fbpx

Daily Archive: April 25, 2018

ಪ್ರೇಮವೇ ನೀನಾಗಿ ಬಂದಂತೆನಿಸುತ್ತದೆ

ಅಪರೂಕ್ಕೊಮ್ಮೆ ಪಮ್ಮಿ ದೇರಲಗೋಡು  ಅಪರೂಪಕ್ಕೊಮ್ಮೆ ಸ್ವಪ್ನ ಮಂಟಪದಲಿ ನೀ ಕಂಡಾಗ ಹೃದಯದ ಮಾತೆಲ್ಲ ಕವಿತೆಗಳಾಗುತ್ತವೆ ಸಾವಿರ ಹೊನ್ನರಾಗಗಳ ಎನ್ನೆದೆ ಹಾಡತೊಡಗುತ್ತದೆ ಲಕ್ಷ ನಕ್ಷತ್ರಗಳ ನಡುವೆ ವಿಹರಿಸಿದಂತೆನಿಸುತ್ತದೆ ಕಂಗಳಾಳಗಳಲ್ಲಿ ಸುಪ್ತವಾಗಡಗಿಹ ಛಾಯೆ ನಿನ್ನ ಪ್ರತಿಬಿಂಬವಾಗುತ್ತದೆ ಅಪರೂಪಕ್ಕೊಮ್ಮೆ ನೀ ಮೃದುನುಡಿಗಳಾಡಿದಾಗ ಭಾವಗೀತೆಯೊಂದಿಗೆ ನುಡಿಸಿದ ವೀಣಾನಾದದಂತಿರುತ್ತದೆ...

ಗಿಳಿ, ಪಂಜರ ಮತ್ತು ರಂಗಾ

ಬಸು ಮೇಗಲಕೇರಿ ಎಪ್ಪತ್ತು-ಎಂಬತ್ತರ ದಶಕ, ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗ ಬದಲಾವಣೆ ಕಂಡ ಕಾಲ. ನವ್ಯ ಸಾಹಿತ್ಯ, ಹೊಸ ಅಲೆಯ ಸಿನೆಮಾ, ಚಲನಶೀಲ ರಂಗಭೂಮಿಯ ಜೊತೆಗೆ ದಲಿತ-ಬಂಡಾಯ-ರೈತ ಚಳುವಳಿಗಳು ಚಿಗುರೊಡೆದು ಕವಲಾಗಿ ಕರ್ನಾಟಕವನ್ನು ವ್ಯಾಪಿಸುತ್ತಿದ್ದ ಕಾಲ. ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲ...

ಈ ಮಧ್ಯೆ ದೆಹಲಿಯಲ್ಲಿ..

ಜೆ ಎನ್ ಯುವಿನಂಥ ಕಡೆ ಕನ್ನಡ ಕಟ್ಟುವ ಬಗೆ ಹೇಗೆ? ಸುತ್ತ ಹಿಂದಿ ಉರ್ದು ಭಾಷಿಕರು, ಪ್ರಾದೇಶಿಕ ಭಾಷೆಗಳ ಬಗ್ಗೆ ಅಷ್ಟೇನೂ ತಿಳುವಳಿಕೆಯಿಲ್ಲದ ಆಡಳಿತಗಾರರು. ಕರ್ನಾಟಕ ರಾಜ್ಯದ ಭಾಷೆ ಸಂಸ್ಕೃತಿಯ ಕುರಿತು ಆಸಕ್ತಿ ಇರುವ ಸಂಶೋಧಕರನ್ನು ಕನ್ನಡ ಪೀಠದ ಕಡೆ ಆಕಷಿಸುವ ಬಗೆ ಹೇಗೆ? ಅನುವಾದ, ಬೋಧನೆ, ಸಂಶೋಧನೆ, ಗ್ರಂಥಾಲಯ,  ಇತ್ಯಾದಿ ಚಟುವಟಿಕೆಗಳನ್ನು ರಾಷ್ಟ್ರೀಯ ಚೌಕಟ್ಟಿನಲ್ಲಿ ಉಪಯುಕ್ತವಾಗಿ ಆಯೋಜಿಸುವ ಕ್ರಮ ಯಾವುದು? ಕೆಲಸವೇನೋ ಮಾಡಬಹುದು, ಆದರೆ ಹಣ ಎಲ್ಲಿಂದ ಬರುತ್ತದೆ?, ಸದ್ಯ ಒಬ್ಬನೇ ಇರುವ  ಪೀಠವನ್ನು ವಿಸ್ತರಿಸುವುದು ಹೇಗೆ ? -ಹೀಗೆ ಹೊರಗಿನ ರಣ ರಣ ಬಿಸಿಲಿನ ಜೊತೆ ಮಂಡೆ ಬಿಸಿಕೊಂಡಿರುವ ಹೊತ್ತು...

ಅವರು ಸಚಾರ್..

ಶ್ರದ್ಧಾಂಜಲಿ ನ್ಯಾಯಮೂರ್ತಿ ರಾಜೇಂದ್ರ ಸಚಾರ್ ಶೂದ್ರ ಶ್ರೀನಿವಾಸ್ ಇತ್ತೀಚೆಗೆ ತಮ್ಮ 94 ನೆಯ ವಯಸ್ಸಿನಲ್ಲಿ ನ್ಯಾಯಮೂರ್ತಿ ಸಚಾರ್ ಅವರು ನಿಧನರಾದರು. ಒಬ್ಬ ಸಮಾಜವಾದಿಯಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ತಮ್ಮ ಬದುಕಿನುದ್ದಕ್ಕೂ ತೊಡಗಿಸಿಕೊಂಡವರು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದರ ಜೊತೆಗೆ...