ನುಡಿಯಲಾಗದ ಒಡಲ ಸತ್ಯಗಳು

ಅದೊಂದಿಷ್ಟು ನೆನಪುಗಳಿಗೆ ಭದ್ರವಾಗಿ ಬೀಗ ಹಾಕಿ ಎದೆಯಾಳದಲ್ಲಿ ಬಚ್ಚಿಟ್ಟಿದ್ದೆ. ಹೇಳಲೂ ಹೆದರುವಂತಹ ಸಂಗತಿಗಳವು. ನೆನಪಿಸಿಕೊಂಡಾಗಲೆಲ್ಲ ಮತ್ತೆ ಅನುಭವಿಸುತ್ತಿರುವನೇನೋ ಎಂಬಂತೆ ಭಾಸವಾಗುವ ನೆನಪುಗಳನ್ನು ಯಾರು ತಾನೆ ಕೆದಕಬಯಸುತ್ತಾರೆ? ಹೆಪ್ಪುಗೆಟ್ಟಿದ್ದ ಅಂತಹ ಅನುಭವವನ್ನು ಮತ್ತೆ ಕೆದಕಿದ್ದು ಅವಳ…

ಪತ್ರದೊಳಗೊಂದು ಉತ್ತರ..

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು ನಿಮ್ಮ ನೆನಪೇ ನನ್ನ ಕಾಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು ಅಮ್ಮ ಪಾತ್ರೆಯನ್ನು ಬೆಳಗುತ್ತಾ ಈ ಹಾಡು ಹೇಳುತ್ತಿದ್ದರೆ ಕಣ್ಣೆದುರು ಒಂದು…

ಕಣ್ಣರಿಯದಿದ್ದರೇನು, ಕರುಳು ಅರಿವುದು ಎಲ್ಲವನ್ನೂ…

ಕುಮುದಿನಿ ಒತ್ತಾಯಿಸುತ್ತಿದ್ದಾಳೆ, “ದೇವಿ ಒಮ್ಮೆ ನಿನ್ನ ಕಣ್ಣ ಪಟ್ಟಿಯನ್ನು ತೆರೆದುಬಿಡು. ಸಾಲಾಗಿ ಮಲಗಿರುವ ನಿನ್ನ ಮಕ್ಕಳನ್ನೊಮ್ಮೆ ನೋಡಿಬಿಡು. ಇನ್ನು ನಿನಗೆ ಎಂದಿಗೂ ಆ ಭಾಗ್ಯ ಸಿಗದು. ಒಡಲೊಳಗೆ ಒಡಮೂಡಿ ಬಂದ ಕುಡಿಗಳು ಮಣ್ಣ ಸೇರುವ…

ಲಾಲಿಸಿದಳು ಮಗನಾ..

ಕೃಷ್ಣ ಗೋಕುಲವನ್ನು ತೊರೆದು ವಾರಗಳೇ ಕಳೆದಿವೆ. ಯಶೋಧೆಯ ಮನೆಯೊಳಗಿನಿಂದ ಮಾತ್ರ ನಿರಂತರವಾಗಿ ತೊಟ್ಟಿಲು ತೂಗುವ ಸದ್ದು ಕೇಳುತ್ತಲೇ ಇದೆ. ಮೊದಮೊದಲು ರೋಹಿಣ ಇವೆಲ್ಲವನ್ನು ಕೆಲವು ಕ್ಷಣಗಳ ಕ್ರಿಯೆಯೆಂದು ನಿರ್ಲಕ್ಷಿಸಿದ್ದಳು. ಆದರೆ ವಾರವಾದರು ನಿಲ್ಲದ ಈ…

ಹೀಗೆ ಅಂಬೆ ನನ್ನೊಳಗೆ ಅಂಬೆಗಾಲಿಟ್ಟಳು..

ಜೀಂ……. ಎಂದು ಕೂಗುವ ಜೀರುಂಡೆಗಳ ಸದ್ದು ಮಾತ್ರವೇ ತುಂಬಿರುವ ನನ್ನೂರಿನ ನೀರವ ರಾತ್ರಿ ಮೆಲ್ಲಗೆ ತೆರೆದುಕೊಳ್ಳುತ್ತಿರುವಂತೆ ನಮ್ಮನೆಯೊಳಗೊಂದು ಚಿಕ್ಕ ಪೌರಾಣಿಕ ಜಗತ್ತು ತೆರೆದುಕೊಳ್ಳುತ್ತಿತ್ತು. ಮಬ್ಬುಗತ್ತಲು ಕವಿಯುತ್ತಿರುವಂತೆ ಊಟ ಮುಗಿಸುವ ಅಪ್ಪ, ಮಂಚದ ಮೇಲೆ ಹಾಸಿಗೆಯಲ್ಲಿ…

ಈಗ ಕಳಚಿಕೊಳ್ಳಲೇನಿದೆ? ವಿಷಾದದ ನಗೆ ನಕ್ಕಳು ದ್ರೌಪದಿ

ನೀನಿಲ್ಲದ ಸ್ವರ್ಗ ನನಗೆ ಬೇಡ “ನಾಳೆ ಹೊರಡುವ ತಯಾರಿಗಳೆಲ್ಲವೂ ನಡೆದಿದೆಯಲ್ಲವೆ ದೇವಿ?” ಹೀಗೊಂದು ಪ್ರಶ್ನೆಯನ್ನು ಬಾಗಿಲಿನಲ್ಲಿ ನಿಂತೇ ಕೇಳಿ, ಅದೇನೋ ಮಹತ್ಕಾರ್ಯವಿರುವಂತೆ ನಿರ್ಗಮಿಸಿದ್ದಾನೆ ಧರ್ಮರಾಜ. ಉತ್ತರವನ್ನು ಬಯಸದ ಇಂತಹ ಪ್ರಶ್ನೆಗಳನ್ನು ಕೇಳಿ, ಕೇಳಿ ಆಕೆಗೆ…

ಶಕುಂತಲೆ ಮತ್ತೆ ಮರಳಲಾರಳು..

  ಎರಡು ದಿನಗಳಿಂದ ಮಾತಂಗಾಶ್ರಮದಲ್ಲಿ ಅದೆಂತಹ ಗದ್ದಲ! ಆಶ್ರಮದ ನೀರವತೆಯನ್ನು ಕಲಕಿತ್ತು ಮಹಾರಾಜ ದುಷ್ಯಂತನ ಸೇನೆಯ ದಂಡು. ಅಲ್ಲಲ್ಲಿ ಕುಳಿತು ಚರ್ಚಿಸುವುದೇನು? ಕೇಕೆ ಹಾಕಿ ನಗುವುದೇನು? ಕಾಡಿನ ಮೃಗಗಳನ್ನು ಬೇಕಂತಲೇ ಹೆದರಿಸಿ ಓಡಿಸುವುದೇನು? ಸುಯ್ಯೆಂದು…

ಆ ಕಥೆಗಳಲ್ಲೆಲ್ಲ ಕೃಷ್ಣನ ಪ್ರೀತಿಯ ಆಳವಿದೆ..

ಅದೊಂದು ಅಚ್ಚರಿಯ ಬೆಳಗು! ಇಡಿಯ ಮಥುರೆಯೇ ಅಂದು ಹೊಸದೊಂದು ರಂಗಿನಲ್ಲಿ ಮಿಂದೆದ್ದಂತಿತ್ತು. ವೃದ್ಧದೊರೆ ಉಗ್ರಸೇನನ ಬಂಧನದೊಂದಿಗೆ ಬಂಧಿಯಾದ ಕನಸುಗಳೆಲ್ಲ ಅಂದು ಬಿಡುಗಡೆಗೊಂಡು ಪುರದ ತುಂಬೆಲ್ಲಾ ಹಾರಾಡುತಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಎಲ್ಲರ ಬಾಯಲ್ಲೂ ಅವನದೇ ಸುದ್ಧಿ.…

ಬದುಕಿನ ಲೇವಾದೇವಿಗೆ ಸತ್ಯದ ರಶೀದಿಯನ್ನು ಅಂಟಿಸಿದವಳು..

ಅದೊಂದು ದಾರುಣವಾದ ರಾತ್ರಿ. ಹನ್ನೊಂದರ ಹರೆಯದ ಮಗಳು ಮಂಡಿಯೂರಿ ಕುಳಿತು ತನ್ನ ತಾಯಿಯನ್ನು ಉಳಿಸಿಕೊಡುವಂತೆ ದೇವರಿಗೆ ಮೊರೆಯಿಡುತ್ತಿದ್ದಳು. ಆದರೆ ಅಮ್ಮ ತೀರಿಕೊಂಡಳು. ಆ ಮಗು ಅಮ್ಮನೊಂದಿಗೆ ದೇವರ ಮೇಲಿನ ತನ್ನ ನಂಬಿಕೆಯನ್ನೂ ಕಳಕೊಂಡಳು. ಅವಳು…

ಮೌನದೊಳಗಿನ ಮಾತನ್ನು ಓದುವ ಜಾಣ್ಮೆ ಎಲ್ಲರಿಗೂ ಬರಲಿ.

ಗೋಡೆಯೊಳಗಿನ ಮಹಾಮೌನ “ಬಾಗಿಲಿನ ಕರೆಗಂಟೆಯನ್ನು ಕೇವಲ ಮೂರುಬಾರಿ ಮಾತ್ರ ಒತ್ತಿರಿ, ಬಾಗಿಲು ತೆರರೆಯದಿದ್ದರೆ ಸಂದೇಶವನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಿರಿ, ಸಹಕರಿಸಿದ್ದಕ್ಕೆ ಧನ್ಯವಾದಗಳು” -ಹೀಗೆಂದು ಹೇಳಿ ಮನೆಯ ಬಾಗಿಲನ್ನು ಮುಚ್ಚಿಕೊಂಡವರು ಸಾಮಾನ್ಯದವರೇನಲ್ಲ. ದೇಶ ಕಂಡ ಅಪರೂಪದ…