನ ತುಂಬಾ ಚೆನ್ನಾಗಿದೆ. ಥ್ಯಾಂಕ್ಯೂ

  ಪ್ರತಿಕ್ರಿಯೆ
 6. ಅಜಯ್

  sheelatha iyengar, ಭಾವನೆಗಳೇ ಮುಖ್ಯ ಆಗಿದ್ರೆ ಅದನ್ನ ಸುಮ್ನೆ ಕಾಫಿ ಕುಡಿತಾ, ಕನ್ನಡ ಅಥವಾ ಭಾಷೆ ಉಲ್ಲೇಖವಿಲ್ಲದ ಕಾದಂಬರಿ ಓದುತ್ತಾನೂ ಹೇಳಬಹುದಿತ್ತಲ್ವಾ?
  ಕೆಳಗೆ ಸುಶ್ಮಾ ಅವರು ಹೇಳಿದ್ದು ನೋಡಿ ಗೊತ್ತಾಗತ್ತೆ.
  for your information:
  boast= to speak with exaggeration and excessive pride
  ಇದನ್ನೂ ನೋಡಿ
  http://en.wikipedia.org/wiki/Espresso
  🙂 🙂

  ಪ್ರತಿಕ್ರಿಯೆ
 7. Sunil

  Americadavrigoo alu baruttante….
  ——————————————
  ಸಿರಿವಂತೆ,
  ಚೆನ್ನಾಗಿ ಬರ್ದಿದೀರ.
  ಹೃದ್ಯವಸ್ತು. ವಿಹಂಗಮ ನಿರೂಪಣೆ.
  ಒಟ್ಟಿನಲ್ಲಿ, ಹೃದಯ ತಟ್ಟುವ ಕುಸುರಿ ಕೆಲಸ 🙂
  “I was in low spirits for all the stupid reasons of my own”….ಅಂತ ಹೇಳಿ ಹಿಂದಕ್ಕೆ ಕರೆದೊದ್ಯ್ದು ..”ಮಳೆ” ಅಂತ ಆರಂಭಿಸಿ ….ತಲ್ಲನಗೊಲಿಸಿಬಿಡುವ ಭಾವಗಳ ಬಿರುಮಳೆ ಸುರಿಸಿದಿರಿ .ಅಭಿನಂದನೆಗಳು 🙂
  ಬದುಕಿನ ಮಗ್ಗುಲುಗಳಲ್ಲಿ ಒಮ್ಮೊಮ್ಮೆ ಭಯಾನಕ ಬೇಸರ ಒಂಟಿತನಗಳು ಕಾಡುತ್ತವೆ ಆದರೂ ಅಂತ
  ಸಂಧರ್ಭದಲ್ಲಿಯು ಇಂಥ ಪದ್ಯ ನೆನಪಾಗಿದ್ದು ವಿಶೇಷವೇ ಹೌದು .
  ಸಾಧನೆಯ ಹಾದಿಯನ್ನ…..ಮುಖ್ಯವೋ ಅಮುಖ್ಯವೋ ,ಸಾದ್ರುಶವೋ ಅಸದ್ರುಶವೋ ,
  ಗಮನರ್ಹವೋ ಕ್ಶುಲ್ಲಕವೋ ,ಒಟ್ಟಿನಲ್ಲಿ ಯಾವ ಮಂಜೂ ಶಾಶ್ವಾತವಾಗಿ ಮುಚ್ಚಬಾರದು .ಹಾಗೆಯೇ
  ಸಿಂಹಾವಲೋಕನ …ಅಗತ್ಯ ಮತ್ತು ಅನಿವಾರ್ಯ ಕೂಡ .ಈ ದೃಷ್ಟಿಯಲ್ಲಿ ನೋಡಿದರೆ ….
  ಅವನಿಲ್ಲ ಅನ್ನೋ ನೋವಿನಲ್ಲಿ ,ಭೀತಿ ತರುವ ಭಯೋತ್ಪಾದಕರ ನೆನಪಿನಲ್ಲಿ ,ತನ್ನಲ್ಲೇ ಅರ್ಥವಾಗದ
  ಕಳವಳಗಳ ನಡುವೆಯೂ ಆ ಹುಡುಗಿಗೆ ಇಲ್ಲಿತನಕ ನಡೆದ ಹಾದಿ ,ಸಾಧನೆಗಳ ಬಗ್ಗೆ ಯೋಚನೆ ಬಂದದ್ದು ,ಸಾಧನೆಗಳ ‘ನಿಜ ‘ ಅರ್ಥಕ್ಕೆ ಮನಸ್ಸು ತದಕಾದಿದ್ದು ,ಯಾರೇ ಅಲ್ಲಗಳೆದರೂ ಅಳುಗಿಸಲಾಗ ” ಪ್ರೀತಿ ” ಎಂಬ ಭಾವ ಸುತ್ತುವರೆದಿದ್ದು
  ಎಲ್ಲ ಅಧ್ಭುತ ಅನ್ನಿಸುತ್ತೆ .
  ಅ ಹುಡುಗಿ ಮನಸಿಗೆ ನನ್ನ ಸಲಾಂ .
  Idelladara jotege….”stupid reasons…” anta besarakke daariyaada kaaranagalannu “gurutisiruvudu” arthapoorna
  annisutte……besara taruva yaavude bhaavane,ghatane,kaaranagala teevrateyannu haagoo swaroopavannu manassu ariyaballudaadare anthavugalinda bega horabarabahudu annisutte :)…aa hudugi ee vishayadalloo geddidaale:)
  hmmm……”atankavanna niraakarisuva dhaira maatra illa” annuvalli hudugiya bhaavapramaanikate vyaktavaagutte 🙂 ishta aagutte 🙂
  ottinalli chenadada baraha…..:)…gari gari preetiya anubhavada jotege…illi tanaka en maadidivi anta chintanegoo hachchide 🙂
  Geleyare, coffee day….english baraha….ella ekataanate annisiddu yaakenta gottaglilla….ekataanate illada
  kelasa,vastu,bhaava annodenaadroo idya jagattalli??? matte matte kaanuva vastugalalle vidha vidha achchari,nityanootana saoundarya tumbirutante….nodoke prayatna padona……lets enjoy…..:-) by the way coffee
  dayli,costly life styleli, bhaavanegale illava? americadavrigoo alu baruttante…ha ha ha 🙂 🙂
  But…nange title yako ishta aaglilla.
  Haagene aarambhadinda antyadavaregoo odidmele….yaavdo ondu angle li nange “bhungi” jump maadida
  haagaytu….yavdo ettradalli ondashtu hottu iddante..iddakkiddante kelage tallalpattante…..yaakopa.
  Brita iri,
  shubhavaagali.
  Sunil.

