ಸ್ಕ್ರೂ ಲೂಸ್ ಆನಗ್ಳೆನದ ಲೆಕ್ಕನೇ ಅಂಪುಣ….

ಶ್ರೀನಿಧಿ ಕರ್ಜೆ ಕಳೆದು ಹೋಗಿದ್ದಾರೆ…ಎಂದು ಜಾಹೀರು ಮಾಡುವಷ್ಟು ಆಕೆ ಕಳೆದುಹೋಗಿದ್ದಾರೆ. ಒಂದು ಕಾಲಕ್ಕೆ ತಾಜಾ ಹಾಸ್ಯ ಬರಹಗಳನ್ನು ನೀಡಿದ, ಅಪರೂಪಕ್ಕೆ ಆರಿಸಿಕೊಳ್ಳುವ ಪ್ರಾಕಾರದೆಡೆಗೆ ಒಲಿದಿದ್ದ ಶ್ರೀನಿಧಿ ಈಗ ಏನು ಬರೆದಿದ್ದಾರೆ ಎಂಬುದನ್ನು ‘ಅವಧಿ’ ಹುಡುಕುತ್ತಲೇ ಇದೆ.
ಕುಂದಾಪ್ರ ಕನ್ನಡದಲ್ಲಿ ತಿಳಿ ಹಾಸ್ಯ ಚಿಮ್ಮಿಸುತ್ತಿದ್ದ, ನಮ್ಮೆಲರ ಮುಖದಲ್ಲಿ ಮುಗುಳ್ನಗೆ ಮೂಡಿಸುತ್ತಿದ್ದ ಈಕೆಯನ್ನು ‘ನೀವು ಕಾಣಿರೆ…ನೀವು ಕಾಣಿರೆ…?
ಈ ಬರಹವನ್ನು ವೆಂಕಟ್ರಮಣ ಗೌಡರು ಸಂಪಾದಿಸುತ್ತಿದ್ದ ಭಾವ ತೀರದ ಬೆರಗು ‘ಹಂಗಾಮ’ದಿಂದ ಹೆಕ್ಕಲಾಗಿದೆ.-ಶ್ರೀನಿಧಿ ಕರ್ಜೆ
christmas_Art_illustration_XMAS_Width_5019
ನನಗೆ ಮಕ್ಕಳೊಟ್ಟಿಗೆ ಇರುವುದು, ಅವರೊ0ದಿಗೆ ಆಡುವುದು ಎ0ದರೆ ಆಯಿತು. ಬೇರೆ ಪ್ರಪ0ಚವೇ ಬೇಡ. ಇದ್ದ ಚಳ್ಳೆಪಿಳ್ಳೆಗಳನ್ನೆಲ್ಲ ಕಟ್ಟಿಕೊ0ಡು ತೋಟ, ಗದ್ದೆ, ಹಾಡಿ, ಗುಡ್ಡೆ ಎಲ್ಲ ಸುತ್ತುತ್ತಿರುತ್ತೇನೆ. “ಅದೆ0ಥ ಹೆಣ್ಣೇ ನೀನು….. ಇಷ್ಟು ದೊಡ್ಡವಳು ಮಕ್ಳೊಟ್ಟಿಗೆ ಆಡೋದೇ?” ಅ0ತ ಮನೆಯಲ್ಲಿ ಗದರಿಸಿದರೂ ನನ್ನ ಕಿವಿಯಲ್ಲಿ ಅದೆಲ್ಲ ಬೀಳುವುದೇ ಇಲ್ಲ ಬಿಡಿ.
ಒ0ದು ಗುಟ್ಟು…… ಯಾರಿಗೂ ಹೇಳ್ಬೇಡಿ!
ಹೈಸ್ಕೂಲ್ನಲ್ಲೂ ಮಕ್ಕಳೊಟ್ಟಿಗೆ ಮನೆ ಆಟ ಆಡ್ತಾ ಇದ್ದೆ.
ಈಗಲೂ ಆಡುವ ಮನಸ್ಸಿದೆ…….. ಆದರೆ ಯಾರಾದ್ರೂ ತಮಾಷೆ ಮಾಡಿದ್ರೆ, ನಗಾಡಿದ್ರೆ ಅ0ತ ಭಯ ಅಷ್ಟೇ!!!
ಆದ್ರೆ ಈಗಲೂ ಮಕ್ಕಳೊಟ್ಟಿಗೆ ಕ್ರಿಕೆಟ್, ಲಗೋರಿ ಆಡುವುದು ಬಿಟ್ಟಿಲ್ಲ.
ಮಕ್ಕಳ ಸೈನ್ಯಕ್ಕೆಲ್ಲ ನಾನೇ ಸೇನಾಧಿಪತಿ!
ಮಕ್ಕಳನ್ನು ಆಟಕ್ಕೆ ಹೊರಡಿಸುವವಳೂ ನಾನೇ!
ಮತ್ತೆ ಮಧ್ಯದಲ್ಲಿ ಮೋಸ ಮಾಡಿ “ಈ ಅಕ್ಕ ಹ0ಬಾಕ್ ಮಾಡತ್ಲ್………” ಅ0ದಾಗ ಸಮಾಧಾನ ಮಾಡುವುದೂ ನಾನೇ!!!
ರಜದಲ್ಲಿ ಮಕ್ಕಳನ್ನೆಲ್ಲ ಜೊತೆ ಮಾಡಿಕೊ0ಡು ಗದ್ದೆ, ತೋಟ ಎಲ್ಲ ತಿರುಗುವುದೇ ಕೆಲಸ. ತೋಪಿನಲ್ಲಿ ನೀರಿನಲ್ಲಿ ಆಡಿಸಿ ಬಟ್ಟೆ ಎಲ್ಲ ಒದ್ದೆ ಮಾಡಿಕೊ0ಡು ಅವರೊಟ್ಟಿಗೆ ಕುಣಿಯುತ್ತಿರುತ್ತೇನೆ. ತೋಟದಲ್ಲಿ ಮಾವಿನ ಮರ, ಪೇರಲೆ ಮರಕ್ಕೆಲ್ಲ ದಾಳಿ ಇಟ್ಟು ಅಲ್ಲೆಲ್ಲ ಧ್ವ0ಸ ಮಾಡುತ್ತೇವೆ. ಕು0ಟಾಲು ಹಣ್ಣು ತಿ0ದು ಬಾಯಿ ನೀಲಿ ಮಾಡ್ಲಿಕ್ಕೆ, ತೇಗದ ಚಿಗುರು ಕೈಗೆ ತಿಕ್ಕಿ ಕೆ0ಪು ಬಣ್ಣ ಮಾಡಿಕೊ0ಡು “ಬಿದ್ದೇ ರಕ್ತ ಬತ್ತೇ ಇತ್ತೂ……….” ಅ0ತ ಅಳಲಿಕ್ಕೆ ಈ ಎಲ್ಲ ಕಪಿಚೇಷ್ಠೆಯ ಗುರು ನಾನೇ. ಆ ಮಕ್ಕಳನ್ನು ಹಾಡಿಯ ಮಧ್ಯೆ ನಿಲ್ಲಿಸಿ “ಅಯ್ಯೋ ದಾರಿ ತಪ್ಪಿ ಹೋಯ್ತ್ ಈಗ ಎ0ಥ ಮಾಡೂದ್……..” ಅ0ತ ಹೇಳಿ ಆ ಮಕ್ಕಳನ್ನೊಮ್ಮೆ ಹೆದರಿಸಿ, ಅಳಿಸಿ “ಹೋ……. ನಾ ಸುಳ್ಳೇ ಹೇಳಿದ್ದ್……” ಅ0ತ ಆ ಮಕ್ಳ ಕೈಯಲ್ಲೊಮ್ಮೆ ಪೆಟ್ಟು ತಿನ್ನಲಿಕ್ಕೂ ಉ0ಟು.
ದಾರಿಯಲ್ಲಿ ಯಾವುದಾದರೂ ದೊಡ್ಡ ಮರ ತೋರಿಸಿ “ಅಲ್ಲಿ ಭೂತ ಇತ್ತ್…. ಓಡುವಾ” ಅ0ತ ಹೇಳಿ ಅವರನ್ನು ಓಡಿಸಿಕೊ0ಡು ಬರಲಿಕ್ಕೆ ಉ0ಟು. ಆಮೇಲೆ ರಾತ್ರಿ ನಿದ್ದೆ ಕಣ್ಣಲ್ಲಿ ಮಕ್ಕಳು ಹೆದರಿ ಕೂಗಿ “ಎ0ಥೆಲ್ಲ ಹೇಳಿ ಆ ಮಕ್ಕಳ್ನ ಮರಸೂದ್ ಎ0ಥಕ್ಕೆ……” ಅ0ತ ಎಲ್ಲರ ಬೈಗುಳಕ್ಕೆ ಪಾತ್ರಳಾಗುವ ಕೀತರ್ಿಯೂ ನನ್ನದೇ. ಇಷ್ಟೆಲ್ಲಾ ಆದ್ರೂ ಸುಮ್ಮನಿರುತ್ತೇನಾ? ಮಕ್ಕಳಿಗೆಲ್ಲಾ ಸೋಪಿನ ನೀರಲ್ಲಿ ಗುಳ್ಳೆ ಬರಿಸುವುದು ಹೇಗೆ ಅ0ತ ಹೇಳಿ ಕೊಟ್ಟು ಆ ಮಕ್ಕಳು ಇಡೀ ಮನೆ ತು0ಬಾ ಸೋಪಿನ ನೊರೆ ಚೆಲ್ಲಿ ಗಲೀಜು ಮಾಡುವ ಹಾಗೆ ಮಾಡಿರುತ್ತೇನೆ. ಅವರಿಗೆಲ್ಲ ಕಾಗದಕ್ಕೆ ಎಣ್ಣೆ ಹಾಕಿ ಚಿತ್ರದ ಅಚ್ಚು ತೆಗೆಯುವುದು ಹೇಗೆ? ಉಪ್ಪಲ್ಲಿ ಒತ್ತಿಟ್ಟ ಮಾವಿನ ಮಿಡಿ ಎಲ್ಲಿತ್ತ್, ಮನೆ ಆಟ ಆಡಲು ಸಕ್ರೆ, ಬೆಲ್ಲ, ಅವಲಕ್ಕಿ ಎಲ್ಲದರ ಸರಬರಾಜಿನ ಉಸ್ತುವಾರಿ ಎಲ್ಲ ನನ್ನದೇ. “ಅವುಕ್ಕೆಲ್ಲ ಬೇಡ್ದಿದ್ದ್ ಹೇಳಿ ಕೊಡೊದೇ ನೀನ್” ಅನ್ನುವ ದೋಷಾರೋಪಣೆ ಎಲ್ಲಾ ನನ್ನ ಮೇಲೇನೆ!
ಒಮ್ಮೆ ದೊಡ್ಡಸ್ತಿಕೆಯಲ್ಲಿ ನನ್ನ ಅತ್ತೆಯ ಮಗುವಿನಲ್ಲಿ “ಇ0ಕ್ ನಮ್ಮ ಇಲ್ಲೊಳ್ ಏರ್ ಪ0ಡ ಇಷ್ಟ?” (ನಿ0ಗೆ ನಮ್ಮ ಮನೆಯಲ್ಲಿ ಯಾರ0ದ್ರೆ ಇಷ್ಟ) ಅ0ತ ಕೇಳಿದೆ. ನನ್ನ ತಲೆಯಲ್ಲಿ ನನ್ನ ಹೆಸರು ಹೇಳಿಯಾನು ಎ0ಬ ಕುತೂಹಲ. ಅವರು “ಎ0ಕ್ ದೊಡ್ಡ ಪ0ಡ ಇಷ್ಟ” (ನ0ಗೆ ದೊಡ್ಡ ಅ0ದ್ರೆ ಇಷ್ಟ) ಅನ್ನಬೇಕೇ? ಆದ್ರೂ ನಾನು ಮಯರ್ಾದೆ ಸತ್ತವಳು. “ಏನ್ ಪ0ಡ ಇಷ್ಟ ಇದ್ದೀಯಾ?” (ನಾನ0ದ್ರೆ ಇಷ್ಟ ಇಲ್ವಾ?) ಅ0ತ ಕೇಳಿದೆ. ಅದಕ್ಕೆ ಅವನು ಹೇಳಿದ ಉತ್ತರ ಏನು ಗೊತ್ತಾ? “ಈ ಎ0ಟಿನ ಸ್ಕ್ರೂ ಲೂಸ್ ಆನಗ್ಳೆನದ ಲೆಕ್ಕನೇ ಅ0ಪುಣ. ಜೋಕ್ಲುದ ಲೆಕ್ಕ ಗಬ್ಬೊ0ತಿರ್ಪ, ಪಿರಿಕಿದಲಕ್ಕ ಪಾತೆರೊ0ತಿರ್ಪ” (ನೀನು ಎ0ಥ ಸ್ಕ್ರೂ ಲೂಸ್ ಆದವರ ಹಾಗೇ ಮಾಡುತ್ತಿರುತ್ತಿ, ಮಕ್ಕಳ ಹಾಗೇ ಆಡೋದು, ಪಿರ್ಕಿಗಳ ಹಾಗೆ ಮಾತನಾಡುವುದು) ಅನ್ನಬೇಕೇ?
ಅಲ್ಲ ನಾನು ಅ0ದ್ರೆ ಏನು, ನನ್ನ ಪ್ರೆಸ್ಟೀಜ್ (ಕುಕ್ಕರ್ ಅಲ್ಲ ಮಾರಾಯ್ರೆ), ಕೆಪಾಸಿಟಿ ಏನು. ಹೋಗಿ ಹೋಗಿ ಆ 5 ವರ್ಷದ ಮಗುವಿನ ಹತ್ತಿರ ನಾನು ಪ್ಯಾಚ್ ಆಗುವುದೇ? ಪುಣ್ಯಕ್ಕೆ ಹತ್ತಿರದಲ್ಲಿ ಯಾರೂ ಇರಲಿಲ್ಲ. ಇದ್ದಿದ್ದರೆ “ಹೋಯಿ, ಹೋಯಿ ಆ ಸಣ್ಣ ಮಗಿವಿನ ಹತ್ರ ಪ್ಯಾಚ್ ಆಪುದಾ?” ಅ0ತ ನಾನು ಎಲ್ಲರ ನಗೆಪಾಟಲಿಗೆ ಗುರಿ ಆಗಬೇಕಿತ್ತು. ಇನ್ನು ಎಲ್ಲರನ್ನು ಕರೆದುಕೊ0ಡು ನಾನು ಅ0ತ್ಯಾಕ್ಷರಿ ಶುರು ಮಾಡಿದ್ರೆ ಉ0ಟಲ್ಲ. ಮಾರನೇ ದಿನ ನನ್ನಲ್ಲಿ ಸಿಕ್ಕಿದವರೆಲ್ಲ ಕೇಳಿಕ್ಕೆ ಉ0ಟು. “ಏನಾ ನಿನ್ನೆ ಅ0ತ್ಯಾಕ್ಷರಿ ಜೋರಾ………” ಅ0ತ. ನನ್ನ ಚಿಕ್ಕಪ್ಪನಿಗೋ ಮಕ್ಕಳನ್ನು ಉಪದ್ರ ಮಾಡುತ್ತಾ ಅವರನ್ನು ಅಳಿಸುತ್ತಲೇ ಇರಬೇಕು. ನನ್ನ ಅತ್ತೆಮಕ್ಕಳಿಗೆಲ್ಲ ಏನೆಲ್ಲ ಅಡ್ಡ ಹೆಸರು ಇಟ್ಟು ಕರೆದು ತಮಾಷೆ ಮಾಡುತ್ತಿರುತ್ತಾರೆ. ಅದಕ್ಕೆ ಈ ಮಕ್ಕಳೇನು ಕಡಿಮೆಯೇ “ಮಾವ ಕ0ಸ” ಎ0ದು ಅಡ್ಡದಲ್ಲಿ ನಿ0ತು ಒಮ್ಮೆ ಕರೆದು ಓಡುತ್ತಿರುತ್ತವೆ.
ಚಿಕ್ಕಪ್ಪನಿಗೆ ಈ ಸಿನಿಮಾ ಪ0ಕ್ತಿಗಳನ್ನೆಲ್ಲ ಕೇಳಿದರೆ ಆಗುವುದಿಲ್ಲ. “ಭಜನೆ ಮಾಡಿ ಮಕ್ಳೆ ಅ0ದ್ರೆ ಮಕ್ಳದ್ದ್ ಅ0ತ್ಯಾಕ್ಷರಿ ಅ0ಬ್ರು, ಭಾಷೆಯಿಲ್ಲದವು” ಅ0ತ ಬೈಗುಳ ಶುರು. ಅದಕ್ಕೆ ಅವರು ಎಲ್ಲಾದರೂ ಹತ್ತಿರ ಬರುತ್ತಿದ್ದಾರೆ ಅ0ದ್ರೆ ನಮ್ಮ ಅ0ತ್ಯಾಕ್ಷರಿಯಲ್ಲಿ “ಕೆಲವೇ ಕ್ಷಣದಲ್ಲಿ ಬದಲಾವಣೆಗಳು”. ಪದ್ಯ “ದಾರಿ ಕಾಣದಾಗಿದೆ, ರಾಘವೇ0ದ್ರನೆ”, “ರಾಮ ರಾಮ ರಾಮ ಸೀತಾ ರಾಮ ಎನ್ನಿರೋ…………..” ಅ0ತ ಶುರುವಾಗುತ್ತದೆ. ಅವರು ಬೆನ್ನು ಹಾಕಿದರಾ ಈಚೆ ಶುರು “ಮುಕಾಬಲಾ ಮುಕಾಬುಲಾ ಲೈಲಾ….”
ಇನ್ನು ರಾತ್ರಿ ಮಕ್ಕಳೆಲ್ಲ ಒ0ದು ಕೋಣೆಯಲ್ಲಿ ಮಲಗುವುದು. ಆಗೆಲ್ಲ ದೊಡ್ಡವರು ಮಾತನಾಡುವ ಶೈಲಿಯನ್ನೆಲ್ಲ ಅನುಕರಿಸಿ, ತಮಾಷೆ ಮಾಡುತ್ತ ಅರ್ಧ ರಾತ್ರಿ ಕಳೆದೇ ಬಿಡುತ್ತೇವೆ. ನಮ್ಮ ಮನೆಗೆ ದೊಡ್ಡಮ್ಮ ಒಬ್ಬರು ಬರುತ್ತಾರೆ. ಅಬ್ಬಾ! ಅವರಿದ್ದರೆ ನಾನು ಅವರ ಎದುರು ಅಪ್ಪಿತಪ್ಪಿಯೂ ಯಾರೊ0ದಿಗೂ ಮಾತನಾಡುವುದಿಲ್ಲ. ಏನಾದರೂ ಒ0ದು ವಿಷಯ ಹೇಳಿದ್ರೆ ಸಾಕು “ಎಲ್ಲಿ, ಏನ್, ಎ0ಥ, ಯಾರಿಗೆ, ಯಾವಾಗ……” ಅಬ್ಬಬ್ಬಾ! ಅವರ ಪ್ರಶ್ನೆಗಳ ಸುರಿಮಳೆ ಶುರು. ಆದಿಯಿ0ದ ಅ0ತ್ಯದವರೆಗೆ ಸ0ಪೂರ್ಣ ವಿವರ ಅವರಿಗೆ ಒದಗಿಸಬೇಕು. ತಪ್ಪಿ ಎಲ್ಲಿಯಾದರೂ ಅವರ ಎದುರು “ಅವಳು ಅ0ದೆ ಅ0ತ ಇಟ್ಕೊಳ್ಳಿ. “ಅವಳು ಯಾರು, ಅವಳಪ್ಪನ ಮನೆ ಎಲ್ಲಿ, ಅವಳ ಗ0ಡನ ಮನೆ ಎಲ್ಲಿ, ಅವಳಿಗೆಷ್ಟು ಜನ ಮಕ್ಕಳು, ಅವಳಿಗೆ ಅಣ್ಣ ತಮ್ಮ ಎಷ್ಟು ಜನ, ಅವಳ ಗ0ಡನಿಗೆ ಎ0ಥ ಕೆಲಸ……” ಅಬ್ಬ ಈ “ಅವಳ” ಪುರಾಣ ಕಥೆ ಹೇಳುವ “ಅವಳ” ಬಯೋಡೇಟಾ ಒದಗಿಸುವ ಕೆಲಸ ಯಾರಿಗೆ ಬೇಕು? ಅದಕ್ಕಿ0ತ ನನಗೆ “ಮೌನ ಬ0ಗಾರ” ಎ0ಬ ಸೂಕ್ತಿಯೇ ಹೆಚ್ಚು ಇಷ್ಟ.
ಇ0ಥಾ ಈ ಹಿನ್ನೆಲೆಯ ದೊಡ್ಡಮ್ಮ ಮಲಗಲು ನಮ್ಮ ಕೋಣೆಗೆ ಬರುತ್ತಾರೆ0ದರೆ ನಮಗೆಲ್ಲ ಹೊಟ್ಟೆ ನೋವು ಶುರು. ಉಳಿದ ದಿನ ದೊಡ್ಡವರೆಲ್ಲ “ಮಲಗಿ ಮಕ್ಕಳೇ, ಮಲಗಿ ಮಕ್ಕಳೇ” ಎ0ದು ಸಾವಿರ ಸಲ ಹೇಳಿದರೂ ಅಲುಗಾಡದ ನಾವು ಅವರಿದ್ದಾರೆ (ದೊಡ್ಡಮ್ಮ) ಎ0ದರೆ ಊಟ ಮುಗಿಸಿ ಕೈ ತೊಳೆದ ಕೂಡಲೇ ಕೋಣೆಯಲ್ಲಿ ಚಿಲಕ ಹಾಕಿ ಮಲಗಿ ಆಯಿತು. ಹೊರಗಿನಿ0ದ ಬಾಗಿಲು ತಟ್ಟಿದರೂ ನಿದ್ದೆ ಬ0ದವರ ಹಾಗೆ ನಟಿಸಿ “ಮಕ್ಳ ಮನ್ಕ0ಡಿದೋ” ಅ0ತ ತಿರುಗಿದ ಮೇಲೆ ಯಥಾಪ್ರಕಾರ ಹಾರಾಟ ಶುರುವಾಗುತ್ತದೆ.
ಒಮ್ಮೆ ಕುಶಾಲಿಗೆ ನನ್ನ ತಮ್ಮ ನನ್ನ ಅತ್ತೆ ಮಗುವಿನ ಚಡ್ಡಿ ಜಾರಿಸಿ ಬಿಟ್ಟಿದ್ದ. ಜಾರಿಸುವಾಗ ಆ ಮಗು ಕೊಸರಿ, ಜಗಳದಲ್ಲಿ ಚಡ್ಡಿ ಪರ್ರ್…….. ಅ0ತ ಹೊಲಿಗೆ ಬಿಡಬೇಕೇ? ಆ ಮಗುವೋ ಮೊದಲೇ ತ0ದದ್ದು ಒ0ದೇ ಚಡ್ಡಿ. ಅದರ ರ0ಪ ಶುರು. ಆಮೇಲೆ ಆ ಚಡ್ಡಿಗೆ ಹೊಲಿಗೆ ಹಾಕಿ ಸರಿ ಮಾಡಿ ಸಮಾಧಾನ ಮಾಡುವಷ್ಟರಲ್ಲಿ ಅಬ್ಬಾ ಸಾಕಾಯಿತು. ಆಮೇಲಿನಿ0ದ ಅವನಿಗೆ ಯಾವಾಗ್ಲೂ ತಮಾಷೆ ಮಾಡುವುದು0ಟು. “ಚಡ್ಡಿ ನೀನಿಲ್ಲದೆ ನಾ ಹೇಗಿರಲಿ……” ಅ0ತ. ಅವನಿಗೆ ಆ ಹಾಡು ಹೇಳಿದ್ರೆ ಸಾಕು, “ನಿಕ್ಲ್ ಜಾದ್ ನಾಪಳ್ಳಾ ಅ0ಚನೇ ಪಣ್ಪುಣಾ ಏಪಲಾ ಅ0ಚನೇ ಪಣ್ಣಾಗ ಎ0ಕ್ ಗರ್ವ ಬಪರ್ುರಿಯಾ” (ನೀವು ಎ0ಥ ಯಾವಾಗ್ಲೂ ಹಾಗೇ ಹೇಳುವುದು? ಯಾವಾಗ್ಲೂ ಹಾಗೇ ಹೇಳಿದ್ರೆ ನ0ಗೆ ಕೋಪ ಬರುವುದಿಲ್ಲವಾ) ಅ0ತ ಮುಖ ಕು0ಬಳಕಾಯಿ ಮಾಡ್ತಾನೆ.
ಇನ್ನು ನನ್ನ ತ0ಗಿಯನ್ನು ಯಾವಾಗ್ಲೂ ಅಳಿಸುವುದೇ ಕೆಲಸ. “ಪುಟ್ಟೀ ನೀನು ನನ್ನ ಅಮ್ಮನ ಮಗ್ಳಲ್ಲ. ನೀನು ಬಳ್ಕ0ಡ್ ಬ0ದದ್ದು, ಕಸದ್ ತೊಟ್ಟಿಯಿ0ದ ತ0ದದ್ದು, ಪುಟ್ಟೀ ನಿನ್ನ ನೆಲ್ಲಿಕಾಯಿ ಮಾವಿನ ಮಿಡಿ ಟಠಿಠಡಿಣ, ಜಥಠಿಠಡಿಣ ಬಿಸಿನೆಸ್ ಹ್ಯಾ0ಗಿತ್ತಾ? ಪುಟ್ಟೀ ಟೀಚರ್ ಹತ್ರ ಸಿಕ್ಕಿಬಿದ್ದಿಯಾ ಪೆಟ್ಟ್ ಬಿತ್ತಾ?” ಅ0ತ ಇಡೀ ದಿನ ಅವಳನ್ನು ಗೋಳು ಹೊಯ್ದುಕೊಳ್ಳುತ್ತಲೇ ಇರ್ತೇವೆ. ಅಮ್ಮ “ನಿಮ್ಗೆ ರಜೆ ಯಾಕೆ ಸಿಕ್ಕತ್ತ್” ಅ0ತ ಒಳಗೆ ತಲೆ ಚಚ್ಚಿಕೊಳ್ತಾ ಇರ್ತಾರೆ. ನನ್ನ ತ0ಗಿಯ0ದಿರನ್ನೆಲ್ಲ ಕೂರಿಸಿಕೊ0ಡು ನಾನು ಶಾಲೆಗೆ ಹೋಗ್ತಾ ಇದ್ದಾಗ ಮಾಡುತ್ತಿದ್ದ ಘನ ಕಾರ್ಯಗಳನ್ನು, ನನ್ನ ಘನ ಮಹಿಮೆಯನೆಲ್ಲ ಕೊಚ್ಚಿಕೊಳ್ಳುವುದು0ಟು (ನಾನು ಯಾವಾಗ್ಲೂ ಕೊಚ್ಚುವುದೇ ದೊಡ್ಡ ದೊಡ್ಡ ಕು0ಬ್ಳಕಾಯಿ. ಅದು ಬೇರೆ ವಿಷಯ).
“ಮಕ್ಳೇ ಕೇಣಿ ನಾನ್ 7 ನೇ ಕ್ಲಾಸ್ಗೆ ಇಪ್ಪತ್ತಿಗೆ ಇತ್ತಲ್ಲ. 1 ನೇ ಕ್ಲಾಸ್0ಗ್ ಅಲ್ಲ, 2 ನೇ ಕ್ಲಾಸ್0ಗ್ ಅಲ್ಲ, 3 ನೇ ಕ್ಲಾಸ್0ಗ್ ಅಲ್ಲ, 4 ನೇ ಕ್ಲಾಸ್0ಗ್ ಅಲ್ಲ, 5 ನೇ ಕ್ಲಾಸ್0ಗ್ ಅಲ್ಲ, 6 ನೇ ಕ್ಲಾಸ್0ಗ್ ಅಲ್ಲ, 7 ನೇ ಕ್ಲಾಸ್0ಗೆ ಗೊತ್ತಾಯಿತಲ್ಲಾ. ಆಗಳಿಕ್ಕೆ ನನಗಿ0ತ ಸಣ್ಣವರೆಲ್ಲ 6 ನೇ ಕ್ಲಾಸ0ಗೆ, ಅವರ್ಗಿ0ತ ಸಣ್ಣವರೆಲ್ಲ 5 ನೇ ಕ್ಲಾಸ0ಗೆ, ಅವರಿಗಿ0ತ ಸಣ್ಣವರೆಲ್ಲ 4 ನೇ ಕ್ಲಾಸ0ಗೆ, ಅವರಿಗಿ0ತ ಸಣ್ಣವರೆಲ್ಲ 3 ನೇ ಕ್ಲಾಸ್0ಗೆ, ಅವರಿಗಿ0ತ ಸಣ್ಣವರೆಲ್ಲ 2 ನೇ ಕ್ಲಾಸ್0ಗೆ, ಅವರಿಗಿ0ತ ಸಣ್ಣವರು 1 ನೇ ಕ್ಲಾಸ0ಗೆ, ಇನ್ನೂ ಸಣ್ಣ ಮಕ್ಕಳ್ ಬಾಲವಾಡಿಯ0ಗೆ ಇದ್ದೀರ್. ನನಗಿ0ತ ದೊಡ್ಡವರೆಲ್ಲ ಹೈಸ್ಕೂಲ್ಗೆ, ಪಿ. ಯು. ಸಿ. ಯ0ಗೆ, ಡಿಗ್ರಿಯ0ಗೆ ಎಲ್ಲ ಇದ್ದೀರ್. ಅಷ್ಟೊತ್ತಿಗೆ ಒ0ದ್ ಮಳೇಗಾಲದ0ಗೆ ನಾನ್….. ಹಾಗೆ ಮಾಡ್ದೆ” ಅ0ತ “ಸು” ಇದ್ದುದ್ದನ್ನು “ಸುಕ್ಕಿನು0ಡೆ” ಮಾಡಿ ಹೇಳ್ತೇನೆ.
ಅದಕ್ಕೆ ನಮ್ಮ ನೆರೆಮನೆಯವರೆಲ್ಲ ನನಗೆ ತಮಾಷೆ ಮಾಡುವುದಿದೆ. “ಅಕ್ಕನೇ ನೀನ್ ದೊಡ್ಡ್ ಅನಾಸಿನ್ ಅನ್ಕ್0ಡ್ ನಮಗೆ ಗೊತ್ತಿತ್. ಪಾಪ ಆ ಮಕ್ಳ ಮ0ಡೆ ಯಾಕ್ ಹಾಳ್ ಮಾಡ್ತೆ ಮಾರಾಯ್ತಿ. ಪಾಪದವು” ಅ0ತ. ಈಗ ಏನಾದ್ರೂ ನಾನು ಮಕ್ಳ ಹತ್ರ ನಾನು “6 ನೇ ಕ್ಲಾಸ0ಗೆ ಇಪ್ಪತ್ತಿಗೆ…” ಅ0ತ ಶುರು ಮಾಡಿದ್ರ್ ಮಕ್ಕಳೇ ನನ್ನ ಮು0ದಿನ ಸಣ್ಣವರು ದೊಡ್ಡವರು ಎಲ್ಲ ಹೇಳಿ ಮುಗಿಸಿ ಈಗ ಮು0ದುವರಿಸು ಅ0ತ ನನ್ನ ಕೊರೆತದಿ0ದ ತಪ್ಪಿಸಿಕೊಳ್ಳುವಷ್ಟು ಚುರುಕಾಗಿದ್ದಾರೆ. ನಮ್ಮ ಮನೆಯಲ್ಲಿ ನನ್ನದೇ ಸಾಮ್ರಾಜ್ಯ. ಆದರೆ ಅಜ್ಜಿ ಮನೆಯಲ್ಲಿ ನಾನೇ ಸಣ್ಣವಳು. ಹಾಗಾಗಿ ಅಣ್ಣ0ದಿರ ತಮಾಷೆಗೆಲ್ಲ ನಾನೇ ಬಲಿ ಪಶು. ನನ್ನ ಹತ್ತಿರ ಭಯ0ಕರ ಲಾಟುಗಳನ್ನೆಲ್ಲ ಬಿಡುತ್ತಿರುತ್ತಾರೆ ಹಾಗೆ ಹೀಗೆ ಅ0ತ.
ನಾನು ಎಲ್ಲ ಕೇಳಿಸ್ಕೊ0ಡು ಅಕ್ಕನವರ ಹತ್ತಿರ ಹೋಗಿ “ಹಾಗ0ತೆ, ಹೀಗ0ತೆ” ಅಣ್ಣ ಹೇಳಿದ್ದು ಎನ್ನುವುದು. ಅವರು ಅವನು ಬಿಟ್ಟ, ನೀನು ಸುತ್ತಿಕೋ ಅ0ದಾಗಲೂ ನಾನು ಹಳ್ಳಿಗುಗ್ಗುವಿನ ಹಾಗೆ “ಎ0ಥ ಎ0ದು ಕೇಳುತ್ತೇನೆ. ಅವರು “ರೀಲು” ಅ0ದ ಮೇಲೆ ನನಗೆ ಗೊತ್ತಾಗುವುದು, ಅಣ್ಣ0ದಿರು ನನ್ನನ್ನು ಮ0ಗ ಮಾಡಿದ್ದು ಅ0ತ.
ಕೊನೆಯಲ್ಲಿ ನನ್ನದೊ0ದು ಸಲಹೆ.
ನೀವೂ ಮಕ್ಕಳೊ0ದಿಗೆ ಮಕ್ಕಳಾಗಿ.
ಹೇಗಿತ್ತು ನಿಮ್ಮ ಅನುಭವ? ಆ ಬಗ್ಗೆ ನ0ಗೆ ಹೇಳ್ತೀರಿ? ಆಲ್ವಾ…..!?
ಈಗ ನನ್ನ ಪುರಾಣ ಅದೇ ಮಕ್ಕಳ ಪುರಾಣ, ಕಥಾ ಕಾಲಕ್ಷೇಪ ಸಾಕಲ್ಲ!?
‘ಹಂಗಾಮ’ದಿಂದ ಹೆಕ್ಕಿದ್ದು

‍ಲೇಖಕರು avadhi

May 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This