ಸಿದ್ಧಗೊಂಡ ‘ತೇಜಸ್ವಿ ಲೋಕ ‘

ಸಿದ್ಧಗೊಂಡ ‘ತೇಜಸ್ವಿ ಲೋಕ ‘

ಪಕ್ಷಿ ಛಾಯಾಗ್ರಹಣ ತಾಣ 

ಶಿವಶಂಕರ್ ಬನಾಗರ್

 

Pompayya Malemath ಅವರ ಕನಸಿನ ಯೋಜನೆ ಅಂತೂ ಇಂದಿಗೆ ಪೂರ್ಣಗೊಂಡಿದೆ. ಅವರೇ ಸಾಕಿ ಸಲುಹಿದ ಸಾವಿರಾರು ಗಿಡಗಳು ಇಂದು ಹಣ್ಣು ಹಂಪಲ ನೀಡುವಷ್ಟರ ಮಟ್ಟಿಗೆ ಬೆಳೆದುನಿಂತಿವೆ. ಪಕ್ಷಿಗಳ ಕಲರವ ಹೆಚ್ಚಾಗಿದೆ. ಈಗಾಗಲೇ ಪಕ್ಷಿ ಅಷ್ಟೆ ಅಲ್ಲದೆ ಪ್ರಾಣಿಗಳು ಈ ಸ್ಥಳಕ್ಕೆ ಭೇಟಿಕೊಡುತ್ತಿವೆ. ಇಂತಹ ತಾಣದಲ್ಲಿ ಪಕ್ಷಿ ಪ್ರೇಮಿಗಳಿಗಾಗಿ ಒಂದು ಅಡಗುತಾಣವೊಂದು ನಿರ್ಮಿಸಬೇಕೆಂಬ ಹಂಬಲ ಇಂದಿಗೆ ಕೈಗೂಡಿದೆ.

ಕಳೆದ ನಾಲ್ಕು ದಿನಗಳಿಂದ ಈ ತಾಣಕ್ಕೆ ಛದ್ಮವೇಷದ ಬಣ್ಣ ಬಳೆಯಲು ಸಾಕಷ್ಟು ಶ್ರಮಪಟ್ಟ ಕೊಪ್ಪಳದ Krishna R Chitragar ಮತ್ತು Mahamad Yunees ಅಭಿನಂದನಾರ್ಹರು.
ಅದಕ್ಕೊಂದು ರೂಪುಕೊಟ್ಟು ಚೆಂದಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಈ ಘಟನೆ ಸ್ಮರಣೆಗೋಸ್ಕರ ಕೃಷ್ಣ, ಯೂನಿಸ್ ಮತ್ತು ನನ್ನಿಂದ ತಲಾ ಒಂದು ಗಿಡವನ್ನು ನೆಡಲಾಯಿತು.
ಇನ್ನೂ ಅಧಿಕೃತ ಉದ್ಘಾಟನೆಯಷ್ಟೆ ಬಾಕಿ ಇದೆ.

 

1 comment

Leave a Reply