fbpx

Category: ಹಾಯ್! ಅಂಗೋಲಾ.. / ಪ್ರಸಾದ್ ನಾಯ್ಕ್

ಬ್ಲಡ್ ಡೈಮಂಡ್: ಅಂಗೋಲಾದ ಕಥೆಯಾಗದ ಕಥೆಗಳು

ಡಿಸೆಂಬರ್ 2009 ಅಂಗೋಲಾದ ಕವೂಬಾ ಎಂಬ ಪುಟ್ಟ ಹಳ್ಳಿ. ಡಿಸೆಂಬರ್ ತಿಂಗಳ ಆರಂಭದ ದಿನಗಳು. ದಿನವು ಎಂದಿನಂತೆ ತಣ್ಣಗಿತ್ತು. ಅಷ್ಟೇನೂ ದೊಡ್ಡದಾಗಿಲ್ಲದ ಸುರಂಗದಂತಿದ್ದ ಜಾಗವೊಂದರಲ್ಲಿ ನಲವತ್ತೈದು ಜನ ಕಾರ್ಮಿಕರು ತಮ್ಮಷ್ಟಕ್ಕೆ ತಮ್ಮ ನಿತ್ಯದ ಕಾರ್ಯದಲ್ಲಿ ಮಗ್ನರಾಗಿದ್ದರು. ಎಂದಿನಂತೆ ಅಂದೂ ಅವರು ಆ...

ಅಂಗೋಲಾದಲ್ಲಿ ಬದುಕಬೇಕೆಂದರೆ ಧೈರ್ಯ ಮಾತ್ರವಲ್ಲ, ಜೇಬೂ ತುಂಬಿರಬೇಕು..

ದುಬಾರಿ ದೇಶದಲ್ಲಿ ಕಾಂಚಾಣವೇ ಹೀರೋ ತಮ್ಮ ನೆಲ, ನಾಡನ್ನು ಬಿಟ್ಟು ದೂರ ಹೋದವರಿಗೆ ಆಗಾಗ ಮಣ್ಣಿನ ಸೆಳೆತವು ಹೆಚ್ಚಾಗಿ ಕೆಲವೊಂದು ಆಸೆ-ಆಕಾಂಕ್ಷೆಗಳು ಹುಟ್ಟುವುದು ಸಹಜ. ಮಂಗಳೂರನ್ನು ಬಿಟ್ಟು ಉತ್ತರಭಾರತಕ್ಕೆ ಸೇರಿದ ನನಗೆ ಕರಾವಳಿಯ ಕುಚ್ಚಲಕ್ಕಿ, ಮೀನು, ಕೋರಿ-ರೊಟ್ಟಿ ಕಾಂಬೋಗಳು ಸಿಗದೆ ವರ್ಷಗಳೇ...

ಹೆಣ್ತನದ ಮಡಿಲಲ್ಲಿ ಶರಣಾಗುತ್ತಾ…

”ವಿದ್ಯೆಯ ಸರಸ್ವತಿಗೆ ಮಕ್ಳಿಲ್ಲ. ಸುಖದ ಲಕ್ಷ್ಮಿಗೆ ಮಕ್ಳಿಲ್ಲ. ಹಸಿವು ನೀಗುವ ಅನ್ನಪೂರ್ಣೇಶ್ವರಿಗೆ ಮಕ್ಕಳಿಲ್ಲ. ಕಾಯೋ ದೇವಿ ದುರ್ಗೇನೂ ಬಂಜೇನೇ. ಹೆರೋರು ತಾಯಿ ಆದ್ರು. ಹೆರದೋರು ದೇವರಾದ್ರು. ತಾಯಾಗ್ಲಿಲ್ಲ ಬಿಡು. ದೇವಿ ಆಗ್ತೀನಿ…” ”ಹುಟ್ತಾ ಎಲ್ಲ ಹೆಣ್ಣುಮಕ್ಕಳು ದೇವತೆಯರೇ! ನೀವು ದೇವರಾಗಿ. ಅದುಬಿಟ್ಟು...

ಅಂಗೋಲಾದಲ್ಲಿ ಶುಕ್ರವಾರದ ಎಂದರೆ ಶುಕ್ರವಾರವಲ್ಲ.. ಅದು ‘Day of man’

”ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ…” ಏಳೆಂಟು ವರ್ಷಗಳ ಹಿಂದಿನ ಮಾತು. ಕೀನ್ಯಾದ ಸಚಿವ ಸಂಪುಟದಲ್ಲಿದ್ದ ಮಂತ್ರಿಯೊಬ್ಬರು ದೆಹಲಿಗೆ ಬಂದಿದ್ದರು. ನನಗೆ ನೆನಪಿರುವಂತೆ ಕೆಲ ಆಫ್ರಿಕನ್ ದೇಶಗಳ ಶೃಂಗಸಭೆಗೆ ಅವರು ತನ್ನ ತಂಡದೊಂದಿಗೆ ಅತಿಥಿಯಾಗಿ ಬಂದಿದ್ದವರು. ನಾನಿರುವ ಸಂಸ್ಥೆಯ...

ಮತ್ತೆ ಸೊಗಸಾದ ಮಳೆಯಾಗಲಿ!

”ಮತ್ತೆ ಮಳೆಯಾಗಲಿ…” ನನ್ನ ದೆಹಲಿಯ ದಿನಗಳ ವರ್ಷಧಾರೆಯಿನ್ನೂ ನನಗೆ ನೆನಪಿದೆ. ‘ಇದನ್ನು ಮಳೆಯೆನ್ನಲೂ ನಾಲಾಯಕ್ಕು’, ಎಂದು ಆ ಮಳೆಯನ್ನು ನೋಡುತ್ತಾ ನಾನು ಗೊಣಗುತ್ತಿದ್ದ ದಿನಗಳಿದ್ದವು. ಮಂಗಳೂರಿನಂತಹ ಪ್ರದೇಶಗಳಲ್ಲಿ ಮಳೆಗಾಲದ ಹೆಸರಿಗೆ ಕುಂದಾಗದಂತೆ ಮೂರ್ನಾಲ್ಕು ತಿಂಗಳಾದರೂ ಚೆನ್ನಾಗಿ ಮಳೆಯಾಗುತ್ತಿದ್ದುದನ್ನು ನೋಡಿ ಆನಂದಿಸಿದವನು ನಾನು....

ನನ್ನ ಅಧಿಕೃತ ಕುಟುಂಬದ ಬಗ್ಗೆ ಹೇಳಲೋ ಅಥವಾ ಅನಧಿಕೃತ ಕುಟುಂಬಗಳ ಬಗ್ಗೆ ಹೇಳಲೋ?

ಪ್ರಸಾದ್ ನಾಯ್ಕ್ ಆಕೆ ತನ್ನ ತಲೆಯ ಮೇಲಿದ್ದ ನೀರಿನ ದೊಡ್ಡ ಬಕೆಟ್ಟೊಂದನ್ನು ಮೆಲ್ಲನೆ ಕೆಳಗಿಳಿಸಿದಳು. ಈ ಕ್ರಿಯೆಯಲ್ಲಿ ಬಕೆಟ್ಟಿನಿಂದ ಕೊಂಚ ಹೊರಚೆಲ್ಲಿದ ನೀರು ಆಕೆಯ ಬೆವರಿನೊಂದಿಗೆ ಬೆರೆತು ಆಕೆಯನ್ನು ಮತ್ತಷ್ಟು ತೋಯಿಸಿತು. ನಡೆಯಲು ಹೆಜ್ಜೆಹಾಕಿದರೆ ಅಕ್ಷರಶಃ ಸುಟ್ಟುಬಿಡುವಂತಿರುವ ಮಧ್ಯಾಹ್ನದ ಆ ರಣಬಿಸಿಲಿನಲ್ಲಿ...

ಅಂಗೋಲದಲ್ಲಿ ಕಾಲನೆಂಬ ಪ್ರಾಣಿ..

”ನಿಧಾನವೇ ಪ್ರಧಾನ, ಇದೇ ಆದ್ರೆ ಇನ್ನೇನ್ಮಾಡಾಣ…” ನಾಲ್ಕೈದು ಪುಟಗಳ ದಸ್ತಾವೇಜನ್ನು ನನಗೀಗ ಅಂಗೋಲಾದಿಂದ ಭಾರತಕ್ಕೆ ಕಳಿಸಬೇಕಿದೆ. ಇದಕ್ಕಾಗಿಯೇ ನಾನು ವೀಜ್ ನಿಂದ ಲುವಾಂಡಾದವರೆಗೆ ಬಂದಿದ್ದೇನೆ. ಲುವಾಂಡಾದಿಂದ ಭಾರತಕ್ಕೆ ಹೀಗೆ ಏನನ್ನಾದರೂ ಅಂಚೆಯ ಮೂಲಕ ಕಳಿಸುವುದೆಂದರೆ ಬಲು ದುಬಾರಿ. ಊದಿದರೆ ಹಾರಿಹೋಗುವ ಒಂದೇ...

ಒಂದು ಹಿಡಿ ಬೆಳಕು ಕೊಡಿ ಪ್ಲೀಸ್…

ಕಗ್ಗತ್ತಲೆಯ ಖಂಡದಲ್ಲಿರುವ ಅಂಗೋಲಾದ ಕತ್ತಲೆಯ ಬಗ್ಗೆ ಬರೆಯಲೋ ಬೇಡವೋ ಎಂಬ ತಾಕಲಾಟಗಳ ನಡುವೆಯೇ ಈ ಬಾರಿ ಒಂದಿಷ್ಟು ಬರೆದುಬಿಟ್ಟೆ. ಅಂಗೋಲಾದಲ್ಲಿದ್ದಷ್ಟು ದಿನ ಕತ್ತಲು ನಮ್ಮನ್ನು ಅಷ್ಟಾಗಿ ಹೆದರಿಸಿರಲಿಲ್ಲ. ಏಕೆಂದರೆ ನಾವೊಂದು ಬೆಚ್ಚನೆಯ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಆರಾಮಾಗಿಯೇ ಇದ್ದೆವು. ಬೆಚ್ಚನೆಯ ಸೂರಿನಲ್ಲಿ ಸುರಕ್ಷಿತವಾಗಿದ್ದವರಿಗೆ...

ಅಂಗೋಲಾದ ಬ್ಯಾಂಡ್-ಬಾಜಾ-ಬಾರಾತ್

ಪ್ರಸಾದ್ ನಾಯ್ಕ್     ”ಎರಡು ಕ್ರೇಟ್ ಬಿಯರ್” ”………”     ”ಎರಡು ಕ್ರೇಟ್ ಸಾಫ್ಟ್ ಡ್ರಿಂಕ್ಸ್” ”………”     ”ಒಂದು ಹಾಸಿಗೆ” ”………”     ”ಹತ್ತು ಪ್ಲಾಸ್ಟಿಕ್ ಕುರ್ಚಿಗಳು” ”………”     ”ಎರಡು ಮೇಜುಗಳು”...

ಅಂಗೋಲಾದ ಕತ್ತಲ ಕೂಪಗಳಲ್ಲಿ..

ದೀಪ… ಒಂದೇ ಒಂದು ದೀಪ… ನಾನಂದು ಕಾಯುತ್ತಿದ್ದಿದ್ದು ಒಂದಿಷ್ಟು ಬೆಳಕಿಗಾಗಿ ಮಾತ್ರ. ನಮ್ಮ ಕಾರಿನ ಜೋಡಿ ಹೆಡ್ ಲೈಟ್ ಗಳ ಪ್ರಖರ ಬೆಳಕನ್ನು ಹೊರತುಪಡಿಸಿದರೆ ಬೇರೆಲ್ಲೂ ಬೆಳಕಿನ ಸುಳಿವೇ ಇಲ್ಲ. ಚಂದಿರನ ಬೆಳಕಿದ್ದರೆ ಸ್ವಲ್ಪವಾದರೂ ವಾಸಿ ಅನ್ನಿಸುತ್ತಿತ್ತೇನೋ. ಆದರೆ ದುರಾದೃಷ್ಟವೆಂಬಂತೆ ಅದೂ...