fbpx

Author: admin

ತೇಜಸ್ವಿ ಎಂಬ ‘ಮಳೆಗಾಲದ ಚಕ್ರ’

ಗಿರಿಜಾ ಶಾಸ್ತ್ರಿ ಪೂರ್ಣ ಚಂದ್ರ ತೇಜಸ್ವಿ ಎಂದ ಕೂಡಲೇ ಯಾಕೋ ಕಣ್ಣಮುಂದೆ ಬರುವುದು, ಅವರ ಕೊನೆಯ ಗಳಿಗೆಯಲ್ಲಿ ಅವರು ಹೊರಗಲ್ಲೋ ತಮ್ಮ ಸ್ಕೂಟರಿನಲ್ಲಿ ಹೋಗಿ ಬಂದುದು, ಹಾಗೆ ಬಂದ ಅವರು ಸ್ಕೂಟರಿಗೆ ನೇತು ಹಾಕಿದ್ದ ಚೀಲವನ್ನು ತೆಗೆಯಲು ಕೂಡಾ ವ್ಯವಧಾನವಿಲ್ಲದಂತೆ, ಬಿಟ್ಟ...

ಸಿಜಿಕೆ ಎಂಬ ಮಹಾಚೈತ್ರ

ಸಿಜಿಕೆ ನೆನಪಿನ ರಾಷ್ಟ್ರೀಯ ರಂಗೋತ್ಸವ ನಡೆಯುತ್ತಿದೆ. ಸಿಜಿಕೆ ನೆನಪನ್ನು, ಆತ ನಂಬಿದ ಆಲೋಚನೆಗಳನ್ನು ಜೀವಂತವಾಗಿಡಲು ದೊಡ್ಡ ದಂಡು ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ನಾನು ಈ ಹಿಂದೆ, ಇದೇ ಉತ್ಸವದ ವೇಳೆ ಸಿಜಿಕೆಯನ್ನು ನೆನಸಿಕೊಂಡಿದ್ದು ಇಲ್ಲಿದೆ   ಜಿ ಎನ್ ಮೋಹನ್      ಆ ಇಬ್ಬರೂ...

ಸಾಲಾಗಿ ನಿಂತ ಹನಿಗಳ ಹೊಳಪಿನ ತೇವ..

ಸೌರಭ ರಾವ್ ಮೋಡದೊಳಗಿನ ತೇವ ಮೋಡವೆಲ್ಲಾ ಮಳೆಯಾಗಿಬಿಡುವ ತೇವ ಧಗೆಯಲ್ಲಿ ದಣಿದ ಧರಿತ್ರಿ ಮೊದಲ ಮಳೆಗೆ ಸೂಸುವ ಮೃದ್ಗಂಧದ ತೇವ ಊರ ಹೊರಗಿನ ತಾವರೆ ಸರಸ್ಸಿನಲ್ಲಿ ಕಿರಿದಲೆಗಳು ಮೂಡಿ ಮರೆಯಾಗುವ ತೇವ ಹಳದಿ ಕರವೀರದೊಳಗೆ ಅಡಗಿ ಕೂತ ಇಬ್ಬನಿಯ ತೇವ ಮನೆಯ...

ನಕ್ಷತ್ರಗಳ ಮುಡಿಸಲೇ ಇಲ್ಲ ಮಾಧವ..

ಶುಭಾ ಎ.ಆರ್. ರಾಧೆ ಎಂಬ  ಖಾಲಿತನಕೆ ರಾಧೆ ಹೆರಳು ಬರಿದಾಗೇ ಉಳಿದಿದೆ ಇನ್ನು ಮಾಧವನೋ ನಕ್ಷತ್ರಗಳ ಮುಡಿಸಲೇ ಇಲ್ಲ ರಾಧೆ ಕೊರಳು ಬರಿದಾಗೇ ಬಣಗುಡುತಿದೆ ಇನ್ನು ಮಾಧವನೋ ಪಾರಿಜಾತದ ಮಾಲೆ ತೊಡಿಸಲೆ ಇಲ್ಲ ರಾಧೆ ಹೆಜ್ಜೆಗಳು ಬರಿದಾಗೇ ಉಳಿದಿವೆ ಇನ್ನು ಮಾಧವನೋ...

ಸುಡುವ ಹೃದಯದ ವಾಸನೆಗೆ ಸಾಟಿ ಇದೆಯೇ?

ಸಂಜ್ಯೋತಿ ವಿ.ಕೆ ಹೃದಯ ಸುಡುತ್ತಿರುವಾಗ ಒಂದು ಚಣವನ್ನೂ ವ್ಯಯ ಮಾಡದೇ ಬೇಗ ಬೇಗ ಬೇಗ ಕೈ ಕಾಯಿಸಿಕೊಳ್ಳ ಬೇಕು ಮೈ ಕಾಯಿಸುವುದನ್ನೂ ಮರೆಯದಿರು. ಏಕೆಂದರೆ…. ಹೃದಯಕ್ಕಿಂತ ಒಳ್ಳೆ ಉರುವಲು ಈ ಜಗತ್ತಿಗೆ ಇನ್ನೂ ಸಿಕ್ಕಿಲ್ಲ… ಸುಡುವ ಹೃದಯ ಬೇಯುವ ವಾಸನೆಗೆ ಸಾಟಿ...

ನೀರಾಗಿ ಹರಿದು ಒಂದಾಗುತ್ತೇನೆ,…..

ಭುವಿ ನಿನ್ನನ್ನು ಬೇಷರತ್ ಪ್ರೀತಿಸುತ್ತೇನೆ ನಿನ್ನ ನೆರಳ ಹಾಸಿನ ಮೇಲೆ ನೀರಾಗಿ ಹರಿದು ಒಂದಾಗುತ್ತೇನೆ, ದೂರದಿಂದಲೇ ನಿನ್ನ ಚಲನವಲನಗಳ ನಡುವೆ ಸುಳಿಯುವ ನನ್ನ ನೆನಪ ಗಮನಿಸಿ ನಸುನಕ್ಕಾಗ ಪುಳಕಿತಗೊಳ್ಳುತ್ತೇನೆ, ಚಂದ್ರನ ಜೊತೆಗೆ ಜಗಳಕ್ಕಿಳಿಯುತ್ತೇನೆ ನಿನಗೆ ತೊಡಿಸಿದ ಬೆಳದಿಂಗಳುಡುಗೆಯ ಗುಂಡಿಬಿಚ್ಚಿ ನನಗೂ ತಂದು...

ನನ್ನೆದೆಯ ರಾಜ್ಯಭಾರಕೆ ನಿನ್ನದೇ ಕಿರೀಟವಿರಲಿ  

      ಭುವಿ          ಪ್ರಬುದ್ಧತೆಯಲ್ಲಿ ಬುದ್ಧನಾಗದಿರು ಹೌಹಾರುತ್ತೇನೆ ನನ್ನೆದೆಯ ರಾಜ್ಯಭಾರಕೆ ನಿನದೆ ಕಿರೀಟವಿರಲಿ, ಯಶೋಧರೆಯೆಂದೂ ಹಸ್ತಾಂತರಿಸಲಿಲ್ಲ ತ್ಯಾಗದ ಜ್ಯೋತಿಯನ್ನು ನನ್ನ ಅಂಗೈಗೆ, ಜ್ಞಾನೋದಯಗಳಲ್ಲಿ ಉತ್ತರ ಸಿಗಬಹುದು ನಿನಗೆ, ನಿರುತ್ತರಿ ನಾನು, ಸಸ್ಯದ ಜೀವಂತಿಕೆಯ ಕುರುಹೂ...

ಮರೆವುದುಂಟೇ ಬಳೆಚೂರು ಗೀರಿದ ರಕ್ತಗೆಂಪು?

        ರಾಜ್ ಕುಮಾರ್ ಮಡಿವಾಳರ್ ಸುರಗಿ ನೀರು ಬಿದ್ದ ಹುಡುಗಿ ಕ್ಷಣದಲ್ಲಿ ಹೆಂಗಸಾದಂತೆ ಮಳೆ ಮಾರನೆದಿನದ ಬೆಳಕು! ಹಾದಿ ತುಂಬ ಉದುರಿ ಬಿದ್ದ ಗುಲ್ಮೋಹರ್ ಪಕಳೆ ಒಂದೊಂದು ಹೆಜ್ಜೆ ರುಬ್ಬಿಟ್ಟ ಹೂರಣದ ಮೇಲೆ ಇರುವೆ ನಡೆದಂತೆ ಬೀದಿಗೆಂಪು,...

ಮುತ್ತನ್ನು ಎಲ್ಲಿಡಲಿ ಮೋಹನಾಂಗೀ..

    ಆನಂದ್ ಋಗ್ವೇದಿ           ಮುತ್ತನ್ನು ಎಲ್ಲಿಡಲಿ ಓಮೋಹನಾಂಗಿ. ಪ್ರಿಯೆ ಶಕುಂತಲೇ, ಹೊತ್ತು ತಂದಿದ್ದೇನೆ ಮುತ್ತ ಮೂಟೆ ಕಾಡೇ ಗೂಡೇ ಉರುಳಿ ಹೋಗುವ ಮುನ್ನ ಹೇಳು ಎಲ್ಲಿಡಲಿ ಈ ಮುತ್ತು? ನೆತ್ತಿಯ ಮೇಲೆ ಕಡುಗಪ್ಪು...

ಶೇಷಾದ್ರಿ ದಿಗ್ಭ್ರಾಂತಿಯಾಗಿ ಕಣ್ಣು ಬಿಟ್ಟು ಕೂತ..

        ಬಯಲು.. ಸಂದೀಪ್ ಈಶಾನ್ಯ       ಸಂಜೆಯ ಮಳೆಯ ನಂತರ ಮತ್ತೆ ಅಗ್ರಹಾರದ ಬೀದಿ ಬಿಸುಪಾಗುವ ವೇಳೆಗೆ ನಿದ್ರೆಯ ಮಂಪರಿನಲ್ಲಿದ್ದ ಶೇಷಾದ್ರಿ ಹಾಸಿಗೆಯ ಮೇಲಿದ್ದುಕೊಂಡೆ ಸುತ್ತಲೂ ಕಣ್ಣಾಡಿಸಿದ. ಆಗಷ್ಟೇ ಮಳೆಯಾಗಿದ್ದರಿಂದ ಮೋಡ ಕವಿದು ಮನೆಯೊಳಗೂ...