ಆದರೆ ಇದು ಷಾಕಿಂಗ್ ನ್ಯೂಸ್..

ಬ್ರೇಕಿಂಗ್ ನ್ಯೂಸ್ ಈಗ ತೀರಾ ತೀರಾ ಕಾಮನ್. ಆದರೆ ಷಾಕಿಂಗ್ ನ್ಯೂಸ್ ನಮಗೆ ಗೊತ್ತೇ ಇಲ್ಲ. ಅಂತಹದ್ದರಲ್ಲಿ ಜೋಗಿ ಇನ್ನಿಲ್ಲದ ಶಾಕ್ ನೀಡಿದ್ದಾರೆ. ಜೋಗಿಮನೆ ಬ್ಲಾಗ್ ನ ‘ಡೆಲಿಟ್’ ಬಟನ್ ಒತ್ತಿ ಸೀದಾ ನಡೆದು ಹೋಗಿದ್ದಾರೆ. ಮೀರಾಳನ್ನು ತೊರೆದು ಹೋದ ಆ ಗಿರಿಧರ ಪ್ರಭುವಿನಂತೆ.

ಜೋಗಿಗೂ ಒಂದು ಮನೆಯೇ ಎಂದು ಎಷ್ಟೊಂದು ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ನಿಜ ಅನಿಸಿತೇನೋ ಈ ಜೋಗಿಗೂ. ಯಾರ ಗೊಡವೆ ನನಗೇಕೆ ಎಂಬಂತೆ ಮನೆ ತೊರೆದು ನಿಜ ಜೋಗಿ ಜಂಗಮರಾಗಿ ಹೋಗಿದ್ದಾರೆ.

ಮೊನ್ನೆ ಮೊನ್ನೆ ಅವರು ೧೫ ದಿನ ಇಲ್ಲ ಎಂದಾಗ ‘ಅವಧಿ’ ಗುರ್ ಎಂದಿತ್ತು. ಓದುಗರೂ ಸಹಾ ನಮ್ಮ ದನಿಗೆ ತಮ್ಮ ದನಿ ಸೇರಿಸಿದ್ದರು. ಜೋಗಿ ನಡೆದೇ ಹೋದರು.

ಆ ಮೀರಾಳ ಆರ್ತನಾದ ಇಲ್ಲಿದೆ ಜೋಗಿಗಾಗಿ ಹಂಬಲಿಸುತ್ತಾ-

 

ತೊರೆದು ಹೋಗದಿರೊ ಜೋಗಿ ಅಡಿಗೆರಗಿದ ಈ ದೀನಳ ಮರೆತು ಸಾಗುವೆ ಏಕೆ ವಿರಾಗಿ

ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷೆ ಎನಗೆ
ನಿನ್ನ ವಿರಹದಲಿ ಒರೆದು ಹೋಗಲು ಸಿದ್ಧಳಿರುವ ನನಗೆ

ಹೂಡುವೆ ಗಂಧದ ಚಿತೆಯ ನಡುವೆ ನಿಲುವೆ ನಾನೇ
ಉರಿ ಸೋಕಿಸು ಪ್ರಭುವೆ ಚಿತೆಗೆ ಪ್ರೀತಿಯಿಂದ ನೀನೇ

ಉರಿದು ಉಳಿವೆನು ಬೂಧಿಯಲಿ ಲೇಪಿಸಿಕೋ ಅದ ಮೈಗೆ
ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ

 

‍ಲೇಖಕರು avadhi

April 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. ಶೆಟ್ಟರು (Shettaru)

  ಡಿಲಿಟ್ ಎನೂ ಒತ್ತಿಲ್ಲ ಜೋಗಿ, Older Posts ಮೇಲೆ ತಮ್ಮ ಇಲಿಯನ್ನು ಒತ್ತಿದರೇ, ಅವರ ಹಳೆಯ ಲೇಖನಗಳನ್ನು ಓದಬಹುದು ಆದ್ರೆ ಅವರಾಗೆ ಬರಿದೆ ಹೋಸತ್ಯಾವೂ ಮೂಡಲಾರದು, ಅದೇ ದುಃಖ.

  ಪ್ರೀತಿಯಿರಲಿ

  ಶೆಟ್ಟರು, ಮುಂಬಯಿ

  ಪ್ರತಿಕ್ರಿಯೆ
 2. sritri

  ಕೇಳಿ ಬೇಸರವಾಯಿತು. ಯಾಕೆ? ಜೋಗಿಯವರು ಬ್ಲಾಗ್ ಶುರು ಮಾಡಿದಾಗ ಸಂತೋಷವಾಗಿತ್ತು. ಎಲ್ಲಾ ಖುಷಿಗಳಿಗೂ ಒಂದು ಕೊನೆ ಉಂಟು ಅಂತ ಈಗ ಮನವರಿಕೆ ಆಯಿತು 🙁

  ಪ್ರತಿಕ್ರಿಯೆ
 3. mayura

  Very sad development. I will miss Jogi’s blog which was such a refreshing change from other blogs that I keep reading.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: