fbpx

Category: ಹಾಯ್! ಅಂಗೋಲಾ.. / ಪ್ರಸಾದ್ ನಾಯ್ಕ್

ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು..

”ಅಂಗೋಲಾದ ಕತ್ತಲ ಕೂಪಗಳಲ್ಲಿ” ”ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು”, ಎಂದು ಅನ್ನುತ್ತಿದ್ದೆ ನಾನು. ನಾನೇನು ಕೇಳಬಾರದ್ದನ್ನು ಕೇಳುತ್ತಿದ್ದೇನೆ ಎಂಬಂತೆ ನನ್ನ ಸುತ್ತಲಿದ್ದ ಎಲ್ಲರೂ ನನ್ನತ್ತ ಅಚ್ಚರಿಯಿಂದ ನೋಡಿದ್ದರು. ನನ್ನ ದುಭಾಷಿ ಮಹಾಶಯನ ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಮೂಡಿಯಾಗಿತ್ತು....

ನಾನು ರಣಬಿಸಿಲಿನಲ್ಲಿದ್ದಾಗಲೆಲ್ಲಾ ನನಗೆ ನೆರಳಾಗಿದ್ದು ನಿನ್ನ ಈ ಕೇಶರಾಶಿಯೇ…

”ಮೈ ಜಬ್ ಭೀ ಜಹಾಂ ಭೀ ಕಡೀ ಧೂಪ್ ಮೇ ಥಾ, ತೆರೇ ಝುಲ್ಫ್ ನೇ ಮುಝ್ ಕೋ ಸಾಯಾ ದಿಯಾ…” ”ನಾನು ರಣಬಿಸಿಲಿನಲ್ಲಿದ್ದಾಗಲೆಲ್ಲಾ ನನಗೆ ನೆರಳಾಗಿದ್ದು ನಿನ್ನ ಈ ಕೇಶರಾಶಿಯೇ…”, ಎಂದು ಅದೆಷ್ಟು ಚಂದದ ಸಾಲನ್ನು ಬರೆದಿದ್ದರು ಗೀತರಚನೆಕಾರ ಸಯ್ಯದ್...

ಗೋಣಿಚೀಲಗಳನ್ನು ಮಾರ್ಪಡಿಸಿ, ಭಯಾನಕ ಮುಖವಾಡ ಧರಿಸಿ ಕುಣಿಯುತ್ತಾರಲ್ಲವೇ?

ಪೆಡ್ರೋ ಮಕಾಂದಾರ ಪಾಂಡೋರಾ ಡಬ್ಬದೊಳಗೆ 2 ನನ್ನ ಅವಸರಕ್ಕೆ ಸರಿಯಾಗಿ ಮುಂದಿನವಾರವು ಬಲು ವೇಗದಲ್ಲೇ ಬಂದುಬಿಟ್ಟಿತ್ತು. ನಾನು ಮತ್ತು ದುಭಾಷಿ ಮತ್ತೆ ಪೆಡ್ರೋ ಮಕಾಂದಾರ ಬಿಲದಂತಹ ಕಾರ್ಯಾಲಯದಲ್ಲಿದೆವು. ಈ ಬಾರಿ ದೆಹಲಿಯಿಂದ ಆಗಮಿಸಿದ್ದ ಸಮಾಜಶಾಸ್ತ್ರಜ್ಞರಾದ ಡಾ. ಗೌರ್ ಬೇರೆ ನಮ್ಮ ಜೊತೆಗಿದ್ದರು....

ಕ್ಯಾಲೆಂಡರ್ ನೋಡುವುದೇ ಅಂದಿನಿಂದ ನನ್ನ ಹೊಸ ಕೆಲಸವಾಗಿ ಬಿಟ್ಟಿತು..

”ಪೆಡ್ರೋ ಮಕಾಂದಾರ ಪಾಂಡೋರಾ ಡಬ್ಬದೊಳಗೆ” ಹಾಗೆ ನೋಡಿದರೆ ಆ ಪುಟ್ಟ ಜಾಗವು ಅಪರಿಚಿತವೇನೂ ಆಗಿರಲಿಲ್ಲ. ವೀಜ್ ನ ಹೃದಯಭಾಗದಲ್ಲೇ ಇತ್ತು ಆ ಅಂಗಡಿ. ಇನ್ನು ಅಂಗಡಿಗೆ ಮುಖಾಮುಖಿಯಾಗಿ ವೀಜ್ ನ ಮಟ್ಟಿಗೆ ಕೊಂಚ ಹೆಚ್ಚೇ ದುಬಾರಿಯಾಗಿರುವ ಗ್ರಾಂದೆ ಹೋಟೇಲ್ ಬೇರೆ ಇತ್ತು....

ನಾವು ಅಂದು ಓಡುತ್ತಲೇ ಇದ್ದೆವು.

‘31 ‘ಪಾರ್ಕಿಂಗ್ ಪ್ರಹಸನಗಳೆಂಬ ಮುಗಿಯದ ಸಾಹಸಗಳು” ನಾವು ಅಂದು ಓಡುತ್ತಲೇ ಇದ್ದೆವು. ಅದು ಮ್ಯಾರಥಾನ್ ಆಗಿರಲಿಲ್ಲ. ಮುಂಜಾನೆಯ ಜಾಗಿಂಗ್ ಕೂಡ ಆಗಿರಲಿಲ್ಲ. ನಡುಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ನೂರಾರು ವಾಹನಗಳು ಎಡೆಬಿಡದೆ ಜನನಿಬಿಡ ಶಹರದ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದವು. ಇನ್ನು ಇವೆಲ್ಲವುಗಳನ್ನು...

ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ..

”ಬೆವರ ಹನಿಯೊಳಗಣ ಸಾಗರವನ್ನು ಕಾಣುತ್ತಾ…”   ಮೇಲೆ ತಲೆಯೆತ್ತಿ ಒಮ್ಮೆ ನೋಡಬೇಕು. ಕಡುನೀಲಿ ಆಕಾಶ. ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ ಎನ್ನುವಂತೆ. ಆ ನೀಲಿ ಹಿನ್ನೆಲೆಯಲ್ಲಿ ಮತ್ತಷ್ಟು ಬಿಳಿಯಾಗಿ ಎದ್ದು ಕಾಣುವ ಮೋಡಗಳು. ಥೇಟು ಹತ್ತಿಯ ಮುದ್ದೆಗಳಂತೆ. ನಾನು...

ಅಂಗೋಲಾದಲ್ಲಿ ನೀರು ಹುಡುಕುತ್ತಾ..

”ನಲ್ಲಿನೀರೆಂಬ ಮಹಾವೈಭೋಗ” ”ಅಲ್ಲಾ… ನೀವು ಇವರಿಗ್ಯಾಕೆ ನೀರನ್ನು ಕೊಡುತ್ತಿಲ್ಲ? ಇಲ್ಲಿ ವಿದ್ಯುಚ್ಛಕ್ತಿ ಬೇರೆ ಇಲ್ಲ. ಅದ್ಯಾಕೆ ನೀವು ಇವರೊಂದಿಗೆ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದೀರಿ ಎಂದು ನನಗಂತೂ ಅರ್ಥವಾಗುತ್ತಿಲ್ಲ!” ಹೀಗೆ ಡಾ. ಗೌರ್ ಅಂದು ನನ್ನ ಸಮ್ಮುಖದಲ್ಲೇ ಇಲ್ಲಿಯ ಸ್ಥಳೀಯ ಅಧಿಕಾರಿಯೊಬ್ಬರನ್ನು ತರಾಟೆಗೆ...

ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!

”ಕಾಡಗರ್ಭದಲ್ಲಿ ಕತೆ ಕತೆ ಕಾರಣ” ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು! ಆದರೆ ನಮ್ಮ ಪಯಣದಲ್ಲಿ ನಾನೊಬ್ಬನೇ ಇರಲಿಲ್ಲ. ನನ್ನ ಜೊತೆ ಇನ್ನೂ ಮೂವರಿದ್ದರು. ಈ ಮೂವರಿಗೂ ಕೂಡ ಅವರದ್ದೇ ಆದ ತಲಾಶೆಗಳಿದ್ದವು. ನನ್ನನ್ನು ಹೊರತುಪಡಿಸಿ ನಮ್ಮ ತಂಡದ ಮತ್ತೊಬ್ಬ ಮುಖ್ಯ...

‘ಶಿನೇಶ್.. ಶಿನೇಶ್..’ ‘ಚೈನೀಸ್..’ ‘ಚೈನೀಸ್..’

ಚಿಣ್ಣರ ಲೋಕದ ಚಿನ್ನಚಿನ್ನ ಆಸೈ ”ಶಿನೇಶ್… ಶಿನೇಶ್…”, ಎಂದು ನನ್ನನ್ನು ನೋಡುತ್ತಾ ಖುಷಿಯಿಂದ ಕೂಗುತ್ತಲೇ ಇದ್ದರು ಆ ಮಕ್ಕಳು. ‘ಶಿನೇಶ್’ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ‘ಚೈನೀಸ್’ ಎಂದರ್ಥ. ನಾನು ಅದ್ಯಾವ ಕೋನದಲ್ಲಿ ಚೀನೀಯನಂತೆ ಇವರಿಗೆ ಕಾಣುತ್ತೀನಪ್ಪಾ ಎಂದು ಯಾವತ್ತೂ ನಗೆಯಾಡುವವನು ನಾನು....

ಅಂಗೋಲಾದಲ್ಲಿ ಶಾರೂಖನೂ, ಬಾಹುಬಲಿಯೂ..

  ಲುವಾಂಡಾದ ಖ್ಯಾತ ಮಾರ್ಜಿನಲ್ ಬೀದಿಯಲ್ಲಿದ್ದ ಭಾರತೀಯ ರೆಸ್ಟೊರೆಂಟ್ ಒಂದರ ಒಳಕ್ಕೆ ನಾವು ಅಂದು ನುಗ್ಗಿದ್ದೆವು. ನಾವು ಅಂದು ಹೋಗಿದ್ದು ‘ಓ ಕಾರಿಲ್’ ರೆಸ್ಟೊರೆಂಟಿಗೆ. ಒಳನಡೆಯುತ್ತಿರುವಂತೆಯೇ ”ವಾವ್” ಅಂದುಬಿಟ್ಟ ನನ್ನ ದುಭಾಷಿ ಮಿಗೆಲ್. ರೆಸ್ಟೊರೆಂಟ್ ಹೆಚ್ಚೇನೂ ದೊಡ್ಡದಾಗಿಲ್ಲದಿದ್ದರೂ ಒಳಾಂಗಣವು ಸುಂದರವಾಗಿತ್ತು. ಅಲಂಕರಿಸಿದ...