fbpx

Category: ಬಾ ಕವಿತಾ

ನಿನ್ನೆದೆಯ ಹರವಿಗೆ..

ಕಲ್ಪನೆಯಾಗೇ ಉಳಿದು ಬಿಡು… ಡಾ. ಪ್ರೇಮಲತ ಬಿ ಕಲ್ಪನೆಯಾಗೇ ಉಳಿದುಬಿಡು ಹುಡುಗ ನಿಜದಲ್ಲಿ…. ನನ್ನೊಳಗೆ ಚಿಮ್ಮುವ ಕಿಡಿಗಳು ತಾಗದಷ್ಟು ದೂರ ನೀನು ಹೊತ್ತಿ ಉರಿಯುವ ಸುಖದಲ್ಲಿ ಸಖನಾಗಿರುವ  ನಿನ್ನ ಕಲ್ಪನೆ ನನ್ನೊಳಗಿನ ಮಾತ್ರದ ಹೂ ದೋಟ ನನ್ನದೋ ಹುಚ್ಚು ತುಡುಗು ಪ್ರೀತಿ...

ಅಯ್ಯಪ್ಪನೇ..

ಪ್ರವೇಶ  ವಿದ್ಯಾರಶ್ಮಿ ಪೆಲತ್ತಡ್ಕ   ಗುಡಿಯ ಕದ ದಢಾರನೆ ತೆರೆಯಿತೆಂದು ಬರಲಾರೆವು ನಾವು, ದಡಬಡನೆ ಮೆಟ್ಟಿಲು ಹತ್ತಿ. ಹುಟ್ಟಿನ ಜತೆಗೇ ಸಿಕ್ಕವನು ನೀನು ನಮ್ಮೊಳಗೇ ಬೆಳೆದಿದ್ದೇಯೆ ನಿನ್ನ ಅಲ್ಲಿ ಕೂರಿಸಿ ಬೇಲಿಯಿಕ್ಕಿದವರು ಅವರು ನಮ್ಮ ನಡೆಗೆ ತಡೆ ಹಾಕಿದವರೂ ಅವರೇ ಸೃಷ್ಟಿಸಿದ ನಿನಗೇನಿಲ್ಲ ಸಲ್ಲದ...

ಗೋಡ್ಸೆಯನು ಗಾಂಧಿ ಕ್ಷಮಿಸಬಹುದು! ನಾವಲ್ಲ!

 ಅಣ್ಣಪ್ಪ ಅರಬಗಟ್ಟೆ ಅಜ್ಜನ ತಲೆಯ ಮೇಲಿನ ಖಾದಿ ಟೋಪಿ ಹೆಗಲ ಮೇಲೇರಿ ಕೂತ ನನಗೆ ದೋಣಿ ಬೆರಳಾಡಿಸುತ ಕೇಳುತ್ತಿದ್ದೆ, ‘ಅಜ್ಜ, ಈ ಟೋಪಿಗೆಷ್ಟು ದುಡ್ಡು’ ‘ಬೆಲೆ ಕಟ್ಟಲಾಗದು ಮಗು, ಅದು ಗಾಂಧಿ!’ ಪಿಳಿಪಿಳಿ ಕಣ್ಬಿಡುತ್ತ ಕೇಳುತ್ತಿದ್ದೆ ಮಾಸ್ತರರ ಮಾತು ‘ಸಾರ್, ಅಜ್ಜ...

ಹೇ ರಾಮ್..

ಎನ್.ರವಿಕುಮಾರ್ / ಶಿವಮೊಗ್ಗ ಚರಕದ ಚಕ್ರಗಳು ತಿರುಗುತ್ತಲೆ  ಇವೆ. ಕಾಲ ಗತಿಯ ಹಜಾರದೊಳಗೆ ರಾಮನಾಮವ ಭಜಿಸಿ- ಭಂಜಿಸಿ ಅರ್ಪಿಸುವ ದೇವಗಾನವೆಂದು  ನಂಬಿಸಲಾಗುತ್ತಿದೆ. ಸಾಲಂಕೃತ ಸಾರೋಟು- ಗದ್ದುಗೆಯ ಒಡ್ಡೋಲಗದಲ್ಲಿ ಫಕೀರನ ಹೆಣದ ಮರೆವಣಿಗೆ ಹೊರಟಿದೆ. ಹೆಗಲಿಗೆ  ಹೆಗಲು ಬದಲಿಸಿ| ಮಡಿಬಟ್ಟೆ ಮಾಸದಂತೆ ರಾಮನಾಮ...

ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ…

ಡಾ. ಪ್ರೇಮಲತ ಬಿ / ಇಂಗ್ಲಂಡ್   ಪಕ್ಕದಲಿ ಕುಳಿತು  ಎದ್ದು ಹೋದವರು ಎದುರು ನಿಂತು ಮುಗುಳ್ನಕ್ಕವರು ’ಹಲೋ ’,”ಹಾಯ್ ’,”ನಮಸ್ಕಾರ’ಗಳ ಉಸುರಿದವರು ಸಾವಿರ ಮಂದಿ ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ ಮೌನಕ್ಕೂ ಬಣ್ಣ ಹಚ್ಚುವ ಕಲ್ಪನೆಗಳ ಪಕ್ಕಕ್ಕೆ ಸರಿಸಿ ಎಂದೋ ಆಗಿದ್ದ ಪರಿಚಯಕ್ಕೆ...

ಮೌನದಲಿ ನಾ ಕೇಳುತಿದ್ದೆ..

ಮನ….ಮ..ನ..ನ —- ಕುಸುಮ ಪಟೇಲ್    ಸದ್ದೆ ಇಲ್ಲದ ಮನವದೊಮ್ಮೆ ಎದ್ದು ಕುಳಿತು ಬೊಬ್ಬೆ ಹೊಡೆಯಿತು ಇದ್ದಬದ್ದುದ ನನಗೆ ಬಿಟ್ಟು ನೀ ನಿದ್ದೆ ಮಾಡ್ವುದು ತರವದೆ   ತಡಬಡಿಸಿ ನಾ ಎದ್ದು ಕುಳಿತೆ ಕೇಳಿಕೊಂಡೆನು ಮುದ್ದು ಮನವನು ಇನಿಯ ಮುನಿದಾ ನಲ್ಲೆಯನ್ನು...

ಅವಳು ನಡೆಯುತ್ತಿದ್ದಾಳೆ..

ಪ್ರೇಮಾ ಟಿ ಎಂ ಆರ್  ಬೆಳಗಿನ ನಡಿಗೆಯ ದಾರಿ ಎದುರು ಬದುರಾಗುತ್ತಾಳೆ ಹೆಣ್ಣು ಅಬ್ಬಾ ಎಷ್ಟೊಂದು ಮೈ ದಪ್ಪ ಮೂಗು ಮುರಿಯುತ್ತದೆ ಮೊಟಕುತ್ತದೆ  ಮನಸು ಮೂಗ ತಲೆಮೇಲೊಂದ ಬೆಳಗು ಬೈಗು ಎಷ್ಟೊಂದು ತೇದಿರಲಿಕ್ಕಿಲ್ಲ ಜೀವ ಭಾವ ತನ್ನ ತಾನು ಕನ್ನಡಿಯಲ್ಲೊಮ್ಮೆ ಇಣುಕಿಕೊಳ್ಳಲಾಗದಷ್ಟು...

ಕಾಯುತ್ತಾನೆ ಕಡಲು ನನಗಾಗಿ..

ನಗೆಯ ಹಾಯಿ ದೋಣಿ ಜಮುನಾ ರಾಣಿ ಹೆಚ್.ಎಸ್. ದಿಕ್ಕು ತಪ್ಪಿಸುವ ಸಂಜೆಗತ್ತಲು ಮಿನುಗಿ ಸರಿಯುವ ಅಲೆಗಳ ಒರೆತ ಭೇಟಿ ಮಾಡಲೇಬೇಕು ಕ್ಷಣ ಹೊತ್ತಿಗಾದರೂ ಪ್ರತಿದಿನ ನನ್ನೊಳಗಿನ  ನಿನಗೆ ಮೂರ್ತ ರೂಪ ನೀಡಿ ಹನಿಯಾಗಿಸಿ ಕಡಲ ಸೇರಿಸಲು ಬಿಂಕಬಿಗುಮಾನಗಳ ಬದಿಗೆ ಸರಿಸಿ ಅಲೆಗಳ...

ನಾನಿರುವೆ ಜೊತೆಯಲಿ ನನ್ನದಲ್ಲವೇ ನಿನ್ನ ಅಳಲು..

ಸರೋಜಿನಿ ಪಡಸಲಗಿ ಅತ್ತ ಇತ್ತ ತೇಲಾಡಿ ಅಲ್ಲಿ ಇಲ್ಲಿ ಹಾರಾಡಿ ದಣಿದ ಯೋಚನೆಯು ನುಸುಳಿತಲ್ಲಿ ಮನದ ಸಂದಿಯಲಿ ಸಿಕ್ಕಿತೊಂದು ಠಾವೆಂದು ವಿಶ್ರಮಿಸುತಿದೆ ಬಸವಳಿದು ಬಳಲಿಬೆಂಡಾಗಿ ತರ ತರದ ರೂಪಗಳ ಆಕಾರ ವಿಕಾರಗಳ ಕಂಡು ಕಣ್ಬಿಟ್ಟು ನೋಡುತಿಹುದು ಆ ಯೋಚನೆ ಏನು ಈ...

ಹಸನ ನಯೀಮ ಸುರಕೋಡರಿಗೆ..

ಎಂ ಡಿ ವಕ್ಕುಂದ  ಮಮತೆಯ ಮಡಿಲು ಅಂತಃಕರಣದ ನದಿ ಪ್ರೀತಿಸುವುದು ಮಾತ್ರ ಗೊತ್ತಿರುವ ದ್ವೇಷದ ಹಾದಿಯಗುಂಟ ಹರಿದ ನೆತ್ತರಿನ ಕಲೆಯೊರಿಸಲು ಜೀವ ತೇಯುತ್ತಿರುವ ಹಿಡಿಗಾತ್ರದ ದೇಹ ಪ್ರೇಮದ ಸ್ವರ ಯಾವ ಭಾಷೆಯಲ್ಲಿ ಹೊರಟರೂ ಕನ್ನಡದ ವಿವೇಕಕ್ಕೆ ತಂದು ಒಗ್ಗಿಸುವ ತಪಸ್ವಿ ದ್ವೇಷದ...