fbpx

Daily Archive: March 23, 2018

1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು’!

 ರವಿರಾಜ ಅಜ್ರಿ ಇದು ಜೈನ ಮುನಿ ತರುಣ ಸಾಗರ್ ಜೀ ಮಹಾರಾಜ್ ಅವರು 1000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕೆಂದು ಮಾಡಿರುವ ಭಾಷಣ.ಇದಕ್ಕೆ ಬರಹಗಾರ ರವಿರಾಜ ಅಜ್ರಿಯವರ ಪ್ರತಿಕ್ರಿಯೆ ಇಲ್ಲಿದೆ.ಈ ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.’ಜುಗಾರಿಕ್ರಾಸ್’ ಚರ್ಚೆಗೆಂದೇ ಇರುವ ವೇದಿಕೆ. ನಿಮ್ಮ...

ಭಗತ್ ಸಿಂಗ್ ಈಗಲೂ ಯಾಕೆ ಪ್ರಸ್ತುತ ಅಂದ್ರೆ..

ನಾ ದಿವಾಕರ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ ಯಥಾಸ್ಥಿತಿವಾದಿಗಳ ದೃಷ್ಟಿಯಲ್ಲಿ ಭಯೋತ್ಪಾದಕನಂತೆ ಕಂಡಿದ್ದ ಭಗತ್ ಸಿಂಗ್, ಚರಿತ್ರೆಯ ಪುಟಗಳಲ್ಲಿ ಮಾತ್ರವೇ ಹುತಾತ್ಮ ಸ್ಥಾನವನ್ನು ಅಲಂಕರಿಸಿ ಹುಸಿ ದೇಶಪ್ರೇಮದ ಉನ್ಮಾದಕ್ಕೆ ರೂಪಕವಾಗಿದ್ದ ಭಗತ್ ಸಿಂಗ್, 1980ರವರೆಗೂ ನೇಪಥ್ಯದಲ್ಲಿದ್ದು ಅಯೋಧ್ಯಾ...

ಶುಭ ನುಡಿದ ಶಕುನದ ಹಕ್ಕಿ – ಬಿಸ್ಮಿಲ್ಲಾ ಖಾನ್

ಅಧ್ಯಾಯ- ಒಂದು ಶುಭ ನುಡಿದ ಶಕುನದ ಹಕ್ಕಿ ಭಾರತದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂಬುದು ಒಂದು ಅಚ್ಚಳಿಯದ ಹೆಸರು. ಉತ್ತರ ಭಾರತದ ಸಂಸ್ಕೃತಿಯಲ್ಲಿ ಶುಭ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಶೆಹನಾಯ್ ಮಂಗಳ ವಾದ್ಯಕ್ಕೆ ತಮ್ಮ ಉಸಿರು ತುಂಬಿ, ಅದರಿಂದ...

ಮುಚ್ಚುಗದಾಟ

ಕೈದಾಳ್ ಕೃಷ್ಣಮೂರ್ತಿ ನಟಿಸಬೇಡ ಗೆಳತಿ ಬೆತ್ತಲೆಯ ಅರಿವಿಲ್ಲದವಳಂತೆ ಎಷ್ಟು ಹೊದ್ದರೂ ಘನಿಸುತ್ತಿಲ್ಲ ನಿನ್ನ ಕಣ್ಣಕಾಂತಿಯ ಮುಂದೆ ಹಾರುವ ಅನಂತಕ್ಕೆ ಗಾಜು ತೊಡಿಸಿದವರು ನಾವು ಆತ್ಮವಂಚನೆಯಿಂದ ದೂರವಾಗುವ ಕಾಲಕ್ಕೆ ಕನ್ನಡಿಯಾಗೋಣ ಕೂಡುವಾಗ ನಾನ್ಯಾರೋ? ನೀನ್ಯಾರೋ? ಸುತ್ತಣವ ಒಪ್ಪಿಸಲೋದೆವು ನೋಡು ನೆರೆಯಂತೆ ಉಕ್ಕಿ ಬಂತು...

ಬಿಸಾಕಿದ ಕವಿತೆಯ ಕಾಗದದ ಚೂರಂತೆ..

ಕು.ಸ. ಮಧುಸೂಧನ ನಾಯರ್ ಕತ್ತಲಲ್ಲಿರುವೆ ನಾನು ಎಷ್ಟು ಕತ್ತಲಲ್ಲಿ? ಸೂರ್ಯರಶ್ಮಿಗಳೂ ಸೋಕಲಾರದಷ್ಟು ದೂರದಲ್ಲಿರುವೆ ನಾನು ಎಷ್ಟು ದೂರ? ಹಕ್ಕಿಗಳೂ ಹಾರಿ ಸನಿಹ ಬರಲಾರದಷ್ಟು. ನೀನು ಇದ್ದದ್ದು ನಿಜ ಅವತ್ತಿಗೆ ಪರಕೀಯವೆನಿಸಿ ನನಗೆ ನಾನೇ ಆ ಕ್ಷಣಕೆ ಹುಚ್ಚೆದ್ದು ಹರಿಯುವ ನದಿ ದಂಡೆಗಳ...

ಧಾರೇಶ್ವರ ಮಾಸ್ತರ ನೆನಪು..

ನನ್ನ ತಂದೆ, ನನ್ನ ಕಲಾಗುರು ಜಿ.ಎಸ್.ಭಟ್ ಧಾರೇಶ್ವರ. ಶಿಕ್ಷಕರೂ, ಯಕ್ಷಗಾನ ಕಲಾವಿದರೂ ಆಗಿದ್ದವರು. ಯಕ್ಷಗಾನ ಕ್ಷೇತ್ರದಲ್ಲಿ ಧಾರೇಶ್ವರ ಮಾಸ್ತರರು ಎಂದೇ ಖ್ಯಾತರು. ಅವರ ನಿಧನದ ನಂತರ ಅವರ ಹೆಸರಿನಲ್ಲಿ ಆರ್.ವಿ.ಭಂಡಾರಿಯವರ ನೆನಪಿನ ಸಹಯಾನ ಪ್ರತಿವರ್ಷ ಯಕ್ಷಗಾನ ಕಲಾವಿದರೊಬ್ಬರಿಗೆ ಸಹಯಾನ ಸಮ್ಮಾನ ನೀಡುವುದರ...