fbpx

Category: ನಮ್ಮೂರು.. ನಮ್ಮೋರು..

ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು

ರಾಘವೇಂದ್ರ ಬೆಟ್ಟಕೊಪ್ಪ    ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು ಗಾನ ‘ಕೋಗಿಲೆ’ಯ ಇಷ್ಟದ ಪದ್ಯಗಳು ಇವರು ಯಕ್ಷಗಾನದ ಪೌರಾಣಿಕ ಆಖ್ಯಾನದ ಪ್ರಸಿದ್ಧ ಭಾಗವತರು. ಅದೇಕೋ ಗೊತ್ತಿಲ್ಲ. ಅವರು ಒಂದು ಕ್ಷಣ ಬಿಡುವಿದ್ದರೂ ಸಾಕು, ಹಿಂದುಸ್ತಾನಿಯ ಪದ್ಯಗಳನ್ನು, ಹಳೆಯ ಗೀತೆಗಳನ್ನು ಗುಣಗುಣಿಸುತ್ತಲೇ ಇರುತ್ತಾರೆ....

ಈ ಮಧ್ಯೆ ದೆಹಲಿಯಲ್ಲಿ..

ಜೆ ಎನ್ ಯುವಿನಂಥ ಕಡೆ ಕನ್ನಡ ಕಟ್ಟುವ ಬಗೆ ಹೇಗೆ? ಸುತ್ತ ಹಿಂದಿ ಉರ್ದು ಭಾಷಿಕರು, ಪ್ರಾದೇಶಿಕ ಭಾಷೆಗಳ ಬಗ್ಗೆ ಅಷ್ಟೇನೂ ತಿಳುವಳಿಕೆಯಿಲ್ಲದ ಆಡಳಿತಗಾರರು. ಕರ್ನಾಟಕ ರಾಜ್ಯದ ಭಾಷೆ ಸಂಸ್ಕೃತಿಯ ಕುರಿತು ಆಸಕ್ತಿ ಇರುವ ಸಂಶೋಧಕರನ್ನು ಕನ್ನಡ ಪೀಠದ ಕಡೆ ಆಕಷಿಸುವ ಬಗೆ ಹೇಗೆ? ಅನುವಾದ, ಬೋಧನೆ, ಸಂಶೋಧನೆ, ಗ್ರಂಥಾಲಯ,  ಇತ್ಯಾದಿ ಚಟುವಟಿಕೆಗಳನ್ನು ರಾಷ್ಟ್ರೀಯ ಚೌಕಟ್ಟಿನಲ್ಲಿ ಉಪಯುಕ್ತವಾಗಿ ಆಯೋಜಿಸುವ ಕ್ರಮ ಯಾವುದು? ಕೆಲಸವೇನೋ ಮಾಡಬಹುದು, ಆದರೆ ಹಣ ಎಲ್ಲಿಂದ ಬರುತ್ತದೆ?, ಸದ್ಯ ಒಬ್ಬನೇ ಇರುವ  ಪೀಠವನ್ನು ವಿಸ್ತರಿಸುವುದು ಹೇಗೆ ? -ಹೀಗೆ ಹೊರಗಿನ ರಣ ರಣ ಬಿಸಿಲಿನ ಜೊತೆ ಮಂಡೆ ಬಿಸಿಕೊಂಡಿರುವ ಹೊತ್ತು...

ಹಾಯ್ ವಸಂತ..!!

ಎಂ ಆರ್  ಕಮಲ ವಸಂತ ಬಂದ, ಋತುಗಳ ರಾಜ ತಾ ಬಂದ, ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ, ಜಗ್ ಜಗ್, ಪುವ್ವಿ, ಟೂವಿಟ್ಟವೂ ! ಶಾಲೆಯ ಪಠ್ಯಪುಸ್ತಕದಲ್ಲಿದ್ದ ಬಿ ಎಂ ಶ್ರೀಯವರ `ವಸಂತ’ ಕವಿತೆಯನ್ನು...

ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

        ಅಮರನಾಥ್           ನಮ್ಮದು ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಊರು.. ಶೈಕ್ಷಣಿಕ ಫಲಿತಾಂಶಗಳ ಆಧಾರದಲ್ಲಿ ಹೇಳೋದಾದರೆ ನಾವು ಅತ್ಯಂತ ದಡ್ಡರು.. ಅಂದಹಾಗೆ, ನಮ್ಮ ಎರಡೂ ಜಿಲ್ಲೆಗಳಲ್ಲಿ ಸಾಕಷ್ಟು ಮುಸಲ್ಮಾನರಿದ್ದಾರೆ…...

ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…

        ಶಿವಾನಂದ ತಗಡೂರು       ನಮ್ಮೂರಿನ ಗೊಮ್ಮಟನ ಮಹಾಮಜ್ಜನಕ್ಕೆ ದಿನಗಣನೆ ಶುರುವಾಗಿದೆ. ಅಹಿಂಸೆ, ತ್ಯಾಗದ ನೆಲೆವೀಡು ಶ್ರವಣಬೆಳಗೊಳಕ್ಕೆ ವರ್ಷದಲ್ಲಿ ಹತ್ತಾರು ಬಾರಿ ಹೋಗುತ್ತಿದ್ದರೂ ಅದು ಸ್ವಾಮೀಜಿ ಭೇಟಿ ಅಥವಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗುತ್ತಿತ್ತು....

ಹರವುನಲ್ಲಿ ‘ಧರೆಗೆ ದೊಡ್ಡವರು’

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಹಾಡಿಸುವುದು ನನ್ನ ಕನಸಾಗಿತ್ತು. ಬೆಂಗಳೂರಿನ ‘ಸಂವಾದ’ ಸಂಸ್ಥೆಯ ಮೂವತ್ತು ಯುವಕ ಯುವತಿಯರ ತಂಡ ನಮ್ಮ ದೇವರಕಾಡು...

ನನ್ನ ಕಾಗದದ ದೋಣಿ..

ಅಲಕಾ ಜಿತೇಂದ್ರ ತವರೂರಲ್ಲಿ ಮುಂಗಾರಿನ ಆರ್ಭಟ. ಈ ಕೊಲ್ಲಿ ರಾಷ್ಟ್ರದಲ್ಲಿ ಕೊಲ್ಲುವಂಥ ಬಿಸಿಲು. ಆದರೂ ಇಳೆಯ ತಣಿಸುವ ಮಳೆಯ ನೆನಪೇ ಸಾಕು ನನ್ನೊಳಗಿನ ಮಧುರ ನೆನಪುಗಳ ಎಳೆ ಎಳೆಯಾಗಿ ಬಿಡಿಸಲು. ಮಳೆಗೂ, ನೆನಪುಗಳಿಗೂ ಅದೇನು ಬಾಂಧವ್ಯವೋ ? ಅಮ್ಮನೂ ಪ್ರತಿ ಮಳೆಗಾಲಕ್ಕೆ...

ಊರ ಸುಟ್ಟು ಉಗಾದಿ ಮಾಡೋ ದಿನಗಳು

ಗುರುತು ಉಗಾದಿ ಹೊತ್ಗೆ ಅಡ್ಡ ಮಳೆ ಹೂದ ವರ್ಶ ಬಾವಿಲಿ ನೀರು ಇಂಗತಿರಲಿಲ್ಲ. ಮಳೆ ಹುಯ್ಯದು ಮುಂದಕೋತು ಅಂದ್ರೆ ಉಗಾದಿ ರಾತ್ರಿ ಬೆಳಗೂವೆ ಊರು ಎಣ್ಣೆತಾನಕ್ಕೆ ಅಂತ ನೀರ ತೋಡಿ ತೋಡಿ ಪಾತಾಳ ಕಾಣಸಬುಡದು. ಕೆಸರಂಡಲ್ಲಿ ವರುಷ ಪೂರ್ತಿ ಬಾವಿಗೆ ಬಿದ್ದು...

ಸಂಸಾರ ಅನ್ನದ ಎದೆ ಒಳಗಿಟ್ಕಂಡು ಕಾಯ್ಕ ಬೇಕು..

೨ ಸಣ್ಣಮ್ಮಿ ಅನ್ನೋ ಹರೆದ ಹುಡ್ಗಿ ಈಗಿನ್ನೂ ಮೈ ಬಣ್ಣ ತಿರೊಗೊ ಪ್ರಾಯಾದಾಗೆ ಆಗಲೆ ಊರಿನ ವರಸೆ ಅಂಗೆ ಒಂದ ಮಗಿನ, ತಾಯೂ ಆಗೋಗಿದ್ಲು. ಕಂಕಳಲ್ಲಿ ಎಳೆ ಕೂಸ ಹೊತ್ಕಂಡು, ತಲೆ ಮೇಲೆ ಆಕ್ಕಾಶನೆ ಕಳಚ್ಕೊಂಡು ಬಿದ್ದಂಗಿರೋಳು. ನೋಡ್ತ.. ನೋಡ್ತಲೇ ದೇವರ...

ಕೆಸ್ರು ಗದ್ದೆಲಿ ಆದ ಅವಮಾನನೆ ದೊಡ್ದಾಯ್ತು-

ಸಂಬಂಧ ೧ ಹಿಂಗೆ ನಮ್ಮ ಮನೇಲಿ ದೊಡ್ಡ ಅನ್ನೊ ಹೆಸರಿನ ಒಬ್ಬ ಇದ್ದ. ಕೋರ ಹುಡುಗ ಆಗಿದ್ದಾಗಲೇ ಅವನನ್ತಂದು ಅಜ್ಜಯ್ಯ ನಮ್ಮನಿಗ್ ಹಾಕ್ಕೊಂಡಿದ್ರು. ಆರಂಭ ಮಾಡಕೆ ಅಂತಲೇ ಇಂತೋರು… ಯಾರ ಸಿಕ್ಕುದ್ರು ಕರ್ಕಂಬರರು. ದಿಕ್ಕುದೆಸೆ ಇಲ್ದೋರು ಇಂಗಬಂದು, ಈ ಊರಲ್ಲೇ ಉಳ್ದು...