fbpx

Category: ಬಾ ಕವಿತಾ

ಹಸನ ನಯೀಮ ಸುರಕೋಡರಿಗೆ..

ಎಂ ಡಿ ವಕ್ಕುಂದ  ಮಮತೆಯ ಮಡಿಲು ಅಂತಃಕರಣದ ನದಿ ಪ್ರೀತಿಸುವುದು ಮಾತ್ರ ಗೊತ್ತಿರುವ ದ್ವೇಷದ ಹಾದಿಯಗುಂಟ ಹರಿದ ನೆತ್ತರಿನ ಕಲೆಯೊರಿಸಲು ಜೀವ ತೇಯುತ್ತಿರುವ ಹಿಡಿಗಾತ್ರದ ದೇಹ ಪ್ರೇಮದ ಸ್ವರ ಯಾವ ಭಾಷೆಯಲ್ಲಿ ಹೊರಟರೂ ಕನ್ನಡದ ವಿವೇಕಕ್ಕೆ ತಂದು ಒಗ್ಗಿಸುವ ತಪಸ್ವಿ ದ್ವೇಷದ...

ನಡುರಾತ್ರಿಗಳಲಿ ನನಗೆ ಅವನೆದೆ ಅಮಲು..

ಅನಾಮಿಕನಿಗೆ.. ನಂದಿನಿ ವಿಶ್ವನಾಥ ಹೆದ್ದುರ್ಗ. ಮುಷ್ಕರ ಹೂಡಿದ್ದೆ ನಾನು ಅದಕ್ಕೆ ಎದೆಗಟ್ಟಿ ಇರಬೇಕೆಂಬುದು ತಿಳಿದಿಲ್ಲದ ಕಾಲವದು. ಬೇಡಿಕೆ ಈಡೇರದ ಹೊರತು ಸತ್ಯಾಗ್ರಹದಿಂದ ಸರಿಯುವು ದಿಲ್ಲ ಎಂದವಳದ್ದು ಕ್ಷುಲ್ಲಕ ಕರಾರು ‘ಅವನೊಂದಿಗೆ ಸಂಭಾಷಣೆ ಬೇಕಿತ್ತು.’ ಕಾಲದೆದೆಯೊಳಗೆ ದಾಪುಗಾಲಿನ ನಡಿಗೆಯಲಿ ಅಚಾನಕ್ಕು ಸಿಕ್ಕವ ಅವ....

ಎದೆಯ ಹಾದಿಯಗುಂಟ ಎದುರಾದುದನೆಲ್ಲ..

ಹರಿವು ಸಹನಾ ಹೆಗಡೆ   ಕಿನಾರೆಗಳ ನಡುವೆ ಹರಿವ ನೀರಿಗೆ ಕೊಡಬೇಡ ಯಾವುದೋ ಹೆಸರು ಅಲೆಗಳೆದ್ದರೂ ಆಳೆತ್ತರ ಭೋರ್ಗರೆವ ಸಾಗರವದಲ್ಲ ಧುಮ್ಮಿಕ್ಕಿದರೂ ಭರದಲ್ಲಿ ಜಲಪಾತವಲ್ಲ   ತುಳುಕಿದರೂ ತಿಳಿಜಲ ಬಳುಕಿ ಝುಳುಝುಳು ನಾದ ಸೆಳವಿದ್ದರೂ ಸಬಲ ಅಲ್ಲಲ್ಲಿ ಆಳ ಸುಳಿಯಿರುವ ಹೊಳೆಯದಲ್ಲ...

ನಗರ ನಕ್ಸಲ್ ಕವಿತೆ: ರಾಷ್ಟ್ರಗೀತೆ

ಟ್ಯಾಗೋರ್ ಥಿಯೇಟರಿನ ಬಾಲ್ಕನಿಯಲ್ಲಿ ಕರಿಯನೊಬ್ಬ ಕೂತಿದ್ದ ಅವನ ಪಕ್ಕ ಒಬ್ಬ ಬಿಳಿಯ ಗಡ್ಡದ  ಹಿರಿಯ ಕೂತ ರಾಷ್ಟ್ರಗೀತೆ ನುಡಿಸುವಾಗ.   ಇಡಿಯ ಚಿತ್ರ ಮಂದಿರ ಎದ್ದು ನಿಂತಿತು ಇವರಿಬ್ಬರು ಮಾತ್ರ ಕೂತಿದ್ದರು   ಕರಿಯ ಕೇಳಿದ ಬಿಳಿಗಡ್ಡದ ಹಿರಿಯನನ್ನು “ನೀನ್ಯಾರೋಲೇ?” ಸಂತನಂತಿದ್ದ ಹಿರಿಯ ನುಡಿದ “ನಾನು ಟ್ಯಾಗೋರ್ ..ನೀನ್ಯಾರು?”   ಕರಿಯ ಉತ್ತರಿಸಿದ “ನಾನು ಬಾಬ್ ಮಾರ್ಲೆ ಮತ್ತು ನಾನು ಎದ್ದು ನಿಲ್ಲುವುದು ನನ್ನ ಹಕ್ಕಿಗಾಗಿ ಮಾತ್ರ” *** ಮೂಲ ಇಂಗ್ಲಿಷ್ : ರವಿ ಶಂಕರ್ ಎನ್, ಕೇರಳದ ಇಂಗ್ಲಿಷ್ ಕವಿ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಹೊಕ್ಕಳ ಸುಳಿಯ ಚಕ್ರತೀರ್ಥ..

ಕಪ್ಪು ಕಾಮನಬಿಲ್ಲು ಶ್ರೀದೇವಿ ಕೆರೆಮನೆ ಹೌದು, ನನಗೆ ಗೊತ್ತು ನಾನು ಕರಿ ಕಪ್ಪು ಅದು ನಿನಗೂ ಇಷ್ಟ ಎಂಬುದೂ ಮಾತಿಗೆ ಮೊದಲು ಕಾಳಿಂದಿ ಎಂದು ಸೊಂಟದ ಮಿಡತೆ ಚಿವುಟಿ ಮೃದುವಾಗಿ ಛೇಡಿಸುತ್ತ ನಿನಗೇ ನೀನು ಖುಷಿ ಅನುಭವಿಸುವುದನ್ನು ಕಂಡೂ ಕಾಣದಂತೆ ಸುಮ್ಮನಿರುತ್ತೇನೆ...

ನಗರ ನಕ್ಸಲ್ ಕವಿತೆಗಳು: ಹೇಗೆ ಪತ್ತೆ ಹಚ್ಚಿದರು?

ಯಾರೂ ಇಲ್ಲದ ಜಾಗದಲ್ಲಿ ಯಾರೂ ಕೇಳದ ಸಮಯದಲ್ಲಿ ಯಾರೂ ಕಾಣದ ರೀತಿಯಲ್ಲಿ ಬಚ್ಚಿಟ್ಟಿದ್ದೆ. ಹೇಗೆ ಪತ್ತೆ ಹಚ್ಚಿದರು ಅವರು?   ನುಚ್ಚಾಯ್ತು ನೀರ ಹೊಳಿಯಾಗೆ ಅಂತ ಅಳುವಂತೆಯೂ ಇಲ್ಲಾ ಗಡಿಗೆ ಒಡೆದ ಕಾರಣ ಬಹಿರಂಗ ಆದರೂ ಗೂಢಚಾರರ ವರದಿ ಆಧರಿಸಿ ಎಂದು ಸಮರ್ಥಿಸಿಕೊಂಡು ದಂಡು ಬಂದು ಕೈಕೋಳ ಹಾಕಿ ಎಳೆದುಕೊಂಡು ಹೋದರು ಗೋಪ್ಯವಲ್ಲ ಈಗ ಯಾವುದೂ ಸಭ್ಯವಲ್ಲ ಮಾತನಾಡದಿರುವುದೂ ಮೌನಕ್ಕೂ ನೂರು ಕಾರಣ ಕೊಟ್ಟು ಧರ್ಮಾಂಧರು ಹಠ ತೊಟ್ಟು ಭಕ್ತಗಣ ಉಘೇ ಉಘೇ ಎನ್ನುತ್ತಿರಲು ಯತ್ನಿಸಿ ಚಿಂತನೆಯ ಮೂಲವನ್ನೇ ಅಳಿಸಲು ಸನ್ನದ್ಧರಾದರು ಹೇಗೆ ಎಂದರೆ ಪುಣ್ಯವಂತರ ಮೇಲೆ ಪಾಪಿಷ್ಠರೇ ಕಲ್ಲು ಹೊಡೆಯುವುದಂತೆ.

ನಗರ ನಕ್ಸಲ್ ಕವಿತೆಗಳು: ಕವಿಗೆ ತುಂಬಾ ಬೇಸರವಾಗಿದೆ

ಮತಧರ್ಮಗಳ ಬಗ್ಗೆ ಸಾಕಷ್ಟು ವಿವಾದ ಸೃಷ್ಟಿಸಾಯಿತು ಲಿಂಗ ತಾರತಮ್ಯದ ಬಗ್ಗೆ ಸಂಕಲನವೇ ಬಂದಾಯಿತು ಎಲ್ ಜಿ ಬಿ ಟಿ ಬಗ್ಗೆ ಸೂಕ್ತ ಹೇಳಿಕೆ ಕೊಟ್ಟಾಯಿತು ನಾಗರಿಕ ಹಕ್ಕುಗಳ ಮಸೂದೆಯ ಚರ್ಚೆಯಲ್ಲಿ ಮುಂಚೂಣಿಯಲ್ಲಿ ಹೆಸರಿದೆ ಕೌಟುಂಬಿಕ ಸಮಸ್ಯೆಗಾಗಿ ಸ್ಟೇಷನ್ನು ಮೆಟ್ಟಿಲೂ ಹತ್ತಿಯಾಯಿತು ಪರಸತಿಯ ಕೆಣಕಿ ಕಪಾಳಮೋಕ್ಷ ಮಕ್ಕಳ ಪೀಡಿಸಿದ ಸಣ್ಣ ಗುಮಾನಿ ಪ್ರತಿಷ್ಠಿತರ ಪಟ್ಟಿಯಲ್ಲಿ ಮುಮ ಕೃಪೆಯಿಂದ ಸೈಟು ಎಂ ಎಲ್ ಸಿಗೂ ಪರಿಗಣನೆ ಶಾಸಕರ ಭವನದ ಸ್ಕ್ಯಾಮ್ ನಲ್ಲಿ ಪರೋಕ್ಷ ಪಾಲುದಾರಿಕೆ ಗೋಮಾಂಸ ಭಕ್ಷಣೆ ಸ್ತ್ರೀಯರ ರಕ್ಷಣೆ ಮಾನಭಂಗ ಸಂತೃಸ್ತೆಗೆ ಹಣ ಸಂಗ್ರಹಣೆ ತಕ್ಕಷ್ಟು ಮಟ್ಟಿಗೆ ಗಾಂಧಿ ದೂಷಣೆ ಸನಾತನ ಪರಿವಾರದ ಸನ್ಮಾನ ಪೋಷಣೆ ನೆರೆಗೆ ಕಾರಣ ಬರಕ್ಕೆ ಕಾರಣ ನೆರವಿಗೆ ಬಂದವರ ಜಾತಿಮತಗಳ ಕಾರಣ ವಿದೇಶಿ ಹಣ ಬೇಕು ಬೇಡಗಳ ಖಡಕ್ ವಿಶ್ಲೇಷಣೆ ಚಾನಲ್ಲುಗಳ ಅತಿಪ್ರಿಯ ಅತಿಥಿ ಸಂಪ್ರದಾಯಗಳ ಧಿಕ್ಕರಿಸಿ ಆದರೆ ಭಾರತೀಯತೆ ಎಂದರೆ ಸಂಸ್ಕಾರ ಎಂದುಸುರಿ ಸ್ಟ್ಯಾನ್ಡ್ ಅಪ್ ಕಾಮೆಡಿಯ ಅಧಿಕೃತ ಕಿಂಗ್ ಎನ್ನಿಸಿ ನಗರ ನಕ್ಸಲ್ ಎಂದು ಘೋಷಿಸಿಕೊಂಡರೂ...

ಮನಸಿಗೆ ಬಿದ್ದ ಪ್ರಾಸಗಳು

ಮನಸಿಗೆ ಬಿದ್ದ ಪ್ರಾಸಗಳು (ತಿರುತಿರುಗಿ ನೋಡುವಂತೆ ಮಾಡಿ ಕಾಣದಾಗುತ್ತಾರೆ) ರೇಣುಕಾ ರಮಾನಂದ್  ಕುಮಟಾ ಮೂವತ್ತು ಕೀ ಮೀ ಅಂಕೋಲಾ ಮೂರು ಕೀ ಮೀ ಇರುವಾಗ ಮರೆಯಲ್ಲಿದ್ದ ಮೈಲಿಗಲ್ಲು ಕಣ್ಣಿಗೆ ಬೀಳುತ್ತದೆ ದಾಟಿ ಮುಂದೆ ಹೋದಮೇಲೂ ಅದರ ಮೇಲೊಂದು ಅಪ್ಯಾಯಮಾನ ಪ್ರೀತಿಯಾಗುತ್ತಿರುತ್ತದೆ ಒಂಭತ್ತು...

ಹೇಗೆ ದಂಡಿಸಿದ್ದಾರೆ ನೋಡಿ ಪ್ರೇಮವನ್ನು..

ಸವಿತಾ ನಾಗಭೂಷಣ ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತ್ತಿದೆ ಮರದ ಕೊಂಬೆಯಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ ಕೊಚ್ಚಿ ಹಾಕಿಹರು ಕೂಡು ರಸ್ತೆಯಲಿ ವಿಷಕ್ಕೆ ವಶವಾಗಿ ರೋಷಕ್ಕೆ ಈಡಾಗಿ...

ನಗರ ನಕ್ಸಲ್ ಕವಿತೆಗಳು: ಒದೆ ತಿನ್ನುವವನ ಅಫಿಡವಿಟ್

ಪ್ರಶಸ್ತಿಗೆ, ಸಲಹಾಮಂಡಳಿ ಸದಸ್ಯತ್ವಕ್ಕೆ, ಜಿ ಕೆಟಗರಿ ನಿವೇಶನಕ್ಕೆ, ಫ್ಲೆಕ್ಸಿಗೆ ಲಾಯಕ್ಕಾದ ನೂರಾರು ಸ್ಥಾನಗಳಿಗೆ ಅರ್ಜಿ ಹಾಕಿಕೊಳ್ಳದೆ ಬದುಕಿದ ಮೂರ್ಖತನಕ್ಕೆ ಪ್ರಾಯಶ್ಚಿತ್ತವಾಗಿ   ನೀಡಲೇಬೇಕಾಗಿದೆ ವಿವರಣೆಯ ಅಫಿಡವಿಟ್ಟು ದಾಳಿಕೋರರ ನಿಂದನೆಗಳಲ್ಲಿ ಸತ್ಯಾಂಶ ಇದ್ದೀತೆಂದು ಯುವ ಗೆಳೆಯರು ನಂಬುವ ಸಾಧ್ಯತೆ ಇರುವುದರಿಂದ ಎಂದು ಅಲವತ್ತುಕೊಳ್ಳುವ ಬುದ್ಧಿಗೇಡಿ ಒಂದು ದಿನ ಹಠಾತ್ತನೆ ನಡುಹಗಲು ನಾಗರಿಕರು ಉಂಡು ಆಲಸಿಗಳಾದ ಹೊತ್ತಲ್ಲಿ ವೈಜ್ಞಾನಿಕ ಮನೋಧರ್ಮದವನೆಂದು ಪ್ರಶ್ನೆಗಳನ್ನು ಕೇಳುತ್ತಾನೆಂದು ಆರೋಪಿಸಿ ಬಂಧಿಸಿದರು ನಗರ ನಕ್ಸಲ್ ಪಟ್ಟ ಕಟ್ಟಿ ದುರಂತದ ತಳ ಮುಟ್ಟಿ   ನಿನ್ನ ತಾತ ನೀರು ಎಂಜಲು ಮಾಡಿದ ತಪ್ಪಿಗೆ ನಿನಗೆ ಶಿಕ್ಷೆ ಎಂದು ಕುರಿಮರಿಯ ಮೇಲೆ ಎಗರಿಬಿದ್ದ ತೋಳಗಳು ಸಾಬೀತುಮಾಡಿದವು ಅಲ್ಪನಿಗೆ ಅಧಿಕ ಸಂದೇಹ ಚಾಳಿ ಸುಟ್ಟರೂ ಹೋಗದ ಹೀನ ಸುಳಿ ಸಿಕ್ಕಸಿಕ್ಕವರನ್ನು ಆರೋಪಿಸಿ ನಗರ ನಕ್ಸಲ್ ಎಂದು...