  ಪ್ರತಿಕ್ರಿಯೆ
 8. Veeresh

  ಸುರಿವ ಭಾವನೆಗಳಿಗೆ,ಹರಿವ ನೀರಿಗೆ ಊಹುಂ ಯಾವುದು ಅಡ್ಡ ಬರುವುದಿಲ್ಲ. ಇಂಗ್ಲಿಷ್ ಕಾದಂಬರಿಗಳಲ್ಲಿ ಬರುವ ಭಾವಗಳನ್ನ ನಮ್ಮ ಭಾವನೆಗಳೊಡನೆ ಮಿಲನಗೊಳಿಸಿ ಮಗದೊಂದು ಎತ್ತರದ ಭಾವವನ್ನ ಕಥೆಯು ಸೃಷ್ಟಿಸುತ್ತಿರುವಾಗ ದಿಶೆ ಬದಲಿಸುವ ಕಾಫಿ ಡೇಯಾ ಅನಗತ್ಯ ಚರ್ಚೆ ಏಕೆ? -ವೀರೇಶ್

  ಪ್ರತಿಕ್ರಿಯೆ
 9. sreelatha iyengar

  odovaaga bhavanegallana vyaktha padisokke avru coffedaynu english kadambrino thogondirthare adu avarige yelli kuthaga baavane ukkuthe ansirutto aya jaga vyaktha padisthare siri avrege coffe day li kuthaga baavanegala mahaapura hriyutte annisbhodu adanna adambarakke barithare ankolodu thumbaa ne silly:)one more thing katheli yavude pride agli exaggeration agli kanisthilla matte adanna boasting antha yak anthidiro thilitilla;nang gothiro prakara spelling f noun can be written in ny f the suitable ways…. nivu espresso anno noun itkondu exaggrate madthidira andre its clear u r searching for negative in her:):)”life wid out critisism is not worth living”

  ಪ್ರತಿಕ್ರಿಯೆ
 10. ಅಜಯ್

  ಸುನಿಲ್, ಅಮೆರಿಕದಲ್ಲಿ ಇರುವವರಿಗೂ ಅಳು ಬರತ್ತೆ ಹೌದು. ಆದ್ರೆ ಅಳು ಬಂದಾಗ್ಲೆಲ್ಲಾ ಪದೆ ಪದೇ ನಾನು ’ಅಮೆರಿಕದಲ್ಲೇ ಕೂತು ಅಳ್ತಿದೀನಿ’ ಅಂತ ಹೇಳಿಕೊಳ್ಳೋದು ಬೇಕಾ? 🙂 ಶ್ರೀಲತಾ, ಕಾಫಿ ಡೇನಲ್ಲಿ ಕೂತು ಇಂಗ್ಲೀಷ್ ಕಾದಂಬರಿ ಓದುವಾಗ ಮಾತ್ರ ಭಾವನೆಗಳು ತುಂಬಿ ಹರಿಯೋದು ಅಂತ ಆದರೆ ಆ ಹುಡುಗಿಗೆ ಕಾಫಿ ಡೇ ಅಷ್ಟು ಅಭ್ಯಾಸ ಇರಬೇಕು ಅಂತಾಯ್ತು. ಅಂದಮೇಲೆ espresso ಕೂಡ ಚೆನ್ನಾಗಿ ಗೊತ್ತಿರಬೇಕಲ್ವಾ 🙂 ಇಲ್ಲವಾದರೆ ಬೇರೆ ಕಡೆ ಇದ್ದಾಗಲೂ ಭಾವನೆಗಳು ಬರಬೇಕು. ಹೋಗಲಿ ಬಿಡಿ. life wid out critisism is not worth living 🙂
  nice writing mruganayani.

  ಪ್ರತಿಕ್ರಿಯೆ
 11. shreegiri

  The term Expresso can refer to:
  * Expresso (film) – a short English comedy film
  * Expresso (Portuguese newspaper) – a Portuguese newspaper
  * Expresso spreadsheet – a spreadsheet community
  * Expresso (fashion) – a fashion brand that joined the Fair Wear Foundation
  * An alternate spelling of espresso
  * A trim package for Plymouth automobiles in the late 90s.
  * Espresso An alternate spelling of espresso .ಅಂದ ಮೇಲೆ ಅಷ್ಟೆಲ್ಲಾ ಗಲಾಟೆ ಯಾಕೋ ಗೊತ್ತಾಗ್ತಿಲ್ಲ..

  ಪ್ರತಿಕ್ರಿಯೆ
 12. ಅಜಯ್

  ಕಾಫಿ ಡೇ ಮೆನ್ಯು ಕಾರ್ಡ್ ನೋಡಿಲ್ಲದವರಿಗೆ ಹೀಗೆಲ್ಲಾ ತೊಂದರೆಗಳಾಗುತ್ತೆ.:) bye

  ಪ್ರತಿಕ್ರಿಯೆ
 13. ಅಜಯ್

  ಅದ್ಯಾವ ಸ್ಕೂಲಲ್ಲಿ ಬೇಸಿಕ್ ಇಂಗ್ಲೀಷ್ ಅನ್ನುವ ಹೆಸರಲ್ಲಿ ಕಾಫಿ ಡೇ ಹೆಸರುಗಳನ್ನೆಲ್ಲಾ ಕಲಿಸ್ತಾರೋ ಏನೋ ಪಾಪ ! 🙂
  ಮೊದಲಿಂದಲೇ ಕಾಫಿಡೇ ಸಂಸ್ಕೃತಿ ಚೆನ್ನಾಗಿ ಹುಟ್ಟು ಹಾಕಿ, ಕೂಲಿ ಮನಃಸ್ಥಿತಿ ತುಂಬಿದಾರೆ ಇಂಗ್ಲೀಷ್ ಗ್ರಾಮರ್ ಹೆಸರಲ್ಲಿ ಪಾಪ.
  ಅಲ್ಲಿ ಕಲಿತವರಿಂದ ಹೀಗೆಲ್ಲಾ ಆಗೋದು ಇನ್ನೂ ಇನ್ನೂ ಸಹಜ. 🙂 bye bye

  ಪ್ರತಿಕ್ರಿಯೆ
 14. Cinchu

  Hi All…..
  Manushayanige bhavanegalu sahaja.Adre e time nalle barutte a time nalle barutte anta heloke agalla. Bhavanegalanna namge ista bandaga ba anta kariyoke agalla……………Alu bandaga albeku nagu bandaga nagbeku anta nane yavaglu helta idde…..
  adru ella time nallu nanu bhavanatamkaragoke agalla……..
  coffe day nalle kotre bhavanegalu ukki hariyutte antenu illa….
  adre kelasada vattadadalli bhavanegalanna kadege(pakkadalli) idabekagutte………..
  hage kadegitta bhavanegalu hariyodu namma free time nalli……..
  a time yavagladru agirbahudu……….
  elladru agir bahudu………..Bhavane elli huttitu, elli express aytu annodalla prashne…. A bhavaneyalliro bhava enu annodanna artha mado beku annode nanna Bhavane.

  ಪ್ರತಿಕ್ರಿಯೆ
 15. Kiran Shetty

  ಈ ಲೇಖನವನ್ನು ಬರೆದ ನಾಲ್ಕು ವರ್ಷದ ನಂತರ ನಾನು ಓದುತಿದ್ದೇನೆ ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: