ಅರ್ಪಿಸುವವಳೂ ನಾನೇ..

ಸ್ವಗತ ಸಖ 

ಡಾ. ತಿರುಮಲೇಶ್ 

ಅಂತರ್ಮುಖ ಸ್ವಗತ ಸಂಗಾತವೇ ಪರಮ ಸುಖ
ಅರ್ಪಿಸುವವಳೂ ನಾನೇ
ಆಲಿಸುವವಳೂ ನಾನೇ

ಆಂತರ್ಯೊದೊಳಗಿನ ಅಪಾರ ಸ್ಮರಣೆಗಳು
ಮೆದುಳ ಮುಂಚೂಣಿಯೊಳು
ನಿಂತು ನರ್ತಿಸಿ ಮರೆಯಾಗುವಾಗ
ಮನದೊಳೇಳುವ ತರಂಗಗಳ
ನಾದಾಮೃತ ನನ್ನೊಬ್ಬಳ ಸ್ವತ್ತು

ಅಂಗೈಲಿ ಅಂಗೈ ಬೆರೆಸಿ
ಬೆರಳುಗಳೊಳು ಬೆರಳುಗಳ
ಪೊಸೆದು
ತೋಳ್ತೆಕ್ಕೆಯಲಿ ನನ್ನನಿರಿಸಿ
ಹೆಜ್ಜೆಗುರುತುಗಳನೆಣಿಸುವಂದದಿ
ನನಗವನ ಆನಿಸಿ ಆಶ್ರಯಿಸಿ
ಮುನ್ನಡೆದ ಅಂದಿನ ಯಾನದ
ನೆನಪಿನ ಗಾನ ನನ್ನೊಳಗಿನ
ನರನಾಡಿಗಳೊಳಗೇ ಲೀನ

ಆರಿಗೂ ಕಾಣದು
ಕಾಣ ಬಿಡೆನು
ಜೀವನ ಕಲ್ಯಾಣ ಲೋಕ ಕಲ್ಯಾಣಗಳ ಜಂಜಾಟಗಳೊಳಗೆ
ಎಂದೆಂದೂ ಜಂಟಿಗಳ ಗಂಟುಗಳಲೇ ಬಂದಿಯಿರುವ
ಜೀವ ಒಂಟಿಗೊಂಡ
ಅಮೂಲ್ಯ ಅಸಾಧಾರಣ
ಅಪರೂಪದ ಅವಿಸ್ಮರಣೀಯ
ಕ್ಷಣಗಳ ಅನುಭವಿಸುವುದೇ ಒಂದು ಸುಯೋಗ
ಸತ್ಯ ಸುಂದರ ಸ್ವರ್ಗ
ಅದುವೇ ಸುಖ ಶಾಂತಿ ನೆಮ್ಮದಿಗೆ ರಾಜ ಮಾರ್ಗ….

‍ಲೇಖಕರು avadhi

February 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಭೂತಕಾಲದ ಗುಳಿಕೆನ್ನೆ

ಭೂತಕಾಲದ ಗುಳಿಕೆನ್ನೆ

ರಾಘವೇಂದ್ರ ದೇಶಪಾಂಡೆ ಹುಡುಕುವೆ ನನ್ನನು ಅವರಿವರಲ್ಲಿಸಿಗಬಹುದು ಹೂವಿನ ಗುಚ್ಛಬರುವದೋ...! ನೆನಪುಉಕ್ಕಿ ಹರಿಯುವದು ಸಾಗರ ಅಕ್ಷಿಯಂಗಳದಲಿ...

ಜೇನು ಸೈನ್ಯ ಮತ್ತು ನಾನು

ಜೇನು ಸೈನ್ಯ ಮತ್ತು ನಾನು

ಸಾವಿತ್ರಿ ಹಟ್ಟಿ ಶಾಲೆ ಮುಗಿಸಿ ಮನೆಗೆ ಬಂದೆ!ದರುಶನಾರ್ಥಿಗಳು ಕಾಯ್ದು ಸಾಲಾಗಿ ನಿಂತಿದ್ರು!ಕೆಲವರು ಕಿಟಕಿ ಸರಳುಗಳ ಮೇಲೆ!ಕೆಲವರು ಅಡುಗೆಮನೆಯ...

ನೆನಪಿನ ಹೂಜಿ ಜಾರಿ ಬೀಳಲಿ…

ನೆನಪಿನ ಹೂಜಿ ಜಾರಿ ಬೀಳಲಿ…

ಸದಾಶಿವ್ ಸೊರಟೂರು ಪ್ರತಿ ಕನಸಿನಲ್ಲೂ ಮೂಡುವಚಿತ್ರಗಳ ಮೂಲೆಯಲ್ಲಿಢಾಳಾಗಿ ಕಾಣುವವೃತ್ತಾಕಾರದ ಸೀಲುನಿನ್ನದಾ? ನಿನ್ನದೇ ಇರಬೇಕುಯಾರ-ಯಾರದೊ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This