fbpx

Category: ಶ್ರೀದೇವಿ ರೆಕಮೆಂಡ್ಸ್..

ಅವಳ ಮೈ ಮೇಲಿನ ಮಚ್ಚೆಗಳನ್ನು ಎಣಿಸಿ ಇರುಳುಗಳನ್ನು ಕಳೆದ ಅವನಿಗೆ..

‘ಅವಳ ಕವಿತೆ’ ಎಂಬ ಹೆಣ್ಣೊಳ ನೋಟ.. ಹೆಣ್ಣಿನ ದೇಹ ಎನ್ನುವುದು ಇಂದಿನ ದಿನಗಳಲ್ಲಿ ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.  ಶ್ರವಣಬೆಳಗೊಳದಲ್ಲಿ ನಡೆದ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಣ್ಣಿನ ದೇಹ ಹೇಗೆ ಕನ್ನಡ ಸಾಹಿತ್ಯದಲ್ಲಿ ಎಲ್ಲೆಡೆಯೂ ಪ್ರಮುಖ ಪಾತ್ರವಹಿಸಿದೆ ಎಂಬ ಚರ್ಚೆ ದೊಡ್ಡದಾಗಿಯೇ...

ಆ ‘ತೊತ್ತೋ ಚಾನ್’ ಕಿಟಕಿಯಲ್ಲಿ ನಿಂತಳು..

     “ಇದೇನೋ ಮಂಡಿಯ ಮೇಲೆ ಇಷ್ಟೊಂದು ದೊಡ್ಡ ಗಾಯ ಆಗಿದೆ? ಹೇಗಾಯ್ತು?” ನಾನು ಹೌಹಾರಿ ಕೇಳಿದೆ. ಪ್ರತಿ ರಾತ್ರಿ ಕಾಲಿಗೆ ಒಂದಿಷ್ಟು ಕೊಬ್ಬರಿ ಎಣ್ಣೆ ಸವರಿ, ಚಿಕ್ಕದೊಂದು ಕಥೆ ಹೇಳಿ ಮಲಗಿಸುತ್ತೇನೆ. ಆ ದಿನ  ಕಾಲಿಗೆ ಎಣ್ಣೆ ಹಚ್ಚುವಾಗ ಕಾಲಿನ...

ಇಲ್ಲಿ ದೇವಸ್ಥಾನವಿದೆ. ಮುಸ್ಲಿಂರಿಗೆ ಹಾಗೂ ಎಸ್ಸಿಗಳಿಗೆ ಮನೆ ಕೊಡೋದಿಲ್ಲ..

ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನದೇ ಅನುಕೂಲದ ದೃಷ್ಟಿಯಿಂದ ಕೌನ್ಸಿಲಿಂಗ್  ಮುಖಾಂತರ ಕಾರವಾರಕ್ಕೆ ವರ್ಗ ಮಾಡಿಸಿಕೊಂಡಿದ್ದೆ.  ಆದರೆ ವರ್ಗಾವಣೆ ಆಗಿದ್ದು ಜುಲೈ ತಿಂಗಳ ಕೊನೆಯ ವಾರದಲ್ಲಿ. ಎಲ್ಲವೂ ಸಾಂಗವಾಗಿ ನಡೆಯುವ ಕಾಲದಲ್ಲಿ ನಾನು ಕಾರವಾರದ ಬೀದಿ ಬೀದಿಯಲ್ಲಿ ಮನೆ ಹುಡುಕಲಾರಂಬಿಸಿದ್ದೆ. ಬಾಡಿಗೆ...

ದಲಿತರು ಮುಖ್ಯಮಂತ್ರಿಗಳಾಗಿಲ್ಲ ಎಂಬುದೊಂದು ದೊಡ್ಡ ಪ್ರಶ್ನೆಯಾಗಿ ನಮ್ಮೆದುರು ನಿಂತಿರುವಾಗ..

ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಚುನಾವಣಾ ಪ್ರಕ್ರಿಯೆ ಮುಗಿದು ಸರಕಾರ ರಚನೆಯೂ ಆಗಿದೆ. ಸಚಿವರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ಸುವಾರು ದಶಕಗಳಿಂದ ಕೇಳಿ ಬರುತ್ತಿರುವ ಅಹವಾಲು ಹಾಗೇನೆ ನೆನೆಗುದಿಗೆ ಬಿದ್ದಿದೆ,  ಸ್ವಾತಂತ್ರ್ಯ ಸಿಕ್ಕು ಸುಮಾರು ಎಪ್ಪತ್ತು ವರ್ಷಗಳಾಗಿದೆ. ಹಿಂದುಳಿದ ನಿಮ್ನ ವರ್ಗದವರಿಗೆ ಎಲ್ಲಾ...

ಕಥೆ ಯಾವಾಗ್ಲೂ ಮುಗೀತು ಅಂತಿಲ್ಲ. ಕೇಳೋರು ಇರೋವರ್ಗೂ ನಡೆತಾನೇ ಇರ್ತದೆ..

ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಮಾತು. ಯಾರೋ ಸಂಬಂಧಿಗಳ ಮನೆಗೆ ಹೋಗಿದ್ದೆ. ಅವರ ಮನೆಯ ಅಕ್ವೇರಿಯಂ ತುಂಬಾ ಚೆನ್ನಾಗಿತ್ತು. ಮೀನು ತಿನ್ನುವುದಷ್ಟೇ ಅಲ್ಲ, ಮೀನು ಸಾಕಾಣಿಕೆಯೂ ನನಗೆ ತುಂಬಾ ಇಷ್ಟವಾದ ಕೆಲಸವಾದ್ದರಿಂದ ಅವರ ಮನೆಗೆ ಹೋದವಳೇ ಆ ದೊಡ್ಡ ಅಕ್ವೇರಿಯಂ ಬಳಿ...

ಇಡೀ ಪುಸ್ತಕ ಥೇಟ್ ಕಚ್ಚಾ ಮಾಂಗೋ ಚಾಕಲೇಟ್ ತಿಂದಂತೆ..

“ತದಡಿಲಿ ಉಷ್ಣ ಸ್ಥಾವರ ಆಗ್ತದಂತೆ. ಹಂಗೇನಾದ್ರೂ ಆದ್ರೆ ಹಿರೇಗುತ್ತಿ, ತೊರ್ಕೆ, ಬೆಟ್ಕುಳಿ, ಗಜನಿ ಎಲ್ಲ ಹಾರೂಬೂದಿಯಿಂದ ತುಂಬ್ಕೊಳ್ತದಂತೆ.” ಒಬ್ಬರ ಆತಂಕದ ಧ್ವನಿಯ ನಡುವೆಯೇ ಮತ್ತೊಬ್ಬರು ಹೇಳುತ್ತಿದ್ದರು “ಬರೀ ಗಜನಿ ಅಷ್ಟೇ ಅಲ್ಲ ನಮ್ಮ ಮನೆ ಮೇಲೂ ಹಾರೂ ಬೂದಿ ಕವಚಿಕೊಳ್ತದೆ. ನಮ್ಮ...

‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..

“ಈ ಸಲ ರಜೆಯಲ್ಲಿ ಹಿರೇಗುತ್ತಿಯಲ್ಲಿ ಉಳಿಯಲಾ?”- ಇದು ಸುಮಾರು ಎರಡು ವರ್ಷಗಳಿಂದಲೂನಾನು ಪ್ರವೀರ್ ಹತ್ತಿರ ಕೇಳುವ ಮಾತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ ನಮ್ಮ ಮನೆ ಹೋಗುತ್ತದೆ ಎಂದು ತಿಳಿದಾಗಿನಿಂದಲೂ ನನಗೆ ಒಂದು ರೀತಿಯ ಒತ್ತಡ. ಹುಟ್ಟಿ ಆಡಿ ಬೆಳೆದ ಮನೆಯನ್ನು ಕೆಡವುವ,...

ಅವರ ಅನುಭವಗಳ ಆಲೆಮನೆಯಲ್ಲಿ ನಾವು ಸುತ್ತಬೇಕು..

“ಹಿರೇಗುತ್ತಿಗೆ ಗಾಣ ಬಂದದೆ ಬರ್ತೀಯೇನೆ?” ಅಮ್ಮ ಫೋನಾಯಿಸಿದ್ದರು. ಸರಿಯಾಗಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಸಮಯ. ಬಿಟ್ಟು ಹೋಗೋದಾದರೂ ಹೇಗೆ ಎಂಬ ನಿರಾಸೆಯಲ್ಲೇ “ಎಷ್ಟು ದಿನ ಗಾಣ ಇರ್ತದೆ.?” ಎಂದು ವಿಚಾರಿಸಿದೆ. “ನಾಳೆ ಮಧ್ಯಾಹ್ನ ಮುಗಿಯುತ್ತದೆ” ಎಂದು ಅಪ್ಪ...

ನನಗೊಬ್ಬ ‘ಇಮ್ರೋಜ್’ ಬೇಕು..

ಇದು ತೀರಾ ಖಾಸ್ ಆದ ಬರೆಹ.  ನನ್ನನ್ನು ನಾನೇ ಮೈಮರೆತು ಅವನನ್ನು  ಬಯಸುವ ಬಗ್ಗೆ. ಹೀಗೆ ನಾಲ್ಕು ಹಾದಿಗಳು ಸಂಧಿಸುವ ‘ಅವಧಿ’ಯಲ್ಲಿ ನಿಂತು ನಿಮಗೆಲ್ಲ ಹೇಗೆ ಡಂಗುರ ಸಾರಲಿ? ಆದರೂ ನನ್ನನ್ನು ನಾನು ಕಳೆದುಕೊಳ್ಳದಂತೆ ಜೋಪಾನ ಮಾಡುವ ಆತನ ಬಗ್ಗೆ ಹೇಗೆ...

ನಾನು ಊಟ ಮಾಡಲು ನಿರಾಕರಿಸಿ ಮಠದ ಹಬ್ಬಾಗಿಲನ್ನು ದಾಟಿ ಬಂದು ಬಿಟ್ಟಿದ್ದೆ..

ನಾನು  ಹೈಸ್ಕೂಲಿಗೆ ಹೋಗುತ್ತಿರುವ ಸಮಯ ಅದು. ದೀಪಾವಳಿಯ ಸಂದರ್ಭ. ಹಬ್ಬದ ದಿನ ಸಂಜೆ ಸಿಹಿ ಅಡಿಗೆ ಉಂಡು ಮನುಷ್ಯರನ್ನು ಹುಡುಕುತ್ತ ನಾನು ಮತ್ತು ಚಿಕ್ಕಪ್ಪನ ಮಗಳು ಮಾತನಾಡುತ್ತ ಕುಳಿತಿದ್ದೆವು. ಯಾರೋ ಇಬ್ಬರು ‘ಒಡಿದೀರೆ..’ ಎನ್ನುತ್ತ ಮನೆ ಬಾಗಿಲಿಗೆ ಬಂದರು. ನೋಡಿದರೆ ನಮ್ಮ ಮನೆಯ ಗದ್ದೆ ಕೆಲಸಕ್ಕೆ ಖಾಯಂ...