fbpx

Daily Archive: November 9, 2017

ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

  2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ ‘ತೊಗಲ ಚೀಲದ ಕರ್ಣ’ ಎಂಬ ಖಂಡಕಾವ್ಯ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿಗಳಾದ ಲಲಿತಾ ಸಿದ್ದಬಸವಯ್ಯ ಹಾಗೂ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಪ್ರಶಸ್ತಿ...

ಓಹ್! ಒಂದು ಹಾಲಿನ ಮನವಿಯಿಂದಾಗಿ ಏನೆಲ್ಲಾ.. 

  ‘ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ ೧೯೯೨’ನ್ನು ರದ್ದು ಮಾಡಲು ಅವಕಾಶ ಕೊಡಬೇಡಿ’ ಹೀಗೆ ಒಂದು ಮನವಿಯನ್ನು ಅರ್ಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ. ಕ್ಷೀರ ಕ್ರಾಂತಿಯ ರೂವಾರಿ ಎಂದೇ ಹೆಸರಾಗಿದ್ದ ಪ್ರೊ ವಿ ಕುರಿಯನ್ ಅವರು ಮಂಗಳೂರಿಗೆ...

ಪ್ರಧಾನಿಗಳೇ, ನಾಟಕ ನೋಡೋಕೆ ಬನ್ನಿ ಅಂತ ಕರೀತಿದ್ದಾರೆ ಪ್ರಸನ್ನ

ಯಶೋಧಾ ದೀದಿಯ 500 ರೂ ನೋಟು!

ಸುಮಂಗಲಾ  ನವೆಂಬರ್ 8, 2016 ಯಶೋಧಾ ದೀದಿಗೆ ಇದೇನಪ್ಪಾ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹಿಂಗೆ ಅಸ್ತಿತ್ವದಲ್ಲಿದ್ದ ಸಂಗತಿಯೊಂದು ಬೆಳಗಾಗುವಷ್ಟರಲ್ಲಿ ಅಸ್ತಿತ್ವರಹಿತವಾಗುವದು ಎಂದರೆಎಂದು ಭಯಂಕರ ಗಾಬರಿಯೆನ್ನಿಸಿತು. ಮೊನ್ನೆಯೇ ಪಿಂಚಣಿ ತರಬೇಕಿತ್ತು, ಹಾಳು ವಯಸ್ಸು ಬೇರೆ… ಸುಮ್ಮನೇ ಇರುತ್ತದೆಯೇ… ಕೈಕಾಲು, ಸೊಂಟಗಳಲ್ಲಿ ಕೂತು, ಇದ್ದಬದ್ದಮೂಳೆಗಳನ್ನು ಕಟಿಪಿಟಿ ಮಾಡಿ, ಎಟಿಎಂಗೆ ನಾಳೆ ಹೋದರಾಯ್ತು ಎಂದುಕೊಂಡಿದ್ದು.. ಈಗ ನೋಡಿದರೆ…. “ನೋಟು ರದ್ದತಿ” ಹೆಡ್ ಲೈನಿನಲ್ಲಿ ಕಪ್ಪಕ್ಷರದಲ್ಲಿ ದೊಡ್ಡಕ್ಷರದಲ್ಲಿ ಫಳಫಳಿಸುತ್ತಿದೆ… “ಅರೆ ನಾನೇನು ಕನ್ನಡಕ ಹಾಕಿಕೊಂಡು ಪೇಪರ್ ಓದತಿದ್ದೀನಾ ಇಲ್ಲವಾ” ಎಂದು ಯಶೋಧಾ ದೀದಿ ಗಾಬರಿಗೊಂಡು, ಕಣ್ಣಿಗೆ ಒಮ್ಮೆ ಕೈಒತ್ತಿಕೊಂಡರು. ಇಲ್ಲ ಕನ್ನಡಕ ಮೂಗಿನ ಮೇಲೆ ಇದೆ… ಅಂದರೆ ಓದುತ್ತಿರುವುದು ನಿಜ…ಇಲ್ಲಿರುವುದು ನಿಜ…  ಈ ಸಲ ಇನ್ನೂ ಕೆಲಸದವಳಿಗೆ ಸಂಬಳ ಕೊಟ್ಟಿಲ್ಲ,  ಹಾಲಿನವನು,ಪೇಪರ್ನವನು… ಕಿರಾಣಿ… ಬ್ಯಾಂಕಿನಿಂದ ದಿನಕ್ಕೆ ಎರಡು ಸಾವಿರ ಮಾತ್ರವಂತೆ… ಎಲ್ಲೋ ಕಪಾಟಿನ ಮೂಲೆಯಲ್ಲಿ ಸೀರೆಯ ಮಡಿಕೆಯಲ್ಲಿ ಆಗೀಗ ಉಳಿಸಿದ್ದ ಐದು ನೂರರ ನೋಟುಗಳು ಎಂಟು ಹತ್ತು ಇದ್ದೀತು, ನಿಜ.. ಆದರೆ ಅದನ್ನು ಮೂಸುವವರು ಯಾರೀಗ…. ಪಾತ್ರೆ ತೊಳೆಯುತ್ತಿದ್ದ ಕೆಲಸದವಳು “ಅವ್ರಿಗೇನು ಹೆಂಡತಿ ಮಕ್ಳುಮರಿ ಇಲ್ಲ, ಕಾಸುಕೊಟ್ಟು ಏನಾರ ಖರೀದಿ ಮಾಡೋ ಚಿಂತಿ ಇಲ್ಲ” ಎಂದೇನೋ  ಗೊಣಗುತ್ತ ಪಾತ್ರೆಯನ್ನು ಕುಕ್ಕಿದಳು.  ಹೋಗುವ ಮೊದಲು ಸೆರಗಿನ ಗಂಟಿನಲ್ಲಿದ್ದ ಇದೀಗ ಒಲೆಗೆ ಎಸೆಯಬಹುದು ಎಂಬ ಚಹರೆಯನ್ನು  ಅಂಟಿಸಿಕೊಂಡಿದ್ದ, ಮುಟ್ಟಿದರೆ ಇನ್ನೇನು ಹರಿದೇ ಹೋಗುವಂತಿದ್ದ ಮಡಿಕೆಯಾಗಿದ್ದ ಹಳೆಯ ಎರಡು ಐದು ನೂರರ ನೋಟನ್ನು ಯಶೋಧಾ ಬೆಹನ್  ಮುಂದೆ ಹಿಡಿದು, ‘ಸಂಬಳ ಆಮೇಲೆ ಕೊಡ್ರಿ, ಈಗ ಇದನ್ನಿಟ್ಟುಕೊಂಡು ನೂರರ ನೋಟಾದ್ರೂ ಕೊಡ್ರಿ…  ಮನಿಗಿ ಅಕ್ಕಿ, ಬ್ಯಾಳಿ   ಆದರೂ  ತಗಂಡುಹೋಗತೀನಿ”  ಎಂದಳು. ಯಶೋಧಾ ದೀದಿ ಮೂರ್ಚೆ ಹೋಗುವುದೊಂದು ಬಾಕಿ!  ಸಂಬಂಧಗಳೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಸ್ತಿತ್ವ  ಕಳೆದುಕೊಂಡು…. ವರ್ಷಗಟ್ಟಲೆ ಚುನಾವಣಾ ಅಭ್ಯರ್ಥಿ ದಾಖಲೆಗಳಲ್ಲಿಯೂ ಅವಿವಾಹಿತ ಎಂದು ಉಳಿಯುವಾಗ… ...

ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ, ಆದರೆ..

ಲಹರಿ ತಂತ್ರಿ  ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ.. ಹೆಚ್ಚೇನೂ ಬೇಡ ದೇಹಕ್ಕೆ! ದಕ್ಕಿದರೆ ಒಂದಷ್ಟು ಏಕಾಂತ, ಇಲ್ಲದಿದ್ದರೆ ಸ್ವಲ್ಪ ಕತ್ತಲು, ಸುತ್ತ ಪರಿಚಿತರಿದ್ದರೆ ಸಣ್ಣದೊಂದು ಪರದೆ; ಇಲ್ಲದಿದ್ದರೂ ನಡೆದುಹೋಗುತ್ತದೆ ಕೆಲವೊಮ್ಮೆ.. ದಿನಕ್ಕೊಂದು ಬಾರಿ ಬಚ್ಚಲಲ್ಲಿ, ಮನಸ್ಸಿದ್ದರೆ...