ಪತ್ರಿಕೆ ಹಂಚುವವನಿಗಾಗಿ ಒಂದು ನಾಟಕ

ಶಿವು ಕೆ ಕಾಳಯ್ಯ

ಬಾನಸವಾಡಿಯಲ್ಲಿನ ದಿನಪತ್ರಿಕೆ ವೆಂಡರ್ ಶಿವಕುಮಾರ್ ಎನ್ನುವ ಹುಡುಗ ಕೊಲ್ಕತ್ತದ IIM ಗೆ ಆಯ್ಕೆಯಾಗಿರುವುದು ನಿಮಗೆಲ್ಲ ಗೊತ್ತಿದೆ. ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ವೆಂಡರುಗಳು ಆತನ ಸಹಾಯಾರ್ಥವಾಗಿ ಮಲ್ಲೇಶ್ವರಂನ ಸೇವಾಸದನ ಸಭಾಂಗಣದಲ್ಲಿ ಡಾ.ಬಿ.ವಿ.ರಾಜರಾಂ ನಿರ್ಧೇಶನದ “ಡಾ.ಎಚ್ ಎನ್.ನರಸಿಂಹಯ್ಯ 85 out-but not out” ನಾಟಕವನ್ನು ಅಯೋಜಿಸಿದ್ದರು. ನಾಟಕ ಮುಗಿದ ನಂತರ ಶಿವಕುಮಾರ್ ಗೆ ಸನ್ಮಾನ ಮತ್ತು ಚೆಕ್ ನೀಡಲಾಯಿತು. ಅದರ ಕೆಲವು ಫೋಟೊಗಳನ್ನು ಅವಧಿಯ ಆಪ್ತರಿಗೆ…

ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಪೋಟೋಗಳು ಶಿವು ಕೆ ಕಾಳಯ್ಯ:

‍ಲೇಖಕರು avadhi

June 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

5 ಪ್ರತಿಕ್ರಿಯೆಗಳು

 1. Srikanth K M

  ಡಾ. ಹೆಚ್ ಏನ್ ಅವರು ನಮ್ಮ ಗುರುಗಳು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ. ಅವರು ಕಟ್ಟಿ ಬೆಳೆಸಿದ ನ್ಯಾಷನಲ್ ಎಜುಕೇಶನ್ ಸೊಸೈಟಿಯಲ್ಲಿ ನನ್ನ ವಿಧ್ಯಾಸಭ್ಯಾಸ ನಡೆದದ್ದು ಅವರ ಜೊತೆ ಓಡಾಡಿದ್ದು, ಅವರ ಮಾತುಗಳನ್ನು ಕೇಳುವ ಸೌಭಾಗ್ಯ ದೊರೆತಿದ್ದು ಪುಣ್ಯವೇ ಸರಿ. ಸುಂದರ ನೆನಪುಗಳನ್ನು ತಾಜಾ ಮಾಡಿದ ನಿಮ್ಮ ಚಿತ್ರಗಳು ಖುಷಿ ಕೊಟ್ಟಿತು. ಹಾಗೆಯೇ ಜೀವನದಲ್ಲಿ ಮುಂದುವರೆಯಲು ಇಂತಹ ಅನೇಕ “ಶಿವಕುಮಾರ್”ಗಳು ನಿಜಕ್ಕೂ ಆದರ್ಶ ಪ್ರಾಯ. ಸುಂದರ ಚಿತ್ರಗಳು ಸುಂದರ ಕಾರ್ಯಕ್ರಮವನ್ನು ಸೊಗಸಾಗಿ ಬಿಂಬಿಸುತ್ತಿದೆ. ಧನ್ಯವಾದಗಳು ಶಿವೂ ಸರ್ ಹಂಚಿಕೊಂಡದ್ದಕ್ಕೆ

  ಪ್ರತಿಕ್ರಿಯೆ
 2. shivu K

  ಶ್ರೀಕಾಂತ್ ಸರ್: ಡಾ. ಹೆಚ್ ಏನ್ ಬಗ್ಗೆ, ಅವರ ಬದುಕಿನ ಹೋರಾಟದ ಬಗ್ಗೆ ನಾಟಕದಲ್ಲಿ ತುಂಬಾ ಚೆನ್ನಾಗಿ ಅನಾವರಣಗೊಳಿಸಿದ್ದಾರೆ. ಇದೇ ತಿಂಗಳ ೨೯ ರಂದು ಮತ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಆ ನಾಟಕ ಪ್ರಯೋಗವಿದೆ. ಸರಳವಾದ ಬದುಕು ಹೇಗೆಂಬುದನ್ನು ತಿಳಿಯಲು ಆ ನಾಟಕ ನೋಡಲೇಬೇಕು. ಡಾ.ರಾಜರಾಮ್ ನಾಟಕವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ನಿನ್ನೆ ಸಂಜೆ ಮತ್ತೆ ನಾನು “ವೆಂಡರ್ ಶಿವಕುಮಾರ” ನನ್ನು ಬೇಟಿ ಮಾಡಲು ಹೋಗಿದ್ದೆ. ತನ್ನ ಬದುಕಿನ ಬಾಲ್ಯ, ಸ್ಕೂಲು,ಕಾಲೇಜು, ಮನೆ, ಪೇಪರ್ ಬಾಯ್, ತನ್ನ ಗುರುಗಳು, ದಿನದ ೨೪ ಗಂಟೆಯೂ ಮಾಡಿದ ಅನೇಕ ಕೆಲಸಗಳು, ಕಷ್ಟಗಳು, ನೋವುಗಳು, ಇನ್ನೂ ಅನೇಕ ವಿಚಾರಗಳನ್ನು [ಅವು ಇದುವರೆಗೆ ಪತ್ರಿಕೆ ಮತ್ತು ಟಿವಿಗಳಿಗೆ ದಕ್ಕದ ಆತನ ವೈಯಕ್ತಿಕ ಬದುಕು] ನನ್ನೊಂದಿಗೆ ಹಂಚಿಕೊಂಡಿದ್ದಾನೆ. ಅವೆಲ್ಲವನ್ನು ನಾನು ನನ್ನ ಪುಟ್ಟ ಕ್ಯಾಮೆರ ಮತ್ತು ಮೊಬೈಲುಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ. ಬಿಡುವು ಮಾಡಿಕೊಂಡು ಅವನ ಬಗ್ಗೆ ಕತೆಯನ್ನು ಬರೆಯುವ ಆಸೆ. ಅವನ ಜೊತೆ ಇದ್ದಷ್ಟು ಹೊತ್ತು [ಎರಡು ಗಂಟೆಗಳು]ನನ್ನ ಬದುಕು ಪಾವನವಾಯ್ತು ಎಂದುಕೊಂಡಿದ್ದೇನೆ. ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

  ಪ್ರತಿಕ್ರಿಯೆ
 3. gururaj katriguppe

  First congradulations to Shivakumar for his achievement. He proved that only ‘hard work’ and ‘dedication’ can take one to any height, irrespective of his background. Thanks to ‘SHIVU’ for sharing these colourful photos with us

  ಪ್ರತಿಕ್ರಿಯೆ
 4. shivu K

  gururaj katriguppe,
  Thanks guru…we are venders…I am very happy because one newspaper vender become “IIM STUDENT”

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: