ಹ್ವಾಯ್ ನನ್ ಗುರ್ತ್ ಆಯಲ್ಯೇ..?

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಎಂಬ ಜೋಗದಗುಂಡಿ ಕವಿತೆ ಕುಂದಾಪುರದವರ ನಾಲಿಗೆಯಲ್ಲಿ ಹೇಗೆ ಹೊರಳಬಹುದು..
ಇಲ್ಲಿದೆ ಕನ್ನಡದಿಂದ ಕುಂದಾಪ್ರ ಕನ್ನಡಕ್ಕೆ ಮಾಡಿದ ಅನುವಾದ.

ಹುಟ್ಟ್ರೆ ಕುಂದಾಪ್ರದಗೆ ಹುಟ್ಕ್

ಆಡ್ದ್ರೆ ಕುಂದಾಪ್ರ ಕನ್ನಡದಗೆ ಮಾತಾಡ್ಕ್,

ಬದ್ಕಿದ್ ಎತ್ತಿನ ಗಾಡಿ,

ಇದು ವಿಧಿ ಒಡ್ಸುವ ಗಾಡಿ….

ನನ್ ಮಾತ್ನ ನೀವ್ ಮರಿ ಬೇಡಿ…

ಕುಂದಾಪ್ರ ಕನ್ನಡವ ನೀವ್ ಮಾತಾಡಿ

ಕುಂದಾಪುರ ಕನ್ನಡ ಕ್ಕೆ ಇರುವ ಗಮ್ಮತ್ತೆ ಬೇರೆ. ಒಂದು ರೀತಿಯಲ್ಲಿ ಇದು ‘ನಿಮ್ಮೊಡನಿದ್ದೂ ನಿಮ್ಮಂತಾಗದ ..’ ಭಾಷೆ. ತುಳು ನಾಡಲ್ಲಿದ್ದೂ ತುಳು ಗೊತ್ತಿಲ್ಲದ ಊರು. ವಿಜಯರಾಜ್ ಕನ್ನಂತ ಈಗ ಕುಂದಾಪ್ರ ಕನ್ನಡವನ್ನು ಜಗತ್ತಿಗೆ ಹರಡಲು ಸಜ್ಜಾಗಿದ್ದಾರೆ. ವಿಸಿಟ್ ಮಾಡಲೇ ಬೇಕಾದ ಬ್ಲಾಗ್ ಇದು. ಅವರೇ ಬಣ್ಣಿಸಿಕೊಳ್ಳುವ  ಪ್ರಕಾರ ಅವರ ಪರಿಚಯ ಹೀಗೆ-

ಹ್ವಾಯ್ ನನ್ ಗುರ್ತ್ ಆಯಲ್ಯೇ..?

ಹ್ವಾಯ್ ನಮಸ್ಕಾರವೇ…
ನನ್ ಗುರ್ತ್ ಆಯಲ್ಯಾ ಮರಾಯ್ರೆ…
ನಾನಲ್ದೆ ವಿಜಯರಾಜ್ ಕನ್ನಂತ…..
ನಮ್ ಊರ್ ಇಲ್ಲೆ ಸಿದ್ಡಾಪ್ರ ಕಮಲಶಿಲೆ ಬದಿ ಹಳ್ಳಿಹೊಳೆ ಅಂತ
ಇದ್ರಗೆ ಎಂತಾರು ಸ್ವಲ್ಪ ಕುಂದಾಪ್ರ ಕನ್ನಡದಗೆ ಗೀಚುವ ಅಂದೇಳಿ..
ಓದಿ ಲಾಯ್ಕ್ ಇದ್ರೆ ನಂಗೆ ಹೇಳಿ ಅಕಾ…?

ನಂಗಂತೂ ನಮ್ ಕುಂದಾಪ್ರ ಕನ್ನಡ ಕೇಂಡ್ರೆ ಅಷ್ಟಿಷ್ಟ್ ಖುಷಿ ಆಪುದಲ್ಲ ಗೊತ್ತಿತ?

ಅದ್ರಗೂ ಈಗ ಕೆಲ್ಸ ಮಾಡುಕ್ ಅಂತೆಳಿ ಊರ್ ಬಿಟ್ಟ್ ಬೆಂಗ್ಳೂರ್ ಸೇರ್ಕಂಡ್ ಮೇಲೆ ಯಾರೆ ಕುಂದಾಪ್ರದರ್ ಸಿಕ್ರೂ ಅವ್ರನ್ ಒಂದ್ಸಲ ಕುಂದಾಪ್ರ ಕನ್ನಡದಗೆ ಮಾತಾಡ್ಸ್‌ದಿದ್ರೆ ಸಮಾಧಾನವೇ ಆತಿಲ್ಲ. ಬೆಂಗ್ಳೂರಾಗಂತೂ ಬಿಡಿ ಆ ಭಾಷಿ ಈ ಭಾಷಿ ಅಂತೇಳಿ ಎಲ್ಲಾರೂ ಸೇರ್ಕಂಡ್ ಬೆಂಗ್ಳೂರ್ ಕನ್ನಡ ಅಂಬುದ್ ಒಳ್ಳೇ ಕಿಚಿಡಿ ಆದ್ ಕಂಡ್ಮೇಲೆ…ಇನ್ನೂ ಗಮಗಮ ಅಂತೆಳಿ ಪರಿಮಳ್ ಬಪ್ಪ ಕುಂದಗನ್ನಡ ಕೆಮಿ ಮೇಲೆ ಬಿದ್ರೆ ಆಪ್ ಖುಷಿ ಬಾಯ್ಮಾತಗೆ ಹೇಳುಕೆ ಆತಿಲ್ಯೇ..

