ಹ್ಯಾಟ್ಸ್ ಆಫ್ ಟು ಮಣಿಕಾಂತ್..

ಸುಧೀಂದ್ರ ಬುದ್ಯ
ಇಲ್ಲಾ.. ಈ ಕಾರ್ಯಕ್ರಮಕ್ಕೆ ಹೋಗಲೇ ಬೇಕು ಎಂದು ಮಣಿಕಾಂತ್ ರ ಆಹ್ವಾನ ನನ್ನ ಇನ್ ಬಾಕ್ಸ್ ನಲ್ಲಿ ಕೂತಾಗಲೇ ನಿಶ್ಚಯಿಸಿಬಿಟ್ಟಿದ್ದೆ. ಬೆಂಗಳೂರಿನ ವಿಪರೀತ ಚಳಿ, ಅದರ ಪರಿಣಾಮವಾಗಿ ಸೋರುತ್ತಿರುವ ಮೂಗು, ಕಟ್ಟಿದ ಗಂಟಲು, ಒಂದು ಸಣ್ಣ ಜ್ವರದಂತಹ ಯಾತನೆ, ಇಷ್ಟರ ಮಧ್ಯೆ ಕಚೇರಿಯ ವಿಪರೀತ ಕೆಲಸ ಎಲ್ಲದರಿಂದ ದೇಹ ಮೂರ್ನಾಲ್ಕು ದಿನ ಜರ್ಜರಿತವಾಗಿ ಹೋಗಿತ್ತು. ಮದ್ದೂರಿಗೆ ಹೋಗಿ ಅಮ್ಮನ ಹಾರೈಕೆಯಲ್ಲಿ ಒಂದೆರಡು ದಿನ ಕಳೆದು ಬಂದರೆ ಎಲ್ಲವೂ ಸರಿಹೋದಿತೆಂದು ಅನ್ನಿಸಿತ್ತು. ಆದರೆ ಮಣಿಕಾಂತರ ಆಹ್ವಾನ ಬೆಂಗಳೂರಿನಲ್ಲಿಯೇ ಉಳಿಯುವಂತೆ ಮಾಡಿತು
ಹೆಸರು ಮಣಿಕಾಂತ್. ಓದಿದ್ದು ಇಂಜಿನಿಯರಿಂಗ್, ಕೈ ಹಿಡಿದದ್ದು ಪತ್ರಿಕಾರಂಗ, ಪಳಗಿದ್ದು ಶಾಮರಾಯರಂತಹ ಪತ್ರಿಕಾರಂಗದ ಭೀಷ್ಮರ ಹತ್ತಿರ. ನಂತರ ಪತ್ರಿಕಾ ಪ್ರಪಂಚದ ಅನೇಕ ದಿಗ್ಗಜರ ಸಹವಾಸ. ವಿಶ್ವೇಶ್ವರ ಭಟ್ ರ ಸಾರಥ್ಯದ ವಿಜಯಕರ್ನಾಟಕದಲ್ಲಿ ಕೆಲಸ. ಊಹುಃ ಇಷ್ಠೇಲ್ಲಾ ಹೇಳಿದರೂ ಮಣಿಕಾಂತ್ ಎಂದರೆ ಯಾರು ಎಂದರೆ ಕೆಲವರಿಗೆ ಪ್ಲಾಷ್ ಆಗುವುದೇ ಇಲ್ಲ. ಅದೇ ಸಿಂಪ್ಲಿಸಿಟಿ ಪೇಜಿನ ಮಣಿಕಾಂತ್, ಉಭಯ ಕುಶಲೋಪರಿಯ ಮಣಿಕಾಂತ್, ಅಮ್ಮ ಹೇಳಿದ ಎಂಟು ಸುಳ್ಳಿನ ಮಣಿ, “ಹಾಡು ಹುಟ್ಟಿದ ಸಮಯ” ಅಂಕಣದ ಅಂಕಣಕಾರ ಮಣಿಕಾಂತ್ ಎನ್ನಿ ಎಲ್ಲರಿಗೂ ಅರ್ಥವಾಗಿಬಿಡುತ್ತದೆ. ಮಣಿಕಾಂತ್ ಪರಿಚಯವಾಗುವುದೇ ಅವರ ವಿಸಿಷ್ಠ ಬರವಣಿಗೆಯ ಶೈಲಿಯಿಂದ. ಇನ್ನುಳಿದಂತೆ ಅವರ ಓದು, ನೌಕರಿ ಎಲ್ಲವೂ ಗೌಣ.
ನನಗೇನೂ ಮಣಿಕಾಂತ್ ಅಷ್ಠೇನೂ ಪರಿಚಯದವರಲ್ಲ. ಹಾಗೊಮ್ಮೆ ಹೀಗೊಮ್ಮೆ ಹಾಯ್ ಎಂದಿದ್ದು, ನಮಸ್ಕಾರ ವಿನಿಮಯ ಮಾಡಿಕೊಂಡಿದ್ದು, ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಚಾಟಿಸಿದ್ದು ಬಿಟ್ಟರೆ ಖಾಸ ಎಂಬಂತಹ ಸ್ನೇಹವೇನಿಲ್ಲ. ಮಣಿಕಾಂತ್ ಮಂಡ್ಯದವರೆಂಬುದು ಗೊತ್ತಿತ್ತು. ನನ್ನದೇ ಕಾಲೇಜಿನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಪದವಿ ಗಳಿಸಿದವರೆಂಬುದನ್ನೂ ಕೇಳಿದ್ದೆ. ಆದ್ದರಿಂದಲೇ ಒಂದೆರಡು ಬಾರಿ ಅವರೊಂದಿಗೆ ಚಾಟಿಸಿದ್ದೆ. ಆದರೆ ಇಂದಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅವರ ಹಾಡು ಹುಟ್ಟಿದ ಸಮಯ ಪುಸ್ತಕದ ಲೋಕಾರ್ಪಣೆಯ ಸಮಾರಂಭಕ್ಕೆ ಹೋಗಿ ಬಂದಾಗಿನಿಂದ ನನ್ನದೇ ಊರಿನವರು, ನನ್ನದೇ ಕಾಲೇಜಿನಲ್ಲಿ ಓದಿದವರು, ಒಳ್ಳೆಯ ಬರಹಗಾರರು ಎನ್ನುವುದಕ್ಕಿಂತ ಹೆಚ್ಚಿನ ಗೌರವ, ಸ್ನೇಹ ಮಣಿಕಾಂತರ್ ಬಗ್ಗೆ ಮೂಡಿದೆ.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಟ ರಮೇಶ್ ಅರವಿಂದ ಒಂದು ಮಾತನ್ನೇಳಿದರು. ” ಪೆನ್ನಿಗೆ ಕೇವಲ ಶಾಹಿ ತುಂಬಿಕೊಂಡು ಬರೆದರೆ ಒಳ್ಳೆಯ ಲೇಖನವಾಗುವುದಿಲ್ಲ. ಒಂದು ಒಳ್ಳೆಯ ಲೇಖನವಾಗಬೇಕಾದರೆ ಬೆವರು ತುಂಬಿಕೊಂಡು ಬರೆಯಬೇಕು”. ರಮೇಶರ ಮಾತಿನ ಅರ್ಥ ಒಬ್ಬ ಲೇಖಕನ ಪರಿಶ್ರಮ ಅವನ ಅತ್ಯುತ್ತಮ ಲೇಖನದ ಹಿಂದೆ ಇರಲೇಬೇಕು ಮತ್ತು ಇದ್ದಾಗ ಮಾತ್ರ ಅದು ಅತ್ಯುತ್ತಮವಾಗಲಿಕ್ಕೆ ಸಾಧ್ಯ ಎಂಬುದಾಗಿತ್ತು. ಮಾತು ಮುಗಿಸುವ ಮುನ್ನ ರಮೇಶ್ ಹೇಳಿದ್ದು ” ಎಷ್ಠೆಲ್ಲಾ ಅಡೆತಡೆ ಗಳಿದ್ದರೂ ಮಣಿಕಾಂತ್ ಗೆ ಈ ರೀತಿ ಬರೆಯಲು, ಚಟುವಟಿಕೆಯಿಂದಿರಲು ಹೇಗೆ ಸಾಧ್ಯವಾಗುತ್ತದೆ? ಬದುಕಿದರೆ ಜೀವನದಲ್ಲಿ ಒಂದು ದಿನವಾದರೂ ಮಣಿಕಾಂತ್ ರ ತರಹ ಬದುಕಬೇಕು”
ನಂತರ ಅನಂತ ಚಿನಿವಾರರ ಪುಸ್ತಕ ವಿಶ್ಲೇಷಣೆ, ವಿಶ್ವೇಶ್ವರ ಭಟ್ ರ ಹಾಸ್ಯ ಮಿಶ್ರಿತ ಮಾತು. ಸುನಿತ, ಕಸ್ತೂರಿ ಶಂಕರ್, ಅರ್ಚನ ಉಡುಪ, ಪಂಚಮ್ ಹಳಬಂಡಿ ಮುಂತಾದವರು ಹಾಡಿದ ಮಧುರ ಗೀತೆಗಳು, ಎಲ್ಲವೂ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತ್ತು. ಅಲ್ಲಿ ನೆರದಿದ್ದವರಿಗೆ ಕರ್ಣಾನಂದ. ವೇದಿಕೆಯೂ ಅಷ್ಠೇ ಸುಂದರವಾಗಿ ಸಿದ್ದವಾಗಿತ್ತು. ಒಟ್ಟಿನಲ್ಲಿ “ಹಾಡು ಹುಟ್ಟಿದ ಸಮಯ” ಪುಸ್ತಕ ಬಿಡುಗಡೆ ಸಮಾರಂಭದ ಆ ಮೂರ್ನಾಕು ತಾಸು ನನ್ನ ಮಟ್ಟಿಗಂತು “ಹಾಡು ಮನಮುಟ್ಟಿದ ಸಮಯವಾಗಿತ್ತು”. ಮಣಿಕಾಂತ್ ಬೇರೆಯದೇ ಕಾರಣಕ್ಕೆ ಇನ್ನೂ ಹತ್ತಿರವಾಗಿದ್ದರು. ಅಂದಹಾಗೆ ಮಣಿಕಾಂತ್ ಕೂಡ ಅವರ ಬರಹಗಳಲ್ಲಿ ಬರುವ ಸಾಧಕರಂತೆ ತಮ್ಮ ಒಂದು ನ್ಯೂನ್ಯತೆಯನ್ನು ಸವಾಲಾಗಿ ಸ್ವೀಕರಿಸಿ, ಆ ಬಗ್ಗೆ ಕೊರಗುತ್ತಾ ಕುಳಿತು ಕೊಳ್ಳದೆ, ಕಾನ್ಫಿಡೆನ್ಸ್ ಕೈಚೆಲ್ಲದೆ ಈ ಎತ್ತರಕ್ಕೆ ಬೆಳೆದವರು. ಆ ನ್ಯೂನ್ಯತೆಯ ಬಗ್ಗೆ ವಿಶ್ವೇಶ್ವರ ಭಟ್ ವಿಷಾದದಿಂದಲೇ ಪ್ರಸ್ಥಾಪ ಮಾಡದಿದ್ದರೆ ಅಲ್ಲಿ ನೆರದಿದ್ದ ಯಾರಿಗೂ ಅದರ ಸುಳಿವೇ ಸಿಗುತ್ತಿರಲಿಲ್ಲ, ಅಷ್ಠರ ಮಟ್ಟಿಗೆ ಮಣಿಕಾಂತ್ ಕ್ರಿಯಾಶೀಲ ವ್ಯಕ್ತಿ.
ಆ ಕಾರ್ಯಕ್ರಮದ ನಂತರ ಮಣಿಕಾಂತ್ ಮತ್ತಷ್ಠು ಆಪ್ತ ಎನಿಸುತ್ತಿದ್ದಾರೆ… ಹ್ಯಾಟ್ಸ್ ಆಫ್ ಟು ಮಣಿಕಾಂತ್

‍ಲೇಖಕರು avadhi

January 13, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. Ganesh Shenoy

    Mani is really doing a fabulous job by digging into our Kannada film land’s geology and bringing for us from the mines of its memories the silvers, gold, and diamonds in the form of these unforgettable and ever-lovable and adorable songs. Hats off Mani! Do keep it up! We need and expect more from your excavations. The fact that he had made us impossible to know that he had a deficiency through his work and self-presentation came as a pleasant shock to me. Now can say to somebody pointing at Mani “look here is a jewel which refused to disbelieve itself as one just because a part of it was slightly broken and continued to shine and give through its life and writings inspiration and written melody to all who took it up and read it fully.”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: