ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ

ಸಿದ್ಧಲಿಂಗಯ್ಯ ಅವರ ‘ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ ಲೇಖನಕ್ಕೆ

ಬಂದ ಪ್ರತಿಕ್ರಿಯೆಗಳು ಇಲ್ಲಿವೆ.

ಸಂವಾದವನ್ನು ಬೆಳೆಸಲು ಮತ್ತೆ ಆಹ್ವಾನ-

20080101544204021

ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ.

ಅವರವರ ಅಭಿಪ್ರಾಯಗಳನ್ನು ಸೂಕ್ತ ಕಾರಣಗಳೊಂದಿಗೆ,
ವೈಯುಕ್ತಿಕ ಅನುಭವ ಕಥನಗಳೊಂದಿಗೆ ಹಂಚಿಕೊಂಡರೆ,
ಮಹತ್ವಪೂರ್ಣವಾಗಿರುತ್ತದೆ.

-ಚಂದಿನ

+++

ಹೀಗಾದ್ರೂ ಮಿಸಲಾತಿ ಸಿಗುತ್ತೆ ಅಂದ್ರೆ ನಾನು ಅಂತರ್ಜಾತಿ ಮದುವೆ ಆಗಲು ಸಿದ್ಧ.

ನನಗಂತೂ ಎಲ್ಲದರಲ್ಲೂ ಫೈಟ ಮಾಡಿ ಸಾಕಾಗಿದೆ, ನನ್ನ ಮಕ್ಕಳಾದರೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಗಾಗಿ ನಂತರ ಸೀಟಗಾಗಿ, ಅಲ್ಲಿಂದ ನೌಕರಿಗಾಗಿ, ಅಲ್ಲಿಂದ ಪ್ರಮೋಷನ್ನಿಗಾಗಿ ಬಡಿದಾಡುವುದು ತಪ್ಪುತ್ತೆ.

ದಯವಿಟ್ಟು ಕ್ಷಮಿಸಿ ಇದು ನನ್ನ ಅನುಭವ, ನಿಮ್ಮ ಅನುಭವ ಮತ್ತು ಅನಿಸಿಕೆ ನನಗಿಂಥ ಬೇರೆ ತರದ್ದು ಇರಬಹುದು.

ಸಿದ್ದಲಿಂಗಯ್ಯನವರ ಯೋಚನೆ ಕಾರ್ಯಗತವಾದರೆ ನನ್ನಂಥ ಎಷ್ಟೋ ಜನಕ್ಕೆ ಸರಕಾರಿ ಕೆಲಸ ಸಿಕ್ಕು, ಸತ್ಯಂ, ರೆಸೇಷನ್, ಆಪ್ಪ್ರೈಸಲ್ ಇವುಗಳಿಂದ ಮುಕ್ತಿ ಸಿಗುತ್ತದೆ, ಆದಷ್ಟು ಬೇಗ ಜಾರಿಗೆ ಬರಲಿ ಎಂಬುದು ನನ್ನ ಹಾರೈಕೆ.

-ಶೆಟ್ಟರು

+++

ಡಾ. ಸಿದ್ದಲಿಂಗಯ್ಯನವರ ಮಾತನ್ನು ನಾನು ಬೆಂಬಲಿಸುತ್ತೇನೆ. ಈ ದೇಶದ ಜನತೆಗೆ ರಾಜಕೀಯ ಸಮಾನತೆ ಮಾತ್ರ ದೊರೆತಿದೆ. ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ ಸಮಾನವಾಗಿ ಹಂಚಿಕೆಯಾಗಿಲ್ಲ. ಜಾತಿ ಪ್ರಜ್ಞೆ ಎಲ್ಲಿಯವರಿಗೂ ಇರುತ್ತದೋ ಅಲ್ಲಿಯವರಿಗೂ ಅದು ದೊರೆಯುವುದೂ ಇಲ್ಲ.

“ಮೇಲ್ಜಾತಿಯವರ ಸ್ಥಾನಮಾನ ಕೇವಲ ಹುಟ್ಟಿನ ಕಾರಣದಿಂದ ಬಂದಿರುವಂಥಾದ್ದು” ಎಂಬ ಡಾ.ಸಿದ್ದಲಿಂಗಯ್ಯನವರ ಮಾತು ಸರಿಯಾಗಿಯೇ ಇದೆ. ಸ್ವಾತಂತ್ರ ನಂತರ ಈ ದೇಶದ ಜನತೆಗೆ ದಕ್ಕಿರುವುದು ಕೇವಲ ರಾಜಕೀಯ ಸಮಾನತೆ ಮಾತ್ರ ಇನ್ನು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದಕ್ಕಬೇಕಿದೆ. ಜಾತಿಯ ಗೀಳು ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರಿಗೂ ಕೆಲವು ಸ್ಥಾನಮಾನಗಳು ಹುಟ್ಟಿನ ಕಾರಣದಿಂದ ದಕ್ಕುತ್ತಲೇ ಇರುತ್ತವೆ.
-ಎವಿಎಂ.ನಾಯರ್

+++

ಎಲ್ಲಾ ಓಕೆ ಈ ವಾಕ್ಯ ಮಾತ್ರ ಯಾಕೆ – “ಹಾಗೆಯೇ ಮೇಲ್ಜಾತಿಯವರ ಸ್ಥಾನಮಾನಗಳು ಕೂಡ ಅವರ ಶ್ರಮದಿಂದ, ಸಾಧನೆಯಿಂದ ಬಂದಿದ್ದಲ್ಲ. ಕೇವಲ ಹುಟ್ಟಿನ ಕಾರಣದಿಂದ ಬಂದಿರುವಂಥಾದ್ದು”

ಎಂಥ ಮಾರಾಯ್ರೆ ಇದಕ್ಕೆ ಅರ್ಥ ಉಂಟಾ??

-ಸಂದೀಪ್ ಕಾಮತ್

+++

ವಿಷಯ ಸರಿ.

ಸಂದೀಪ್ ಮಾತಿಗೆ ಸಹಮತವಿದೆ. ಇನ್ನೂ ಏನೇನು ಉಳ್ಕೊಂಡಿವೆ ಮೀಸಲಾತಿ ಕೊಡೋದಕ್ಕೆ? ಮದ್ವೆಗೆ ಮೀಸಲಾತಿ ಆದ್ಮೇಲೆ ಮುಂದೆ?

-kallare

+++

cr030307shadow_lines011We should hail and stand by Dr.Siddalingayya
with his fight against discreamation based on
class, creed and religion.

Kaligananath Gudadur

+++

ಸಿದ್ದಲಿಂಗಯ್ಯ ಅವರನ್ನೇ ಚರ್ಚೆಗೆ ಆಹ್ವಾನಿಸಿದರೆ ಇನ್ನೂ ಚೆನ್ನಾಗಿರುತ್ತದೆ

-ಸಂಬುದ್ಧ

‍ಲೇಖಕರು avadhi

January 23, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. ಸಿದ್ದಮುಖಿ

  ಕಾಮತ್ ತೆಗೆದಿರುವ ರಾಗ,ಕಲ್ಲಾರೆ ಆಡಿರುವ ವ್ಯಂಗ್ಯ ಮೀಸಲಾತಿ ಬಗೆಗಿನ ಅವರ ಅಸಹನೆ ಎದ್ದು ಕಾಣುತ್ತದೆ. ಮೀಸಲಾತಿ ಎನ್ನುತ್ತಿದ್ದಂತೆ ಮೂಗು ಮುರಿ ಯುವ,ಅಸಹನೆ ತೋರುವ,ದ್ವೇಷ ಕಾರುವ ಇಂಥ ಮನಸ್ಸುಗಳು ಗ್ರಾಮೀಣ ಭಾರತದ ಕಟು ವಾಸ್ತವ ಮತ್ತು ನಿಜವಾದ ಸಮಸ್ಯೆಗಳನ್ನು ಅರಿಯುವಲ್ಲಿ ವಿಫಲವಾಗಿವೆ.ಇದಕ್ಕೆ ಅವರ ಮನಸ್ಥಿತಿಯೇ ಕಾರಣ.ಹುಟ್ಟಿನ ಕಾರಣದಿಂದ ಮೇಲ್ಜಾತಿಯವರಿಗೆ ಸ್ಥಾನಮಾನಗಳು ಲಭಿಸಿವೆ ಎಂಬುದು ಸೂರ್ಯಸತ್ಯ.ಯಾಕೆಂದರೆ ಬಡವರು ಬೆವರು ಸುರಿಸಿ ದುಡಿದರು, ಶ್ರೀಮಂತರು ತಿಂದು ತೇಗಿದರು.ಮೆರೆದರು. ಇದಕ್ಕೆ ತಾಜಾ ಉದಾಹರಣೆ ಎಂದರೆ ತುಮಕೂರು ಸಮೀಪದ ಹಳ್ಳಿಯೊಂದರ ಶಾಲೆಯಲ್ಲಿ ಬಹುತೇಕ ಶಿಕ್ಷಕರು ಮೇಲ್ವರ್ಗದವರೇ.ಒಬ್ಬ ಮಾತ್ರ ದಲಿತ.ಈತ ಅಲ್ಲಿ ಪಾಠ ಮಾಡಲು ಸಾಧ್ಯವಾಗದಂತಹ ವಾತಾವರಣ ಇದೆ.ಈ ಕಾರಣಕ್ಕಾಗಿಯೇ ಆ ಶಿಕ್ಷಕ 15 ದಿನಗಳ ಕಾಲ ರಜೆ ಹಾಕಿದ್ದಾರೆ. ಇದು ನಿಜದ ಬದುಕು, ಅಕ್ಷರ ಕಲಿತು ಶಿಕ್ಷಿತರೆಂದು ಕರೆದುಕೊಳ್ಳುವವರಲ್ಲಿ ಇಂತಹ ನೀಚ ಅಸಹನೆ ಇದೆ ಎಂದರೆ ಏನು ಹೇಳೋಣ. ಇಂತಹ ಸಮಸ್ಯೆಗಳನ್ನು ಕಾಮತ್ ಮತ್ತು ಕಲ್ಲಾರೆ ತಮ್ಮ ಕಣ್ಣಿನ ಮುಂದೇ ನಡೆಯುತ್ತಿರುವುದನ್ನು ನೋಡಬೇಕು. ಅದನ್ನು ತಪ್ಪಾಗಿ ಗ್ರಹಿಸಿದರೆ ಅದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದೇ ಹೇಳಬೇಕು.
  – ಸಿದ್ದಮುಖಿ

  ಪ್ರತಿಕ್ರಿಯೆ
 2. kallare

  ನಾನೂ ಗ್ರಾಮೀಣ ಕರ್ನಾಟಕದ, ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಗುದ್ದಲಿ ಪಿಕಾಸು ಕೆಲಸ ಮಾಡಿಯೇ ಮುಂದಕ್ಕೆ ಬಂದವ… ವಿಷಯಕ್ಕೆ ಸೀಮಿತವಾದ ಪ್ರತಿಕ್ರಿಯೆ ಇರಲಿ ಸಿದ್ಧಮುಖಿ. ಜಾತೀಯತೆ ನಿರ್ಮೂಲನೆಯಾಗಲಿ, ಸರಿ. ಆದರೆ ಆ ಹೆಸರಲ್ಲಿ ಇಲ್ಲದ ಮಾತುಗಳು ಯಾಕೆ? ನಮ್ಮ ನಿಮ್ಮ ತಲೆಮಾರು ಮುಗಿದರೂ ಹೀಗೆ ಹೇಳ್ತಾನೆ ಇರೋದ್ರಿಂದ ಏನೂ ಆಗಲ್ಲ. ವ್ಯಕ್ತಿಗತವಾದ ಬದಲಾವಣೆ ಆಗ್ಬೇಕು… ಇಲ್ಲೆನಿದ್ರೂ ಎಲ್ಲಮ್ಮನ ಜಾತ್ರೆ ನಡೀತಿದೆ.

  ಪ್ರತಿಕ್ರಿಯೆ
 3. ಸಂದಪ್ ಕಾಮತ್

  ಸಿದ್ದಮುಖಿಯವ್ರೇ,
  ಸಿದ್ದರಾಮಯ್ಯನವ್ರು ಹೇಳಿದ ಯಾವುದೇ ಮಾತಿಗೆ ನನ್ನ ಅಭ್ಯಂತರವಿರಲಿಲ್ಲ.ಆದರೆ ಮೇಲ್ಜಾತಿಯವರಿಗೆ ಸಿಕ್ಕಿರೋ ಎಲ್ಲಾ ಸ್ಥಾನಮಾನಗಲು ಅವರ ಹುಟ್ಟಿನಿಂದಲೇ ಬಂದಿರೋದು ಅನ್ನೋದ್ರಲ್ಲಿ ಹುರುಳಿಲ್ಲ.
  ಅಷ್ಟಕ್ಕೂ ಮೇಲ್ಜಾತಿ ಅಂದ್ರೆ ಯಾವ ಜಾತಿ? ಬ್ರಾಹ್ಮಣ ಜಾತಿಯಾ? ಅಥವ ಯಾವ ಜಾತಿ?ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ಅದನ್ನು ’ನಾನು’ ಮೇಲ್ಜಾತಿ ಅಂದು ಕೊಂಡ್ರೆ ಅದು ನನ್ನ ಅಹಂಕಾರ .ಅದಕ್ಕೆ ತಕ್ಕ ಮದ್ದಾಗಬೇಕು.ಅದೇ ರೀತಿ ಯಾವನೇ ದಲಿತ ಅಥವ ಇನ್ಯಾವುದೇ ಬ್ರಾಹ್ಮಣೇತರ ಜಾತಿಯವರು ತಮ್ಮದು ’ಕೀಳು’ ಜಾತಿ ಅಂದುಕೊಂಡ್ರೆ ಅವರದ್ದು ಕೀಳರಿಮೆ ಅದಕ್ಕೂ ಮದ್ದಾಗಬೇಕು.
  ನಿಜ ಹೇಳಬೇಕೂಂದ್ರೆ ನನಗೆ ಜಾತಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಷ್ಟೊಂದು ಅರಿವಿಲ್ಲ.ನನ್ನ ಮನೆಯ ಮುಂದಿರುವ ದಲಿತ ಜನಾಂಗದವರು ನನ್ನ ಮನೆಯ ಬಾವಿಯ ನೀರು ತಗೊಳ್ಳಲು ಬರುತ್ತಿದ್ದರು.ನಾವೇ ಅವರ್ಗೆ ’ಬಾವಿಯ ನೀರ್ ಸೇದಿ ತಗೊಂಡು ಹೋಗಿ’ ಅಂದ್ರೂ ಅವರು ಹಿಂಜರೀತಾ ಇದ್ರು ,ಅದೃಷ್ಟವಶಾತ್ ನನ್ನ ತಂದೆ ಜಾತಿಯ ಬಗ್ಗೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳದವರಾದ್ದರಿಂದ ಅಮೇಲೆ ಅವರೂ ಸಂಕೋಚ ಬಿಟ್ಟು ನೀರು ತಗೊಂಡು ಹೋಗೋದಕ್ಕೆ ಶುರು ಮಾಡಿದ್ರು.ಅಲ್ಲಿಗೆ ಕೊಂಚ ಮಟ್ಟಿಗಾದ್ರೂ ಜಾತಿ ಪದ್ದತಿಯನ್ನು ನಾಶ ಮಾಡಿದ ಹೆಮ್ಮೆ ನನಗಿದೆ.