 

ಕೆಲವ್ರೆಲ್ಲ ಇದ್ರ್ ಕಾಣಿ ಅವ್ರಿಗೆ ಕುಂದಾಪ್ರ ಕನ್ನಡದಗೆ ಮಾತಾಡುಕೆ ನಾಚ್ಕಿ ಆತ್ ಅಂಬ್ರ್. ಅಲ್ಲ ಈ ಬೇರೆ ಭಾಷಿಯರೆಲ್ಲ ಬಂದು ಅವ್ರವ್ರ ಭಾಷೆಯಗೆ ಮಾತಾಡುವತಿಗೆ ನಮ್ ಭಾಷಿ ಮಾತಾಡುಕೆ ನಮ್ಗೆ ಎಂತಕೆ ನಾಚ್ಕಿ ಆಯ್ಕ್ ನೀವೇ ಹೇಳಿ ಕಾಂಬ. ಅವ್ರಿಗೆಲ್ಲ ಆಗ ಇದೇ ಕುಂದಾಪ್ರ ಕನ್ನಡದಗೆ ಎಲಿಮೆಂಟ್ರಿ ಕಲ್ತದ್, ಇದೇ ಕುಂದಾಪ್ರ ಕನ್ನಡದಗೆ ಹೈಸ್ಕೂಲಗೆ ಪಾಠ ಕೇಂಡದ್ ಎಲ್ಲ ನೆನಪೇ ಹೋಯಿತ್ತಾ ಹಂಗಾರೆ? ಒಂದ್ನಾಕ್ ವರ್ಷ ಊರ್ ಬಿಟ್ರ್ ಕೂಡ್ಳೇ ಟುಸ್ ಪುಸ್ ಅಂದೇಳಿ ಇಂಗ್ಲೀಷ್ ಹಾರ್ಸುಕೆ ಕಲ್ತ್ ಕೂಡ್ಲೇ ಹುಟ್ಟಿನ ಲಾಗಾಯ್ತೂ ಆಡ್ಕಂಡ್ ಬಂದ ಭಾಷಿ ನೆನ್ಪ್ ಹೋತ್ ಅಂತಾರೆ ನಾಳಿಗ್ ಇವ್ರ್ ದೊಡ್ ಮನ್‌ಷ್ರು ಅನ್ಸ್ಕಂಬತಿಗೆ ಹೆತ್ ಅಪ್ಪ ಅಮ್ಮನ್ ನೆನ್ಪ್ ಆರು ಇರತ್ ಅಂದೇಳಿ ಏನ್ ಗ್ಯಾರಂಟಿ ಮಾರಾಯ್ರೆ…?

 

ಅದೆಲ್ಲ ಇರ್ಲಿ ಬಿಡಿ… ಇನ್ಮೇಲೆ ಪುರ್ಸೊತ್ತ್ ಸಿಕ್ದಾಗ್ಳಿಕೆಲ್ಲ ಕುಂದಾಪ್ರ ಕನ್ನಡದಗೆ ಎಂತಾರು ಒಂದಿಷ್ಟ್ ಬರುವ ಅಂದೇಳಿ ಮಾಡಿದ್ನೇ… ಓದಿ. ಲಾಯ್ಕ್ ಇದ್ರೆ ನಂಗೆ ಒಂದ್ಮಾತ್ ಹೇಳಿ…

 

ಒಂದ್ ಮಾತ್ ಮಾತ್ರ ನಾವೆಲ್ಲ ನೆನ್ಪಿಟ್ಕಣ್ಕಾದ್ ಅಂದ್ರೆ… ನೀವ್ ಯಾವ್ ಭಾಷಿ ಬೇಕಾರು ಕಲಿನಿ, ಎಲ್ಲಿಗ್ ಬೇಕಾರೂ ಹೋಯ್ನಿ ಆರೆ ನಮ್ ಭಾಷಿ, ಊರನ್ ಮಾತ್ರ ನೆನ್ಪ್ ಬಿಡ್ದಿದ್ರ್ ಸೈ.

 

ಖಂಡಿತಾ ವಿಸಿಟ್ ಮಾಡಿ  

 

  

‍ಲೇಖಕರು avadhi

May 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

  1. Yashoda

    nanganthu nimm math keli kushi ayith. nangu kundpradar sikkare bhari kushi aath. neevu hinge barithe aykani aka

    ಪ್ರತಿಕ್ರಿಯೆ
  2. antarangadaapthaswara

    ಹ್ವಾಯ್ ನನ್ ಹೆಸ್ರ್ ತಪ್ಪ್ ಹಾಕಿರಲೆ ಮರಾಯ್ರೆ…ವಿಜಯಕುಮಾರ ಕನ್ನಂತ ಅಲ್ಲ..ವಿಜಯರಾಜ್ ಕನ್ನಂತ ಮಾರಾಯ್ರೆ

    – ವಿಜಯರಾಜ್ ಕನ್ನಂತ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: