fbpx

Category: ಲಹರಿಯಾನ । ಲಹರಿ ತಂತ್ರಿ

ಓಹೋ.. ಅಜ್ಜಿ ಮನೆ!!

ವಾರವೊಂದರಿಂದ ಸುಮಾರು ೧೦-೧೫ ಬೇರೆ ಬೇರೆ ಬೇಸಿಗೆ ಶಿಬಿರದ ಜಾಹೀರಾತುಗಳು ಕಣ್ಣಿಗೆ ಬಿದ್ದಿವೆ.. ಫೇಸ್‌ಬುಕ್ಕಿನಲ್ಲಿ, ಪಾಂಪ್ಲೆಟ್ಟುಗಳಲ್ಲಿ , ದಾರಿಬದಿಯ ಪೋಸ್ಟರ್ ಗಳಲ್ಲಿ ಹೀಗೆ ಸುಮಾರು ರೂಪದಲ್ಲಿ! ಇದನ್ನೆಲ್ಲಾ ನೋಡುತ್ತಿದ್ದಂತೆ ಬೇಸಿಗೆ ರಜೆ ಬಂತೆಂಬ ನೆನಪಾಗಿ ಒಂದೆಡೆ ಖುಷಿ ಹೊನಲಾಗಿ ಹರಿದರೆ ಮತ್ತೊಂದೆಡೆ...

ಆಗಲೇ ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ಕಣ್ಣಿಗೆ ಬಿದ್ದಿದ್ದು..!!

ನಾನೇನೂ ಶ್ರೀದೇವಿಯ ದೊಡ್ಡ ಫ್ಯ‍ಾನ್ ಅಲ್ಲ! ಯಾವುದೋ ಎರಡು ಫಿಲ್ಮ್ ಬಿಟ್ಟರೆ ಮತ್ಯಾವುದನ್ನೂ ನೋಡಿಲ್ಲ. ಯಾವುದಾದರೂ ಹಳೆಯ ಶ್ರೀದೇವಿಯ ಫೋಟೋ ತೋರಿಸಿ ಯಾರು ಎಂದು ಕೇಳಿದರೂ ಖಂಡಿತವಾಗಿಯೂ ಗುರುತಿಸಲು ಸಾಧ್ಯವಿಲ್ಲ ನಂಗೆ. ಆದರೆ ಅದೊಂದು ಪಾತ್ರ ಎಷ್ಟು ಆವರಿಸಿಕೊಂಡಿದೆ ನನ್ನ ಎಂದರೆ...

ಎಲ್ಲ ಖುಷಿಯ ಕ್ಷಣಗಳನ್ನೂ ಮಡಿಲಿಗೆ ತಂದು ಸುರಿದವನೇ..

ಕೃಷ್ಣನೆಂಬ ವ್ಯಕ್ತಿತ್ವವೇ ಹಾಗೆ! ‍ಬಿಟ್ಟನೆಂದರೂ ಬಿಡದಾ ಮಾಯೆ.. ಊಹಾಕಲ್ಪಿತ ಪಾತ್ರವೋ, ನಿಜದ ರೂಪವೋ, ದೈವವೋ , ಮನುಷ್ಯನೋ ಅಥವಾ ಇವೆಲ್ಲವನ್ನೂ ಮೀರಿ ಮತ್ತೇನೋ.. ಏನಾಗಿಯಲ್ಲದಿದ್ದರೂ ಪ್ರೀತಿಯಾಗಿ ಅವ ಆವರಿಸಿಕೊಳ್ಳುತ್ತಾನೆ. ಅವನ ಜೊತೆ ಜೊತೆಗೇ ಮತ್ತೊಂದು ಭಾವವೂ ನಮ್ಮನ್ನಾವರಿಸಿಕೊಳ್ಳುತ್ತದೆ ಮತ್ತು ಯಾವುದೋ ಚಣದಲ್ಲಿ...

ನಮ್ಮಿಬ್ರನ್ನೇ ಬೇಕಾದ್ರೆ ತಿನ್ನು ಮಾರಾಯ್ತೀ..ಚೊರೆ ಮಾಡ್ಬೇಡ..!!

ಅದೊಂದು ಕಾಲವಿತ್ತು! ತಿಂದಷ್ಟೂ ತೀರದ ಹಸಿವು. ‘ನಿನ್ ತಮ್ಮ ಇವಾಗ್ ನಿನ್ ಥರಾನೇ ಆಗಿದಾನೆ ಕಣೇ ಚಿನ್ನಿ.. ಮೂರ್ ಹೊತ್ತು ಏನಾದ್ರೂ ತಿನ್ನಕ್ ಕೊಡು ಅಂತಿರ್ತಾನೆ, ನಂಗಂತೂ ಸಾಕಾಗ್ ಹೋಗಿದೆ’ ಅಂತೆಲ್ಲಾ ಫೋನಿನ ಆ ಕಡೆಯಿಂದ ಚಿಕ್ಕಮ್ಮ ಹೇಳುತ್ತಿದ್ದರೆ ನಗಬೇಕೋ ಅಳಬೇಕೋ...

ಬೆಂಗಳೂರಿನ ಜೀವನವೆಂದರೆ ಯಾವತ್ತಿಗೂ ಸಣ್ಣ ತಿರಸ್ಕಾರ ನಂಗೆ!

ಬೆಂಗಳೂರಿನ ಜೀವನವೆಂದರೆ ಯಾವತ್ತಿಗೂ ಸಣ್ಣ ತಿರಸ್ಕಾರ ನಂಗೆ! ಯಾರಾದರೂ  ಈ ಊರನ್ನ ಹೊಗಳಿದರೂ , ತಿರುಗಿಸಿ ಹೇಳದೇ ಬಿಟ್ಟಿದ್ದೇ ಇಲ್ಲ. ಗುಡ್ಡ, ಬೆಟ್ಟ, ಪುಸ್ತಕ ಅಂತೆಲ್ಲಾ ದಿನಗಟ್ಟಲೇ ಅಲೆದರೂ ಇನಿತೂ ಬೇಜಾರಾಗದ ನಂಗೆ, ಬೆಂಗಳೂರಿನ ಜೀವನ ಯಾವತ್ತಿಗೂ ಉಸಿರುಕಟ್ಟಿಸುವಂಥದ್ದೇ.. ಹೀಗೆಲ್ಲಾ ಅನಿಸೋದು...

ಮುಷ್ಟಿಯೊಳಗಿದ್ದ ಚಿಟ್ಟೆಯಂಥಾ ಕನಸು ಇಣುಕಿಣುಕಿ ನೋಡುತ್ತಿದ್ದ ಕಾಲವದು..

ಡಿಸೆಂಬರ್ – ಜನವರಿ ಬಂತೆಂದರೆ ವಾರ್ಷಿಕೋತ್ಸವದ ಗುಂಗು ಹತ್ತುತ್ತಿತ್ತು! ಯಾವ ಕ್ಲಾಸು ಅಂತು ಸರಿಯಾಗಿ ನೆನಪಿಲ್ಲ ನಂಗೆ. ಬಹುಶಃ ಯು.ಕೆ.ಜಿ ತಪ್ಪಿದರೆ ಒಂದನೇ ಕ್ಲಾಸು ಇರಬಹುದು.. ‘ದಧಿಬಾಂಡ ಮೋಕ್ಷ ‘ ಅನ್ನೋ ನಾಟಕ ಮಾಡಿಸಿದ್ರು! ಕೃಷ್ಣ ಒಬ್ಬ ಬೆಣ್ಣೆ-ಮೊಸರು ಮಾರೋ ಅಜ್ಜನಿಗೆ...

ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ

ಮಳೆಯೆಂದರೆ ಹಾಡು, ಮಳೆಯೆಂದರೆ ಬದುಕು, ಮಳೆಯೆಂದರೆ ಭಾವ. . . ಮಳೆಯೆಂದರೆ ಮನಮುತ್ತೋ ಆಪ್ತ ಭಾವಗಳ ಸಂತೆ. ಧೋ ಸುರಿಯೋ ಮಳೆಗೆ ನವಿಲಾಗೋ ಮನಸ್ಸಿಗೆ, ಮಳೆ ನಿಂತ ಮೇಲಿನ ನಡಿಗೆ ಸಾಧ್ಯವೇ ಇಲ್ಲ! ಇನ್ನೇನು ಎರಡು-ಮೂರು ದಿನಕ್ಕೆ ಮಳೆಗಾಲ ಮುಗಿಯುತ್ತದೆ ಎನ್ನುವಾಗಲೇ...

ಅಲ್ಲಿ ನಮ್ಮೊಂದಿಗೆ ತೇಜಸ್ವಿ, ಕುವೆಂಪು, ಜೋಗಿ, ಕಾಯ್ಕಿಣಿ ಎಲ್ಲರೂ ನಡೆಯುತ್ತಿದ್ದರು..

ತಣ್ಣಗಿದ್ದ ಆ ನೀರ ತಂಪು ಸ್ಪರ್ಶ, ಥೇಟ್ ಬುದ್ಧನ ಮೌನದಂತೆಯೇ..!! ಮದುವೆಯಾಗಿ ಇನ್ನೂ ಸರಿಯಾಗಿ ೬ ತಿಂಗ್ಳಾಗಿಲ್ಲ, ಅದೆಂತ ಅಷ್ಟ್ ಬೇಗ ಗಂಡನ್ನ ಬಿಟ್ಟು ತಿರ್ಗಕ್ ಹೊರ್ಟಿದ್ ನೀನು?’ ಅಂತೆಲ್ಲೋ ಅಮ್ಮನ ಗದರಿಕೆ ಕಿವಿ ತಲುಪುವುದರೊಳಗೆ , ಕೈಗೊಂದಿಷ್ಟು ದುಡ್ಡಿಟ್ಟು ’ಇನ್ನೂ...