fbpx

Category: ನುಣ್ಣನ್ನ ಬೆಟ್ಟ / ರಾಜಾರಾಂ ತಲ್ಲೂರು

ಸೋಲಿಸಿಕೊಳ್ಳುವ ಆಟದಲ್ಲಿ ಗೆದ್ದ ಕಾಂಗ್ರೆಸ್

ನಡೆದದ್ದು ಕತ್ತುಕತ್ತಿನ ಕದನ. ಅದನ್ನು ಓಟಿಂಗ್ ಪರ್ಸೆಂಟೇಜ್ ಖಚಿತಪಡಿಸುತ್ತದೆ. ಕಾಂಗ್ರೆಸ್ ನ್ನು ಜನ ನಿರಾಕರಿಸಿದ್ದಾರೆ. ಬಿಜೆಪಿ  ಕೊನೆಯ ಇಂಚು ಹಿಂದೆ ಉಳಿದಿದೆ ಎಂಬುದು ಈ ಕ್ಷಣದ ವಾಸ್ತವ. ಈಗ ಕರ್ನಾಟಕಕ್ಕೆ ಸಿಕ್ಕಿರುವುದು ಚೌಚೌ ಬಾತ್. ನ್ಯೂಟ್ರಲ್ ಗ್ರೌಂಡಿನಲ್ಲಿ ಚೌಚೌ ಬಾತ್ ಪ್ರಜಾಪ್ರಭುತ್ವಕ್ಕೆ ಬಹಳ...

ರಾಜಾರಾಂ ತಲ್ಲೂರು

ಥ್ಯಾಂಕ್ಸ್ ರಾಜಾರಾಂ ನಿಮ್ಮ ಪ್ರೀತಿಗೆ.. ಅದರ ರೀತಿಗೆ.. 

ರಾಜಾರಾಂ ತಲ್ಲೂರು ಅವರು ‘ಅವಧಿ’ಯಲ್ಲಿ ಅತ್ಯಂತ ಹೆಚ್ಚು ಕಾಮೆಂಟ್ ಪಡೆದ, ಚರ್ಚೆಗೆ ಒಳಗಾದ, ಟ್ರಾಲ್ ಗಳ ಕೆಂಗಣ್ಣಿಗೆ ಗುರಿಯಾದ… ಆದರೂ ಒಂದಿಷ್ಟೂ ಕಸುವು ಕಳೆದುಕೊಳ್ಳದೆ ಇನ್ನಷ್ಟು ಹುಮ್ಮಸ್ಸಿನಿಂದ ಬರೆದ ಅಂಕಣಕಾರ. ‘ಅವಧಿ’ಯಲ್ಲಿ ಸತತ ಎರಡು ವರ್ಷಗಳ ಕಾಲ ಅಂಕಣ ಬರೆದ ರೆಕಾರ್ಡ್ ಇರುವುದು ಇವರ...

ಆಡಿದ್ದೇ ಆಟ; ಮಾಡಿದ್ದೇ ಕಾನೂನು – ಜಿಯೊ ಮೇರೇ ಲಾಲ್!

ಈ ಕಂತಿನೊಂದಿಗೆ ಎರಡು ವರ್ಷಗಳ ಕಾಲ ‘ಅವಧಿ’ಯಲ್ಲಿ ಸಾಗಿಬಂದ “ನುಣ್ನನ್ನಬೆಟ್ಟ” ದ ಯಾನ ಕೊನೆಗೊಳ್ಳುತ್ತಿದೆ. ಪ್ರತೀವಾರ ಕಡ್ಡಾಯವಾಗಿ ಒಂದಿಷ್ಟು ಓದುವುದಕ್ಕೆ ಅವಕಾಶ ಮಾಡಿಕೊಟ್ಟ ಈ ಬರಹಗಳು ‘ಮಾತುಗಳನ್ನು ಆಡಲೇಬೇಕಾಗಿದ್ದ ಕೇಡುಗಾಲ’ದಲ್ಲೇ ಒದಗಿಬಂದದ್ದು ನನ್ನ ಅದ್ರಷ್ಟ. ಅಂಕಣದ ಎಲ್ಲ ಓದುಗರಿಗೆ, ಪ್ರತಿಕ್ರಿಯಿಸಿದವರಿಗೆ ನಾನು...

NOTA, ನೋಟಾ ನಿನ್ನ ಹಲ್ಲು ತೋರಿಸು…!!

ಸುಪ್ರೀಂ ಕೋರ್ಟು 2013ರಲ್ಲಿ ತೊಡಿಸಿ ಬಿಟ್ಟಿರುವ ಮುಂಡುಹಲ್ಲನ್ನು ಹಿರಿದು, ನಮ್ಮದು “ ನೋಟಾ” ಎಂದು ಪ್ರಕಟಿಸಿ, ಸಿಕ್ಕ ಸಿಕ್ಕವರಿಗೆಲ್ಲ ಕಚ್ಚುವ ಹೊಸದೊಂದು ಫ್ಯಾಷನ್ ಆರಂಭಗೊಂಡಿದೆ. ತಮಾಷೆ ಎಂದರೆ, ಕಚ್ಚಿಸಿಕೊಂಡವರಿಗೆ ಕಚ್ಚಿದ್ದರಿಂದ ನೋವಾಗಿದೆಯಾ ಎಂದು ಕೇಳುವ ಗೋಜಿಗೂ ಈ ನೋಟಾಗಳು ಹೋಗಿಲ್ಲ!! ಸಂವಿಧಾನದ...

ಚುನಾವಣಾನೀತಿಸಂಹಿತೆ ಎಂದರೆ… ಆಡಿದ್ದೇ ಆಟ!

ಸಭ್ಯರ ಆಟ ಕ್ರಿಕೆಟ್ಟಿನಲ್ಲಿ ಬಣ್ಣದ ಅಂಗಿ, ಬಣ್ಣದ ಬಾಲು, ಪುಟ್ಟ ಆವ್ರತ್ತಿಗಳು (ಸೀಮಿತ ಓವರ್, 20-20) ಬಂದಂತೆಲ್ಲ ಅದು ರಂಗುರಂಗಾಗತೊಡಗಿ ಎಲ್ಲರ ಕೈತಪ್ಪಿ ಹೋಗಿ ಕಾಸಿನವರ ಮನೆಯ ಆಳಾಗಿ, ಬುಕ್ಕಿಗಳ ತೋಳಾಗಿ ಕೂತದ್ದು ಈವತ್ತು ಚರಿತ್ರೆ. ಇಂತಹದೇ ಒಂದು ವರ್ಣರಂಜಿತ ಹಾದಿಯನ್ನು...

EVM= ಈ ವಿಚಿತ್ರ ಮೌನ!

“ನಮ್ಮನ್ನು ನಂಬಿ ಪ್ಲೀಸ್” ಎಂದು ಜಿಲ್ಲಾಡಳಿತಗಳ ಮೂಲಕ ಇಲೆಕ್ಟ್ರಾನಿಕ್ ಮತದಾನಯಂತ್ರಗಳು ಗೋಗರೆಯುತ್ತಿವೆ. ಜೊತೆಗೆ ನಂಬದಿದ್ದರೆ ಜಾಗ್ರತೆ ಎಂಬ ಚುನಾವಣಾ ಆಯೋಗದ ಎಚ್ಚರಿಕೆಯಮಾತುಗಳೂ ಇವೆ. ಇವಿಎಂ ಗಳ ಬಗ್ಗೆ ತಪ್ಪು ಮಾಹಿತಿ/ಸುಳ್ಳು ಹೇಳುವವರನ್ನು ಸೆರೆಮನೆಗೆ ತಳ್ಳಲಾಗುವುದು ಎಂಬ ಬೆದರಿಕೆಯೂ ಇದೆ. ಕರ್ನಾಟಕವೀಗ ಚುನಾವಣೆಯ ಹೊಸ್ತಿಲಿನಲ್ಲಿದೆ. ಇಂತಹದೊಂದುಸ್ಥಿತಿಯಲ್ಲಿ ಸಾರ್ವಜನಿಕರ ಪರವಾಗಿ ನಿಂತು ಇವಿಎಂಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ಒಂದೋ ಹೋಗಲಾಡಿಸುವ ಅಥವಾ ಸಾಬೀತು ಪಡಿಸುವ ಜವಾಬ್ದಾರಿ ಹೊರಬೇಕಿದ್ದ ನಮ್ಮ ಮಾಧ್ಯಮಗಳು ವಿಚಿತ್ರಮೌನಕ್ಕೆ ಶರಣಾಗಿರುವುದು ಬಿರುಗಾಳಿಯ ಮೊದಲಿನ ರೌದ್ರ ಪ್ರಶಾಂತ ವಾತಾವರಣದಂತೆ ತೋರತೊಡಗಿದೆ. ಪ್ರಾತ್ಯಕ್ಷಿಕೆ ಯಂತ್ರಗಳ ಮೂಲಕ, ಪವರ್ ಪಾಯಿಂಟ್ ಗಳ ಮೂಲಕ ಸರ್ಕಾರವು ಮತದಾನ ಯಂತ್ರಗಳು ಸರ್ವ ಸುರಕ್ಷಿತ ಎಂದು ಹೇಳುತ್ತಿರುವಂತೆಯೇ ಇನ್ನೊಂದೆಡೆ ತೆಳ್ಳಗೆ ಅಲ್ಲಲ್ಲಿ ಯಂತ್ರಗಳು ನೂರಕ್ಕೆನೂರು ಸರಿಯಾಗಿಲ್ಲ ಎಂಬುದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಉದಾ: 1. ಮೊನ್ನೆ ಮಾರ್ಚ್ ನಲ್ಲಿ ಮಧ್ಯಪ್ರದೇಶದ ಭೀಂಡ್ ಉಪಚುನಾವಣೆಯ ಮುನ್ನ ಪ್ರಾತ್ಯಕ್ಷಿಕೆಗೆಂದು ಬಳಸಲಾಗಿದ್ದ ಇವಿಎಂನಲ್ಲಿ VVPATನ ಎಲ್ಲ ಮತಗಳೂ ಕಮಲ ಗುರುತಿಗೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಅಲ್ಲಿನ ಜಿಲ್ಲಾಧಿಕಾರಿ ಸಹಿತ 19 ಅಧಿಕಾರಿಗಳನ್ನು ಅಮಾನತು ಮಾಡಿತ್ತು. 2....

‘ಪೋಸ್ಟ್ ಕಾರ್ಡ್’ ರಿಪಬ್ಲಿಕ್ಕು ಮತ್ತು ಸುದ್ದಿಸೂರು

ಈ ಪುರಾಣವನ್ನು ನಾನು ಪೂರ್ವ ಯುರೋಪಿನ ಮಸೆಡೋನಿಯಾದ ವಿಲ್ಸ್ ಪಟ್ಟಣದಿಂದ ಆರಂಭಿಸಬೇಕು. 2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಭರಾಟೆ ಜೋರಾಗಿತ್ತು. ಆಗ, ಅಭ್ಯರ್ಥಿ ಟ್ರಂಪ್ ಪರವಾಗಿ ಒಂದಷ್ಟು ರಸವತ್ತಾದ ಸುಳ್ಳುಸುಳ್ಳೇಸಂಗತಿಗಳು ಫೇಸ್ ಬುಕ್ಕು, ಟ್ವಿಟ್ಟರ್ ಗಳಲ್ಲಿ ವೈರಲ್ ಆಗಿ ಪ್ರಚಾರ ಪಡೆಯತೊಗಿದವು. ಅದೂ ಎಂತಹ ರಸವತ್ತಾದ ತಲೆಬರಹದ ಸುದ್ದಿಗಳೆಂದರೆ: “ ಟ್ರಂಪ್ಅಮೆರಿಕ ಅಧ್ಯಕ್ಷರಾಗಲು ಪೋಪ್ ಫ್ರಾನ್ಸಿಸ್ ಒಪ್ಪಿಗೆ”, “ ಹಿಲರಿ ಕ್ಲಿಂಟನ್ ಟ್ರಂಪ್ ಪರ ಏನು ಹೇಳಿದ್ರು ಗೊತ್ತಾ?!”, “ಹಿಲರಿ ಇಮೇಲ್ ಲೀಕ್ ಪತ್ತೆ ಮಾಡಿದ ಎಫ್ ಬಿ ಐ ಗೂಢಚರನ ಕಥೆ ಏನಾಯ್ತು!”.. ಈ ರೀತಿ ಮುಖ್ಯ ವಾಹಿನಿಗಳಲ್ಲಿ ಇಲ್ಲದ ಸುದ್ದಿಗಳು ಎಲ್ಲಿಂದ ಈ ಪ್ರಮಾಣದಲ್ಲಿ ಹರಿದುಬರುತ್ತಿವೆ ಎಂದು ಹುಡುಕಹೊರಟವರಿಗೆ ಅಚ್ಚರಿ ಕಾದಿತ್ತು. ಅಮೆರಿಕಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಮಸೆಡೋನಿಯಾದ ವಿಲ್ಸ್...

ಜ್ಯೂಸೇ ಇಲ್ಲ ಬರೇ ಗ್ಯಾಸು!

ಡೇಟಾ ಮೈನಿಂಗ್ ವಿವಾದ ಕಂತು – 3 ಒಂದು ಶಿಕ್ಷೆ ಆಗಬೇಕಿದ್ದರೆ, ಒಂದು ಅಪರಾಧ ಆಗಬೇಕು, ಆಗಿರುವುದು ಅಪರಾಧ ಎಂದು ಸಾಬೀತಾಗಬೇಕು, ಅದನ್ನು ವ್ಯಾಖ್ಯಾನ ಮಾಡುವ ಒಂದು ಕಾನೂನು ಬೇಕು. ಇದ್ಯಾವುದೂ ಇಲ್ಲದೆ ಬರೇ “ ಹಗರಣ” “ ಹಗರಣ” ಎಂದು...

ಕೊಟ್ಟದ್ದು ಕೋಲಲ್ಲ; ತಿಂದದ್ದು ಪೆಟ್ಟಲ್ಲ !

ಡೇಟಾ ಮೈನಿಂಗ್ ವಿವಾದ ಕಂತು – 2   ನಿಮಗೆ ಫೇಸ್ ಬುಕ್ ಖಾತೆ ಇದೆಯೇ? ಟ್ವಿಟ್ಟರ್ ಖಾತೆ ಇದೆಯೇ? ನಿಮ್ಮ ಫೇಸ್ ಬುಕ್ ಖಾತೆಯನ್ನು ತೆರೆಯುವಾಗ, ಫೇಸ್ ಬುಕ್ ನ ಎಲ್ಲ ಶರತ್ತುಗಳ ಒಪ್ಪಿಗೆ ಪತ್ರಕ್ಕೆ ಒಪ್ಪಿಗೆ ಬಟನ್ ಒತ್ತಿರುತ್ತೀರಿ. ...

ಅಂಡು ಸುಡಲಾರಂಭಿಸಿರುವ ಐಟಿ ಪ್ರಮಾದ..

ಡೇಟಾ ಮೈನಿಂಗ್ ವಿವಾದ ಕಂತು – 1   ದೇಶದಲ್ಲಿಂದು ಅತ್ಯಂತ ಅಸಂಘಟಿತ ಉದ್ದಿಮೆ ಕ್ಷೇತ್ರ ಅಂದರೆ ಯಾವುದು? ನಿಚ್ಚಳವಾಗಿ ಮಾಹಿತಿ ತಂತ್ರಜ್ನಾನ ಅಥವಾ ಐಟಿ ಉದ್ದಿಮೆ. ಭಾರತದ ವ್ಯವಹಾರೋದ್ಯಮಗಳನ್ನು ನಿಯಂತ್ರಿಸಲು ‘ಕಂಪನಿ ಕಾಯಿದೆ -1956’ ಮತ್ತು ಅದರದೇ  ಆದ ಒಂದು...