  ಆಮೇಲೆ ಬೆಂಗಳೂರಿಗೆ ಬಮ್ದ ಮೇಲಂತೂ ಜಾತಿ ಪದ್ದತಿ ಯ ಲವ ಲೇಶವೂ ಇಲ್ಲಿ ನನ್ಗೆ ಅರಿವಾಗಿಲ್ಲ .ಅಂಥ ಮಾಯಾನಗರಿ ಇದು.ಅದೆಷ್ಟೊ ಬಾರಿ ಫುಟ್ಪಾತ್ ನ ಬಿರಿಯಾನಿ ತಿಂದಿದ್ದೇನೆ ,ಯಾವತ್ತೂ ಅದನ್ನು ತಯಾರಿಸಿದವನ ಜಾತಿಯನ್ನು ನಾನು ಕೇಳಿಲ್ಲ.ನಾನು ಕೇಳಿದರೂ .ಅವನು ಹೇಳಿದೂ ಅವನದ್ದು ಖಚಿತವಾಗಿ ಯಾವ ಜಾತಿ ಅನ್ನೋದು ನನಗೆ ತಿಳಿಯೋದು ಅಷ್ಟರಲ್ಲೇ ಇದೆ.
  ಅಗರ್ವಾಲ್ ಇದು ಯಾವ ಜಾತಿ ಹೇಳಿ.ಪಟ್ನಾಯಕ್ ಇದು ಯಾವ ಜಾತಿ ಹೇಳಿ?ನಮ್ಮ ಆಫೀಸ್ ನಲ್ಲಿ ಸಾವಿರಾರು ಜನ ಕೆಲಸ ಮಾಡ್ತಾರೆ.ಒಬ್ಬೊಬ್ಬರದ್ದೂ ಒಂದೊಂದು ಜಾತಿ.ಅವರ ಹೆಸರಿನಿಂದ ಅವರ ಜಾತಿ ತಿಳಿಯೋದಂತೂ ಅಸಾಧ್ಯವಾದ ಮಾತು .
  ಹೀಗಾಗಿ ಬೆಂಗಳೂರಿನ ಸಿಟಿಯಲ್ಲಿ ಜಾತಿ ಪದ್ದತಿ ಯಾವತ್ತೋ ನಿರ್ಮೂಲನವಾಗಿದೆ ಅನ್ನೋದು ನನಗೆ ಖುಷಿ ಕೊಟ್ಟಿದೆ.
  ಭಾರತದಲ್ಲಿ ಅದೆಷ್ಟೋ ಇಂಜಿನಿಯರಿಂಗ್ ಕಾಲೇಜುಗಳಿವೆ .ಯಾವ ಕಾಲೇಜಿನಲ್ಲೂ ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ .ಅವರು ತಮ್ಮ ಪ್ರತಿಭೆಯಿಂದ ತಾನೇ ಸೀಟು ಗಳಿಸಿರೋದು?
  ಮಿಲಿಟ್ರಿಯಲ್ಲಿ ಒಬ್ಬ ಮೇಜರ್ ಆಗ್ತಾನೆ ಅಂದುಕೊಳ್ಳಿ ಅವನು ತನ್ನ ಹುಟ್ಟಿನಿಂದ ಆಗಿರೋದಾ ಮೇಜರ್ ಅಥವಾ ಅರ್ಹತೆಯಿಂದ?
  ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖಗ್ರೆ ಹಾಗೂ ದೇಶಪಾಂಡೆಯವರಿಗೆ ಉನ್ನತ ಸ್ಥಾನ ಮಾನಗಳಿಲ್ವಾ??
  ಯಾರು ತಮ್ಮ ಹುಟ್ಟಿನಿಂದ ಸ್ಥಾನಮಾನ ಗಳಿಸಿರೋದು .ಯಾರು ಹುಟ್ಟಿನಿಂದ ಗಳಿಸಿರೋದು?
  ಜಾತಿಪದ್ದತಿ ಇರಬಾರದು ಅನ್ನೋದು ನನ್ನ ಆಸೆ ಕೂಡಾ.ಅದೃಷ್ಟವಶಾತ್ ಬೆಂಗಳೂರಿನಲ್ಲಿ ಅದಿಲ್ಲ ಬಿಡಿ.

  ಪ್ರತಿಕ್ರಿಯೆ
 4. ಸಿದ್ದಮುಖಿ

  ವರದಕ್ಷಿಣಿ ನಿರ್ಮೂಲನೆಗೆ ಅಂತರ್ಜಾತಿ ವಿವಾಹಗಳೇ ಮದ್ದು.ಅಂಥ ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.ಇದಕ್ಕಾಗಿ ಮೀಸಲಾತಿ ಅಗತ್ಯ ಎಂಬುದು ಡಾ.ಸಿದ್ದಲಿಂಗಯ್ಯ ಅವರ ವಾದ.ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿಯ ಆಮಿಷ ನೀಡಿದರೆ ಜಾತಿಪದ್ದತಿಯ ಬೇರುಗಳು ಸ್ವಲ್ಪ ಸಡಿಲಗೊಳ್ಳಬಹುದೆಂಬ ಕಳಕಳಿ ಅವರದು.ಅಲ್ಲದೆ ಅಂತರ್ಜಾತಿ ವಿವಾಹಿತರನ್ನು ಸಮಾಜ ನೋಡುವ ದೃಷ್ಠಿ ಇನ್ನೂ ಬದಲಾಗಿಲ್ಲ.ಅವರು ಮಕ್ಕಳು ಯಾವ ಜಾತಿಗೆ ಸೇರಬೇಕೆಂಬ ಪ್ರಶ್ನೆಯೂ ಕಾಡುತ್ತದೆ.ಅಕ್ಕಪಕ್ಕದ ಮನೆಯವರು ಆಡಿಕೊಳ್ಳುವ ಮಾತುಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ.ದೈಹಿಕ ಹಲ್ಲೆಗಿಂತಲೂ ಮಾನಸಿಕ ಕಿರುಕುಳ ನೀಡುವುದು ಇದೆಯಲ್ಲ ಅದು ನರಕಯಾತನೆಯೇ ಸರಿ.ಇನ್ನು ಅಂತರ್ಜಾತಿ ವಿವಾಹವಾಗುವವರು ಬಡವರಾಗಿಯೇ ಇರುತ್ತಾರೆ ಎಂಬುದನ್ನು ಮನಗಾಣಬೇಕಾಗುತ್ತದೆ. ಅವರು ಕೆಲ ವರ್ಷಗಳ ಕಾಲವಾದರೂ ಮೀಸಲಾತಿಯಿಂದ ಸಿಗುವ ಸೌಲಭ್ಯಗಳಿಂದ ನೆಮ್ಮದಿಯ ಜೀವನ ನಡೆಸಬಹುದೆಂಬುದು ಸಿದ್ದಲಿಂಗಯ್ಯ ಅವರ ಒಳತೋಟಿ.
  ಇನ್ನು ಕಲ್ಲಾರೆಯವರು ನಾನೂ ಗ್ರಾಮೀಣ ಪ್ರದೇಶದವ, ಪಿಕಾಸಿ, ಗುದ್ದಲಿ ಹಿಡಿದವ ಎಂದು ಹೇಳುತ್ತಾರೆ.ಹಾರೆ ಗುದ್ದಲಿ ಹಿಡಿದರೆ ಸಾಲದು ಕಲ್ಲಾರೆ ಅವರೇ.ಅದು ನಿಮ್ಮ ದೈಹಿಕ ಶ್ರಮ.ಇದರ ನಿವಾರಣೆಗೆ ಬಿಮ್ಮಾಗಿ ನಿದ್ರಿಸದೆ ಸಾಕು ಆ ಶ್ರಮದ ನೋವೆಲ್ಲಾ ಮಾಯವಾಗುತ್ತದೆ.ಅಷ್ಟೇ ಯಾಕೆ ಕಟ್ಟಡ ಕಟ್ಟುವವರು,ದುಡಿಯುವ ವರ್ಗ ಸಂಜೆ ಸಾರಾಯಿ ಕುಡಿದು ಬೀದಿಯಲ್ಲಿ ಹಾಕಿರುವ ಜಲ್ಲಿಯ ಮೇಲೆ ಮಲಗುತ್ತಾರೆ ಎಂದರೆ, ದಿನದ ನೋವೆಲ್ಲ ಸಾರಾಯಿ ಮಾಯ ಮಾಡುತ್ತದೆ.ಆದರೆ ಒಬ್ಬ ದಲಿತನ ನೋವು ದೈಹಿಕವಾದ ನೋವಲ್ಲ.ಅದು ಮಾನಸಿಕ ನೋವು.ಅದನ್ನು ಹೇಳುಲೂ ಆಗದ ಅನುಭವಿಸಲು ಆಗದ ನೋವು.ಗಂಟಲಲ್ಲಿ ಸಿಕ್ಕ ಕಡುಬು.ಶಿವನ ಗಂಟಲಲ್ಲಿ ಇರುವ ವಿಷ,ಅಡಕತ್ತರಿಯಲ್ಲಿ ಸಕ್ಕ ಕೋತಿಯ ಸ್ತಿತಿಯಂತೆ.ನಿಮ್ಮ ಆಲೋಚನೆ ಅಥವಾ ನೀವು ಬರೆದ ಧಾಟಿ ಕೆನೆಪದರದ್ದು.ಅದಕ್ಕೆ ಮತ್ತೆ ನೀವು ಗ್ರಾಮೀಣ ಭಾರತದ ದಲಿತ,ಬಡವರ ಒಳತೋಟಿ,ನೋವು,ಸಂಕಟ ಅರ್ಥ ಮಾಡಿಕೊಂಡಿಲ್ಲ ಎಂದೇ ನಾನು ಭಾವಿಸುತ್ತೇನೆ.
  ಇನ್ನು ಕಾಮತ್ ಅವರು ಬೆಂಗಳೂರಿನಲ್ಲಿ ಜಾತಿ ಇಲ್ಲ ಬಿಡಿ ಎಂದು ಹೇಳುವ ಮಾತುಗಳು ಸಹ ಮೇಲ್ನೋಟಕ್ಕೆ ಕಾಣುವ ಸತ್ಯ.ಆದರೆ ಐಟಿ ಬಿಟಿ ಕ್ಷೇತ್ರದಲ್ಲಿ ಸ್ಲಂಗಳಲ್ಲಿ ಜಾತಿ ಪದ್ದತಿ ಇನ್ನೂ ಜೀವಂತವಾಗಿದೆ ಎಂಬುದನ್ನು ಮನಗಾಣಬೇಕು.ಇದೇ ಕಾರಣಕ್ಕೆ ಸ್ಲಂಡಾಗ್ ಮಿಲೇನಿಯರ್ ಎಂಬ ಚಿತ್ರ ಬಹು ಮುಖ್ಯವಾಗುತ್ತದೆ.ಹಿಂದೆ ಹಳ್ಳಿಗಳಲ್ಲಿ ಮಲ ಹೊರುವ ಪದ್ದತಿ ಇತ್ತು. ಇಂದು ನಗರದಲ್ಲಿ ಉನ್ನತೀಕರಣಗೊಂಡಿರುವ ಮಲ ಹೊರುವ ಪದ್ದತಿ ಮುಂದುವರಿದಿದೆ ಎಂದರೆ ನೀವು ಕನಸಿನಲ್ಲೂ ಒಪ್ಪಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ.ಇಂದು ನಗರದ ಪ್ರತಿಯೊಂದು ಮನೆಯ ಕಕ್ಕಸ್ಸು ಗುಂಡಿಗಳನ್ನು ಬಾಚುವವರು ದಲಿತರೇ,ಬಡವರೇ.ಒಪ್ಪತ್ತಿಗೆ ಗತಿಯಿಲ್ಲದವರೇ, ಇದು ಸತ್ಯ.ಸ್ವಾಮಿ ಕಾಮತ್ ಅವರೇ ನೀವು ಮೇಲ್ವರ್ಗದವರು ಎಂದರೆ ಬ್ರಾಹ್ಮಣರೇ ಎಂದು ಪ್ರಶ್ನಿಸಿಕೊಂಡಿದ್ದೀರಿ.ನಾನು ಹೇಳಿದ ಮೇಲ್ಜಾತಿಯವರು ಯಾವುದೇ ಜಾತಿಯ ಮೇಲ್್ಸ್ತರದ ಜನರನ್ನು.ನಮ್ಮೊಳಗಿನ ಅಸಹನೆ ಯಾರನ್ನೂ ಬಿಡುವುದಿಲ್ಲ.ಅದು ಬೆಂಕಿಯಂತೆ ಕುರುಹೇ ಇಲ್ಲದಂತೆ ಮಾಡುತ್ತದೆ.ಇನ್ನು ನೀವು ನಿಮ್ಮ ಮನೆಯ ಸಮೀಪವಿದ್ದ ಬಾವಿಯಿಂದ ದಲಿತರಿಗೆ ನೀರು ಸೇದಿಕೊಂಡು ಹೋಗುವಂತೆ ಹೇಳಿರುವುದು ನಿಮ್ಮ ಕುಟುಂಬದ ದೊಡ್ಡಗುಣ.ಆದರೆ ಮಡಿವಂತೆ ಮಹಿಳೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತಿದೆ ಎಂದು ಭಾವಿಸುತ್ತೇನೆ.
  ಮತ್ತೆ ಸಿದ್ದಲಿಂಗಯ್ಯ ಅವರ ಲೇಖನದ ವಿಷಯಕ್ಕೆ ಹೋಗುತ್ತೇನೆ. ಇಂದಿಗೂ ದಾಸರೆಂದರೆ ಪುರಂದರ ದಾಸರಯ್ಯ ಎಂದು ಹೇಳುವುದು,ಕನಕದಾಸರನ್ನು ಕೈಬಿಟ್ಟಿರುವುದನ್ನು ಸ್ವಲ್ಪ ಗಮನಿಸಬೇಕಾದ ಸಂಗತಿ.ಇಂದಿಗೂ ಎಲ್ಲಾ ರಾಘವೇಂದ್ರ ಮಠಗಳಲ್ಲಿ ವ್ಯಾಸರಾಯರು ಮತ್ತು ಪುರಂದರ ದಾಸರ ಕೀರ್ತನೆಗಳನ್ನು ಹಾಡಲಾಗುತ್ತಿದೆಯೇ ವಿನಃ ಕನಕದಾಸರ ಕೀರ್ತನೆಗಳನ್ನು ಹಾಡುವುದೇ ಇಲ್ಲ ಎನ್ನಬಹುದು.ಬಸವಣ್ಣ ಲಿಂಗಾಯತರ ಜಾತಿಯನ್ನು ಹಾಳು ಮಾಡಿದ ಎನ್ನುವ ಬಹುತೇಕ ಲಿಂಗಾಯತರನ್ನೇ ನೋಡಿದ್ದೇನೆ.ಅಂಬೇಡ್ಕರ್ ಬರೆದ ಸಂವಿಧಾನ ಸರಿಯಿಲ್ಲಾರಿ,ದಲಿತರಿಗೆ ಮೀಸಲಾತಿ ನೀಡಿ ಇಡೀ ದೇಶವನ್ನೇ ಹಾಳು ಮಾಡಿದ ಎಂಬ ಮಾತುಗಳು ಅನೇಕ ಸಾರಿ ಕಿರಿಕಿರಿ ಉಂಟುಮಾಡಿವೆ ಎಂಬುದನ್ನು ಕಾಮತ್ ಮತ್ತು ಕಲ್ಲಾರೆ ಮನಗಾಣಬೇಕು ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.
  – ಸಿದ್ದಮುಖಿ

  ಪ್ರತಿಕ್ರಿಯೆ
 5. ಸಂದೀಪ್ ಕಾಮತ್

  ಸಿದ್ದಮುಖಿಯವರೆ,
  ನನಗೆ ಸಿದ್ದರಾಮಯ್ಯನವರ ಹಾಗೂ ನಿಮ್ಮ ಕಾಳಜಿ ಅರ್ಥ ಆಗುತ್ತೆ.
  ’ಎಲ್ಲಾ’ ಮೇಲ್ಜಾತಿಯವರ ಸ್ಥಾನಮಾನಗಳಿಗೆ ಅವರ ಹುಟ್ಟೇ ಕಾರಣ ಅಂದಿದ್ರು ಅವರು ನೀವೂ ಅದನ್ನು ಸಮರ್ಥಿಸಿದ್ದೀರಿ ಅದು ನಂಗೆ ಇಷ್ಟ ಆಗಿಲ್ಲ ಅಷ್ಟೆ
  ಎಲ್ಲಾ ದಲಿತರ ಸ್ಥಾನಮಾನಗಳೂ ಅವರಿಗೆ ಮೀಸಲಾತಿಯಿಂದಲೇ ಬಂದಿದ್ದು ಅದರಲ್ಲಿ ಅವರ ಪರಿಶ್ರಮ ,ಸಾಧನೆ ಏನೂ ಇಲ್ಲ ಅಂದ್ರೆ ಸಿದ್ದರಾಮಯ್ಯನವರಿಗೆ ನಿಮಗೆ ಸಿಟ್ಟು ಬರೋದಿಲ್ವ?.

  ಪ್ರತಿಕ್ರಿಯೆ

Trackbacks/Pingbacks

 1. ಚರ್ಚೆಗೆ ಕಾವು ಬಂದಿದೆ…ನೀವೂ ಭಾಗವಹಿಸಿ « ಅವಧಿ - [...] ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗಿತ್ತು. ಆ ಪ್ರತಿಕ್ರಿಯೆಗಳಿಗೆ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: