fbpx

Author: avadhi

ಬ್ಲಡ್ ಡೈಮಂಡ್: ಅಂಗೋಲಾದ ಕಥೆಯಾಗದ ಕಥೆಗಳು

ಡಿಸೆಂಬರ್ 2009 ಅಂಗೋಲಾದ ಕವೂಬಾ ಎಂಬ ಪುಟ್ಟ ಹಳ್ಳಿ. ಡಿಸೆಂಬರ್ ತಿಂಗಳ ಆರಂಭದ ದಿನಗಳು. ದಿನವು ಎಂದಿನಂತೆ ತಣ್ಣಗಿತ್ತು. ಅಷ್ಟೇನೂ ದೊಡ್ಡದಾಗಿಲ್ಲದ ಸುರಂಗದಂತಿದ್ದ ಜಾಗವೊಂದರಲ್ಲಿ ನಲವತ್ತೈದು ಜನ ಕಾರ್ಮಿಕರು ತಮ್ಮಷ್ಟಕ್ಕೆ ತಮ್ಮ ನಿತ್ಯದ ಕಾರ್ಯದಲ್ಲಿ ಮಗ್ನರಾಗಿದ್ದರು. ಎಂದಿನಂತೆ ಅಂದೂ ಅವರು ಆ...

ಪ್ರೀತಿ ಸಂಭ್ರಮಿಸುತ್ತಿತ್ತು…ಸ್ನೇಹ ಸಮಾಧಿ‌ ಸೇರಿತ್ತು…

ಯಾವುದೇ ವಿಷಯದ ಮೇಲಾಗಲೀ ಒಂದು ಕತೆಯನ್ನು ಹೇಳದೇ ಸಮರ್ಥಿಸಿಕೊಳ್ಳದ ಗೆಳೆಯನೊಬ್ಬ, ಇಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಬದಲಾದಾಗ ಎರಡೂ ಉಳಿದುಕೊಳ್ಳುತ್ತವೆಯಾ? ಎಂಬ ತಾತ್ವಿಕ ವಿಷಯವು ಸ್ನೇಹಿತರ ವಲಯದಲ್ಲಿ ಚರ್ಚೆ ಆಗುತ್ತಿರುವಾಗ ತನ್ನದೇ ರೀತಿಯಲ್ಲಿ ಸಮರ್ಥಿಸಿಕೊಳ್ಳುವ ಸಲುವಾಗಿ ಈ ಕತೆಯನ್ನು ಹೇಳಿದ. *...

ಹೇಗೆ ದಂಡಿಸಿದ್ದಾರೆ ನೋಡಿ ಪ್ರೇಮವನ್ನು..

ಸವಿತಾ ನಾಗಭೂಷಣ ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತ್ತಿದೆ ಮರದ ಕೊಂಬೆಯಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ ಕೊಚ್ಚಿ ಹಾಕಿಹರು ಕೂಡು ರಸ್ತೆಯಲಿ ವಿಷಕ್ಕೆ ವಶವಾಗಿ ರೋಷಕ್ಕೆ ಈಡಾಗಿ...

ನಗರ ನಕ್ಸಲ್ ಕವಿತೆಗಳು: ಒದೆ ತಿನ್ನುವವನ ಅಫಿಡವಿಟ್

ಪ್ರಶಸ್ತಿಗೆ, ಸಲಹಾಮಂಡಳಿ ಸದಸ್ಯತ್ವಕ್ಕೆ, ಜಿ ಕೆಟಗರಿ ನಿವೇಶನಕ್ಕೆ, ಫ್ಲೆಕ್ಸಿಗೆ ಲಾಯಕ್ಕಾದ ನೂರಾರು ಸ್ಥಾನಗಳಿಗೆ ಅರ್ಜಿ ಹಾಕಿಕೊಳ್ಳದೆ ಬದುಕಿದ ಮೂರ್ಖತನಕ್ಕೆ ಪ್ರಾಯಶ್ಚಿತ್ತವಾಗಿ   ನೀಡಲೇಬೇಕಾಗಿದೆ ವಿವರಣೆಯ ಅಫಿಡವಿಟ್ಟು ದಾಳಿಕೋರರ ನಿಂದನೆಗಳಲ್ಲಿ ಸತ್ಯಾಂಶ ಇದ್ದೀತೆಂದು ಯುವ ಗೆಳೆಯರು ನಂಬುವ ಸಾಧ್ಯತೆ ಇರುವುದರಿಂದ ಎಂದು ಅಲವತ್ತುಕೊಳ್ಳುವ ಬುದ್ಧಿಗೇಡಿ ಒಂದು ದಿನ ಹಠಾತ್ತನೆ ನಡುಹಗಲು ನಾಗರಿಕರು ಉಂಡು ಆಲಸಿಗಳಾದ ಹೊತ್ತಲ್ಲಿ ವೈಜ್ಞಾನಿಕ ಮನೋಧರ್ಮದವನೆಂದು ಪ್ರಶ್ನೆಗಳನ್ನು ಕೇಳುತ್ತಾನೆಂದು ಆರೋಪಿಸಿ ಬಂಧಿಸಿದರು ನಗರ ನಕ್ಸಲ್ ಪಟ್ಟ ಕಟ್ಟಿ ದುರಂತದ ತಳ ಮುಟ್ಟಿ   ನಿನ್ನ ತಾತ ನೀರು ಎಂಜಲು ಮಾಡಿದ ತಪ್ಪಿಗೆ ನಿನಗೆ ಶಿಕ್ಷೆ ಎಂದು ಕುರಿಮರಿಯ ಮೇಲೆ ಎಗರಿಬಿದ್ದ ತೋಳಗಳು ಸಾಬೀತುಮಾಡಿದವು ಅಲ್ಪನಿಗೆ ಅಧಿಕ ಸಂದೇಹ ಚಾಳಿ ಸುಟ್ಟರೂ ಹೋಗದ ಹೀನ ಸುಳಿ ಸಿಕ್ಕಸಿಕ್ಕವರನ್ನು ಆರೋಪಿಸಿ ನಗರ ನಕ್ಸಲ್ ಎಂದು...

ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ..

ಅಶ್ಫಾಕ್ ಪೀರಜಾದೆ ಹಿರಿಯ ಕವಿ ಎ. ಎಸ್. ಮಕಾನದಾರ ಅವರ ಸಮಗ್ರ ಕವಿತೆಗಳ  ‘ಅಕ್ಕಡಿ ಸಾಲು’ ಸಂಕಲನದ  ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ…?’  ಕವಿತೆ ಸಹೃದಯ ಕಾವ್ಯಾಸಕ್ತರ ಗಮನ ಸೆಳೆಯಲು ಹಲವಾರು ಕಾರಣಗಳಿವೆ. ಕಾವ್ಯ ನಿಜಕ್ಕೂ ಹೆತ್ತವರ ನೋವ ರೋಧನ ಬಿಕ್ಕಳಿಕೆಗಳನ್ನೇ ಪ್ರತಿಧ್ವನಿಸುವಂಥದ್ದು,...

ನಗರ ನಕ್ಸಲ್ ಕವಿತೆಗಳು: ಕೊರಳಿಗೆ ತಗುಲಿ ಹಾಕಿಕೊಂಡ ಘೋಷಣೆ..

ಪರಿಣತಮತಿಗಳ್ ಕಾವ್ಯ ಗೊತ್ತಿಲ್ಲದವರ ಮುಂದೆ ಧ್ವನಿಯ ಪ್ರಯೋಗ ಕೂಡದು ಅಂತ ಗೊತ್ತಿಲ್ಲದವರು ಕೊರಳಿಗೆ ತಗುಲಿ ಹಾಕಿಕೊಂಡ ಘೋಷಣೆಯೇ ತುಂಬಾ ಸದ್ದು ಮಾಡಿ ಸಡ್ಡು ಹೊಡೆದು ನಾಯಿಮರಿ ನಾಯಿಮರಿ ತಿಂಡಿ ಬೇಕೇ ಎನ್ನುವುದನ್ನು ವಿರೋಧಿಸಿ ಪ್ರಾಣಿ ದಯಾ ಸಂಘದವರು ರಿಟ್ ಹಾಕಿ ತಿಂಡಿ...

ಅವನ ಪಕ್ಕದಲ್ಲಿ ಕಂಪಿಸುತ್ತಾ..

“ಪಾಪ” ಮೂಲ:Forugh Farrokhzad( Persian) ಅನುವಾದ: ಮೆಹಬೂಬ ಮುಲ್ತಾನಿ ನಾನೊಂದು ಭಾವಪರವಶವಾದ ಪಾಪ ಮಾಡಿದೆ ಕಿಚ್ಚೆಬ್ಬಿಸುವ ಬೆಚ್ಚಗಿನ ಅಪ್ಪುಗೆಯ ಛಲಭರಿತ ಧಗಧಗಿಸುವ ತೋಳುಗಳಲ್ಲಿ… ಒಂದು ಬರಿದಾದ ರಾತ್ರಿಯಲ್ಲಿ ಅವನ ಚಂಚಲಭರಿತ ಕಣ್ಣುಗಳಲ್ಲಿ ನನ್ನನ್ನೇ ಹಂಬಲಿಸುವುದನ್ನು ಕಂಡು ನನ್ನ ಹೃದಯ ಅಶಾಂತಗೊಂಡು ನನ್ನ...