fbpx

Daily Archive: April 9, 2018

ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ

ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕನ್ನಡದ ಅನನ್ಯ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ನೆನಪಿಗೆ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಆಯ್ಕೆಯಾದ ಕಥೆಯೊಂದಕ್ಕೆ ರೂ. 5000/- ನಗದು ಬಹುಮಾನವನ್ನು ಶ್ರೀಮತಿ ವಿಜಯಾ ಅಗಸನಕಟ್ಟೆಯವರು ನೀಡಲಿದ್ದಾರೆ. ಪ್ರಹ್ಲಾದರ ಹುಟ್ಟುಹಬ್ಬದ ದಿನವಾದ...

EVM= ಈ ವಿಚಿತ್ರ ಮೌನ!

“ನಮ್ಮನ್ನು ನಂಬಿ ಪ್ಲೀಸ್” ಎಂದು ಜಿಲ್ಲಾಡಳಿತಗಳ ಮೂಲಕ ಇಲೆಕ್ಟ್ರಾನಿಕ್ ಮತದಾನಯಂತ್ರಗಳು ಗೋಗರೆಯುತ್ತಿವೆ. ಜೊತೆಗೆ ನಂಬದಿದ್ದರೆ ಜಾಗ್ರತೆ ಎಂಬ ಚುನಾವಣಾ ಆಯೋಗದ ಎಚ್ಚರಿಕೆಯಮಾತುಗಳೂ ಇವೆ. ಇವಿಎಂ ಗಳ ಬಗ್ಗೆ ತಪ್ಪು ಮಾಹಿತಿ/ಸುಳ್ಳು ಹೇಳುವವರನ್ನು ಸೆರೆಮನೆಗೆ ತಳ್ಳಲಾಗುವುದು ಎಂಬ ಬೆದರಿಕೆಯೂ ಇದೆ. ಕರ್ನಾಟಕವೀಗ ಚುನಾವಣೆಯ ಹೊಸ್ತಿಲಿನಲ್ಲಿದೆ. ಇಂತಹದೊಂದುಸ್ಥಿತಿಯಲ್ಲಿ ಸಾರ್ವಜನಿಕರ ಪರವಾಗಿ ನಿಂತು ಇವಿಎಂಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ಒಂದೋ ಹೋಗಲಾಡಿಸುವ ಅಥವಾ ಸಾಬೀತು ಪಡಿಸುವ ಜವಾಬ್ದಾರಿ ಹೊರಬೇಕಿದ್ದ ನಮ್ಮ ಮಾಧ್ಯಮಗಳು ವಿಚಿತ್ರಮೌನಕ್ಕೆ ಶರಣಾಗಿರುವುದು ಬಿರುಗಾಳಿಯ ಮೊದಲಿನ ರೌದ್ರ ಪ್ರಶಾಂತ ವಾತಾವರಣದಂತೆ ತೋರತೊಡಗಿದೆ. ಪ್ರಾತ್ಯಕ್ಷಿಕೆ ಯಂತ್ರಗಳ ಮೂಲಕ, ಪವರ್ ಪಾಯಿಂಟ್ ಗಳ ಮೂಲಕ ಸರ್ಕಾರವು ಮತದಾನ ಯಂತ್ರಗಳು ಸರ್ವ ಸುರಕ್ಷಿತ ಎಂದು ಹೇಳುತ್ತಿರುವಂತೆಯೇ ಇನ್ನೊಂದೆಡೆ ತೆಳ್ಳಗೆ ಅಲ್ಲಲ್ಲಿ ಯಂತ್ರಗಳು ನೂರಕ್ಕೆನೂರು ಸರಿಯಾಗಿಲ್ಲ ಎಂಬುದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಉದಾ: 1. ಮೊನ್ನೆ ಮಾರ್ಚ್ ನಲ್ಲಿ ಮಧ್ಯಪ್ರದೇಶದ ಭೀಂಡ್ ಉಪಚುನಾವಣೆಯ ಮುನ್ನ ಪ್ರಾತ್ಯಕ್ಷಿಕೆಗೆಂದು ಬಳಸಲಾಗಿದ್ದ ಇವಿಎಂನಲ್ಲಿ VVPATನ ಎಲ್ಲ ಮತಗಳೂ ಕಮಲ ಗುರುತಿಗೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಅಲ್ಲಿನ ಜಿಲ್ಲಾಧಿಕಾರಿ ಸಹಿತ 19 ಅಧಿಕಾರಿಗಳನ್ನು ಅಮಾನತು ಮಾಡಿತ್ತು. 2....

ನೀವು ಓದಲೇಬೇಕಾದ ಕೃತಿ: ಏನಿದು ಲಿಂಗಾಯತ ಸ್ವತಂತ್ರ ಧರ್ಮ?

ದಶಕಗಳ ಕಾಲದಿಂದ ಜಿ ಎನ್ ನಾಗರಾಜ್ ನಡೆಸಿರುವ ಲಿಂಗಾಯತ ಚಳವಳಿಯ ಬಗೆಗಿನ ಅಧ್ಯಯನದ ಫಲವಾಗಿ ಹೊರಬಂದಿರುವ ಮಹತ್ವದ ಕೃತಿ- ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಇವರ ಅಧ್ಯಯನದ ಫಲವಾಗಿ ಇವರ ಅನೇಕ ಬರಹಗಳ ಮೂಲಕ ಲಿಂಗಾಯತ ಧರ್ಮದ ಬಗೆಗಿನ ಮಹತ್ವದ ವಿಚಾರಗಳು ಬೆಳಕು ಕಂಡಿದೆ. ಪ್ರಸ್ತುತ ಲಿಂಗಾಯತ-ವೀರಶೈವ ವಿವಾದದ ಹಿನ್ನೆಲೆಯಲ್ಲಿ...

ಅಯ್ಯ ಕೇಳ್ತ ಒಂದನಿ ಬತ್ರ?

ಗೀತಾ ಹೆಗ್ಡೆ ಕಲ್ಮನೆ  ಎಂತದೆ ನಿಂದು ಇನ್ನೂ ಚಾ ಕೊಟ್ಟಿದ್ದಿಲ್ಲೆ ಬಗ್ನೆ ಹೇಳು ಯಾ ತ್ವಾಟಕ್ಕೋಗವು. ಅಲ್ದ್ರ ಗನಾ ಜೀರಗೆ ಮಿಡಿ ಓರ್ಮನೆ ಮಾಣಿ ತಂದ್ಕೊಟ್ಟಿದ್ದಾ ಹೇಳಿದ್ನಲಿ ನೀವೆಲ್ಲಿದ್ರಿ ಪ್ಯಾಟಿಗೆ ಹೋಗ ಗಡಬಿಡಿಲಿ ಯನ್ ಮಾತು ಕಿವಿಗೇ ಬಿಜ್ಜಿಲ್ಯಾಂಕಾಣ್ತು.. ಹ್,ಹೌದು ಈಗೆಂತಾತು...