9 ನೇ ಮಹಡಿಯಲ್ಲಿ 'ಇರುಳ ಕಣ್ಣು'

-ಬಿ ಎ ವಿವೇಕ ರೈ
rai
ನಮ್ಮ ದೇಶದ ಸಮಯ ಬೆಳಗ್ಗೆ 11.30 ಕ್ಕೆ ಜರ್ಮನಿಯ ನೆಲದಲ್ಲಿ ಕಾಲು ಇಟ್ಟ ಬಳಿಕ ಈ ಕ್ಷಣದವರೆಗೆ ನಿದ್ದೆ ಮಾಡಿಲ್ಲ. ವೂರ್ಜ್ ಬರ್ಗ್ ಮುಟ್ಟಿದ್ದು ೧ ಗಂಟೆಗೆ. ಪ್ರೊ.ಹೈದ್ರುನ್ ಬ್ರುಕ್ನರ್ ಜೊತೆಗೆ ಪ್ರಯಾಣ, ಕನ್ನಡ ಮತ್ತು ಕರ್ನಾಟಕ ಅಧ್ಯಯನ ಬಗ್ಗೆ ಮಾತು, ಮಾತು, ಮಾತು…
ನಾಳೆ ವಿದ್ಯಾರ್ಥಿಗಳನ್ನ ಭೇಟಿ ಆಗುವುದು, ವಾರದ ಚಟುವಟಿಕೆಗಳು, ಸಮಾಲೋಚನಾ ಸಭೆಗಳು ಹೀಗೆ. ಜುಲೈ 30 ರಂದು ಕರ್ನಾಟಕ ಮತ್ತು ಬವೇರಿಯಾ ಸರಕಾರಗಳು ಪರಸ್ಪರ ಒಡಂಬಡಿಕೆಯ ಕ್ರಿಯಾಯೋಜನೆಗೆ ಸಹಿಹಾಕಿವೆ. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ, ಶಾಲಾ ಶಿಕ್ಷಣ, ಜೈವಿಕ ತಂತ್ರಜ್ಞಾನ ವಿಷಯಗಳಲ್ಲಿ. ಕನ್ನಡ ಮತ್ತು ಕರ್ನಾಟಕ ಅಧ್ಯಯನವನ್ನು ಇದಕ್ಕೆ ಸೇರಿಸಬೇಕು.
800px-Würzburg
ವೂರ್ಜ್ ಬರ್ಗ್ ವಿವಿಯ ಇಂಡಾಲಜಿ ವಿಭಾಗದಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿ ವಿಶಿಷ್ಟವಾಗಿ ಆಚರಿಸಿದ್ದಾರೆ. ಇಂದಿನ ಜರ್ಮನ್ ಇಂಡಾಲಜಿ ಬಗ್ಗೆ ಬ್ರುಕ್ನರ್ , ಇಂಡೋ ಜರ್ಮನ್ ಸಹಕಾರದ ಉಪಗ್ರಹ ಕಾರ್ಯಕ್ರಮದ ಬಗ್ಗೆ ಕಾರ್ತಿಕ್, ವೂರ್ಜ್ ಬರ್ಗ್ ವಿವಿಯಲ್ಲಿ ಭಾರತೀಯ ವಿಧ್ಯಾರ್ಥಿಗಳ ಬಗ್ಗೆ ಬಯೋ ಇನ್ಫಾರ್ಮ್ಯಾಟಿಕ್ಸ್ ವಿಭಾಗದ ಸಂತೋಷ್ ನೀಲಾ, ವೂರ್ಜ್ ಬರ್ಗ್ ಗಾಂಧೀ ಶಾಂತಿ ಪ್ರತಿಷ್ಠಾನದ ಬಗ್ಗೆ ಇಂಡಾಲಜಿ ವಿಭಾಗದ ಮರಿಯಾ ಹೆಸ್ಸೆ, ವೂರ್ಜ್ ಬರ್ಗ್ ವಿ ವಿ ಯವರ ಮಾತುಗಳು.ಮೂನಿಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅನುಪ್ ಮುದಗಲ್ ಅವರ ಆಶಯ ಭಾಷಣ. ಕೊನೆಯಲ್ಲಿ ಗಾಂಧಿ ಕುರಿತ ಸಿನೆಮಾ ಪ್ರದರ್ಶನ..
ಗಾಂಧಿಯ
ನೆನಪು
ಇಂದಾಲಜಿಯ
ಮೆಲುಕು
ಕನ್ನಡದ
ಕನಸು.
ಈ ದಿನ ವೂರ್ಜ್ ಬರ್ಗ್ ನಲ್ಲಿ ಎಲ್ಲೆಡೆ ಗಾಂಧಿಯ ಶಾಂತಿಯ ಮೌನ. ಸಂಜೆ ಏಳರ ಚರ್ಚ್ ಗಂಟೆಯ ನಾದ. ಮಧ್ಯಾಹ್ನದ ಥಾಯ್ ರೆಸ್ತೂರೆಂಟಿನ ಊಟದ ಬಳಿಕ ರಾತ್ರಿ ಊಟ ಬೇಡ. 9 ನೇ ಮಹಡಿಯ ನನ್ನ ಗೆಸ್ಟ್ ಹೌಸ್ ನ ವಿಶಾಲ ಕಿಟಿಕಿಯಿಂದ ಹೊರಗೆ ಇರುಳ ಕಣ್ಣು ಹಾಯಿಸಿದರೆ ಮಾಯಿನ್ ನದಿಯ ಎರಡು ಬದಿಯಲ್ಲಿ ಮಲಗಿರುವ ನಗರ ಭಾನುವಾರದ ರಜೆಯ ಸುಖದ ಮಂಪರಿನಲ್ಲಿದೆ. ದೀಪಗಳು ಮಾತ್ರ ನನಗಾಗಿ ಉರಿಯುತ್ತಾ ದೀಪಾವಳಿ ಆಚರಿಸುತ್ತಿವೆ.
New Image

‍ಲೇಖಕರು avadhi

October 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. h n eshakumar

    germany yalli irula kannu vihaara horatide aagale namagaagi anubhavada buttiya harasuta…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: