fbpx

Category: ನೆನಪು

ಅಪ್ಪನ ವಾಚನ್ನು ಮತ್ತೆ ಧರಿಸಿದಾಗ..!

ನೇಸರ ಕಾಡನಕುಪ್ಪೆ  ಇದು ನನ್ನ ತಂದೆ ನಿಧನರಾಗಿ ಮೂರನೆಯ ತಿಂಗಳು. ನನ್ನ ತಂದೆಯವರನ್ನು ಕುರಿತು ಒಂದು ವಿಶೇಷವಾದ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಇದು ನನ್ನ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆ. ಆದರೆ, ಅದು ನನ್ನ ಮೇಲೆ ಬೀರಿದ ಪ್ರಭಾವ...

ನಿನ್ನ ವಾಯಲಿನ್ ಕಲರವ ಇಲ್ಲದೆ..

ಕಮಲಾಕ್ಷ ಅಮೀನ್  ಸುಮಾರು ಒಂದೂವರೆ ದಶಕಗಳ ಹಿಂದೆ ನನ್ನ ಮಿತ್ರ ಆ ಹುಡುಗನನ್ನು ನನಗೆ ಪರಿಚಯಿಸಿದ್ದ . ಆಕರ್ಷಕವಾದ ಯಾರನ್ನೂ ಸೆಳೆಯುವ ವ್ಯಕ್ತಿತ್ವ,ಮುಖದಲ್ಲಿ ತೇಜಸ್ಸು . ಆ ಮುಗ್ದ ಮುಖದಲ್ಲಿ ಸದಾ ಕಂಡೂ ಕಾಣದಂತಿರುವ ಮುಗುಳ್ನಗೆ . ಆ ಹುಡುಗ ಮಿತಭಾಷಿ...

ಅಮೃತಾಳ ದಾರಿ ನೋಡುತ್ತ ಒಂದು ವರುಷ….

ಪ್ರದೀಪ್ ರಕ್ಷಿದಿ  ಅಮೃತಾ, ಯಾನ ಆರಂಭಿಸಿ ಒಂದು ವರುಷ. ಅಪ್ಪ ನಾನು ಕಾಲಯಾನವನ್ನೇರುತ್ತೇನೆ ಎಂದಿದ್ದಳು. ಆದರೆ ತನ್ನ ಇಹದ ಜಾಡಿನಲ್ಲಿ ಯಾರನ್ನೂ ಹಳಿಯಲಿಲ್ಲ. ಅದಕ್ಕೆ “ಅಮೃತಯಾನ” ವೇ ಸಾಕ್ಷಿ. ಎಲ್ಲವನ್ನೂ ಸ್ವೀಕರಿಸಿ ಕೊನೆಯ ದಿನವರೆಗೂ ಬದುಕಿಗಂಟಿಯೇ ಬದುಕಿದಳು. ಅವಳ ನಿರಾಕರಣೆಯಿದ್ದುದು “ಮೀಡಿಯೋಕರ್”ಗಳ...

ಪ್ರೀತಿಯ ಪ್ರೊ ಗಿರಡ್ಡಿ ಗೋವಿಂದರಾಜ ನಮಸ್ಕಾರ್ರೀ ಸರ್..

 ಕುಂ.ವೀರಭದ್ರಪ್ಪ  ಪ್ರೀತಿಯ ಪ್ರೊ ಗಿರಡ್ಡಿ ಗೋವಿಂದರಾಜ ನಮಸ್ಕಾರ್ರೀ ಸರ್ ಹೋಗುವವರು ಹೋದ ಬಳಿಕ ನೀವು ಹೊರಡುವಿರೆಂದು ಭಾವಿಸಿದ್ದೇ ಪರಪಾಟಾಯಿತು ನೋಡಿರಿ. ಹೊರಡೋಕೆ ಯಾಕೆ ಅವಸರ ಮಾಡಿದಿರಿ? ಇತ್ತೀಚಿಗೆ ನೀವು ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಿರಿ, ಅದೂ ಕೈಯಲ್ಲಿ ಸಿಗರೇಟು ಹಿಡಿದುಕೊಂಡೆ....

ತುಂಬಾ ಬೋರ್ ಹೊಡೆಸುತ್ತಿದ್ದರು ಆದರೆ ಹಾರ್ಮ್ ಲೆಸ್ ವ್ಯಕ್ತಿ..

ಪ್ರತಿಭಾ ನಂದಕುಮಾರ್  ತುಂಬಾ ಬೋರ್ ಹೊಡೆಸುತ್ತಿದ್ದರು ಆದರೆ ಹಾರ್ಮ್ ಲೆಸ್ ವ್ಯಕ್ತಿ. ಒಂದು ದಿನ ರಾತ್ರಿ ಹನ್ನೆರಡರ ಮೇಲೆ ಅವರು ಫೋನ್ ಮಾಡಿ “ನೋಡಿ ಕಾವ್ಯ ಅಂದರೆ…” ಅಂತ ಮಾತು ಶುರು ಮಾಡಿದ ತಕ್ಷಣ ನಾನು ಅವರನ್ನು ಅರ್ಧದಲ್ಲೇ ನಿಲ್ಲಿಸಿ “ಸಾರ್..ನಾವು ಸಂಸಾರಸ್ಥರು...

ನಿಮ್ಮ ಕವಿತೆಗಳು ನಮ್ಮ ಜೊತೆಗಿವೆ ನಿಮ್ಮ ನೆನಪುಗಳಾಗಿ!..

ಕು.ಸ.ಮಧುಸೂದನ, ರಂಗೇನಹಳ್ಳಿ ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ  ಮನಸಿಗೆ ಪಿಚ್ಚೆನ್ನಿಸಿಬಿಟ್ಟಿತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನಬಹುದು. ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು...

ಸುಮತೀಂದ್ರ ನಾಡಿಗರ ದಾಂಪತ್ಯಯೋಗದಲ್ಲಿ ಅರಳಿದ ಕಾವ್ಯ

ದಾಂಪತ್ಯಯೋಗದಲ್ಲಿ ಅರಳಿದ ಕಾವ್ಯ. (ಸುಮತೀಂದ್ರ ನಾಡಿಗರ ದಾಂಪತ್ಯ ಗೀತೆಗಳು) ಗಿರಿಜಾಶಾಸ್ತ್ರಿ ಮುಂಬಯಿಯಲ್ಲಿ ಗುರುನಾರಾಯಣ ಪ್ರಶಸ್ತಿಯನ್ನು ಸ್ವೀಕರಿಸಿದ ವಸಂತ ದಿವಾಣಜಿಯವರೊಡನೆ ವ್ಯಾನಿನಲ್ಲಿ ಮರಳಿ ಬರುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಅವರು “ಕನ್ನಡ ಸಾಹಿತ್ಯದೊಳಗಾ..ಪ್ರೇಮಕಾವ್ಯ ಅನ್ನೂದು ಇಲ್ಲೇಇಲ್ಲ. ಇರೂದೆಲ್ಲಾ ಬರೀ soliloques’ ಎಂದಿದ್ದರು. ಗಾಬರಿಯಾದ ನಾನು,...

ಅಪ್ಪನ ನಗುಮುಖವನ್ನು ನೋಡುವುದು ನನಗೆ ಬಹಳ ಖುಷಿ ಕೊಡುತಿತ್ತು..

ಅಪ್ಪನ ಹಾದಿ ಪ್ರೀತಿ, ಸಹನೆ, ಅಂತಃಕರಣ. ಸುಶಿ ಕಾಡನಕುಪ್ಪೆ  ಅಪ್ಪನ ಪ್ರೀತಿಯ ಆರೈಕೆಯಲ್ಲಿ ನಾನು ಅರಳಿದ್ದೇನೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ತೋರಿಸಿರುವ ಹಾದಿಯಿದೆ. ನಾನು ಕಂಡಂತೆ ಅಪ್ಪನ ಹಾದಿ ಪ್ರೀತಿ, ಸಹನೆ ಮತ್ತು ಅಂತಃಕರಣ. ಅವರ ಪ್ರೀತಿ ಸಹಜೀವಿಗಳಿಗಾಗಿತ್ತು. ಹಾಗಾಗಿ...

ನನ್ನ ಕಣ್ಣೆದುರು ನರಗುಂದ ಬಂಡಾಯ..

ಜಿ ಎನ್ ನಾಗರಾಜ್  ಕರ್ನಾಟಕದ ರೈತ ಚಳುವಳಿಯ ಹೊಸ ಅಲೆಯನ್ನು ಎಬ್ಬಿಸಿದ ನರಗುಂದ, ನವಲಗುಂದ ರೈತ ಬಂಡಾಯ, ನನ್ನ ಬದುಕನ್ನು ಗುರುತು ಸಿಗದಂತೆ ಬದಲಿಸಿದ ಹೋರಾಟ. “ರೈತರು ಬರುವರು ದಾರಿಬಿಡಿ, ರೈತರ ಕೈಗೆ ರಾಜ್ಯ ಕೊಡಿ .” “ಈಗ ಮಾಡೀವಿ ಆರಂಭ,...

ಆದರ್ಶ ಕಲಿಸಿದ ಅಪ್ಪ… ಕಾಡನಕುಪ್ಪೆ

ನೇಸರ ಕಾಡನಕುಪ್ಪೆ ಸುಮಾರು 25 ವರ್ಷಗಳ ಹಿಂದಿನ ಕಾಲವದು. ಆಗಿನ್ನೂ ನಾನು ನಾಲ್ಕೈದು ವರ್ಷದ ಬಾಲಕನಾಗಿದ್ದೆ. ಮೈಸೂರಿನಲ್ಲಿ ನಿಜವಾದ ಪ್ರಗತಿಪರರು ಇದ್ದ ಕಾಲವದು. ಆಗ ಹೆಚ್ಚಾಗಿ ಕೋಮುಗಲಭೆಗಳು ದೇಶದಾದ್ಯಂತ ನಡೆಯುತ್ತಿವು. ಇದಕ್ಕೆ ಪೂರಕ ಎಂಬಂತೆ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ದತ್ತ ಜಯಂತಿಯಂತಹ ಕಾರ್ಯಕ್ರಮಗಳು...