ಅಡಿಗರೆಂದರೆ ಕಾವ್ಯವಷ್ಟೇ ಅಲ್ಲ, ಕನ್ನಡಿಯೂ ಹೌದು..

ಗೋಪಾಲಕೃಷ್ಣ ಅಡಿಗರನ್ನ ಬಣ್ಣಿಸುವುದಕ್ಕೆ ಇರುವುದೆರಡೇ ಉಪಮೆ ಎನ್ನುವಷ್ಟರ ಮಟ್ಟಿಗೆ “ಶತಮಾನದ ಕವಿ”, “ಒಂದು ಜನಾಂಗದ ಕಣ್ಣು ತೆರೆಸಿದ ಕವಿ” ಎನ್ನುವಂತ ಮಾತುಗಳನ್ನು ಸವಕಲು ಮಾಡಿಟ್ಟಿದ್ದೇವೆ. ಆದರೆ ಅಡಿಗರು ತೋರಿದ ಕಾವ್ಯ ಮಾರ್ಗದಲ್ಲಿ ನಿಧಾನವಾಗಿಯಾದರೂ ನಡೆದು…

ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ…

ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ: ಆತ್ಮಕತೆ ಅಂಚಿನ ಮಾತುಗಳು. ಅವನು ತೀರಾ ನವೆದುಹೋಗಿದ್ದ. ಅದೆಷ್ಟು ದಪ್ಪಗಿದ್ದ ಹುಡುಗ ಇದೀಗ ಎಷ್ಟು ಸಪೂರಕ್ಕೆ ತಿರುಗಿದ್ದಾನೆ. ಮುಖದಲ್ಲಿ ಕಳೆ ಎನ್ನುವುದೇ ಇಲ್ಲ, ಕಣ್ಣಿನಲ್ಲಿ ಕಾಂತಿ ಶೂನ್ಯವಾಗಿದೆ. ಅವನು…

ಈಗ ಅದೆಲ್ಲವೂ ಕೇವಲ ನೆನಪು ಮಾತ್ರ..

“ಈ ಶರ್ಟ್ ತಗೊಂಡ್ ಇನ್ನೂ ಮೂರು ತಿಂಗಳಾಗಿಲ್ಲ. ಆಗಲೇ ಇದು ಮೂರನೇ ಸಾರಿ ಗುಂಡಿಗಳು ಚೂರಾಗಿದೆ. ಹೀಗಾದ್ರೆ ಬಟ್ಟೆ ಉಳಿತಾವಾ? ಈ ಶರ್ಟ್‍ನ ಕಾಲರ್ ನೋಡು, ಬಣ್ಣ ಹೊರಟೇ ಹೋಗಿದೆ”. *** “ನನ್ನ ಯೂನಿಫಾಂ…

ತೀರಿಹೋದ ಬನವಾಸಿ ಹುಡುಗಿಯ ಕತೆ..

ಬನವಾಸಿಯ ಮಧುಕೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತುಕೊಂಡಿದ್ದೆವು. ಮೂಲೆಯೊಂದರಲ್ಲಿ‌ ಬಚ್ಚಿಟ್ಟುಕೊಂಡಂತೆ ಗೋಚರಿಸುತ್ತಿದ್ದ ಬಾವಿಯಿಂದ, ಬ್ರಾಹ್ಮಣ ಅರ್ಚಕರೊಬ್ಬರು ಅಂಚು ಓರೆಯಾಗಿದ್ದ ಕಂಚಿನ ಕೊಡವನ್ನ ಮುಳುಗಿಸಿ ನೀರು ಎಳೆಯುತ್ತಿದ್ದರು. ಬಾವಿಯೊಳಗೆ ಕೊಡ ಮುಳುಗಿದರೆ ಬಾವಿಯ ಹೊರಗೆ ನಾವಿಬ್ಬರು ಮಾತಿನಲ್ಲಿ…

ಬೆಂಗಳೂರಿನ ಟೌನ್‍ಹಾಲ್ ಎದುರು ದೇವನೂರು ಮತ್ತು ಪ. ಮಲ್ಲೇಶ್ ನೆನಪಾದರು..

ಈಗ ಸ್ಪೆಷಲ್ ನ್ಯೂಸ್ ಎಂದರೆ ಯಾವುದು ಗೊತ್ತಾ? ಈಶಾನ್ಯ ಎಂದರು. ನಾನು ಅವರನ್ನೇ ಮಿಕಿಮಿಕಿ ನೋಡಿದೆ. ನಾನು ಹೇಳುವ ಯಾವ ಸುದ್ದಿಗಳೂ ಅವರಿಗೆ ಸ್ಪೆಷಲ್ ಎನಿಸುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಕಳೆದ ವಾರವಷ್ಟೇ 2020ರ…

ಡೋರ್ ನಂಬರ್ – 8 ಎಂಬ ಕಾವ್ಯ ಕಡಮೆಯ ಪುಟಾಣಿ ಲೋಕ

“ಮಾರ್ಗ” ಎನ್ನುವ ಪದವನ್ನು ಪ್ರತಿ ಸಾರಿ ಕೇಳಿದಾಗಲೂ ವಿಶೇಷ ಎನಿಸುವ ಅರ್ಥಗಳು ನನ್ನನ್ನು ಆವರಿಸಿಕೊಳ್ಳುತ್ತವೆ. ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಮನುಷ್ಯನಾದವನು, ತನ್ನ ನೋವು, ಖುಷಿ, ವ್ಯಂಗ್ಯ ಅಥವಾ ಉಳಿದ ಯಾವುದೇ ಸೃಷ್ಠಿಸಹಜ ಭಾವಗಳನ್ನು ಹೊರಗೆ…

ಹೊರಗೂ ಮಳೆ. . .ಒಳಗೂ ಮಳೆ

ಅವರು ಆಗಾಗ ಕಣ್ಣೋರೆಸಿಕೊಳ್ಳುತ್ತಿದ್ದರು. ತುಂಬು ಬದುಕನ್ನು ಬದುಕಿದ ಕಿನ್ನರಿಯಂತೆ ಕಾಣುತ್ತಿದ್ದ ಅವರ ಕಣ್ಣುಗಳನ್ನು ಅದೇ ಮೊದಲು ನೋಡುತ್ತಿದ್ದರೂ ಅವರ ಕಣ್ಣುಗಳಲ್ಲಿ ಹೊಳಪಿನ ಕೊರತೆಯಾಗಿರಬಹುದಾ ಎನ್ನುವ ಅನುಮಾನಗಳು ಮಿನುಗುತ್ತಿದ್ದವು. ಮೈ ಮುದುಡಿ ಕೂತಿದ್ದ ಆ ಹೆಂಗಸಿನ…

ಶಾಮಣ್ಣ ಹೇಳಿದ ಗೋಪಾಲಗೌಡರ ಕತೆಗಳು

ಚಿತ್ರಗಳು: ನಭಾ ಒಕ್ಕುಂದ ಮತ್ತು ಸಂದೀಪ್  ನನಗೆ ಗೋಪಾಲಗೌಡರು ಮೊದಲು ಪರಿಚಯವಾಗಿದ್ದು ನಾನು ಆರನೇ ಕ್ಲಾಸಿನಲ್ಲಿದ್ದಾಗ. ನನ್ನ ಆರನೇ ಕ್ಲಾಸಿನ ಕನ್ನಡ ಪಠ್ಯಪುಸ್ತಕದ ಐದನೇ ಪಾಠದ ಹೆಸರು “ಶಾಂತವೇರಿ ಗೋಪಾಲಗೌಡರು. ಬರೀ ಪ್ರಬುದ್ಧತೆಯ ನೀತಿಕಥನಗಳೇ…

ಅವನ ಮುನಿಸಿನ ಹಿಂದೆ ಇತಿಹಾಸದ ಗೆರೆಗಳಿದ್ದವು..

  Can you please shut your mouth, you “black” asshole. ಎಂದು ಗಟ್ಟಿಯಾಗಿ ಚೀರಿದೆ. ಗಹಗಹಿಸಿ ನಗುತ್ತಿದ್ದವನ ಮುಖ ಸ್ತಬ್ಧವಾಯಿತು. ಅದುವರೆಗೂ ಕ್ಲಾಸ್ ರೂಮ್ ನಲ್ಲಿ ಅಬ್ಬರಿಸುತ್ತಿದ್ದವನ ಗಂಟಲು ಬತ್ತಿಹೋಗಿ, ಕಿರುಚಾಟವಿರಲಿ…

ಶಿರಸಿಯ ಬೀದಿ ಮತ್ತೆ ನೆನಪಾಗದಿರಲಿ ದೇವರೇ. . .

ಶಿರಸಿಯ ಬೀದಿಯೊಂದು ಸಂಜೆ ದಣಿದು ಬಂದ ಅಪ್ಪ , ಮುಖ ತೊಳೆದುಕೊಂಡು ನಿಟ್ಟುಸಿರು ಬಿಡುವಂತೆ ಒಂದು ಸಣ್ಣಮಳೆಗೆ ತೋಯ್ದು ದಣಿವಾರಿಸಿಕೊಳ್ಳುತ್ತಿತ್ತು. ಒಂದೂ ಕಲೆಯೇ ಇರದ ಚಂದದ ಹುಡುಗಿಯ ಮುಖದಂತೆ, ಸುಳಿಯಲು ಯಾರಿಗೂ ಅವಕಾಶ ನೀಡದ…